Ad Widget .

ಮಹಿಳೆಗೆ ಕಪಾಳಮೋಕ್ಷ ಪ್ರಕರಣ| ಸಚಿವ ವಿ.ಸೋಮಣ್ಣ ತಲೆದಂಡ!?

ಸಮಗ್ರ ನ್ಯೂಸ್: ತನ್ನ ಕಷ್ಟವನ್ನು ಹೇಳಿಕೊಳ್ಳಲು ಆಗಮಿಸಿದಂತ ಮಹಿಳೆಯೊಬ್ಬರಿಗೆ, ವಸತಿ ಸಚಿವ ವಿ.ಸೋಮಣ್ಣ ಕಪಾಳ ಮೋಕ್ಷ ಮಾಡಿದ ವೀಡಿಯೋ ಸಖತ್ ವೈರಲ್ ಆಗಿತ್ತು. ಈ ಬಳಿಕ ಮಹಿಳೆಯ ಕ್ಷಮೆ ಕೇಳಿದ್ದು, ಈ ಪ್ರಕರಣದಲ್ಲಿ ಸಚಿವ ವಿ.ಸೋಮಣ್ಣ ಅವರಿಗೆ ರಾಜೀನಾಮೆ ನೀಡುವಂತೆ ಬಿಜೆಪಿ ಹೈಕಮಾಂಡ್ ಸೂಚಿಸಿದೆ ಎನ್ನಲಾಗುತ್ತಿದೆ.

Ad Widget . Ad Widget .

ವಸತಿ ಸಚಿವ ವಿ.ಸೋಮಣ್ಣ ನಿನ್ನೆ ಚಾಮರಾಜನಗರದಲ್ಲಿ ವಿವಿಧ ಕಾರ್ಯಕ್ರಮದ ನಿಮಿತ್ತ ತೆರಳಿದ್ದ ಸಂದರ್ಭದಲ್ಲಿ, ಪರಿಶಿಷ್ಟ ಮಹಿಳೆಯೊಬ್ಬರು ತಮಗೆ ನಿವೇಶನ ಹಂಚಿಕೆ ಆಗಿಲ್ಲ. ದಯವಿಟ್ಟು ಕೊಡಿಸುವಂತೆ ಮನವಿ ಮಾಡಿಕೊಳ್ಳಲು ಮುಂದಾಗಿದ್ದರು. ಅಲ್ಲದೇ ಸಚಿವರ ಕಾಲಿಗೆ ಬಿದ್ದು ಕೇಳಿಕೊಂಡಿದ್ದರು.

Ad Widget . Ad Widget .

ಮಹಿಳೆಯ ವರ್ತನೆಯಿಂದ ಸಿಡಿಮಿಡಿಗೊಂಡಂತ ವಸತಿ ಸಚಿವ ವಿ.ಸೋಮಣ್ಣ ಅವರು ದಿಢೀರ್ ಮಹಿಳೆಯ ಕೆನ್ನೆಗೆ ಬಾರಿಸಿ ಕಪಾಳ ಮೋಕ್ಷ ಮಾಡಿದ್ದರು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವಿಪಕ್ಷಗಳ ನಾಯಕರು ಸೇರಿದಂತೆ ಸಾರ್ವಜನಿಕರು ಸಚಿವರ ಈ ವರ್ತನೆಗೆ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ್ದರು.

ಸಚಿವ ವಿ.ಸೋಮಣ್ಣ ಮಹಿಳೆಗೆ ಕಪಾಳ ಮೋಕ್ಷ ಮಾಡಿದಂತ ವೀಡಿಯೋ ವೈರಲ್ ಆಗುತ್ತಿದ್ದಂತೇ, ಪರಿಸ್ಥಿತಿಯ ಗಂಭೀರತೆಯನ್ನು ಅರಿತಿರುವ‌ ಬಿಜೆಪಿ ಹೈಕಮಾಂಡ್, ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನು ನೀಡುವಂತೆ ವಿ.ಸೋಮಣ್ಣ ಅವರಿಗೆ ಸೂಚಿಸಿದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ. ಆದರೆ ಈ ಬಗ್ಗೆ ಸಚಿವ ವಿ.ಸೋಮಣ್ಣ ರ ನಡೆ ಇನ್ನೂ ನಿಗೂಡವಾಗಿದೆ.

Leave a Comment

Your email address will not be published. Required fields are marked *