November 2022

ಯುವಕನಿಗೆ ಮದ್ಯ ಕುಡಿಸಿ ಯುವತಿಯರಿಂದ ಅತ್ಯಾಚಾರ

ಸಮಗ್ರ ನ್ಯೂಸ್: ಯುವಕನೊಬ್ಬನಿಗೆ ಬಲವಂತವಾಗಿ ಮದ್ಯ ಕುಡಿಸಿ, ನಾಲ್ಕು ಮಂದಿ ಯುವತಿಯರು ಅತ್ಯಾಚಾರ ಮಾಡಿರುವ ಘಟನೆ ಪಂಜಾಬ್ ನ ಜಲಂಧರ್ ನಲ್ಲಿ ನಡೆದಿದೆ. ರಾತ್ರಿ ಪಾಳಿಯಲ್ಲಿ ಕೆಲಸಕ್ಕಾಗಿ ಯುವಕ ತಾನು ಕಾರ್ಖಾನೆಗೆ ಹೋಗುತ್ತಿದ್ದಾಗ ಮಾರ್ಗ ಮಧ್ಯೆ ಈ ಘಟನೆ ನಡೆದಿದೆ ಎಂದು ಹೇಳಿಕೊಂಡಿದ್ದಾನೆ . ಯುವಕ ಹೇಳುವಂತೆ, ನಾನು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ತನ್ನ ಬಳಿ ಕಾರು ಬಂದು ನಿಂತಿತು. ಕಾರಿನೊಳಗಿದ್ದ ಯುವತಿಯೊಬ್ಬಳು ಸ್ಲಿಪ್ ತೋರಿಸಿ ಈ ವಿಳಾಸ ಎಲ್ಲಿದೆ ಎಂದು ವಿಚಾರಿದರು. ನಂತರ ಇದ್ದಕ್ಕಿದ್ದಂತೆ ಕಣ್ಣುಗಳಿಗೆ […]

ಯುವಕನಿಗೆ ಮದ್ಯ ಕುಡಿಸಿ ಯುವತಿಯರಿಂದ ಅತ್ಯಾಚಾರ Read More »

ದಸರಾ ಗಜಪಡೆಯ ಗೋಪಾಲಸ್ವಾಮಿ ಇನ್ನಿಲ್ಲ| ಕಾಡಾ‌ನೆಯ ಪುಂಡಾಟಕ್ಕೆ ನಾಡಾನೆ ಬಲಿ

ಸಮಗ್ರ ನ್ಯೂಸ್: ನಾಡಹಬ್ಬ ಮೈಸೂರು ದಸರಾದ ಜಂಬೂ ಸವಾರಿಯಲ್ಲಿ ಪಾಲ್ಗೊಂಡಿದ್ದ ಗಜಪಡೆಯ ಗೋಪಾಲಸ್ವಾಮಿ (40) ಆನೆ ಕಾಡಾನೆ ದಾಳಿಗೆ ಬಲಿಯಾಗಿದೆ. ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಹನಗೋಡು ಹೋಬಳಿ ಬಳಿ ಕಾಡಾನೆ ದಾಳಿಯಿಂದ ತೀವ್ರವಾಗಿ ಗಾಯಗೊಂಡು ಗೋಪಾಲಸ್ವಾಮಿ ಆನೆ ಬುಧವಾರ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದೆ. ಗೋಪಾಲಸ್ವಾಮಿ ಆನೆಯನ್ನು ಮೇಯಲು ಬಿಟ್ಟಿದ್ದ ವೇಳೆ ಕೊಡಗಿನ ಭಾಗದಲ್ಲಿ ಪುಂಡಾಟ ನಡೆಸುತ್ತಿದ್ದ ಕಾಡಾನೆ (ಅಯ್ಯಪ್ಪ) ನಡುವೆ ಗುದ್ದಾಟ ನಡೆದಿದೆ. ಅಯ್ಯಪ್ಪ ಆನೆಯ ದಾಳಿಗೆ ಸಿಲುಕಿದ ಗೋಪಾಲಸ್ವಾಮಿಗೆ ಕಾಲು ಮುರಿದಿದೆ. ಈ ವೇಳೆ

ದಸರಾ ಗಜಪಡೆಯ ಗೋಪಾಲಸ್ವಾಮಿ ಇನ್ನಿಲ್ಲ| ಕಾಡಾ‌ನೆಯ ಪುಂಡಾಟಕ್ಕೆ ನಾಡಾನೆ ಬಲಿ Read More »

