November 2022

ಭೀಕರ ಅಪಘಾತಕ್ಕೆ 6 ಮಂದಿ ಬಲಿ| 15ಕ್ಕೂ ಹೆಚ್ಚು ಜನರು ಗಂಭೀರ

ಸಮಗ್ರ ನ್ಯೂಸ್: ಬಸ್​ ಮತ್ತು ಟ್ರಕ್​ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಆರು ಜನರು ಸಾವನ್ನಪ್ಪಿದ್ದು, 15 ಮಂದಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಬಹ್ರೇಚ್​ನ ತಪ್ಪೆ ಸಿಪಾಹ್​ನಲ್ಲಿ ನಡೆದಿದೆ. ಗಾಯಗೊಂಡವರನ್ನು ತಕ್ಷಣಕ್ಕೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಗಳು ತಿಳಿಸಿವೆ. ಟ್ರಕ್​ ಡ್ರೈವರ್​ ತಪ್ಪು ದಾರಿಯಲ್ಲಿ ಬಂದ ಕಾರಣ ಬಸ್​ಗೆ ಡಿಕ್ಕಿಯಾಗಿರಬಹುದು ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಹೇಳಲಾಗಿದೆ. ಅಪಘಾತದಲ್ಲಿ ಸಾವನ್ನಪ್ಪಿರುವವರಿಗೆ ಸಿಎಂ ಯೋಗಿ ಆದಿತ್ಯನಾಥ್​ ಸಂತಾಪ ಸೂಚಿಸಿದ್ದಾರೆ. ಗಾಯಾಳುಗಳಿಗೆ ಸರಿಯಾದ […]

ಭೀಕರ ಅಪಘಾತಕ್ಕೆ 6 ಮಂದಿ ಬಲಿ| 15ಕ್ಕೂ ಹೆಚ್ಚು ಜನರು ಗಂಭೀರ Read More »

ಹೆಚ್ಚುವರಿ ಟ್ರಾಫಿಕ್ ಸಿಬ್ಬಂದಿ ನೇಮಿಸಲು ಮೊಯಿದೀನ್ ಬಾವಾ ಮನವಿ

ಸುರತ್ಕಲ್: ಮಂಗಳೂರಿನ ಯೆಯ್ಯಾಡಿ ಪ್ರದೇಶದಲ್ಲಿ ಬೆಳಗ್ಗಿನ ಸಮಯ ವಾಹನ ದಟ್ಟಣೆ ಜಾಸ್ತಿಯಾಗಿದ್ದು ಪ್ರತಿ ದಿನ ಆ ಪ್ರದೇಶದಲ್ಲಿ ಸಂಚರಿಸುವ ಜನ ಸಾಮಾನ್ಯರು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಬೆಳಗ್ಗೆ ಮತ್ತು ಸಂಜೆಯ ವೇಳೆಯಲ್ಲಿ ಹೆಚ್ಚುವರಿ ಟ್ರಾಫಿಕ್ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಬೇಕೆಂದು ಕದ್ರಿ ಟ್ರಾಫಿಕ್ ಪೋಲಿಸ್ ಅಧಿಕಾರಿಗಳ ಜೊತೆಗೆ ಮಂಗಳೂರು ಉತ್ತರ ಮಾಜಿ ಶಾಸಕ ಮೊಯಿದೀನ್ ಬಾವಾ ಮಾತುಕತೆ ನಡೆಸಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉಮೇಶ್ ದಂಡೆಕೇರಿ ಜೊತೆಗಿದ್ದರು.

ಹೆಚ್ಚುವರಿ ಟ್ರಾಫಿಕ್ ಸಿಬ್ಬಂದಿ ನೇಮಿಸಲು ಮೊಯಿದೀನ್ ಬಾವಾ ಮನವಿ Read More »

