November 2022

“ರಂಗಚಾವಡಿ” ವರ್ಷದ ಹಬ್ಬ ಸಂಭ್ರಮ| ರಂಗ ಚಾವಡಿ ಸಮಾಜಕ್ಕೆ ಮಾದರಿ ಸಂಘಟನೆ – ಇನಾಯತ್ ಅಲಿ

ಸಮಗ್ರ ನ್ಯೂಸ್: ರಂಗಚಾವಡಿ ಸಂಘಟನೆಯ ವರ್ಷದ ಹಬ್ಬ ಕಾರ್ಯಕ್ರಮ ಭಾನುವಾರ ಸಂಜೆ ಇಲ್ಲಿನ ಬಂಟರ ಭವನದಲ್ಲಿ ಜರುಗಿತು. ಕಾರ್ಯಕ್ರಮವನ್ನು ಹಿರಿಯ ರಂಗಕರ್ಮಿ ಸಂಜೀವ ದಂಡೆಕೇರಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತಾಡಿದ ಅವರು, “ರಂಗ ಚಾವಡಿ ಸಂಘಟನೆ ಕಳೆದ 23 ವರ್ಷಗಳಿಂದ ನಿರಂತರವಾಗಿ ಕಲೆ ಸಾಹಿತ್ಯ, ಸಾಂಸ್ಕೃತಿಕ ರಂಗಕ್ಕೆ ಸೇವೆ ಸಲ್ಲಿಸಿಕೊಂಡು ಬರುತ್ತಿರುವುದು ಶ್ಲಾಘನೀಯ. ಅದೆಷ್ಟೋ ಹಿರಿ ಕಿರಿಯ ಕಲಾವಿದರಿಗೆ ಸಂಘಟನೆ ಆಸರೆಯಾಗಿ ಬೆಳೆದಿದೆ. ಸಂಘಟನೆಯು ಪತ್ರಕರ್ತ ಜಗನ್ನಾಥ ಶೆಟ್ಟಿ ಬಾಳ ನೇತೃತ್ವದಲ್ಲಿ ಯಶಸ್ವಿಯಾಗಿ ಮುನ್ನಡೆಯಲಿ” […]

“ರಂಗಚಾವಡಿ” ವರ್ಷದ ಹಬ್ಬ ಸಂಭ್ರಮ| ರಂಗ ಚಾವಡಿ ಸಮಾಜಕ್ಕೆ ಮಾದರಿ ಸಂಘಟನೆ – ಇನಾಯತ್ ಅಲಿ Read More »

ಸುಳ್ಯ: ಕಾರಣಿಕದ ಕೊರಗಜ್ಜನ ಮತ್ತೊಂದು ಪವಾಡ| ಸಮಸ್ಯೆಯ ಸುಳಿಯಲ್ಲಿ ಸಿಲುಕಿದ ಬೆಂಗಳೂರಿನ ದಂಪತಿಯ ಪ್ರಾರ್ಥನೆಗೆ ಹರಸಿದ ಕೊರಂಬಡ್ಕ‌ ಸಾನಿಧ್ಯ

