September 2022

ಕರಾವಳಿ ಜಿಲ್ಲೆಗಳಲ್ಲಿ ಕುಚಲಕ್ಕಿ ವಿತರಣೆಗೆ ರಾಜ್ಯಸರ್ಕಾರ ಸಮ್ಮತಿ

ಸಮಗ್ರ ನ್ಯೂಸ್: ರಾಜ್ಯದ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಜನರ ಪ್ರಮುಖ ಆಹಾರವಾಗಿರುವ ಕುಚಲಕ್ಕಿಯನ್ನು ಗುಣಮಟ್ಟದಲ್ಲಿ ಪಡಿತರದಾರರಿಗೆ ವಿತರಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮತಿಸಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ, ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ನಿರ್ಮಲ್ ಕುಮಾರ್ ಸುರಾಣಾ ಹಾಗೂ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಉಪಾಧ್ಯಕ್ಷ ಕಿರಣ್ […]

ಕರಾವಳಿ ಜಿಲ್ಲೆಗಳಲ್ಲಿ ಕುಚಲಕ್ಕಿ ವಿತರಣೆಗೆ ರಾಜ್ಯಸರ್ಕಾರ ಸಮ್ಮತಿ Read More »

ಯೋಗಿನಾಡಲ್ಲಿ ದಲಿತ ಅಪ್ರಾಪ್ತ ಸಹೋದರಿಯರ ಮೇಲೆ ಅತ್ಯಾಚಾರವೆಸಗಿ ಕೊಲೆ| ಮತ್ತೊಂದು ಕರಾಳ ಘಟನೆಗೆ ಸಾಕ್ಷಿಯಾಯ್ತು ಲಖೀಂಪುರ

ಸಮಗ್ರ ನ್ಯೂಸ್: ಯೋಗಿ ಆದಿತ್ಯನಾಥ್ ರವರ ರಾಜ್ಯ ಉತ್ತರ ಪ್ರದೇಶದ ಲಖೀಂಪುರಖೇರಿಯಲ್ಲಿ ಇಬ್ಬರು ದಲಿತ ಸಹೋದರಿಯರು ಮರಕ್ಕೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅಪ್ರಾಪ್ತ ವಯಸ್ಸಿನ ಈ ಬಾಲಕಿಯರ ಮೇಲೆ ಅತ್ಯಾಚಾರ ಮತ್ತು ಕೊಲೆ ಮಾಡಲಾಗಿದೆ ಅನ್ನೋ ಆರೋಪ ಕೇಳಿಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಆರು ಮಂದಿಯನ್ನು ಬಂಧಿಸಲಾಗಿದೆ. 15 ಮತ್ತು 17 ವರ್ಷದ ಈ ಹೆಣ್ಣುಮಕ್ಕಳನ್ನು ಇಬ್ಬರು ಆರೋಪಿಗಳು ಮದುವೆ ಮಾಡಿಕೊಳ್ಳುವುದಾಗಿ ಹೇಳಿ, ನಾಲ್ವರ ಜತೆಗೆ ಸೇರಿಕೊಂಡು ಅತ್ಯಾಚಾರ ಎಸಗಿ, ಕತ್ತುಹಿಸುಕಿ ಕೊಂದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಯೋಗಿನಾಡಲ್ಲಿ ದಲಿತ ಅಪ್ರಾಪ್ತ ಸಹೋದರಿಯರ ಮೇಲೆ ಅತ್ಯಾಚಾರವೆಸಗಿ ಕೊಲೆ| ಮತ್ತೊಂದು ಕರಾಳ ಘಟನೆಗೆ ಸಾಕ್ಷಿಯಾಯ್ತು ಲಖೀಂಪುರ Read More »

