October 2022

ಮಂಗಳೂರು: ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಟ; ನಾಲ್ವರ ಬಂಧನ

ಸಮಗ್ರ ನ್ಯೂಸ್: ಕೂಲಿ ಕೆಲಸಕ್ಕೆ ಹೋಗುವ ವಿಚಾರದಲ್ಲಿ ನಾಲ್ಕು ಮಂದಿಯನ್ನು ಸಾರ್ವಜನಿಕ ಸ್ಥಳದಲ್ಲಿ ಪರಸ್ಪರ ಬೈದಾಡಿ ಹೊಡೆದಾಡಿಕೊಂಡು ಸಾರ್ವಜನಿಕರ ನೆಮ್ಮದಿಗೆ ಭಂಗ ಎಸಗಿದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ.ಬಸವರಾಜ್ ಮಡಿವಾಳ್, ಈರಣ್ಣ ನೈನಾಪುರ, ರಾಮಪ್ಪ ತಂಬೂರಿ, ಪರಶುರಾಮ ಬಂಧಿತ ಆರೋಪಿಗಳು. ಇವರು ಕೂಲಿಗೆ ಹೋಗುವ ವಿಚಾರದಲ್ಲಿ ರವಿವಾರ ಬೆಳಗ್ಗೆ ಬೈದಾಡಿ, ಹಲ್ಲೆ ನಡೆಸಿ ಸಾರ್ವಜನಿಕರ ನೆಮ್ಮದಿಗೆ ಭಂಗ ತಂದಿದ್ದಾರೆ ಎಂದು ಪ್ರಕರಣ ದಾಖಲಿಸಿರುವ ಉರ್ವ ಪೊಲೀಸರು ತಿಳಿಸಿದ್ದಾರೆ.

ಮಂಗಳೂರು: ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಟ; ನಾಲ್ವರ ಬಂಧನ Read More »

ಕೊಟ್ಟಿಗೆಹಾರ : ಉದ್ಯೋಗ ಖಾತ್ರಿ ಕಾಮಗಾರಿಯಲ್ಲಿ ಯಂತ್ರ ಬಳಕೆ| ಗ್ರಾ.ಪಂ ಅಧ್ಯಕ್ಷರ ವಿರುದ್ಧ ಸ್ಥಳಿಯರ ಆಕ್ರೋಶ

ಸಮಗ್ರ ನ್ಯೂಸ್: ಕೂಲಿ ಕಾರ್ಮಿಕರನ್ನೇ ಕೇಂದ್ರಿಕೃತವಾಗಿ ಇಟ್ಟುಕೊಂಡು ಅವರಿಗೆ ವರ್ಷದಲ್ಲಿ ಇಷ್ಟು ದಿನ ಕೂಲಿ ಸಿಗಲಿ, ಜೀವನ ನಡೆಸೋದಕ್ಕೆ ತೊಂದರೆ ಆಗಬಾರದು ಎಂದು ಕೇಂದ್ರ ಸರ್ಕಾರ ಉದ್ಯೋಗ ಖಾತ್ರಿ ಯೋಜನೆಯನ್ನ ಜಾರಿಗೆ ತಂದಿದೆ. ಆದರೆ, ಜಿಲ್ಲೆಯ ಮೂಡಿಗೆರೆ ತಾಲೂಕಿನ ತರುವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಏಕಲವ್ಯ ಶಾಲೆಯ ಮೈದಾನ ಸಮತಟ್ಟು ಮಾಡಲು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ನಡೆಯುತ್ತಿದ್ದು ತರುವೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಕೇಂದ್ರ ಸರ್ಕಾರದ ಯೋಜನೆಗೆ ಹಾಲು-ತುಪ್ಪ ಬಿಟ್ಟಿದ್ದಾರೆ ಎಂದು ಸ್ಥಳಿಯರೇ ಆರೋಪಿಸಿ ಗ್ರಾಮ

ಕೊಟ್ಟಿಗೆಹಾರ : ಉದ್ಯೋಗ ಖಾತ್ರಿ ಕಾಮಗಾರಿಯಲ್ಲಿ ಯಂತ್ರ ಬಳಕೆ| ಗ್ರಾ.ಪಂ ಅಧ್ಯಕ್ಷರ ವಿರುದ್ಧ ಸ್ಥಳಿಯರ ಆಕ್ರೋಶ Read More »

