November 2022

ಬೆಳ್ತಂಗಡಿ: ಒಂದೇ ಮನೆಯ ಇಬ್ಬರ ಮೃತದೇಹ ಅಂಗಳದಲ್ಲಿ ಪತ್ತೆ |ವಿಷಯುಕ್ತ ಅಣಬೆಯ ಖಾದ್ಯ ಸೇವನೆ ಶಂಕೆ

ಸಮಗ್ರ ನ್ಯೂಸ್: ಒಂದೇ ಮನೆಯ ಇಬ್ಬರ ಮೃತದೇಹ ಮನೆ ಅಂಗಳದಲ್ಲಿ ಪತ್ತೆಯಾದ ಘಟನೆ ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಸಮೀಪದ ಪಲ್ಲದಪಲ್ಕೆ ಎಂಬಲ್ಲಿ ನಡೆದಿದ್ದು , ಕಾಡಿನ ವಿಷ ಪೂರಿತ ಅಣಬೆಯ ಸೇವನೆಯೇ ಸಾವಿಗೆ ಕಾರಣ ಎಂದು ಸಂಶಯಿಸಲಾಗಿದೆ. ಪಲ್ಲದಪಲ್ಕೆ ಮೀಯಾರುಪಾದೆ ಕೇರಿಮಾರು ನಿವಾಸಿಗಳಾದ ಗುರುವ(75) ಹಾಗು ಇವರ ಪುತ್ರ ಓಡಿ(45) ಮೃತಪಟ್ಟವರು. ಬಡ ಕುಟುಂಬದ ಮನೆಯಲ್ಲಿ ಮನೆ ಯಜಮಾನ ಗುರುವ ಸಹಿತ ಇಬ್ಬರು ಪುತ್ರರು ವಾಸವಾಗಿದ್ದರು. ಮಂಗಳವಾರ ಇವರ ಇಬ್ಬರ ಮೃತದೇಹ‌ ಮನೆ ಮುಂಭಾಗ ಬಿದ್ದಿರುವುದನ್ನು ಸ್ಥಳೀಯರು […]

ಬೆಳ್ತಂಗಡಿ: ಒಂದೇ ಮನೆಯ ಇಬ್ಬರ ಮೃತದೇಹ ಅಂಗಳದಲ್ಲಿ ಪತ್ತೆ |ವಿಷಯುಕ್ತ ಅಣಬೆಯ ಖಾದ್ಯ ಸೇವನೆ ಶಂಕೆ Read More »

ಶಂಕಿತ ಉಗ್ರ ಶಾರೀಕ್ ನ ವಾಟ್ಸಪ್ ಡಿಪಿಯಲ್ಲಿ ಶಿವನ ಫೋಟೋ| ಮೊಬೈಲ್ ತರಬೇತಿ ಕೇಂದ್ರದಿಂದ ‌ಮಾಹಿತಿ

ಸಮಗ್ರ ನ್ಯೂಸ್: ಮಂಗಳೂರು ಆಟೋ ಬಾಂಬ್ ಸ್ಪೋಟ ಪ್ರಕರಣದ ಶಂಕಿತ ಉಗ್ರ ಶಾರಿಕ್ ತನ್ನ ವಾಟ್ಸಪ್ ಡಿಪಿಯಲ್ಲಿ ಈಶ್ವರನ ಫೋಟೋ ಇಟ್ಟುಕೊಂಡಿದ್ದ ಎಂದು ಮೊಬೈಲ್ ತರಬೇತಿ ಕೇಂದ್ರದ ಮಾಲೀಕ ಪ್ರಸಾದ್ ತಿಳಿಸಿದ್ದಾರೆ. ಮೈಸೂರಿನ ಕೆ.ಆರ್. ಮೊಹಲ್ಲಾದಲ್ಲಿ ಮೊಬೈಲ್ ತರಬೇತಿ ಕೇಂದ್ರದಲ್ಲಿ ಮೊಬೈಲ್ ರಿಪೇರಿ ಬಗ್ಗೆ ತರಬೇತಿ ಪಡೆಯಲು ಬಂದಿದ್ದ ಶಾರಿಕ್ ಧಾರವಾಡ ಶೈಲಿ ಕನ್ನಡದಲ್ಲಿ ಮಾತನಾಡುತ್ತಿದ್ದ. ಧಾರವಾಡದ ಪ್ರೇಮ್ ರಾಜ್ ಎಂಬ ಹೆಸರಿನಲ್ಲಿ ದಾಖಲೆ ನೀಡಿ ತರಬೇತಿ ಪಡೆಯುತ್ತಿದ್ದ ಎಂದು ಪ್ರಸಾದ್ ಮಾಹಿತಿ ನೀಡಿದ್ದಾರೆ. ಶಂಕಿತ ಉಗ್ರ

