September 2022

ಸುಳ್ಯ: ಬೈಕ್-ರಿಕ್ಷಾ ನಡುವೆ ಭೀಕರ ಅಪಘಾತ| ಬೈಕ್ ಸವಾರ ಸಾವು, ಮತ್ತೊಬ್ಬ ಗಂಭೀರ

ಸಮಗ್ರ ನ್ಯೂಸ್: ಬೈಕ್ ಮತ್ತು‌ ರಿಕ್ಷಾ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರನೋರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವ ಗಂಭೀರವಾಗಿ ಜಖಂಗೊಂಡ ಘಟನೆ ಮಾಣಿ- ಮೈಸೂರು‌ ರಾ.ಹೆದ್ದಾರಿಯ ಸುಳ್ಯ‌ ಸಮೀಪದ ಪರಿವಾರಕಾನ ಬಳಿ ನಡೆದಿದೆ. ಮೃತ ಬೈಕ್ ಸವಾರನನ್ನು ಕೆವಿಜಿ ಐಟಿಐ ವಿದ್ಯಾರ್ಥಿ ಪ್ರತೀಕ್ ಎಂದು ಗುರುತಿಸಲಾಗಿದೆ. ಚೆಂಬು ಗ್ರಾಮದ ಕುದುರೆಪಾಯ ನಿವಾಸಿ ತೇಜೇಶ್ವರ ಎಂಬವರ ಮಗ ಪ್ರತೀಕ್ ಇಂದು ಬೆಳಿಗ್ಗೆ ಕಲ್ಲುಗುಂಡಿಯಿಂದ ರಾಘವೇಂದ್ರ ಬೇಕರಿಯಲ್ಲಿ ಕೆಲಸ ಮಾಡಿಕೊಂಡಿದ್ದ ತೇಜಸ್ ಎಂಬ ಯುವಕನ ಜೊತೆ ಬೈಕ್‌ನಲ್ಲಿ ಸುಳ್ಯಕ್ಕೆ […]

ಸುಳ್ಯ: ಬೈಕ್-ರಿಕ್ಷಾ ನಡುವೆ ಭೀಕರ ಅಪಘಾತ| ಬೈಕ್ ಸವಾರ ಸಾವು, ಮತ್ತೊಬ್ಬ ಗಂಭೀರ Read More »

ಮೈಸೂರು ದಸರಾ ಮಹೋತ್ಸವ ನೇರಪ್ರಸಾರ

ಸಮಗ್ರ ನ್ಯೂಸ್: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಇಂದು ಚಾಲನೆ ಸಿಗಲಿದ್ದು, ಉದ್ಘಾಟನೆಗೆ ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಮೈಸೂರಿಗೆ ಆಗಮಿಸಲಿದ್ದಾರೆ. ಇಂದು ಬೆಳಿಗ್ಗೆ 6.15ಕ್ಕೆ ರಾಷ್ಟ್ರಪತಿ ಮುರ್ಮು ಅವರು ದೆಹಲಿಯಿಂದ ವಿಶೇಷ ವಿಮಾನದಲ್ಲಿ ಮೈಸೂರಿಗೆ ಪ್ರಯಾಣ ಬೆಳೆಸಲಿದ್ದು, 9 ಗಂಟೆಗೆ ಮೈಸೂರಿನ ಮಂಡಕಳ್ಳಿ ಏರ್​ಪೋರ್ಟ್​ಗೆ ಆಗಮಿಸಲಿದ್ದಾರೆ. https://fb.watch/fMTYAA5s_O/ ನಂತರ ನೇರವಾಗಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಲಿದ್ದಾರೆ. ಚಾಮುಂಡಿ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. 10 ಗಂಟೆಗೆ ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಮೈಸೂರು ದಸರಾ

ಮೈಸೂರು ದಸರಾ ಮಹೋತ್ಸವ ನೇರಪ್ರಸಾರ Read More »