ನಾನು ಬಳಸಿದೆ ಎನ್ನಲಾದ ಪದದಿಂದ ನನಗೇ ನೋವಾಗಿದೆ – ಎಚ್.ಡಿ ಕುಮಾರಸ್ವಾಮಿ

ಸಮಗ್ರ ನ್ಯೂಸ್: ಮಾಜಿ ಸ್ಪೀಕರ್ ಶ್ರೀ ರಮೇಶ್ ಕುಮಾರ್ ಬಗ್ಗೆ ನಾನು ಬಳಸಿದೆ ಎನ್ನಲಾದ ಪದ ಸ್ವತಃ ನನಗೂ ನೋವುಂಟು ಮಾಡಿದೆ. ಆ ಪದ ಬಳಕೆ ನನ್ನ ಜಾಯಮಾನವಲ್ಲ, ನನ್ನ ವ್ಯಕ್ತಿತ್ವವೂ ಅಲ್ಲ. ಈ ಮಾತಿನಿಂದ ರಮೇಶ್ ಕುಮಾರ್ ಅವರಿಗಾಗಲಿ, ಇನ್ನಾರಿಗೆ ಆಗಲಿ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ. ಆ ಮಾತನ್ನು ಹಿಂಪಡೆಯುತ್ತೇನೆಂದು ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿಯವರು ಹೇಳಿದ್ದಾರೆ. ಕುಮಾರಸ್ವಾಮಿಯವರು ಆಕ್ರೋಶಗೊಂಡು ಶ್ರೀನಿವಾಸಪುರದ ಹಾಲಿ ಶಾಸಕ ಹಾಗೂ ಮಾಜಿ ಸ್ಪೀಕರ್​ ರಮೇಶ್​ ಕುಮಾರ್ ಅವರ ಬಗ್ಗೆ ಮಾತನಾಡುತ್ತಾ

ನಾನು ಬಳಸಿದೆ ಎನ್ನಲಾದ ಪದದಿಂದ ನನಗೇ ನೋವಾಗಿದೆ – ಎಚ್.ಡಿ ಕುಮಾರಸ್ವಾಮಿ Read More »

ಪರೇಶ್ ಮೇಸ್ತಾ ಪ್ರಕರಣ| ಕಾಂಗ್ರೆಸ್ ನಿಂದ ಜನಜಾಗೃತಿ ಸಮಾವೇಶ

ಸಮಗ್ರ ನ್ಯೂಸ್: ಐದು ವರ್ಷಗಳ ಹಿಂದೆ ನಡೆದ ಪರೇಶ್‌ ಮೇಸ್ತ ಸಾವಿನ ಪ್ರಕರಣವನ್ನು ಕೊಲೆಯೆಂದು ಬಿಂಬಿಸಿ ತನ್ನ ಸರ್ಕಾರದ ವಿರುದ್ಧ ಹೋರಾಟ ನಡೆಸಿದ್ದ ಬಿಜೆಪಿ ವಿರುದ್ಧ ಕಾಂಗ್ರೆಸ್‌ ತಿರುಗಿಬಿದ್ದಿದ್ದು, ಪ್ರಕರಣದಲ್ಲಿ ಸಿಬಿಐ ಬಿ ರಿಪೋರ್ಟ್ ಹಾಕಿರುವ ಹಿನ್ನೆಲೆಯಲ್ಲಿ ಇದೀಗ ಬಿಜೆಪಿಗೆ ಚುರುಕು ಮುಟ್ಟಿಸಲು ಮುಂದಾಗಿದೆ. ಮೇಸ್ತಾ ಸಾವಿನ ಪ್ರಕರಣದ ಸಿಬಿಐ ಬಿ ರಿಪೋರ್ಟ್ ಮುಂದಿಟ್ಟು ಸಮಾವೇಶ ನಡೆಸಲಾಗುವುದು. ಪರೇಶ್ ಮೇಸ್ತಾ ಸಾವಿನ ಪ್ರಕರಣವನ್ನು ಬಿಜೆಪಿ ರಾಜಕೀಯಕ್ಕೆ ಬಳಸಿಕೊಂಡಿದ್ದು, ಹೀಗಾಗಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಜನಜಾಗೃತಿ ಸಮಾವೇಶ ಹಮ್ಮಿಕೊಂಡಿದೆ.