‘ ರೌಡಿ ಶೀಟರ್‌ಗಳಿಗೆ ನಮ್ಮ ಪಕ್ಷದಲ್ಲಿ ಮನ್ನಣೆ ಇಲ್ಲ’ – ಸಿಎಂ

ಸಮಗ್ರ ನ್ಯೂಸ್: ಯಾವುದೇ ರೌಡಿ ಶೀಟರ್ ಗಳಿಗೆ ನಮ್ಮ ಪಕ್ಷದಲ್ಲಿ ಮನ್ನಣೆ ಕೊಡುವುದಿಲ್ಲ, ನಾವು ಯಾವುದೇ ರೌಡಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ಟ್ವೀಟ್ ಗೆ ಸಂಬಂಧಿಸಿದಂತೆ ರೌಡಿ ಶೀಟರ್ ಗಳ ಕುರಿತಾದ ಪತ್ರಕರ್ತರ ಪ್ರಶ್ನೆಗೆ ನಾನು ಉತ್ತರಿಸಿದ್ದೇನೆ. ಇದನ್ನು ಇಷ್ಟಕ್ಕೆ ಸೀಮಿತವಾಗಿ ನೋಡಬೇಕು. ನಮ್ಮ ಪಕ್ಷವು ಯಾವುದೇ ರೌಡಿ ಶೀಟರ್ ಗಳಿಗೆ ಮನ್ನಣೆ ಕೊಡುವುದಿಲ್ಲ ಹಾಗೂ ಅವರನ್ನು ಸಹಿಸುವುದಿಲ್ಲ, ನಮ್ಮ ಪಕ್ಷದ ಅಧ್ಯಕ್ಷರು ಈಗಾಗಲೇ ತಿಳಿಸಿರುವಂತೆ ಸೈಲೆಂಟ್

‘ ರೌಡಿ ಶೀಟರ್‌ಗಳಿಗೆ ನಮ್ಮ ಪಕ್ಷದಲ್ಲಿ ಮನ್ನಣೆ ಇಲ್ಲ’ – ಸಿಎಂ Read More »

ಶಬರಿಮಲೆಗೆ ಆಟೋ, ಸರಕು ವಾಹನಗಳಲ್ಲಿ ಪ್ರಯಾಣಿಸ್ತೀರಾ? ಹಾಗಾದ್ರೆ ಈ ಸ್ಟೋರಿ ನೋಡಿ…

ಸಮಗ್ರ ನ್ಯೂಸ್: ಪ್ರಸಿದ್ಧ ಯಾತ್ರಾ ಕ್ಷೇತ್ರವಾದ ಶಬರಿಮಲೆಗೆ ಆಟೋ ರಿಕ್ಷಾ, ಸರಕು ಸಾಗಾಟ ವಾಹನಗಳಲ್ಲಿ ಪ್ರವಾಸ ನಡೆಸಲು ರಾಜ್ಯ ಮೋಟಾರು ವಾಹನ ಇಲಾಖೆ ನಿಷೇಧ ವಿಧಿಸಿದೆ. ಅಟೋ ಹಾಗೂ ಸರಕು ಸಾಗಾಟ ವಾಹನಗಳಲ್ಲಿ ಪ್ರವಾಸಿಗರನ್ನು ಕರೆದೊಯ್ಯುತ್ತಿರುವ ವಿದ್ಯಮಾನಗಳು ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಇಲಾಖೆ ಮುಂದಾಗಿದೆ. ನಿಯಮಗಳ ಅನುಸಾರ ಆಟೋ ರಿಕ್ಷಾಗಳಿಗೆ ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಯ 30 ಕಿ.ಮೀ ವ್ಯಾಪ್ತಿ ವರೆಗೆ ಮಾತ್ರ ಸಂಚರಿಸಲು ಅವಕಾಶವಿದೆ. ಇನ್ನು ಸರಕು ಸಾಗಾಟ ವಾಹನಗಳಲ್ಲಿ ಪ್ರಯಾಣಿಕರನ್ನು

ಶಬರಿಮಲೆಗೆ ಆಟೋ, ಸರಕು ವಾಹನಗಳಲ್ಲಿ ಪ್ರಯಾಣಿಸ್ತೀರಾ? ಹಾಗಾದ್ರೆ ಈ ಸ್ಟೋರಿ ನೋಡಿ… Read More »

ದತ್ತಜಯಂತಿ ಹಿನ್ನೆಲೆ; ಚಿಕ್ಕಮಗಳೂರಿನ ಈ ಪ್ರದೇಶಗಳಿಗೆ 5 ದಿನ ಪ್ರವಾಸಿಗರ ಭೇಟಿ ನಿರ್ಬಂಧಿಸಿದ ಜಿಲ್ಲಾಧಿಕಾರಿ

ಸಮಗ್ರ ನ್ಯೂಸ್: ಚಿಕ್ಕಮಗಳೂರಿನ ಬಾಬಾ ಬುಡನ್ ಗಿರಿಯಲ್ಲಿ ದತ್ತಜಯಂತಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಗಿರಿ ಭಾಗಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ 5 ದಿನಗಳ ಕಾಲ ನಿರ್ಬಂಧ ಹೇರಿ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಆದೇಶ ಹೊರಡಿಸಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಇನಾಂ ದತ್ತಾತ್ರೇಯ ಪೀಠ ಗ್ರಾಮದ ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ಡಿಸೆಂಬರ್ 6ರಿಂದ 8 ರವರೆಗೆ ದತ್ತಜಯಂತಿ ಕಾರ್ಯಕ್ರಮ ನಡೆಯಲಿದೆ. ಆದ್ದರಿಂದ ಡಿಸೆಂಬರ್ 5ರ ಬೆಳಗ್ಗೆ 9 ಗಂಟೆಯಿಂದ ಡಿಸೆಂಬರ್ 9ರ ಬೆಳಗ್ಗೆ 10 ಗಂಟೆಯವರೆಗೆ ಪ್ರವಾಸಿ ತಾಣಗಳಾದ