ಸಮಗ್ರ ನ್ಯೂಸ್: ಕರಾವಳಿಯಲ್ಲಿ ಕೊರಗಜ್ಜನ ಕಾರಣಿಕ ಸದಾ ಬೆಳಕಿಗೆ ಬರುತ್ತಿದ್ದು, ಇದೀಗ ಸುಳ್ಯದ ಕೊರಂಬಡ್ಕ‌ ದೈವ ಸಾನಿಧ್ಯದಲ್ಲಿ ಮತ್ತೊಂದು ಆಶ್ಚರ್ಯಕರ ಪ್ರಕರಣ ಬೆಳಕಿಗೆ ಬಂದಿದೆ. ಬೆಂಗಳೂರಿನಿಂದ ಸುಳ್ಯಕ್ಕೆ ಬಂದ ದಂಪತಿಯ ಕಷ್ಟದ ಕಣ್ಣೀರ ಒರೆಸಿ ಕಾರಣಿಕ ದೈವ ಕೊರಂಬಡ್ಕದ ಸ್ವಾಮಿ ಕೊರಗಜ್ಜ‌ ಕೈ ಹಿಡಿದಿದ್ದು, ಅಜ್ಜನ ಮತ್ತೊಂದು ಪವಾಡ ಬೆಳಕಿಗೆ ಬಂದಿದೆ. ಕೊರಂಬಡ್ಕ ಕೊರಗಜ್ಜ‌ ಸಾನಿಧ್ಯ ಬೆಂಗಳೂರು ಮೂಲದ ವ್ಯಕ್ತಿ ವಿನಯ ಎಂಬಾತ ಕಳೆದ ಮೂರು ವರ್ಷದ ಹಿಂದೆ ಸುಳ್ಯದ ವ್ಯಕ್ತಿಯೊಬ್ಬರ ಬಳಿಯಿಂದ ಖರೀದಿಸಿದ್ದರು. ಕಾರನ್ನು ಖರೀದಿಸುವ

ಸುಳ್ಯ: ಕಾರಣಿಕದ ಕೊರಗಜ್ಜನ ಮತ್ತೊಂದು ಪವಾಡ| ಸಮಸ್ಯೆಯ ಸುಳಿಯಲ್ಲಿ ಸಿಲುಕಿದ ಬೆಂಗಳೂರಿನ ದಂಪತಿಯ ಪ್ರಾರ್ಥನೆಗೆ ಹರಸಿದ ಕೊರಂಬಡ್ಕ‌ ಸಾನಿಧ್ಯ Read More »

ಮಂಗಳೂರು ಸ್ಪೋಟ ಪ್ರಕರಣದ ಶಂಕಿತನಿಗೆ ಮಲೆನಾಡು ನಂಟು| ತುಂಗಾ ತೀರದಲ್ಲಿ ನಡೆದಿತ್ತು‌ ಬಾಂಬ್ ಸ್ಪೋಟದ ಕಸರತ್ತು

ಸಮಗ್ರ ನ್ಯೂಸ್: ಮಂಗಳೂರಿನ ಪಂಪ್ ವೇಲ್ ನಲ್ಲಿ ಆಟೋದಲ್ಲಿ ಕುಕ್ಕರ್ ಸ್ಫೋಟಗೊಂಡ ಪ್ರಕರಣದ ಆರೋಪಿ ಶಾರೀಖ್ ನನ್ನು ಪೊಲೀಸರು ಬಂಧಿಸಿದ್ದು, ಈತ ಶಿವಮೊಗ್ಗದಲ್ಲಿ ಈ ಹಿಂದೆ ಉಗ್ರರನ್ನು ಬೆಂಬಲಿಸಿ ಪೋಸ್ಟರ್ ಅಂಟಿಸುವುದು ಹಾಗೂ ತುಂಗಾ ನದಿಯಲ್ಲಿ ಬಾಂಬ್ ಸ್ಫೋಟದ ಪ್ರಯೋಗ ನಡೆಸಿದವನು ಎಂಬುದು ತಿಳಿದು ಬಂದಿದೆ. ತೀರ್ಥಹಳ್ಳಿಯ ಸೊಪ್ಪುಗುಡ್ಡೆ ಮೂಲದ ಶಾರೀಕ್‌ ಬಂಧಿತ ಆರೋಪಿಯಾಗಿದ್ದು, ಈತ ಶಿವಮೊಗ್ಗದ ತುಂಗಾ ನದಿಯಲ್ಲಿ ಸ್ಫೋಟದ ಅಭ್ಯಾಸ ನಡೆಸಿದ ಪ್ರಕರಣದಲ್ಲಿ ನಾಪತ್ತೆಯಾಗಿದ್ದ. ಇದೀಗ ಮಂಗಳೂರು ಸ್ಫೋಟ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾನೆ. ತುಂಗಾ ನದಿಯ