ಶಂಕಿತ ಉಗ್ರ ಶಾರೀಕ್ ನ ವಾಟ್ಸಪ್ ಡಿಪಿಯಲ್ಲಿ ಶಿವನ ಫೋಟೋ| ಮೊಬೈಲ್ ತರಬೇತಿ ಕೇಂದ್ರದಿಂದ ‌ಮಾಹಿತಿ Read More »

ಧರ್ಮಸ್ಥಳ: ತಂದೆ‌- ಮಗ ನಿಗೂಢ ಸಾವು

ಸಮಗ್ರ ನ್ಯೂಸ್: ಧರ್ಮಸ್ಥಳ ಸಮೀಪದ ಪುದುವೆಟ್ಟು ಎಂಬಲ್ಲಿ ತಂದೆ-ಮಗ ನಿಗೂಢವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಗುರುವ (75 ) ಹಾಗೂ ಪುತ್ರ ಓಡಿ (45) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಇವರಿಬ್ಬರ ಮೃತ ದೇಹ ಮಿಯ್ಯಾರು ಸಾಮೆದಕಲಪು ಅಂಚೆ ಕಚೇರಿ ಬಳಿಯ ಇವರ ಮನೆಯ ಅಂಗಳದಲ್ಲಿ ಸಿಕ್ಕಿದೆ ಎಂದು ತಿಳಿದು ಬಂದಿದೆ. ಧರ್ಮಸ್ಥಳ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.

ಧರ್ಮಸ್ಥಳ: ತಂದೆ‌- ಮಗ ನಿಗೂಢ ಸಾವು Read More »

ಸುಳ್ಯ: ಹೆರಿಗೆಯಾದ 12ನೇ ದಿನಕ್ಕೆ ಬಾಣಂತಿ ಮೃತ್ಯು

ಸಮಗ್ರ ನ್ಯೂಸ್: ಹೆರಿಗೆಯಾದ 12ನೇ ದಿನಕ್ಕೆ ಬಾಣಂತಿಯೊಬ್ಬರು ಸಾವನ್ನಪ್ಪಿದ ಘಟನೆ ಸುಳ್ಯ ಸಮೀಪ ನಡೆದಿದೆ. ಸುಳ್ಯ ತಾಲೂಕು ಜಟ್ಟಿಪಳ್ಳದ ನಿವಾಸಿ ಲೀಲಾ ಎಂಬವರ ಪುತ್ರಿ ಗೀತಾ (30) ಸಾವನ್ನಪ್ಪಿದ ಬಾಣಂತಿ ಮಹಿಳೆ. ಇವರನ್ನು ಚೊಕ್ಕಾಡಿಯ ಜಗದೀಶ ಎಂಬವರಿಗೆ ಮದುವೆ ಮಾಡಿಕೊಡಲಾಗಿತ್ತು. ದಂಪತಿಗೆ ಒಂದು ಗಂಡು ಮಗುವಿದ್ದು, ಎರಡನೇ ಮಗುವಿನ ಹೆರಿಗೆಗಾಗಿ ಅವರು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 12 ದಿನಗಳ ಹಿಂದೆ ಅವರು ಹೆಣ್ಣು ಮಗುವಿಗೆ ನೀಡಿದ್ದರು. ಬಳಿಕ ಅವರು ಮಗು ಸಮೇತ ತಾಯಿ ಮನೆಗೆ ಬಂದಿದ್ದರು.