ದತ್ತಜಯಂತಿ ಹಿನ್ನೆಲೆ; ಚಿಕ್ಕಮಗಳೂರಿನ ಈ ಪ್ರದೇಶಗಳಿಗೆ 5 ದಿನ ಪ್ರವಾಸಿಗರ ಭೇಟಿ ನಿರ್ಬಂಧಿಸಿದ ಜಿಲ್ಲಾಧಿಕಾರಿ Read More »

ಅಯ್ಯಪ್ಪ ವೃತಧಾರಿಗಳ ಜೊತೆ ಶಬರಿಮಲೆಯತ್ತ ಹೊರಟ ಶ್ವಾನ| ನಿರಂತರ ಪಾದಯಾತ್ರೆಯಲ್ಲಿ ಭಕ್ತರ ಜೊತೆ ಸಾಥ್!

ಸಮಗ್ರ ನ್ಯೂಸ್: ಶಬರಿಮಲೆ ಪಾದಾಯಾತ್ರೆಗೆ ಹೊರಟಿದ್ದ ಅಯ್ಯಪ್ಪ ಸ್ವಾಮಿ ವೃತಾಧಾರಿಗಳೊಂದಿಗೆ ಶ್ವಾನವೊಂದು ಹೆಜ್ಜೆ ಹಾಕಿ ನೂರಾರು ಕಿ.ಮೀ ಕ್ರಮಿಸಿರುವ ಅಚ್ಚರಿಯ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ. ಧಾರವಾಡದಿಂದ ಕೇರಳದ ಶಬರಿಮಲೆಗೆ ಹೊರಟ ಅಯ್ಯಪ್ಪ ಸ್ವಾಮಿ ಭಕ್ತರಾದ ನಾಗನಗೌಡ ಪಾಟೀಲ್, ಮಂಜು ಹಾಗೂ ರವಿ ಎನ್ನುವವರಿಗೆ ಮಾರ್ಗ ಮಧ್ಯೆ ಶ್ವಾನವೊಂದು ಜೊತೆಯಾಗಿದ್ದು, ವೃತಾಧಾರಿಗಳೊಂದಿಗೆ ತಾನು ಕೂಡ ನೂರಾರು ಕಿಲೋ ಮೀಟರ್‌ ಕ್ರಮಿಸಿದೆ. ಮೂವರು ಭಕ್ತರು ಬರಿಗಾಲಿನಲ್ಲಿ ಧಾರವಾಡದಿಂದ ಯಾತ್ರೆ ಪ್ರಾರಂಭಿಸಿದಾಗ ಧಾರವಾಡದ ನರೇಂದ್ರ ಟೋಲ್ ಬಳಿ

ಅಯ್ಯಪ್ಪ ವೃತಧಾರಿಗಳ ಜೊತೆ ಶಬರಿಮಲೆಯತ್ತ ಹೊರಟ ಶ್ವಾನ| ನಿರಂತರ ಪಾದಯಾತ್ರೆಯಲ್ಲಿ ಭಕ್ತರ ಜೊತೆ ಸಾಥ್! Read More »