ಮಂಗಳೂರು ಸ್ಪೋಟ ಪ್ರಕರಣದ ಶಂಕಿತನಿಗೆ ಮಲೆನಾಡು ನಂಟು| ತುಂಗಾ ತೀರದಲ್ಲಿ ನಡೆದಿತ್ತು‌ ಬಾಂಬ್ ಸ್ಪೋಟದ ಕಸರತ್ತು Read More »

ಮಂಗಳೂರು ಆಟೋ ಬ್ಲಾಸ್ಟ್ ಹಿನ್ನೆಲೆ| ರಾಜ್ಯದೆಲ್ಲೆಡೆ ಹೈ ಅಲರ್ಟ್|

ಸಮಗ್ರ ನ್ಯೂಸ್: ಮಂಗಳೂರಿನಲ್ಲಿ ಉಗ್ರರು ಬಾಂಬ್ ಸ್ಪೋಟಿಸಿ ದುಷ್ಕೃತ್ಯ ನಡೆಸಲು ಸಂಚು ರೂಪಿಸಿದ್ದು, ಬೆಳಕಿಗೆ ಬಂದಿರುವ ಹಿನ್ನೆಲೆ ರಾಜ್ಯದೆಲ್ಲೆಡೆ ಕಟ್ಟೆಚ್ಚರ ವಹಿಸಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಈ ಸಂಬಂಧ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡು ಸಿಎಂ, ರಾಜ್ಯದ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಲ್ಲಿ ತತ್‍ಕ್ಷಣವೇ ಎಚ್ಚರಿಕೆ ವಹಿಸಬೇಕೆಂದು ಸೂಚನೆ ನೀಡಿದ್ದಾರೆ. ರಾಜಧಾನಿ ಬೆಂಗಳೂರು, ಮಂಗಳೂರು, ಉಡುಪಿ, ಕಾರವಾರ, ಮಡಿಕೇರಿ, ಶಿವಮೊಗ್ಗ, ಮೈಸೂರು, ಬೆಳಗಾವಿ, ಹುಬ್ಬಳ್ಳಿ

ಮಂಗಳೂರು ಆಟೋ ಬ್ಲಾಸ್ಟ್ ಹಿನ್ನೆಲೆ| ರಾಜ್ಯದೆಲ್ಲೆಡೆ ಹೈ ಅಲರ್ಟ್| Read More »

ಪ್ರತಿಷ್ಟಿತ ರಾಡಿಸನ್ ಬ್ಲೂ ಹೊಟೇಲ್ ಮಾಲಕ ಅಮಿತ್ ಜೈನ್ ಶವವಾಗಿ ಪತ್ತೆ

ಸಮಗ್ರ ನ್ಯೂಸ್: ಗಾಜಿಯಾಬಾದ್‌ ನ ಜನಪ್ರಿಯ ರಾಡಿಸನ್ ಬ್ಲೂ ಹೋಟೆಲ್‌ ನ ಮಾಲೀಕ ಅಮಿತ್ ಜೈನ್ ದೆಹಲಿಯ ಕಾಮನ್‌ ವೆಲ್ತ್ ವಿಲೇಜ್ ಪ್ರದೇಶದಲ್ಲಿನ ಅವರ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ದೆಹಲಿಯ ಮಾಂಡವಲಿ ಪೊಲೀಸ್ ಠಾಣೆಯ ಪೊಲೀಸ್ ನಿಯಂತ್ರಣ ಕೊಠಡಿಗೆ ಶನಿವಾರ ಕರೆ ಬಂದಿದ್ದು, ಕಾಮನ್‌ವೆಲ್ತ್ ಗೇಮ್ಸ್ ಗ್ರಾಮದಲ್ಲಿರುವ ತನ್ನ ಮನೆಯಲ್ಲಿ ವ್ಯಕ್ತಿಯೊಬ್ಬ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಎಂದು ಕರೆ ಮಾಡಿದವರು ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರು ಕೌಶಂಬಿಯಲ್ಲಿರುವ ರಾಡಿಸನ್ ಬ್ಲೂ

