ಸಮಗ್ರ ನ್ಯೂಸ್: ಕಣಿವೆ ರಾಷ್ಟ್ರ ನೇಪಾಳದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಘಟನೆಯಲ್ಲಿ ಮೂರು ಮಂದಿ ಪ್ರಾಣ ಕಳೆದುಕೊಂಡಿದ್ದು, ಅಪಾರ ಹಾನಿ ಸಂಭವಿಸಿರುವ ಸಾಧ್ಯತೆ ಇದೆ.
ಇದರಿಂದಾಗಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲೂ ಬುಧವಾರ (ಇಂದು) ಮುಂಜಾನೆ ಭೂಕಂಪನದ ಅನುಭವವಾಗಿದೆ. ನೇಪಾಳದಲ್ಲಿ ಇಂದು ಮುಂಜಾನೆ 1.57ರ ಸುಮಾರಿಗೆ 6.3 ತೀವ್ರತೆಯ ಭೂಕಂಪವಾಗಿದೆ ಎಂದು ತಿಳಿದುಬಂದಿದೆ.
ಕಳೆದ 24 ಗಂಟೆಗಳಲ್ಲಿ ನೇಪಾಳದ ದೂರದ ಪಶ್ಚಿಮ ಪ್ರದೇಶದಲ್ಲಿ ಮೂರು ಬಾರಿ ಭೂಮಿ ಕಂಪಿಸಿದ ಅನುಭವವಾಗಿದೆ. ಒಂದರ ಹಿಂದೊಂದರಂತೆ ಭೂಮಿ ಕಂಪಿಸಿದೆ ಎಂದು ನೇಪಾಳದ ರಾಷ್ಟ್ರೀಯ ಭೂಕಂಪನ ಕೇಂದ್ರ (ಎನ್‌ಎಸ್‌ಸಿ) ತಿಳಿಸಿದೆ.
ಭೂಕಂಪನವು ಭೂಮಿಯಿಂದ 10 ಕಿಮೀ ಆಳದಲ್ಲಿ 6.6 ತೀವ್ರತೆಯ ಭೂಕಂಪ ಸಂಭವಿಸಿದೆ’ ಎಂದು ನ್ಯಾಷನಲ್ ಸೆಂಟರ್ ಫಾರ್ ಸಿಸ್ಮಾಲಜಿ ಟ್ವೀಟ್ ಮಾಡಿದೆ.
ಇನ್ನು ಬುಧವಾರ(ನ.9) ಬೆಳಗ್ಗೆ 2:12 (ಸ್ಥಳೀಯ ಕಾಲಮಾನ) ಸುಮಾರಿಗೆ 6.6 ತೀವ್ರತೆಯ ಮೂರನೇ ಬಲವಾದ ಕಂಪನ ಸಂಭವಿಸಿದ್ದು, ಗೈರಾಗೌನ್‌ನಲ್ಲಿ ಮೂರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.