ಮಂಗಳೂರು: ‘ಬೀಪ್ ಬಿರಿಯಾನಿ ದೊರೆಯುತ್ತದೆ’ ವಿಡಿಯೋ ವೈರಲ್| ಹೊಟೇಲ್ ಮಾಲಕ ಪೊಲೀಸ್ ವಶ

ಮಂಗಳೂರು: ಮುಡಿಪು ಇಲ್ಲಿನ ತಾಜ್ ಸೆಂಟರ್ ಎಂಬ ಹೋಟೆಲಿನಲ್ಲಿ ದನದ ಮಾಂಸದ ಬಿರಿಯಾನಿ ಇದೆ ಎಂದು ವೀಡಿಯೋ ಮಾಡಿ ಹರಿ ಬಿಟ್ಟು ವ್ಯಾಪಾರ ಮಾಡುತಿದ್ದ ಹೋಟೆಲಿಗೆ ಹಿಂದು ಜಾಗರಣ ವೇದಿಕೆ ಮುಡಿಪು ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿ ದಾಳಿ ನಡೆಸಿದ್ದಾರೆ. ಪೊಲೀಸರ ಜೊತೆಗೆ ಹಿಂ.ಜಾ.ವೇ ಕಾರ್ಯಕರ್ತರು ದಾಳಿ ಮಾಡಿ ದನದ ಮಾಂಸದ ಬಿರಿಯಾನಿ ಮತ್ತು ತಯಾರಿ ಮಾಡಿಟ್ಟಿದ್ದ ಮಾಂಸವನ್ನು ಪರಿಶೀಲಿಸಿದ್ದಾರೆ‌. ಈ ವೇಳೆ ಗೋಮಾಂಸವೆಂದು ದೃಢಪಟ್ಟಿದ್ದು, ಹೋಟೆಲ್ ಮಾಲಕ ಹುಸೇನ್ ಎಂಬವರನ್ನು ಕೊಣಾಜೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಮಂಗಳೂರು: ‘ಬೀಪ್ ಬಿರಿಯಾನಿ ದೊರೆಯುತ್ತದೆ’ ವಿಡಿಯೋ ವೈರಲ್| ಹೊಟೇಲ್ ಮಾಲಕ ಪೊಲೀಸ್ ವಶ Read More »

“ಬಿಜೆಪಿ ಶಾಸಕ ಗರುಡಾಚಾರ್ ಸೌಹಾರ್ದತೆಯ ಪಾಠ ಕಲಿಸಿದ್ದಾರೆ” -ಮೊಯಿದೀನ್ ಬಾವಾ

ಸುರತ್ಕಲ್: “ಚಿಕ್ಕಪೇಟೆ ಶಾಸಕರಾದ ಉದಯ್ ಗರುಡಾಚಾರ್ ರವರು ದೇವಸ್ಥಾನ ಮುಂಭಾಗ ವ್ಯಾಪಾರ ಮಾಡುವುದನ್ನು ವಿರೋಧಿಸುವ ಶಕ್ತಿಗಳಿಗೆ ಕಾನೂನು ರೀತಿಯಲ್ಲಿ ಸೂಕ್ತ ರೀತಿಯಲ್ಲಿ ಕ್ರಮ ಜರುಗಿಸಲಾಗುವುದು ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ, ಈ ಮೂಲಕ ಸರ್ವ ಧರ್ಮೀಯರ ಸೌಹಾರ್ದತೆಯ ಸಂದೇಶವನ್ನು ಸಾರುವ ಮೂಲಕ ಕೋಮು ಸೌಹಾರ್ದತೆಯನ್ನು ಕೆಡವುವ ಶಕ್ತಿಗಳಿಗೆ ಸರಿಯಾಗಿ ಎಚ್ಚರಿಕೆಯನ್ನು ನೀಡಿದ್ದಾರೆ” ಎಂದು ಮಂಗಳೂರು ಉತ್ತರ ಕ್ಷೇತ್ರದ ಮಾಜಿ ಶಾಸಕ ಮೊಯಿದೀನ್ ಬಾವಾ ಹೇಳಿದ್ದಾರೆ. “ಯಾವುದೇ ಶಕ್ತಿಗಳಿಗೆ ಹೆದರದೆ, ಹಿಂಜರಿಕೆ ತೋರದೆ ಪ್ರಜಾಪ್ರಭುತ್ವ ಸಂದೇಶವನ್ನು ಎತ್ತಿ ಹಿಡಿದಿದ್ದಾರೆ, ಬಿಜೆಪಿ

“ಬಿಜೆಪಿ ಶಾಸಕ ಗರುಡಾಚಾರ್ ಸೌಹಾರ್ದತೆಯ ಪಾಠ ಕಲಿಸಿದ್ದಾರೆ” -ಮೊಯಿದೀನ್ ಬಾವಾ Read More »