ಪ್ರತಿಷ್ಟಿತ ರಾಡಿಸನ್ ಬ್ಲೂ ಹೊಟೇಲ್ ಮಾಲಕ ಅಮಿತ್ ಜೈನ್ ಶವವಾಗಿ ಪತ್ತೆ Read More »

ಮಂಗಳೂರು: ಅಟೋರಿಕ್ಷಾದಲ್ಲಿ ನಿಗೂಢ ಸ್ಪೋಟ| ಡಿಜಿಪಿ ಪ್ರವೀಣ್ ಸೂದ್ ಮಾಹಿತಿ

ಸಮಗ್ರ ನ್ಯೂಸ್: ಮಂಗಳೂರಿನ ಕಂಕನಾಡಿ ಪೊಲೀಸ್ ಠಾಣೆ ಸಮೀಪ ಆಟೋ ರಿಕ್ಷಾದಲ್ಲಿ ನಿಗೂಢ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಯಾಣಿಕ ಹಿಂದಿ ಭಾಷೆ ಮಾತನಾಡುತ್ತಿದ್ದ ಮಾಹಿತಿ ಗೊತ್ತಾಗಿದೆ. ಮಂಗಳೂರಿನ ಕಂಕನಾಡಿ ಪೊಲೀಸ್ ಠಾಣೆ ಬಳಿ ಆಟೋದಲ್ಲಿ ನಿಗೂಢವಾಗಿ ಸ್ಪೋಟ ಸಂಭವಿಸಿದ್ದು, ಪೊಲೀಸರ ಬಳಿ ಪ್ರಯಾಣಿಕ ಗೊಂದಲದ ಹೇಳಿಕೆ ನೀಡುತ್ತಿದ್ದಾನೆ. ಒಮ್ಮೆ ತಾನು ಮೈಸೂರಿನಿಂದ ಬಂದಿದ್ದಾಗಿ ಹೇಳಿದ್ದ ಪ್ರಯಾಣಿಕ ನಂತರ ಅಣ್ಣ ಬಾಬುರಾವ್ ಅವರಿಗೆ ಕರೆ ಮಾಡಿ ಎಂದು ನಂಬರ್ ನೀಡಿದ್ದಾನೆ. ಆ ನಂಬರ್ ಗೆ ಕರೆ ಮಾಡಿದಾಗ ಆತ

ಮಂಗಳೂರು: ಅಟೋರಿಕ್ಷಾದಲ್ಲಿ ನಿಗೂಢ ಸ್ಪೋಟ| ಡಿಜಿಪಿ ಪ್ರವೀಣ್ ಸೂದ್ ಮಾಹಿತಿ Read More »

ಬೆಳಗಾವಿ: ನವಿಲು ತೀರ್ಥ ಜಲಾಶಯದಲ್ಲಿ ತಾಯಿ ಮಕ್ಕಳ ಶವ ಪತ್ತೆ

ಸಮಗ್ರ ನ್ಯೂಸ್: ಬೆಳಗಾವಿ ಜಿಲ್ಲೆಯಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ನವಿಲು ತೀರ್ಥ ಜಲಾಶಯದ ಹಿನ್ನೀರಿನಲ್ಲಿ ಇಬ್ಬರು ಮಕ್ಕಳು ಹಾಗೂ ತಾಯಿ ಶವ ಪತ್ತೆಯಾಗಿದೆ. ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದ ಹೊರ ವಲಯದಲ್ಲಿರುವ ನವಿಲು ತೀರ್ಥ ಜಲಾಶಯದ ಹಿನ್ನೀರಿನಲ್ಲಿ ಇಬ್ಬರು ಮಕ್ಕಳು ಹಾಗೂ ತಾಯಿ ಶವ ಪತ್ತೆಯಾಗಿದೆ. ತನುಜಾ ಪರಸಪ್ಪ ಗೋಡಿ(32), ಸುದೀಪ್(4), ರಾಧಿಕಾ(3) ಶವವಾಗಿ ಸಿಕ್ಕವರು. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ‌ ಚುಂಚನೂರು ಗ್ರಾಮದ ನಿವಾಸಿ ತನುಜಾ ಮಕ್ಕಳನ್ನ ಕೊಂದು ನಂತರ ತಾವೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ

ಬೆಳಗಾವಿ: ನವಿಲು ತೀರ್ಥ ಜಲಾಶಯದಲ್ಲಿ ತಾಯಿ ಮಕ್ಕಳ ಶವ ಪತ್ತೆ Read More »

ಮೂಡಿಗೆರೆ: ಕಾಡಾನೆ ದಾಳಿಗೆ ಮಹಿಳೆ ಸಾವು|ಅರಣ್ಯ ಇಲಾಖೆಯ ಬೇಜವಾಬ್ದಾರಿತನವೇ ಇದಕ್ಕೆ ಕಾರಣ: ಸ್ಥಳೀಯರು

ಸಮಗ್ರ ನ್ಯೂಸ್ : ಕಾಡಾನೆ ದಾಳಿಗೆ ಮಹಿಳೆ ಸಾವನಪ್ಪಿದ ಘಟನೆ ಮೂಡಿಗೆರೆ ತಾಲೂಕಿನ ಹುಲೇಮನೆ ಕುಂದೂರು ಗ್ರಾಮದಲ್ಲಿ ನಡೆದಿದೆ. ಶೋಭಾ (45) ಮೃತ ದುರ್ದೈವಿ. ಇವರು ಜಾನುವಾರುಗಳಿಗೆ ಹುಲ್ಲು ತರಲು ಹೋದಾಗ ಕಾಡಾನೆ ದಾಳಿ ನಡೆಸಿದ್ದು ಮಹಿಳೆಯ ಶವವನ್ನು ಕಾಡಾನೆ ನಜ್ಜುಗುಜ್ಜು ಮಾಡಿದೆ. ಮಲೆನಾಡು ಭಾಗದಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು ಜನರು ಆತಂಕದಲ್ಲಿ ಬದುಕು ಸಾಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಡಾನೆಗಳು ಮನೆ ಸಮೀಪವೇ ಬರುತ್ತಿದ್ದು ಜನರು ಭಯಭೀತರಾಗಿದ್ದಾರೆ. ಹಗಲೇ ನಡೆದ ಘಟನೆಗೆ ಅರಣ್ಯ ಇಲಾಖೆಯ ಬೇಜವಾಬ್ದಾರಿತನವೇ ಕಾರಣ

ಮೂಡಿಗೆರೆ: ಕಾಡಾನೆ ದಾಳಿಗೆ ಮಹಿಳೆ ಸಾವು|ಅರಣ್ಯ ಇಲಾಖೆಯ ಬೇಜವಾಬ್ದಾರಿತನವೇ ಇದಕ್ಕೆ ಕಾರಣ: ಸ್ಥಳೀಯರು Read More »

ಭಾರತದಲ್ಲಿ ಮತ್ತೆ ಹವಾ ಸೃಷ್ಟಿಸಲು ಬರುತ್ತಿದೆ ಇನೋವಾ ಹೈಕ್ರಾಸ್|ಹೇಗಿದೆ ಗೊತ್ತ..?