ಪರೇಶ್ ಮೇಸ್ತಾ ಪ್ರಕರಣ| ಕಾಂಗ್ರೆಸ್ ನಿಂದ ಜನಜಾಗೃತಿ ಸಮಾವೇಶ Read More »

ಧರ್ಮಸ್ಥಳ: ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ ಹೊಡೆದು ಓರ್ವ ಸಾವು, ಮಗು ಸೇರಿ 7 ಮಂದಿ ಗಂಭೀರ

ಸಮಗ್ರ ನ್ಯೂಸ್: ರಾಜ್ಯ ಸಾರಿಗೆ ಬಸ್ಸೊಂದು ಬೊಲೆರೋದಿಂದ ಇಳಿದು ನಿಂತಿದ್ದವರಿಗೆ ಹಾಗೂ ಬೊಲೆರೋ ಗಾಡಿಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸಾವನ್ನಪ್ಪಿದ್ದು , ಮಗು ಸೇರಿದಂತೆ ಏಳು ಜನರಿಗೆ ಗಂಭೀರ ಗಾಯಗೊಂಡ ಘಟನೆ ಧರ್ಮಸ್ಥಳ ಸಮೀಪದ ನಿಡ್ಲೆ ಗ್ರಾಮದ ಕುದ್ರಾಯ ಎಂಬಲ್ಲಿ ನಡೆದಿದೆ. ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಅಗಮಿಸುತ್ತಿದ್ದ ಮಂಡ್ಯ ಜಿಲ್ಲೆಯ ಹತ್ತು ಮಂದಿಯ ಕುಟುಂಬ ನಿಡ್ಲೆ ಗ್ರಾಮದ ಕುದ್ರಾಯ ಎಂಬಲ್ಲಿ ಬೊಲೇರೋ ವಾಹನವನ್ನು ರಸ್ತೆಯ ಬದಿ ನಿಲ್ಲಿಸಿ ಇಳಿದು ಅಂಗಡಿ ಹೋಗುತ್ತಿದ್ದರು. ಈ ವೇಳೆ ಧರ್ಮಸ್ಥಳ

ಧರ್ಮಸ್ಥಳ: ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ ಹೊಡೆದು ಓರ್ವ ಸಾವು, ಮಗು ಸೇರಿ 7 ಮಂದಿ ಗಂಭೀರ Read More »

ಚಿಕ್ಕಮಗಳೂರು: ಶಾಸಕರ ಮೇಲೆ ಹಲ್ಲೆ ಪ್ರಕರಣ| ದೇವಸ್ಥಾನದಲ್ಲಿ ಪ್ರಮಾಣ ಮಾಡಿದ ಬಿಜೆಪಿ ಟಿಕೆಟ್ ಆಕಾಂಕ್ಷಿ

ಸಮಗ್ರ ನ್ಯೂಸ್: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಮೇಲಿನ ಹಲ್ಲೆಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಮೂಡಿಗೆರೆ ತಾಲೂಕಿನ ಬಿಜೆಪಿ ಟಿಕೆಟ್ ಆಕಾಂಕ್ಷಿ ದೀಪಕ್ ದೊಡ್ಡಯ್ಯ ಸ್ಪಷ್ಟಪಡಿಸಿದರು. ನ.23 ರಂದು ನಗರದ ಬಸವನಹಳ್ಳಿ ಮುಖ್ಯರಸ್ತೆಯಲ್ಲಿರುವ ಓಂಕಾರೇಶ್ವರ ದೇವಾಲಯದಲ್ಲಿ ಮೂಡಿಗೆರೆ ತಾಲೂಕಿನ ಹುಲ್ಲೇಮನೆ-ಕುಂದೂರು ಗ್ರಾಮದಲ್ಲಿ ನಡೆದ ಶಾಸಕ ಕುಮಾರಸ್ವಾಮಿ ಮೇಲಿನ ಹಲ್ಲೆಗೂ ನನಗೂ ಯಾವುದೇ ಸಂಬಂಧವಿಲ್ಲ. ಇದರ ಸತ್ಯಾಸತ್ಯತೆಯನ್ನೂ ನೀವೇ ಪರಿಶೀಲನೆ ಮಾಡಿ, ತಪ್ಪಿತಸ್ಥರಿಗೆ ನ್ಯಾಯ, ನೀತಿ, ಧರ್ಮದ ಆಧಾರದಲ್ಲಿ ಶಿಕ್ಷೆ ಕೊಡು ಎಂದು