‘ಭಾರತ್ ಜೋಡೋ’ ಯಾತ್ರೆಗೆ ಬಂದಿದ್ದಾತ ಅಪಘಾತದಲ್ಲಿ ಸಾವು

ಸಮಗ್ರ ನ್ಯೂಸ್: ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆಗೆ ಬಂದಿದ್ದ ಪಕ್ಷದ ಕಾರ್ಯಕರ್ತ ಅಪಘಾತದಲ್ಲಿ ಮೃತಪಟ್ಟ ಘಟನೆ ಚಿತ್ರದುರ್ಗದ ಹಿರಿಯೂರಿನಲ್ಲಿ ನಡೆದಿದೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ರಮೇಶ(38) ಮೃತಪಟ್ಟವರು ಎಂದು ಹೇಳಲಾಗಿದೆ. ಖಾಸಗಿ ಬಸ್ ನಲ್ಲಿ ಭಾರತ್ ಜೋಡೋ ಯಾತ್ರೆಗೆ ಕಾಂಗ್ರೆಸ್ ಕಾರ್ಯಕರ್ತರನ್ನು ಕರೆತರಲಾಗಿತ್ತು. ರಮೇಶ್ ಅವರು ಹಿರಿಯೂರಿನಲ್ಲಿ ನಡೆದ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ಹಿರಿಯೂರು ಪಟ್ಟಣದ ಟಿಬಿ ಸರ್ಕಲ್ ಬಳಿ ರಸ್ತೆ ದಾಟುತ್ತಿದ್ದ ವೇಳೆ ಖಾಸಗಿ ಬಸ್ ಡಿಕ್ಕಿ ಹೊಡೆದು ರಮೇಶ್ ಮೃತಪಟ್ಟಿದ್ದಾರೆನ್ನಲಾಗಿದೆ. ಹಿರಿಯೂರು ಟೌನ್ ಪೋಲಿಸ್

‘ಭಾರತ್ ಜೋಡೋ’ ಯಾತ್ರೆಗೆ ಬಂದಿದ್ದಾತ ಅಪಘಾತದಲ್ಲಿ ಸಾವು Read More »

ಸುಬ್ರಹ್ಮಣ್ಯ: ಹಳಿ‌ದಾಟುತ್ತಿದ್ದವನಿಗೆ ರೈಲು ಇಂಜಿನ್ ಡಿಕ್ಕಿ; ವ್ಯಕ್ತಿ ಗಂಭೀರ

ಸಮಗ್ರ ನ್ಯೂಸ್: ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದ ಬಳಿ ರೈಲು ಇಂಜಿನ್ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಇಂದು ಮಧ್ಯಾಹ್ನ ನೆಟ್ಟಣದಲ್ಲಿ ನಡೆದಿದೆ. ಗಂಭೀರ ಗಾಯಗೊಂಡವರನ್ನು ಐತ್ತೂರು ಗ್ರಾಮದ ಓಟೆಕಜೆ ನಾಗಣ್ಣ ಎಂದು ಗುರುತಿಸಲಾಗಿದೆ. ರೈಲು ಇಂಜಿನ್ ಡಿಕ್ಕಿ ಹೊಡೆದ ರಭಸಕ್ಕೆ ವ್ಯಕ್ತಿಯ ಒಂದು ಕಾಲು ಮತ್ತು ಒಂದು ಕೈ ತುಂಡಾಗಿದ್ದು, ಗಂಭೀರ ಗಾಯಗೊಂಡ ಅವರನ್ನು ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳೂರಿನಲ್ಲಿ ತನ್ನ ಮಗಳು ಭಾಗವಹಿಸಿದ್ದ ಕ್ರೀಡಾಕೂಟಕ್ಕೆ ತೆರಳಿ

ಸುಬ್ರಹ್ಮಣ್ಯ: ಹಳಿ‌ದಾಟುತ್ತಿದ್ದವನಿಗೆ ರೈಲು ಇಂಜಿನ್ ಡಿಕ್ಕಿ; ವ್ಯಕ್ತಿ ಗಂಭೀರ Read More »

ಮೂಡಿಗೆರೆ: ಜಮೀನು ವಿವಾದ ಹಿನ್ನೆಲೆ| ಮಾತುಕತೆಗೆ ತೆರಳಿದವರ ಮೇಲೆ ರೈತ ಸಂಘದ ಜಿಲ್ಲಾಧ್ಯಕ್ಷನಿಂದ ಶೂಟ್