ಮತಾಂತರ ನಿಷೇಧ ವಿಧೇಯಕ ಮೇಲ್ಮನೆಯಲ್ಲಿ ಪಾಸ್| ಪ್ರತಿಹರಿದು ಕಾಂಗ್ರೆಸ್ ಆಕ್ರೋಶ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಬಲವಂತದ ಮತಾಂತರಕ್ಕೆ ಬ್ರೇಕ್ ಬೀಳಲಿದೆ. ಯಾಕೆಂದರೆ ವಿಧಾನ ಪರಿಷತ್‍ನಲ್ಲಿ ಮತಾಂತರ ನಿಷೇಧ ವಿಧೇಯಕಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ವಿಧಾನಸಭೆಯಿಂದ ಅಂಗೀಕಾರವಾದ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ 2022ನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ವಿಧಾನ ಪರಿಷತ್‌ನಲ್ಲಿ ಇಂದು ಮಂಡನೆ ಮಾಡಿದರು. ವಿಧೇಯಕ ಅಂಗೀಕಾರವಾಗಿದ್ದು ಮತ್ತೊಂದೆಡೆ ಮತಾಂತರ ನಿಷೇಧ ವಿಧೇಯಕ್ಕೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿದೆ. ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ ಬಿಲ್‌ನ ಪ್ರತಿಯನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ನಾಟಕದಲ್ಲಿ

ಮತಾಂತರ ನಿಷೇಧ ವಿಧೇಯಕ ಮೇಲ್ಮನೆಯಲ್ಲಿ ಪಾಸ್| ಪ್ರತಿಹರಿದು ಕಾಂಗ್ರೆಸ್ ಆಕ್ರೋಶ Read More »

ಮೈಸೂರು ದಸರಾಗೆ ಮೋದಿ ಬರ್ತಾ ಇಲ್ಲ| ಪಿಎಂ ಕಚೇರಿಯಿಂದ‌ ರವಾನೆಯಾಗಿದೆ ಮಾಹಿತಿ

ಸಮಗ್ರ ನ್ಯೂಸ್: ವಿಶ್ವವಿಖ್ಯಾತ ಮೈಸೂರು ದಸರಾ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಬರಲಿದ್ದಾರೆ. ಅವರು ದಸರಾ ಜಂಬೂಸವಾರಿಯನ್ನು ಉದ್ಘಾಟಿಸಲಿದ್ದಾರೆ ಎನ್ನಲಾಗಿತ್ತು. ಆದ್ರೇ ಪ್ರಧಾನಿ ಮೋದಿ ದಸರಾ ಮಹೋತ್ಸವಕ್ಕೆ ಬರಲ್ಲ ಎಂಬುದಾಗಿ ಪಿಎಂ ಕಚೇರಿಯಿಂದ ಸಿಎಂ ಕಚೇರಿಗೆ ಮಾಹಿತಿ ನೀಡಲಾಗಿದೆ ಎನ್ನಲಾಗಿದೆ. ಈ ಕುರಿತಂತೆ ಪಿಎಂ ಕಚೇರಿಯ ಉನ್ನತ ಮೂಲಗಳಿಂದ ತಿಳಿದು ಬಂದಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮಗಳ ಪಟ್ಟಿಯಲ್ಲಿ ಬದಲಾವಣೆಯಾಗಿದೆ. ಅವರು ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಬರುವುದಿಲ್ಲ ಎಂಬುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಕಚೇರಿಗೆ ಪಿಎಂ

ಮೈಸೂರು ದಸರಾಗೆ ಮೋದಿ ಬರ್ತಾ ಇಲ್ಲ| ಪಿಎಂ ಕಚೇರಿಯಿಂದ‌ ರವಾನೆಯಾಗಿದೆ ಮಾಹಿತಿ Read More »