ಕಂದಕಕ್ಕೆ ಉರುಳಿದ ಟೆಂಪೋ ಟ್ರಾವೆಲರ್
7 ಮಂದಿ ದುರ್ಮರಣ

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಭಾನುವಾರ ರಾತ್ರಿ ಟೂರಿಸ್ಟ್ ಟೆಂಪೋ ಟ್ರಾವೆಲರ್ ಕಂದಕಕ್ಕೆ ಬಿದ್ದು, 7 ಮಂದಿ ಸಾವನ್ನಪ್ಪಿದ್ದು ಹಾಗೂ 10 ಜನರು ಗಾಯಗೊಂಡ ಘಟನೆ ಸಂಭವಿಸಿದೆ. ಘಟನೆ ಹಿಮಾಚಲ ಪ್ರದೇಶದ ಕುಲುವಿನ ಜಲೋಡಿ ಪಾಸ್ ಬಳಿ ನಡೆದಿದೆ. ವಾಹನದಲ್ಲಿ 17 ಜನರು ಪ್ರಯಾಣಿಸುತ್ತಿದ್ದು, ರಾತ್ರಿ 8:30ರ ಸುಮಾರಿಗೆ ದುರ್ಘಟನೆ ನಡೆದಿದೆ. ಘಟನೆಯ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಮಧ್ಯರಾತ್ರಿ ಸುಮಾರು 1:37ರ ಹೊತ್ತಿಗೆ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ವರದಿಗಳ ಪ್ರಕಾರ ಟೂರಿಸ್ಟ್ ವಾಹನದಲ್ಲಿದ್ದವರು ವಾರಣಾಸಿಯ

ಕಂದಕಕ್ಕೆ ಉರುಳಿದ ಟೆಂಪೋ ಟ್ರಾವೆಲರ್
7 ಮಂದಿ ದುರ್ಮರಣ
Read More »

ರಾಜ್ಯ ಹ್ಯಾಂಡ್‌ಬಾಲ್ ತಂಡಕ್ಕೆ ನವೀನ್ ಈಜೇರಿ ಆಯ್ಕೆ

ಸಮಗ್ರ ನ್ಯೂಸ್: ವಿಜಯಪುರ ಜಿಲ್ಲೆ ತಾಳಿಕೋಟೆಯ ಕ್ರೀಡಾಪಟು ನವೀನಕುಮಾರ ಸಂಗಪ್ಪ ಈಜೇರಿ ಕರ್ನಾಟಕ ರಾಜ್ಯ ಹ್ಯಾಂಡ್‌ಬಾಲ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಈಚೆಗೆ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿ ಉತ್ತಮ ಆಟ ಪ್ರದರ್ಶನ ನೀಡುವ ಮೂಲಕ ಹ್ಯಾಂಡ್‌ಬಾಲ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಉತ್ತರಪ್ರದೇಶದ ಲಕ್ಕೋದ ಕೆ.ಡಿ.ಸಿಂಗ್ ಸ್ಟೇಡಿಯಂನಲ್ಲಿ ರಾಷ್ಟ್ರಮಟ್ಟದ ಹ್ಯಾಂಡ್ ಬಾಲ್ ಕ್ರೀಡಾಕೂಟದಲ್ಲಿ ಭಾಗವಹಿಸುವ ಕರ್ನಾಟಕ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ರಾಜ್ಯ ಹ್ಯಾಂಡ್‌ಬಾಲ್ ತಂಡಕ್ಕೆ ನವೀನ್ ಈಜೇರಿ ಆಯ್ಕೆ Read More »

ಪ್ಲಾಸ್ಟಿಕ್‌ ಮುಕ್ತ ದಸರಾ ಆಚರಣೆಗೆ ಮುಂದಾದ ರಾಜವಂಶಸ್ಥರು

ಸಮಗ್ರ ನ್ಯೂಸ್: ಈ ವರ್ಷ ಪ್ಲಾಸ್ಟಿಕ್ ಮುಕ್ತ ಮೈಸೂರು ದಸರಾ ಆಚರಣೆಗಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಯದುವಂಶದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮುಂದಾಗಿದ್ದಾರೆ. ಜಿಎಸ್‌ಎಸ್ ಯೋಗಸಂಸ್ಥೆಯು ಅಭಿಯಾನ ಆಯೋಜಿಸಿದ್ದು, ದಸರಾ ಕಾರ್ಯಕ್ರಮ ಹಾಗೂ ಪ್ರವಾಸಿ ತಾಣದಲ್ಲಿ ಪ್ಲಾಸ್ಟಿಕ್ ಬಳಸದಂತೆ ಜಾಗೃತಿ ಮೂಡಿಸಲು ಯತ್ನಿಸುತ್ತಿದೆ. ಅಭಿಯಾನಕ್ಕೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಜೊತೆಯಾಗಿದ್ದು, ವಿಡಿಯೋ ಸಂದೇಶದ ಮೂಲಕ ಪ್ಲಾಸ್ಟಿಕ್ ಬಳಸದಂತೆ ಮನವಿ ಮಾಡಿದ್ದಾರೆ.