ಸಮಗ್ರ ನ್ಯೂಸ್: ಜಮೀನಿನ ವಿವಾದವನ್ನು ಬಗೆಹರಿಸಲು ಮಾತುಕತೆ ನಡೆಸಲು ತೆರಳಿದವರ ಮೇಲೆ ರೈತಸಂಘದ ಮುಖಂಡ ಶೂಟ್ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ಗ್ರಾಮದಲ್ಲಿ ನಡೆದಿದೆ. ಕಾಲಿಗೆ ಗುಂಡು ತಗುಲಿದ್ದ ವ್ಯಕ್ತಿಯನ್ನು ನಾರಾಯಣ್ ರಾಜ್ ಎಂದು ಗುರುತಿಸಲಾಗಿದೆ. ಮಾಕೋನಹಳ್ಳಿ ಗ್ರಾಮದ ರೈತ ಸಂಘದ ದುಗ್ಗಪ್ಪಗೌಡ ಹಾಗೂ ಮಂಚೇಗೌಡ ನಡುವೆ ಜಮೀನು ವಿವಾದವಿದ್ದು, ಮಂಚೇಗೌಡ ತಮ್ಮ ಜಮೀನನ್ನ ಮನೋಜ್ ಎಂಬುವರಿಗೆ ಮಾರಾಟ ಮಾಡಿದ್ದರು. ಮಂಚೇಗೌಡ ಅವರ ಜಮೀನು ಖರೀದಿಸಿದ ಮನೋಜ್ ಜಮೀನಿನ ಸರ್ವೇ ಕಾರ್ಯ ಮುಗಿಸಿದ್ದರು.

ಮೂಡಿಗೆರೆ: ಜಮೀನು ವಿವಾದ ಹಿನ್ನೆಲೆ| ಮಾತುಕತೆಗೆ ತೆರಳಿದವರ ಮೇಲೆ ರೈತ ಸಂಘದ ಜಿಲ್ಲಾಧ್ಯಕ್ಷನಿಂದ ಶೂಟ್ Read More »

ಸುಳ್ಯದ ಕೆವಿಜಿ ಡೆಂಟಲ್ ಕಾಲೇಜಿಗೆ ಲಕ್ಷ ದಂಡ ವಿಧಿಸಿದ ಹೈಕೋರ್ಟ್

ಬೆಂಗಳೂರು: ವಿದ್ಯಾರ್ಥಿಗಳ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಕೋರಿ ಅರ್ಜಿ ಸಲ್ಲಿಸಿದ್ದ ಎರಡು ದಂತ ವೈದ್ಯಕೀಯ ಕಾಲೇಜುಗಳಿಗೆ ನ್ಯಾಯಾಲಯದ ಸಮಯ ವ್ಯರ್ಥ ಮಾಡಿರುವುದಕ್ಕಾಗಿ ಕರ್ನಾಟಕ ಹೈಕೋರ್ಟ್ ತಲಾ ರೂ 1 ಲಕ್ಷ ದಂಡ ವಿಧಿಸಿದೆ. “ವಿದ್ಯಾರ್ಥಿಗಳು ನಿಜವಾಗಿಯೂ ಅರ್ಹರಾಗಿದ್ದು ಸೀಟುಗಳಿಂದ ವಂಚಿತರಾಗಿದ್ದರೆ, ಅವರೇ ಸ್ವತಂತ್ರವಾಗಿ ನ್ಯಾಯಾಲಯದ ಮೊರೆ ಹೋಗಬಹುದು. ಆದರೆ, ವಿದ್ಯಾರ್ಥಿಗಳ ಪರವಾಗಿ ಕಾಲೇಜುಗಳು ರಿಟ್ ಅರ್ಜಿಗಳನ್ನು ಸಲ್ಲಿಸುವಂತಿಲ್ಲ’ ಎಂದು ನ್ಯಾಯಾಲಯ ಹೇಳಿದೆ. ಸುಳ್ಯದ ಕೆವಿಜಿ ಡೆಂಟಲ್ ಕಾಲೇಜು ಮತ್ತು ಬೆಂಗಳೂರಿನ ಶ್ರೀ ವೆಂಕಟೇಶ್ವರ ಡೆಂಟಲ್ ಕಾಲೇಜು ಆರು