ಟೊಯೊಟಾ ಹಲವಾರು ಜನಪ್ರಿಯ ಕಾರುಗಳನ್ನು ಮಾರಾಟ ಮಾಡುತ್ತಿದ್ದು, ಇದೀಗ ಟೊಯೊಟಾ ಕಂಪನಿಯು ಹೊಸ ಇನೋವಾ ಹೈಕ್ರಾಸ್ ಕಾರನ್ನು ಇದೇ ತಿಂಗಳಿನಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಟೊಯೊಟಾ ಮತ್ತೊಮ್ಮೆ ಬಹುನಿರೀಕ್ಷಿತ ಹೊಸ ಇನೋವಾ ಹೈಕ್ರಾಸ್‌ನ ಹೊಸ ಟೀಸರ್ ಅನ್ನು ಬಿಡುಗಡೆ ಮಾಡಿದ್ದು ನ. 25, ರಂದು ಭಾರತಕ್ಕೆ ಪಾದಾರ್ಪಣೆ ಮಾಡಲು ಯೋಜಿಸಲಾಗಿದೆ, ಹೊಸ ಟೊಯೋಟಾ ಹೈಕ್ರಾಸ್ ಮೊದಲ ಬಾರಿಗೆ ಇಂಡೋನೇಷ್ಯಾದಲ್ಲಿ ಮಾರಾಟವಾಗಲಿದೆ. ಹೊಸ ಟೀಸರ್‌ನೊಂದಿಗೆ, ಟೊಯೋಟಾ, “ಲೆಜೆಂಡ್ ತನ್ನನ್ನು ಹೊಸ HY ಗೆ ಏರಿಸಿಕೊಂಡಿದೆ, ಸ್ನಾಯುವಿನ SUV ನಿಲುವು

ಭಾರತದಲ್ಲಿ ಮತ್ತೆ ಹವಾ ಸೃಷ್ಟಿಸಲು ಬರುತ್ತಿದೆ ಇನೋವಾ ಹೈಕ್ರಾಸ್|ಹೇಗಿದೆ ಗೊತ್ತ..? Read More »

ವೋಟರ್ ಐಡಿ ಹಗರಣ; ಪ್ರಮುಖ ಆರೋಪಿ ಅರೆಸ್ಟ್

ಸಮಗ್ರ ನ್ಯೂಸ್: ಬೆಂಗಳೂರಿನಲ್ಲಿ ವೋಟರ್ ಐಡಿ ಪರಿಷ್ಕರಣೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ. ಚಿಲುಮೆ ಸಂಸ್ಥೆಯ ಮುಖ್ಯಸ್ಥ ರವಿಕುಮಾರ್ ಸಹೋದರ ಕೆಂಪೇಗೌಡನನ್ನು ಬಂಧಿಸಲಾಗಿದೆ. ವೋಟರ್ ಐಡಿ ಪರಿಷ್ಕರಣಿಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಲುಮೆ ಸಂಸ್ಥೆಗೆ ಸಂಬಂಧಿಸಿದ ಹಣಕಾಸಿನ ವ್ಯವಹಾರ ನೋಡಿಕೊಳ್ಳುತ್ತಿದ್ದ ಕೆಂಪೇಗೌಡನನ್ನು ಬಂಧಿಸಲಾಗಿದೆ. ತುಮಕೂರಿನ ಸಮೀಪ ಪೊಲೀಸರು ಕಾರ್ಯಾಚರಣೆ ನಡೆಸಿ ಕೆಂಪೇಗೌಡನನ್ನು ಬಂಧಿಸಿದ್ದಾರೆ. ಚಿಲುಮೆ ಸಂಸ್ಥೆಯ ಮುಖ್ಯಸ್ಥ ರವಿಕುಮಾರ್ ಬಂಧನಕ್ಕೆ ತೀವ್ರ ಹುಡುಕಾಟ ನಡೆಸಲಾಗಿದೆ ಎಂದು ಹೇಳಲಾಗಿದೆ. ಅಕ್ರಮವಾಗಿ ಮತದಾರರ ಮಾಹಿತಿಯನ್ನು ಸಂಗ್ರಹಿಸಿದ್ದ ಕಾರಣ

ವೋಟರ್ ಐಡಿ ಹಗರಣ; ಪ್ರಮುಖ ಆರೋಪಿ ಅರೆಸ್ಟ್ Read More »