ಪ್ಲಾಸ್ಟಿಕ್‌ ಮುಕ್ತ ದಸರಾ ಆಚರಣೆಗೆ ಮುಂದಾದ ರಾಜವಂಶಸ್ಥರು Read More »

ನಾಡಹಬ್ಬ ದಸರಾ ಪ್ರಯುಕ್ತ | ಊಟಿ ಸೇರಿದಂತೆ ವಿವಿಧ ಕಡೆ ಸಾರಿಗೆ ಸಂಸ್ಥೆಯಿಂದ ವಿಶೇಷ ಪ್ಯಾಕೇಜ್‌

ಸಮಗ್ರ ನ್ಯೂಸ್: ನಾಡಹಬ್ಬ ದಸರಾ ಪ್ರಯುಕ್ತ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಮೈಸೂರಿಗೆ ಬರುವ ಪ್ರವಾಸಿಗರ ಅನುಕೂಲಕ್ಕಾಗಿ ಒಂದು ದಿನದ ವಿಶೇಷ ಪ್ಯಾಕೇಜ್ ವ್ಯವಸ್ಥೆ ಕಲ್ಪಿಸಿದೆ. ಗಿರಿದರ್ಶಿನಿ: ಬಂಡೀಪುರ, ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿರಂಗನ ಬೆಟ್ಟ, ನಂಜನಗೂಡು ಮತ್ತು ಚಾಮುಂಡಿ ಬೆಟ್ಟ ಸುತ್ತಾಡಲು ಅವಕಾಶವಿದ್ದು, ವಯಸ್ಕರಿಗೆ ₹ 400, ಮಕ್ಕಳಿಗೆ 250 ರೂ ದರ ನಿಗದಿಪಡಿಸಿದೆ. ಜಲದರ್ಶಿನಿ: ಗೋಲ್ಡನ್ ಟೆಂಪಲ್ (ಬೈಲಕುಪ್ಪೆ), ದುಬಾರೆ ಅರಣ್ಯ ನಿಸರ್ಗಧಾಮ, ರಾಜಾಸೀಟ್, ಹಾರಂಗಿ ಜಲಾಶಯ ಮತ್ತು ಕೆ.ಆರ್.ಎಸ್. ( ವಯಸ್ಕರಿಗೆ 450ರೂ ,

ನಾಡಹಬ್ಬ ದಸರಾ ಪ್ರಯುಕ್ತ | ಊಟಿ ಸೇರಿದಂತೆ ವಿವಿಧ ಕಡೆ ಸಾರಿಗೆ ಸಂಸ್ಥೆಯಿಂದ ವಿಶೇಷ ಪ್ಯಾಕೇಜ್‌ Read More »

ಮಂಗಳೂರು ವಿವಿ ವಿಭಜನೆ| ಶೀಘ್ರದಲ್ಲೇ ಕೊಡಗು ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಗಳನ್ನು ಒಳಗೊಂಡಿದ್ದ ಮಂಗಳೂರು ವಿಶ್ವವಿದ್ಯಾನಿಲಯವು ಇನ್ನು ಮುಂದೆ ಕೊಡಗು ಜಿಲ್ಲೆಯ ಶೈಕ್ಷಣಿಕ ಚಟುವಟಿಕೆಯ ಅಧಿಕಾರವನ್ನು ಕಳೆದುಕೊಳ್ಳಲಿದೆ. ಕೊಡಗು ಜಿಲ್ಲೆಗೆ ಸಂಬಂಧಿಸಿದ 24 ಕಾಲೇಜುಗಳು ಹೊಸದಾಗಿ ನಿರ್ಮಾಣವಾಗಲಿರುವ ಕೊಡಗು ವಿ.ವಿ.ಗೆ ಸೇರ್ಪಡೆಯಾಗಲಿದೆ. ಮಂಗಳೂರು ವಿ.ವಿ.ಯಲ್ಲಿ 215 ಕಾಲೇಜುಗಳು ಸಂಯೋಜಿತಗೊಂಡಿದ್ದು, ಅವುಗಳಲ್ಲಿ 24 ಕಾಲೇಜುಗಳು ಕೊಡಗು ವಿ.ವಿ.ಯ ಪಾಲಾಗಲಿವೆ. ಮಡಿಕೇರಿಯ ಫೀಲ್ಡ್‌ ಮಾರ್ಷಲ್‌ ಕಾರ್ಯಪ್ಪ ಕಾಲೇಜು, ಚಿಕ್ಕಳುವಾರದಲ್ಲಿರುವ ಮಂಗಳೂರು ವಿ.ವಿ. ಸ್ನಾತಕೊಕೋತ್ತರ ಹಾಗೂ ಸಂಶೋಧನ ಕೇಂದ್ರ ಸೇರಿದಂತೆ ಅಲ್ಲಿನ ಸರಕಾರಿ

ಮಂಗಳೂರು ವಿವಿ ವಿಭಜನೆ| ಶೀಘ್ರದಲ್ಲೇ ಕೊಡಗು ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ Read More »