ಚಿಕ್ಕಮಗಳೂರು: ಶಾಸಕರ ಮೇಲೆ ಹಲ್ಲೆ ಪ್ರಕರಣ| ದೇವಸ್ಥಾನದಲ್ಲಿ ಪ್ರಮಾಣ ಮಾಡಿದ ಬಿಜೆಪಿ ಟಿಕೆಟ್ ಆಕಾಂಕ್ಷಿ Read More »

ಕಾಂತಾರ ಸಿನಿಮಾ ನಾಳೆಯಿಂದ ಅಮೆಜಾನ್ ಪ್ರೈಮ್‌ನಲ್ಲಿ

ಸಿನಿಮಾ ಸಮಾಚಾರ: ಕೋಟಿಗಟ್ಟಲೇ ಹಣ ಬಾಚಿದ್ದ ಕಾಂತಾರ ಸಿನೆಮಾ ಇದೀಗ ನಾಳೆಯಿಂದ ಓಟಿಟಿಯಲ್ಲಿ ಬರಲಿದೆ. ಅಮೆಜಾನ್ ಪ್ರೈಮ್ ನಲ್ಲಿ ನಾಳೆಯಿಂದ ಅಭಿಮಾನಿಗಳಿಗೆ ಕಾಂತಾರ ಸಿನೆಮಾ ಸಿಗಲಿದೆ. ರಿಷಬ್ ನಟಿಸಿ, ನಿರ್ದೇಶಿಸಿರುವ ಸಿನಿಮಾ ಕಾಂತಾರ ವಿಶ್ವದ ಎಲ್ಲೆಡೆ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ. ಚಿತ್ರಮಂದಿರದಲ್ಲಿ ಲೂಟಿ ಮಾಡುತ್ತಿರುವ ಈ ಸಿನಿಮಾ ಈಗ ಒಟಿಟಿಯತ್ತ ಲಗ್ಗೆ ಇಡುತ್ತಿದೆ. ಅಮೆಜಾನ್ ಪ್ರೈಮ್‌ನಲ್ಲಿ ನ.24ರಂದು ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಯಲ್ಲಿ ಬರಲಿದೆ. ಈ ಮೂಲಕ ಒಟಿಟಿ ಪ್ರಿಯರಿಗೆ ಕಾಂತಾರ ತಂಡ ಗುಡ್ ನ್ಯೂಸ್

ಕಾಂತಾರ ಸಿನಿಮಾ ನಾಳೆಯಿಂದ ಅಮೆಜಾನ್ ಪ್ರೈಮ್‌ನಲ್ಲಿ Read More »

ಕುಕ್ಕೆ ಸುಬ್ರಹ್ಮಣ್ಯನ ದರ್ಶನ ಪಡೆದ ಕೆ.ಎಲ್ ರಾಹುಲ್

ಸಮಗ್ರ ನ್ಯೂಸ್: ಕಳಪೆ ಫಾರ್ಮ್‌ನಿಂದಾಗಿ ವ್ಯಾಪಕ ಟೀಕೆಗೆ ಗುರಿಯಾಗಿರುವ ಕೆಎಲ್ ರಾಹುಲ್, ಸಂಕಷ್ಟದ ಸಮಯದಲ್ಲಿ ದೇವರ ಮೊರೆ ಹೋಗಿದ್ದಾರೆ. ನವೆಂಬರ್ 23ರಂದು ದಕ್ಷಿಣ ಕನ್ನಡ ಜಿಲ್ಲೆಯ ಪ್ರಖ್ಯಾತ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಕೆ.ಎಲ್. ರಾಹುಲ್‌ಗೂ ಕುಕ್ಕೆ ಸುಬ್ರಹ್ಮಣ್ಯಕ್ಕೂ ಮೊದಲಿನಿಂದಲೂ ಅವಿನಾಭಾವ ಸಂಬಂಧವಿದೆ. ಈ ಮೊದಲು ಹಲವು ಬಾರಿ ಕೆಎಲ್ ರಾಹುಲ್ ಇಲ್ಲಿಗೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ಕಳೆದ ಬಾರಿ ಫಾರ್ಮ್ ಕಳೆದು ಕೊಂಡಾಗಲೂ ಇಲ್ಲಿಗೆ ಭೇಟಿ ನೀಡಿದ ನಂತರ ಅವರ ಪ್ರದರ್ಶನ

ಕುಕ್ಕೆ ಸುಬ್ರಹ್ಮಣ್ಯನ ದರ್ಶನ ಪಡೆದ ಕೆ.ಎಲ್ ರಾಹುಲ್ Read More »

ಆತನ ಅನೈತಿಕ ಸಂಬಂಧದಿಂದ ನೊಂದ ಪತ್ನಿ ಆತ್ಮಹತ್ಯೆ| ವರ್ಷದೊಳಗೆ ಸಂಸಾರಕ್ಕೆ ಕೊಳ್ಳಿ!!