ಸುಳ್ಯ: ಹೆರಿಗೆಯಾದ 12ನೇ ದಿನಕ್ಕೆ ಬಾಣಂತಿ ಮೃತ್ಯು Read More »

ಲಘು ವಿಮಾನ ಪತನ; 8 ಮಂದಿ ಸಾವು

ಸಮಗ್ರ ನ್ಯೂಸ್: ಲಘು ವಿಮಾನವೊಂದು ವಸತಿ ಪ್ರದೇಶದಲ್ಲಿ ಪತನಗೊಂಡು ಎಂಟು ಮಂದಿ ಮೃತಪಟ್ಟ ಘಟನೆ ಕೊಲಂಬಿಯಾದಲ್ಲಿ ನಡೆದಿದೆ. ಇಲ್ಲಿನ ಮೆಡೆಲಿನ್​​ನ ಒಲಯಾ ಹೆರೆರಾ ವಿಮಾನ ನಿಲ್ದಾಣದಿಂದ ಟೇಕ್​ಆಫ್​ ಆಗಿದ್ದ ಈ ವಿಮಾನದಲ್ಲಿ ಇಬ್ಬರು ಪೈಲೆಟ್​ಗಳು ಮತ್ತು ಆರು ಮಂದಿ ಪ್ರಯಾಣಿಕರು ಇದ್ದರು. ಏರ್​ಪೋರ್ಟ್​ನಿಂದ ಹೊರಟ ಕೆಲವೇ ಹೊತ್ತಲ್ಲಿ, ಸಮೀಪದ ವಸತಿ ಪ್ರದೇಶದಲ್ಲಿದ್ದ ಮನೆಯೊಂದಕ್ಕೆ ಡಿಕ್ಕಿ ಹೊಡೆದು ಪತನಗೊಂಡಿದೆ. ಆ ಮನೆಯ ಕೊನೇ ಫ್ಲೋರ್​ ಧ್ವಂಸಗೊಂಡಿದೆ. ಅದೃಷ್ಟಕ್ಕೆ ಮನೆಯಲ್ಲಿ ಇದ್ದವರಿಗಾಗಲೀ, ಪತನಗೊಂಡ ಸ್ಥಳದಲ್ಲಿ ಇದ್ದ ಇನ್ನಿತರರಿಗಾಗಲೀ ಯಾವುದೇ ತೊಂದರೆಯಾಗಿಲ್ಲ

ಲಘು ವಿಮಾನ ಪತನ; 8 ಮಂದಿ ಸಾವು Read More »

ಮಂಗಳೂರು:ರಸ್ತೆ ಅಭಿವೃದ್ಧಿ ಕಾಮಗಾರಿ ಹಿನ್ನೆಲೆ|ಬದಲಿ ರಸ್ತೆ ವ್ಯವಸ್ಥೆ

ಸಮಗ್ರ ನ್ಯೂಸ್: ಮಂಗಳೂರು ತಾಲೂಕಿನ ಮಂಗಳೂರು-ಅತ್ರಾಡಿ ರಾಜ್ಯ ಹೆದ್ದಾರಿ ಸಂಖ್ಯೆ 67ರ 16.20 ಕಿ.ಮೀ. ನಿಂದ 19 ಕಿ.ಮೀ. ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಈ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧ ಆದೇಶ ಹಾಗೂ ಸಾರ್ವಜನಿಕರ ಓಡಾಟಕ್ಕೆ ಮತ್ತು ವಾಹನಗಳ ಸುಗಮ ಸಂಚಾರಕ್ಕೆ ಬದಲಿ ಮಾರ್ಗದ ವ್ಯವಸ್ಥೆ ಮಾಡಿ ಅಪರ ದಂಡಾಧಿಕಾರಿಗಳೂ ಆಗಿರುವ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಆದೇಶ ಹೊರಡಿಸಿದ್ದಾರೆ. ಬದಲಿ ರಸ್ತೆ ವ್ಯವಸ್ಥೆ: ಕಟೀಲು ಕಡೆಯಿಂದ ಮಂಗಳೂರು ಕಡೆಗೆ ಸಂಚರಿಸುವ ವಾಹನಗಳು ಬಜಪೆ

ಮಂಗಳೂರು:ರಸ್ತೆ ಅಭಿವೃದ್ಧಿ ಕಾಮಗಾರಿ ಹಿನ್ನೆಲೆ|ಬದಲಿ ರಸ್ತೆ ವ್ಯವಸ್ಥೆ Read More »