ಇಂಡೋ – ಆಸಿಸ್ ಏಕದಿನ ಸರಣಿ ಭಾರತದ ಕೈವಶ

ಸಮಗ್ರ ನ್ಯೂಸ್: ಹೈದರಾಬಾದ್ ನಲ್ಲಿ ನಡೆದ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 20 ಓವರ್ ಗಳಲ್ಲಿ 7 ವಿಕೆಟ್ ಗೆ 186 ರನ್ ಗಳಿಸಿತು. ಕಠಿಣ ಗುರಿ ಬೆಂಬತ್ತಿದ ಭಾರತ ತಂಡ 1 ಎಸೆತ ಬಾಕಿ ಇರುವಂತೆಯೇ 4 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು. ಕಠಿಣ ಗುರಿ ಬೆಂಬತ್ತಿದ ಭಾರತ ಬೇಗನೇ ನಾಯಕ ರೋಹಿತ್ ಶರ್ಮ (17) ಮತ್ತು ಉಪನಾಯಕ ಕೆಎಲ್ ರಾಹುಲ್ (1) ಬೇಗನೇ ನಿರ್ಗಮಿಸಿದರು. ಕೊನೆಯಲ್ಲಿ

ಇಂಡೋ – ಆಸಿಸ್ ಏಕದಿನ ಸರಣಿ ಭಾರತದ ಕೈವಶ Read More »

ವಿಜಯಪುರ: ಸಹೋದರಿಬ್ಬರು ನೀರು ಪಾಲು

ಸಮಗ್ರ ನ್ಯೂಸ್: ಸಹೋದರಿಬ್ಬರು ನೀರು ಪಾಲಾಗಿರುವ ಘಟನೆ ವಿಜಯಪುರ ಜಿಲ್ಲೆಯ ಕೊಲ್ಲಾರ ಪಟ್ಟಣದ ಹಳ್ಳದ ಗೆಣ್ಣೂರ ಗ್ರಾಮದಲ್ಲಿ ನಡೆದಿದೆ. ಸುನೀಲ ಕಲ್ಲಪ್ಪ ಮಾದರ್, ಅನಿಲ ಕಲ್ಲಪ್ಪ ಮಾದರ ನೀರುಪಾಲಾದವರು. ಇವರು ಜಮೀನಿಗೆ ನೀರು ಹಾಯಿಸಲು ಹೋದಾಗ ಈ ದುರ್ಘಟನೆ ಸಂಬಂಧಿಸಿದೆ. ಇನ್ನು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಜಯಪುರ: ಸಹೋದರಿಬ್ಬರು ನೀರು ಪಾಲು Read More »

ವಿಶ್ವವಿಖ್ಯಾತ ಮೈಸೂರು ದಸರಾಗೆ ಇಂದು ಚಾಲನೆ| ರಾಷ್ಟ್ರಪತಿ ದ್ರೌಪದಿ ಮುರ್ಮುರಿಂದ ಉದ್ಘಾಟನೆ

ಸಮಗ್ರ ನ್ಯೂಸ್: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಇಂದು ಚಾಲನೆ ಸಿಗಲಿದ್ದು, ಉದ್ಘಾಟನೆಗೆ ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಮೈಸೂರಿಗೆ ಆಗಮಿಸಲಿದ್ದಾರೆ. ಇಂದು ಬೆಳಿಗ್ಗೆ 6.15ಕ್ಕೆ ರಾಷ್ಟ್ರಪತಿ ಮುರ್ಮು ಅವರು ದೆಹಲಿಯಿಂದ ವಿಶೇಷ ವಿಮಾನದಲ್ಲಿ ಮೈಸೂರಿಗೆ ಪ್ರಯಾಣ ಬೆಳೆಸಲಿದ್ದು, 9 ಗಂಟೆಗೆ ಮೈಸೂರಿನ ಮಂಡಕಳ್ಳಿ ಏರ್​ಪೋರ್ಟ್​ಗೆ ಆಗಮಿಸಲಿದ್ದಾರೆ. ನಂತರ ನೇರವಾಗಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಲಿದ್ದಾರೆ. ಚಾಮುಂಡಿ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. 10 ಗಂಟೆಗೆ ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಮೈಸೂರು ದಸರಾ ಉದ್ಘಾಟಿಸಲಿದ್ದಾರೆ.

ವಿಶ್ವವಿಖ್ಯಾತ ಮೈಸೂರು ದಸರಾಗೆ ಇಂದು ಚಾಲನೆ| ರಾಷ್ಟ್ರಪತಿ ದ್ರೌಪದಿ ಮುರ್ಮುರಿಂದ ಉದ್ಘಾಟನೆ Read More »