ಟೊಯೋಟಾ ಕಿರ್ಲೋಸ್ಕರ್ ಉಪಾಧ್ಯಕ್ಷ ವಿಕ್ರಮ್ ಕಿರ್ಲೋಸ್ಕರ್ ಇನ್ನಿಲ್ಲ

ಸಮಗ್ರ ನ್ಯೂಸ್: ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ವೈಸ್ ಚೇರ್ಮನ್ ವಿಕ್ರಮ್ ಕಿರ್ಲೋಸ್ಕರ್(64) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ವಿಕ್ರಮ್ ಕಿರ್ಲೋಸ್ಕರ್ ಭಾರತದ ವಾಹನೋದ್ಯಮದ ದಿಗ್ಗಜರಲ್ಲಿ ಒಬ್ಬರು. ವಿಕ್ರಮ್ ಕಿರ್ಲೋಸ್ಕರ್ ಅವರು ತೀವ್ರ ಹೃದಯಾಘಾತದಿಂದ ಬಳಲುತ್ತಿದ್ದ ಅವರು ಇಂದು ಉಸಿರುಚೆಲ್ಲಿದರು. ಟೊಯೊಟಾ ಇಂಡಿಯಾ ತನ್ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ ಗಳಲ್ಲಿ ನಿಧನದ ಸುದ್ದಿಯನ್ನು ದೃಢಪಡಿಸಿದೆ. ನವೆಂಬರ್ 29, 2022 ರಂದು ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ನ ಉಪಾಧ್ಯಕ್ಷರಾದ ಶ್ರೀ ವಿಕ್ರಮ್ ಎಸ್.ಕಿರ್ಲೋಸ್ಕರ್ ಅವರ ಅಕಾಲಿಕ ನಿಧನವನ್ನು ತಿಳಿಸಲು ನಾವು ತುಂಬಾ ದುಃಖಿತರಾಗಿದ್ದೇವೆ.

ಟೊಯೋಟಾ ಕಿರ್ಲೋಸ್ಕರ್ ಉಪಾಧ್ಯಕ್ಷ ವಿಕ್ರಮ್ ಕಿರ್ಲೋಸ್ಕರ್ ಇನ್ನಿಲ್ಲ Read More »

ಬೆಂಗಳೂರು: ಶಾಲಾ ಮಕ್ಕಳ ಬ್ಯಾಗ್ ನಲ್ಲಿ ಕಾಂಡೋಮ್, ಗರ್ಭನಿರೋಧಕ ಮಾತ್ರೆ ಮತ್ತು ಇನ್ನಷ್ಟು!! ಬೆಚ್ಚಿಬಿದ್ದ ಸಿಬ್ಬಂದಿ, ಪೋಷಕರಿಗೆ ಆಘಾತ

ಸಮಗ್ರ ನ್ಯೂಸ್: ಶಾಲಾ ಮಕ್ಕಳ ಬ್ಯಾಗ್​ಗಳಲ್ಲಿ ಹಲವು ಆಘಾತಕಾರಿ ವಸ್ತುಗಳಿರುವುದು ಬೆಳಕಿಗೆ ಬಂದಿದ್ದು, ಸಿಬ್ಬಂದಿ ಹಾಗೂ ಪೋಷಕರಲ್ಲಿ ಆಘಾತ ಉಂಟು ಮಾಡಿದೆ. ಮಕ್ಕಳ ಏಕಾಗ್ರತೆ ಮತ್ತು ಕಲಿಕೆಗೆ ಸ್ಮಾರ್ಟ್​ಫೋನ್​ಗಳಿಂದ ಭಂಗ ಬರುತ್ತಿದೆ. ಇದೇ ಕಾರಣಕ್ಕೆ ಶಾಲೆಗಳಿಗೆ ಸ್ಮಾರ್ಟ್​ಫೋನ್ ತರುವಂತಿಲ್ಲ ಎಂಬ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮುಂದಾಗಿರುವ ಹಲವು ಶಾಲೆಗಳು ವಿದ್ಯಾರ್ಥಿಗಳು ಮಕ್ಕಳ ಬ್ಯಾಗ್ ಗಳನ್ನು ತಪಾಸಣೆಗೆ ಒಳಪಡಿಸುತ್ತಿವೆ. ಈ ವೇಳೆ ಕೆಲ ಮಕ್ಕಳ ಬ್ಯಾಗ್​ಗಳಲ್ಲಿ ಸೆಲ್​ಫೋನ್​ಗಳು, ಸ್ಮಾರ್ಟ್​ಫೋನ್​ಗಳು, ಜೊತೆಗೆ ಕಾಂಡೋಮ್​ಗಳು, ಗರ್ಭನಿರೋಧಕ ಮಾತ್ರೆಗಳು, ಲೈಟರ್​ಗಳು, ಸಿಗರೇಟ್​ಗಳು, ಮತ್ತೇರಿಸುವ

ಬೆಂಗಳೂರು: ಶಾಲಾ ಮಕ್ಕಳ ಬ್ಯಾಗ್ ನಲ್ಲಿ ಕಾಂಡೋಮ್, ಗರ್ಭನಿರೋಧಕ ಮಾತ್ರೆ ಮತ್ತು ಇನ್ನಷ್ಟು!! ಬೆಚ್ಚಿಬಿದ್ದ ಸಿಬ್ಬಂದಿ, ಪೋಷಕರಿಗೆ ಆಘಾತ Read More »