ಭೂಕಂಪಕ್ಕೆ ತತ್ತರಿಸಿದ ಇಂಡೋನೇಷ್ಯಾ| ಸಾವಿನ ಸಂಖ್ಯೆಯಲ್ಲಿ ಭಾರೀ ಏರಿಕೆ

ಸಮಗ್ರ ನ್ಯೂಸ್: ಇಂಡೋನೇಷ್ಯಾದ ಪ್ರಮುಖ ದ್ವೀಪ ಜಾವಾದಲ್ಲಿ ಸೋಮವಾರ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಕನಿಷ್ಠ 162 ಮಂದಿ ಮೃತಪಟ್ಟಿದ್ದು, 700ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಭೂಕಂಪದ ತೀವ್ರತೆ ರಿಕ್ಟರ್‌ ಮಾಪಕದಲ್ಲಿ 5.6ರಷ್ಟು ದಾಖಲಾಗಿತ್ತು. ಮೃತರಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿದೆ. ಹಲವು ಮನೆಗಳು ಮತ್ತು ಕಟ್ಟಡಗಳು ಕುಸಿದು ಬಿದ್ದಿವೆ. ಕಟ್ಟಡಗಳ ಅವಶೇಷಗಳಡಿ ಸಿಲುಕಿದವರ ಪೈಕಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸಿಜೆದಿಲ್‌ ಎಂಬ ಹಳ್ಳಿಯೊಂದರಲ್ಲೇ ಸುಮಾರು 25ಕ್ಕೂ ಹೆಚ್ಚು ಜನರು ಕಟ್ಟಡಗಳ ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ. ರಕ್ಷಣಾ ತಂಡಗಳು ಕುಸಿದ ಮನೆಗಳ

ಭೂಕಂಪಕ್ಕೆ ತತ್ತರಿಸಿದ ಇಂಡೋನೇಷ್ಯಾ| ಸಾವಿನ ಸಂಖ್ಯೆಯಲ್ಲಿ ಭಾರೀ ಏರಿಕೆ Read More »

ಬೆಂಗಳೂರು: ಕಾಲೇಜು ಶೌಚಾಲಯಗಳಲ್ಲಿ ರಹಸ್ಯ ಕ್ಯಾಮೆರಾ| 1200 ಅರೆನಗ್ನ ಫೋಟೊ, ವಿಡಿಯೊಗಳನ್ನು ಚಿತ್ರೀಕರಿಸಿದ ಯುವಕ

ಸಮಗ್ರ ನ್ಯೂಸ್: ಕಾಲೇಜು ಶೌಚಾಲಯಗಳಲ್ಲಿ ರಹಸ್ಯ ಕ್ಯಾಮೆರಾ ಅಳವಡಿಸಿ ವಿದ್ಯಾರ್ಥಿನಿಯರ ಅರೆನಗ್ನ ಫೋಟೊ ಹಾಗೂ ವಿಡಿಯೊ ಚಿತ್ರೀಕರಿಸುತ್ತಿದ್ದ ಆರೋಪದಡಿ ವ್ಯಕ್ತಿಯೋರ್ವನ ವಿರುದ್ಧ ಗಿರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶುಭಂ ಎಂ. ಆಜಾದ್ (21) ಎಂಬತ ಬಂಧಿತಿ ಆರೋಪಿ. ‘ಹೊಸಕೆರೆಹಳ್ಳಿ ದ್ವಾರಕನಗರದಲ್ಲಿರುವ ಪಿಇಎಸ್ ಕಾಲೇಜಿನಲ್ಲಿ ಬಿಬಿಎ ಎಲ್‌ಎಲ್‌ಬಿ ಐದನೇ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದ ಆರೋಪಿ ಶುಭಂ, ಮೂರು ವರ್ಷಗಳಿಂದ ಕೃತ್ಯ ಎಸಗುತ್ತಿದ್ದ. ಕಾಲೇಜಿನ ವಿಭಾಗವೊಂದರ ಡೀನ್‌ ನೀಡಿರುವ ದೂರಿನಡಿ ಶುಭಂ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆದು

ಬೆಂಗಳೂರು: ಕಾಲೇಜು ಶೌಚಾಲಯಗಳಲ್ಲಿ ರಹಸ್ಯ ಕ್ಯಾಮೆರಾ| 1200 ಅರೆನಗ್ನ ಫೋಟೊ, ವಿಡಿಯೊಗಳನ್ನು ಚಿತ್ರೀಕರಿಸಿದ ಯುವಕ Read More »

ಬೆಂಗಳೂರು: ಯೋಗ ಹೇಳಿಕೊಡುವವರು ಬೇಕಾಗಿದ್ದಾರೆ| 30,000 ಸಂಬಳ

ಸಮಗ್ರ ಉದ್ಯೋಗ: ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ- ಬೆಂಗಳೂರು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 2 ಡಿಜಿಟಲ್ ಆರ್ಟಿಸ್ಟ್​, ಯೋಗ ಥೆರಪಿಸ್ಟ್ ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಆಫ್​ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ನವೆಂಬರ್ 30, 2022 ಅರ್ಜಿ ಹಾಕಲು ಕೊನೆಯ ದಿನವಾಗಿದೆ. ಬೆಂಗಳೂರಿನಲ್ಲಿ ಉದ್ಯೋಗ ಅರಸುತ್ತಿರುವ ಅಭ್ಯರ್ಥಿಗಳು ಈ ಕೂಡಲೇ ಅಪ್ಲೈ ಮಾಡಿ. ಅರ್ಜಿ

ಬೆಂಗಳೂರು: ಯೋಗ ಹೇಳಿಕೊಡುವವರು ಬೇಕಾಗಿದ್ದಾರೆ| 30,000 ಸಂಬಳ Read More »

ಕಡಬ: ಬಸ್ಸಿನಿಂದ ಹೊರಗೆ ಎಸೆಯಲ್ಪಟ್ಟು ಮಹಿಳೆ ಸಾವು

ಸಮಗ್ರ ನ್ಯೂಸ್: ಚಲಿಸುತ್ತಿದ್ದ ಬಸ್ಸಿನಿಂದ ಮಹಿಳೆಯೊಬ್ಬರು ಹೊರಗೆ ಎಸೆಯಲ್ಪಟ್ಟು ಸ್ಥಳದಲ್ಲೇ ಮೃತಪಟ್ಟ ಘಟನೆ ಕಡಬ ತಾಲೂಕಿನ ಸುಬ್ರಹ್ಮಣ್ಯ- ಧರ್ಮಸ್ಥಳ ರಾಜ್ಯ ಹೆದ್ದಾರಿಯ ಕೇಪು ಲಕ್ಷ್ಮಿ ಜನಾರ್ಧನ ದೇವಸ್ಥಾನದ ಬಳಿ ಈ ದುರ್ಘಟನೆ ನಡೆದಿದೆ. ಬೆಂಗಳೂರಿನ ದಾಸರಹಳ್ಳಿಯ ನಾಗರತ್ಮಮ್ಮ( 58) ಮೃತಪಟ್ಟವರು. ಇವರು ಬೆಂಗಳೂರಿನಿಂದ ತಮ್ಮ ಕುಟುಂಬಸ್ಥರೊಂದಿಗೆ ಬೆಂಗಳೂರಿನಿಂದ ರೈಲು ಮೂಲಕ ಬಂದು ನೆಟ್ಟಣ ನಲ್ಲಿ ಬಂದಿಳಿದಿದ್ದರು. ಅಲ್ಲಿಂದ ಕೆ.ಎಸ್.ಆರ್.ಟಿ.ಸಿ ಬಸ್ ಮೂಲಕ ಧರ್ಮಸ್ಥಳಕ್ಕೆ ತೆರಳಲು ಬಸ್ ಏರಿ ಬಸ್ ಮುಂಭಾಗ ಕುಳಿತ್ತಿದ್ದ ಮಹಿಳೆಯು ಕೇಪು ದೇವಸ್ಥಾನದ ಬಳಿ

ಕಡಬ: ಬಸ್ಸಿನಿಂದ ಹೊರಗೆ ಎಸೆಯಲ್ಪಟ್ಟು ಮಹಿಳೆ ಸಾವು Read More »