ಸಮಗ್ರ ನ್ಯೂಸ್: ಆತನಿಗೆ ಮನೆಯೂಟ ರುಚಿಸ್ತಾ ಇರ್ಲಿಲ್ಲ. ಇದಕ್ಕಾಗಿ ಆತ ಹೊರಗಿನ ದಾರಿ ಹಿಡಿದ. ಇದರಿಂದ ನೊಂದ ಆತನ ಪತ್ನಿ ಆತ್ಮಹತ್ಯೆ ಮಾಡಿಕೊಂಡಳು. ಐಬಿಎಂ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದರೂ‌ ಪತಿಯ ಅನೈತಿಕ ಸಂಬಂಧ ಆಕೆಯ ಬದುಕಿಗೆ ಕೊಳ್ಳಿ ಇಟ್ಟಿದೆ. ಬೆಂಗಳೂರಿನ ರಾಮಮೂರ್ತಿ ನಗರದ ರಿಚರ್ಡ್ ಗಾರ್ಡನ್ ನಲ್ಲಿ ನ.10ರಂದು ಈ ಘಟನೆ ನಡೆದಿದ್ದು, ಅದರ ಹಿನ್ನೆಲೆ ನಿಧಾನಕ್ಕೆ ಬಿಚ್ಚಿಕೊಳ್ಳುತ್ತಿದೆ. ಐಬಿಎಂನಲ್ಲಿ ಉದ್ಯೋಗಿಯಾಗಿರುವ ಶ್ವೇತಾ (27) ನೇಣಿಗೆ ಶರಣಾದ ದುರ್ದೈವಿ. ಪತಿ ಅಭಿಷೇಕ್‌ ಅವರು ಹೊಂದಿರುವ ಅಕ್ರಮ ಸಂಬಂಧದಿಂದ ಬೇಸತ್ತು

ಆತನ ಅನೈತಿಕ ಸಂಬಂಧದಿಂದ ನೊಂದ ಪತ್ನಿ ಆತ್ಮಹತ್ಯೆ| ವರ್ಷದೊಳಗೆ ಸಂಸಾರಕ್ಕೆ ಕೊಳ್ಳಿ!! Read More »

ನಂದಿನಿ‌ ಹಾಲು ಹಾಗೂ ಮೊಸರಿನ ದರದಲ್ಲಿ ಹೆಚ್ಚಳ| ನಾಳೆಯಿಂದಲೇ ನೂತನ ದರ ಜಾರಿ

ಸಮಗ್ರ ನ್ಯೂಸ್: ಕೆಲ ದಿನಗಳ ಹಿಂದೆ ನಂದಿನ ಹಾಲು, ಮೊಸರಿನ ದರವನ್ನು ಪ್ರತಿ ಲೀಟರ್ ಗೆ 3 ರೂ ಹೆಚ್ಚಳ ಮಾಡುವುದಾಗಿ ಕೆ ಎಂಎಫ್ ನಿಂದ ಘೋಷಣೆ ಮಾಡಲಾಗಿತ್ತು. ಆದರೆ ಇದಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಬ್ರೇಕ್ ಹಾಕಿದ್ದರು. ಈ ಬಳಿಕ ಸಭೆ ನಡೆಸಿ ಯಾವುದೇ ತೊಂದರೆಯಾಗದಂತೆ ದರ ಹೆಚ್ಚಳಕ್ಕೆ ಸಭೆಯಲ್ಲಿ ಸಲಹೆ ಮಾಡಿದ್ದರು. ಸಿಎಂ ಸಲಹೆಯಂತೆ ಇಂದು ನಂದಿನ ಹಾಲು, ಮೊಸರಿನ ದರವನ್ನು ಪ್ರತಿ ಲೀಟರ್ ಗೆ 2 ರೂ ಹೆಚ್ಚಳ ಮಾಡಲಾಗಿದೆ. ಈ

ನಂದಿನಿ‌ ಹಾಲು ಹಾಗೂ ಮೊಸರಿನ ದರದಲ್ಲಿ ಹೆಚ್ಚಳ| ನಾಳೆಯಿಂದಲೇ ನೂತನ ದರ ಜಾರಿ Read More »