ಸುಳ್ಯದ ಕೆವಿಜಿ ಡೆಂಟಲ್ ಕಾಲೇಜಿಗೆ ಲಕ್ಷ ದಂಡ ವಿಧಿಸಿದ ಹೈಕೋರ್ಟ್ Read More »

ಮಂಗಳೂರು: ಯುವದಂಪತಿ ನೇಣು ಬಿಗಿದ‌ ಸ್ಥಿತಿಯಲ್ಲಿ ಪತ್ತೆ

ಸಮಗ್ರ ನ್ಯೂಸ್: ಯುವದಂಪತಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಮಂಗಳೂರು ನಗರದ ಕಂಕನಾಡಿ‌ ಎಂಬಲ್ಲಿ ನಡೆದಿದೆ. ಇಲ್ಲಿನ ಅಡುಮರೋಳಿ ಎಂಬಲ್ಲಿ ಘಟನೆ ನಡೆದಿದ್ದು, ಪತಿ ಮಲ್ಲಿಕಾರ್ಜುನ್ ಮತ್ತು ಪತ್ನಿ ಸೌಮ್ಯ ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿಗಳು. ಮೃತ ಮಲ್ಲಿಕಾರ್ಜುನ್ ಹುಬ್ಬಳ್ಳಿ ಮೂಲದವರಾಗಿದ್ದು, ಸೌಮ್ಯ ಮಂಗಳೂರಿನವರಾಗಿದ್ದಾರೆ. ಮೃತ ದಂಪತಿ ಒಂದೂವರೆ ವರ್ಷದ ಹಿಂದೆ ವಿವಾಹವಾಗಿದ್ದರು ಎಂದು ಹೇಳಲಾಗಿದೆ. ಕಂಕನಾಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಂಗಳೂರು: ಯುವದಂಪತಿ ನೇಣು ಬಿಗಿದ‌ ಸ್ಥಿತಿಯಲ್ಲಿ ಪತ್ತೆ Read More »

ಕುಂಬಳೆ ಅನಂತಪದ್ಮನಾಭ ಕ್ಷೇತ್ರದ ಸಸ್ಯಾಹಾರಿ ಮೊಸಳೆ ‘ಬಬಿಯಾ’ ಇನ್ನಿಲ್ಲ

ಸಮಗ್ರ ನ್ಯೂಸ್: ಗಡಿಭಾಗ ಕೇರಳದ ಕಾಸರಗೋಡು ಜಿಲ್ಲೆಯ ಕುಂಬಳೆಯ ಅನಂತ ಪದ್ಮನಾಭ ದೇವಸ್ಥಾನದ ‘ಬಬಿಯಾ’ ಹೆಸರಿನ ಮೊಸಳೆ ಇಹಲೋಕ ತ್ಯಜಿಸಿದೆ. ತಿರುವನಂತಪುರಂನಲ್ಲಿರುವ ಅನಂತಪದ್ಮನಾಭ ಸ್ವಾಮಿಯ ಮೂಲ ಕ್ಷೇತ್ರ ಎನ್ನಲಾದ ಕುಂಬಳೆ ಅನಂತ ಪದ್ಮನಾಭ ದೇವಸ್ಥಾನದಲ್ಲಿರುವ ಸಸ್ಯಹಾರಿ ಮೊಸಳೆ ಎಂದೇ ಬಬಿಯಾ ಪ್ರಖ್ಯಾತಿ ಪಡೆದಿತ್ತು. ಬಬಿಯಾ ಕಳೆದ 70 ವರ್ಷಗಳಿಂದ ದೇವಸ್ಥಾನದ ಕಲ್ಯಾಣಿಯಲ್ಲಿದೆ ಎನ್ನಲಾಗಿದೆ. ದೇವಸ್ಥಾನದ ಆವರಣದಲ್ಲಿ ಬಬಿಯಾ ಮೊಸಳೆಯ ಅಂತಿಮ ವಿಧಿ ವಿಧಾನ ನಡೆಯಲಿದೆ. ಈ ಬಬಿಯಾ ಮೊಸಲೆ ನಿತ್ಯ ಎರಡು ಬಾರಿ ಪೂಜೆ ಬಳಿಕ ನೈವೇದ್ಯ

