ಸಮಗ್ರ ನ್ಯೂಸ್: ನೆಲ, ಜಲ, ಆಕಾಶದಲ್ಲಿ ಶುಕ್ರವಾರ ಏಕಕಾಲದಲ್ಲಿ ಕೋಟಿ ಕಂಠ ಗಾಯನ ಮುಗಿಲು ಮುಟ್ಟ ಲಿದ್ದು, 10 ಸಾವಿರಕ್ಕೂ ಹೆಚ್ಚು ತಾಣಗಳಲ್ಲಿ ಸರಿಯಾಗಿ 11 ಗಂಟೆಗೆ ಕನ್ನಡದ ಗೀತೆಗಳು ಮಾರ್ದನಿಸಲಿವೆ.
ರಾಜ್ಯ ಸರಕಾರದ ‘ಕೋಟಿ ಕಂಠ ಗಾಯನ’ ಕಾರ್ಯ ಕ್ರಮದ ನೋಂದಣಿಗೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತ ವಾಗಿದ್ದು, 1.25 ಕೋಟಿ ಮಂದಿ ಭಾಗವಹಿಸುವರು. ಈ ವಿಶಿಷ್ಟ ಕಾರ್ಯಕ್ರಮ ಗಿನ್ನೆಸ್ ದಾಖಲೆ ಸೇರುವ ಸಾಧ್ಯತೆ ಇದೆ.
ಯಾರೆಲ್ಲಾ ಪಾಲ್ಗೊಳ್ಳುತ್ತಾರೆ?
ಒಟ್ಟು 27 ನಿಮಿಷಗಳ ಗಾಯನದಲ್ಲಿ ಕಂಠೀರವ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಎಲ್ಲ ಸಚಿವರು ಹಾಗೂ 2000 ಮಂದಿ ವೃತ್ತಿಪರ ಗಾಯಕರು ಸೇರಿ ಗರಿಷ್ಠ 50 ಸಾವಿರ ಜನ ಭಾಗವಹಿಸುವರು. ವಿಧಾನ ಸೌಧದ ಮೆಟ್ಟಿಲುಗಳ ಮೇಲಿನ ಕಾರ್ಯಕ್ರಮದಲ್ಲಿ 5 ಸಾವಿರ ಗಣ್ಯರು ಭಾಗವ ಹಿಸುವರು. ಪ್ರತಿ ಗ್ರಾ.ಪಂ.ಗಳಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸ್ತ್ರೀಶಕ್ತಿ ಸಂಘಗಳು, ಸ್ವಸಹಾಯ ಸಂಸ್ಥೆಗಳ ಸದಸ್ಯರು ಪಾಲ್ಗೊಳ್ಳುವರು ಎಂದರು.
ಎಲ್ಲೆಲ್ಲಿ ಗಾಯನ? :
ಎಲ್ಲ ಶಾಲಾ ಕಾಲೇಜುಗಳು, ಕಾರ್ಖಾನೆಗಳು, ಮಾಲ್‌ಗಳು, ಬಸ್-ರೈಲ್ವೇ ನಿಲ್ದಾಣಗಳು, ಅಪಾರ್ಟ್‌ಮೆಂಟ್‌ಗಳು, ವಿಧಾನ ಸೌಧದ ಮೆಟ್ಟಿಲ ಮೇಲೆ, ಬೆಂಗಳೂರು, ಧಾರವಾಡ ಹೈಕೋರ್ಟ್, ಮೈಸೂರಿನ ಅರಮನೆ, ಚಿತ್ರದುರ್ಗ ಕೋಟೆ, ಮಂಗಳೂರು, ಉಡುಪಿಯ ಕರಾವಳಿ ತೀರ, ಹಂಪಿ, ಜೋಗ ಜಲಪಾತ, ಐಹೊಳೆ, ಪಟ್ಟದಕಲ್ಲು, ಸಿದ್ಧಗಂಗಾ ಮಠ, ಹುಬ್ಬಳ್ಳಿ ಕಿಮ್ಸ್ ಆವರಣ ದಲ್ಲಿ, ಬೆಂಗಳೂರು ಮೆಟ್ರೋದಲ್ಲಿ ಗಾಯನವಿರಲಿದೆ. ಕರ್ನಾಟಕ ರಾಜ್ಯೋತ್ಸವ ಉತ್ಸವದಿಂದ ಆರಂಭವಾಗಲಿ ಎಂಬುದು ಸರಕಾರದ ಆಶಯ. ಜತೆಗೆ ನಾಡಿನ ಎಲ್ಲ ಜನರನ್ನೂ ಜೋಡಿಸುವ ಕಾರ್ಯಕ್ರಮ ಇದಾಗಲಿದೆ. ಕಳೆದ ವರ್ಷ ‘ಮಾತಾಡ್ ಮಾತಾಡ್’ ಕನ್ನಡ ಅಭಿಯಾನ ಪ್ರಾರಂಭವಾಗಿ ಕನ್ನಡೇತರರಿಗೆ ಕನ್ನಡ ಕಲಿಸುವ ಕೆಲಸವಾಗಿತ್ತು ಎಂದು ಸುನಿಲ್ ಕುಮಾರ್ ಹೇಳಿದರು.