Ad Widget .

ಮಂಗಳೂರು: ಮತಾಂತರಗೊಳಿಸಿ ಲೈಂಗಿಕ ಕಿರುಕುಳ| ಮುಸ್ಲಿಂ ಯುವಕನ ವಿರುದ್ದ ದೂರಿತ್ತ ಯುವತಿ

ಸಮಗ್ರ ನ್ಯೂಸ್: ಮತಾಂತರಗೊಳಿಸಿ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಯುವತಿಯೋರ್ವಳು ಮಂಗಳೂರು ಮಹಿಳಾ ಠಾಣೆಗೆ ದೂರು ನೀಡಿದ್ದಾರೆ.

Ad Widget . Ad Widget .

ಬಿಕರ್ನಕಟ್ಟೆಯಲ್ಲಿರುವ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದಾಗ ಬಿಕರ್ನಕಟ್ಟೆಯ ಕೈಕಂಬದಲ್ಲಿರುವ ಖಲೀಲ್‌ನ ಮೊಬೈಲ್‌ ಶಾಪ್‌ನಲ್ಲೇ ಮೊಬೈಲ್‌ ರಿಚಾರ್ಜ್‌ ಮಾಡುತ್ತಿದ್ದೆ.ಆಗ ಖಲೀಲ್‌ನ ಪರಿಚಯವಾಗಿತ್ತು.

Ad Widget . Ad Widget .

2021ರ ಜ.14ರಂದು ಖಲೀಲ್‌ ಒಳ್ಳೆಯ ಕೆಲಸ ಮತ್ತು ಹಣ ಕೊಡುವುದಾಗಿ ಆಮಿಷವೊಡ್ಡಿ ಪುಸಲಾಯಿಸಿ ಆತನ ಕುಟುಂಬದ ಮನೆಯಾದ ಕಲ್ಲಾಪುಗೆ ಕರೆದುಕೊಂಡು ಹೋಗಿ ಅಲ್ಲಿದ್ದ ಮಹಿಳೆಯರಿಗೆ ಪರಿಚಯಿಸಿದ. ಮುಸ್ಲಿಂ ಧರ್ಮಕ್ಕೆ ಮತಾಂತರವಾಗಲು, ಕುರಾನ್‌ ಓದಲು ಒತ್ತಾಯ ಮಾಡಿ ನಮಾಝ್ ಮಾಡಿಸಿದ್ದ. ಅನಂತರ ಲೈಂಗಿಕ ಕಿರುಕುಳ ನೀಡಿದ್ದಾನೆ.

ಹಿಂದೂ ಹೆಸರನ್ನು ಆಯಿಷಾ ಎಂದು ಬದಲಾಯಿಸಿ ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಕೆಲಸದಿಂದ ತೆಗೆಸುವುದಾಗಿ ಬೆದರಿಕೆ ಹಾಕಿದ್ದಾನೆ. ಬುರ್ಖಾ ಧರಿಸುವಂತೆ ಒತ್ತಾಯಿಸಿ ಬುರ್ಖಾ ತಂದು ಕೊಟ್ಟಿದ್ದಾನೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Comment

Your email address will not be published. Required fields are marked *