ಕುಂಬಳೆ ಅನಂತಪದ್ಮನಾಭ ಕ್ಷೇತ್ರದ ಸಸ್ಯಾಹಾರಿ ಮೊಸಳೆ ‘ಬಬಿಯಾ’ ಇನ್ನಿಲ್ಲ Read More »

ಸಮಾಜವಾದಿ ಪಕ್ಷ ಸಂಸ್ಥಾಪಕ, ಉ.ಪ್ರದೇಶದ ಮಾಜಿ ಸಿಎಂ ಮುಲಾಯಂ ಸಿಂಗ್ ಯಾದವ್ ವಿಧಿವಶ

ಸಮಗ್ರ ನ್ಯೂಸ್: ಸಮಾಜವಾದಿ ಪಕ್ಷದ ಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರು ತಮ್ಮ 82 ನೇ ವಯಸ್ಸಿನಲ್ಲಿ ಸೋಮವಾರ(ಅ10) ಬೆಳಿಗ್ಗೆ ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮುಲಾಯಂ ಸಿಂಗ್ ಯಾದವ್ ಸಮಾಜವಾದಿ ಪಕ್ಷದ ಸ್ಥಾಪಕ-ಪೋಷಕರಾಗಿದ್ದರು. ಸತತ ಮೂರು ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ಅವರು ಭಾರತ ಸರ್ಕಾರದ ರಕ್ಷಣಾ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು.

ಸಮಾಜವಾದಿ ಪಕ್ಷ ಸಂಸ್ಥಾಪಕ, ಉ.ಪ್ರದೇಶದ ಮಾಜಿ ಸಿಎಂ ಮುಲಾಯಂ ಸಿಂಗ್ ಯಾದವ್ ವಿಧಿವಶ Read More »

ಮದರಸಾ ಅಧ್ಯಯನ ಪ್ರಾಥಮಿಕ ವರದಿ ಬಹಿರಂಗ| ಗಾಬರಿಗೊಳಗಾದ ಸಚಿವ ಬಿ.ಸಿ ನಾಗೇಶ್

ಸಮಗ್ರ ನ್ಯೂಸ್: ರಾಜ್ಯದ ಮದರಸಾಗಳ ಚಟುವಟಿಕೆ ಅಧ್ಯಯನಕ್ಕೆ ಶಿಕ್ಷಣ ಇಲಾಖೆ ಸಮಿತಿಯನ್ನು ರಚಿಸಿದ್ದು, ಸದಸ್ಯರು ನೀಡಿರುವ ಪ್ರಾಥಮಿಕ ಹಂತದ ವರದಿಗೆ ಶಿಕ್ಷಣ ಸಚಿವರೇ ಗಾಬರಿ ಆಗಿದ್ದಾರೆ. ಖುದ್ದು ಶಿಕ್ಷಣ ಸಚಿವರೇ ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ್ದು, ಕೆಲವು ಮದರಸಾದಲ್ಲಿ ಕಲಿಯಲು ಸೇರಿಕೊಂಡಿದ್ದ ಮಕ್ಕಳು ಎಲ್ಲಿ ಹೋಗಿದ್ದಾರೆ ಎಂಬುದೇ ತಿಳಿದಿಲ್ಲ ಎಂದಿದ್ದಾರೆ. ಮದರಸಾಗಳಲ್ಲಿ ಮಕ್ಕಳ ದಾಖಲಾತಿ ಇರುತ್ತದೆ, ಆದರೆ ಮಕ್ಕಳು ಮದರಸಾಗಳಲ್ಲಿಯೇ ಇರುವುದಿಲ್ಲ ಎಂಬ ಅಚ್ಚರಿಯ ಅಂಶವನ್ನು ಶಿಕ್ಷಣ ಸಚಿವರು ತಿಳಿಸಿದ್ದಾರೆ. ಜತೆಗೆ ಕೆಲ ಮದರಸಾಗಳಲ್ಲಿ ಮಕ್ಕಳು ಕೂರಲು

ಮದರಸಾ ಅಧ್ಯಯನ ಪ್ರಾಥಮಿಕ ವರದಿ ಬಹಿರಂಗ| ಗಾಬರಿಗೊಳಗಾದ ಸಚಿವ ಬಿ.ಸಿ ನಾಗೇಶ್ Read More »