ಟೆನ್ನಿಸ್ ಕೋರ್ಟ್ ಗೆ ಗುಡ್ ಬೈ ಹೇಳಿದ ರೋಜರ್ ಫೆಡರರ್

ಸಮಗ್ರ ನ್ಯೂಸ್: ಲ್ಯಾವರ್ ಕಪ್ 2022 ನಂತರ ವೃತ್ತಿಪರ ಟೆನಿಸ್ ನಿಂದ ವಿರಾಮ ಪಡೆಯುವುದಾಗಿ ಟೆನಿಸ್ ದಂತಕಥೆ ರೋಜರ್ ಫೆಡರರ್ ( Roger Federer) ಘೋಷಣೆ ಮಾಡಿದ್ದಾರೆ. ಈ ಮೂಲಕ ಖ್ಯಾತ ಟೆನ್ನಿಸ್ ಆಟಗಾರ ರೋಜರ್ ಫೆಡರರ್ ಟೆನ್ನಿಸ್ ನಿಂದ ಹೊರಗೆ ಉಳಿಯುವ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಟ್ವಿಟ್ಟರ್ ನಲ್ಲಿ ತಮ್ಮ ನಿವೃತ್ತಿಯ ಬಗ್ಗೆ ಸುಧೀರ್ಘ ಪತ್ರದ ಮೂಲಕ ಟೆನಿಸ್ ಅಂಗಣದಲ್ಲಿ ಒಂದು ಯುಗ ಕಾಲ ಪ್ರಾಬಲ್ಯ ಮೆರೆದಿದ್ದ 20 ಪ್ರಮುಖ ಪ್ರಶಸ್ತಿಗಳ ವಿಜೇತ 41 ವರ್ಷದ ರೋಜರ್

ಟೆನ್ನಿಸ್ ಕೋರ್ಟ್ ಗೆ ಗುಡ್ ಬೈ ಹೇಳಿದ ರೋಜರ್ ಫೆಡರರ್ Read More »

ಸಿಎಂ ಮಾಧ್ಯಮ ಸಂಯೋಜಕರಾಗಿ ಹಿರಿಯ ಪತ್ರಕರ್ತ ಶಂಕರ್ ಪಾಗೋಜಿ ನೇಮಕ

ಸಮಗ್ರ ನ್ಯೂಸ್: ಇತ್ತೀಚಿಗೆ ಸಿಎಂ ಬಸವರಾಜ ಬೊಮ್ಮಾಯಿಯವರ ಮಾಧ್ಯಮ ಸಂಯೋಜಕರಾಗಿದ್ದ ಗುರುಲಿಂಗಸ್ವಾಮಿ ಹೊಳಿಮಠ ಅವರು ಅಕಾಲಿಕವಾಗಿ ನಿಧನದ ಕಾರಣದಿಂದ ತೆರವಾಗಿದ್ದ ಸ್ಥಾನಕ್ಕೆ ಹಿರಿಯ ಪತ್ರಕರ್ತ ಶಂಕರ್ ಪಾಗೋಜಿ ಅವರನ್ನು ನೇಮಕ ಮಾಡಲಾಗಿದೆ. ಜೊತೆಗೆ ಸಿಎಂ ಮಾಧ್ಯಮ ಸಲಹೆಗಾರರನ್ನಾಗಿ ಮೋಹನ್ ಕೃಷ್ಣ ಅವರನ್ನು ನೇಮಕ ಮಾಡಲಾಗಿದೆ. ಸಿಎಂ ಬಸವರಾಜ ಬೊಮ್ಮಾಯಿಯವರ ಮಾಧ್ಯಮ ಸಲಹೆಗಾರರನ್ನಾಗಿ ಮೋಹನ್ ಕೃಷ್ಣ ಅವರನ್ನು ನೇಮಕ ಮಾಡಲಾಗಿದೆ. ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದಾರೆ. ತಕ್ಷಣದಿಂದ

ಸಿಎಂ ಮಾಧ್ಯಮ ಸಂಯೋಜಕರಾಗಿ ಹಿರಿಯ ಪತ್ರಕರ್ತ ಶಂಕರ್ ಪಾಗೋಜಿ ನೇಮಕ Read More »

ದ.ಕ ಜಿಲ್ಲೆಯ 42 ಶಾಲೆಗಳಲ್ಲಿ ಶೂನ್ಯ ದಾಖಲಾತಿ| ಮುಚ್ಚುವ ಭೀತಿಯಲ್ಲಿ ಶಿಕ್ಷಣ ಸಂಸ್ಥೆಗಳು

ಸಮಗ್ರ ನ್ಯೂಸ್: ಕಳೆದೆರಡು ವರ್ಷಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 42 ಶಾಲೆಗಳಲ್ಲಿ ಶೂನ್ಯ ದಾಖಲಾತಿಯಾಗಿದೆ. ಇದರಿಂದ ಆ ಶಾಲೆಗಳನ್ನು ಮುಚ್ಚುವ ಭೀತಿ ಎದುರಾಗಿದೆ. 2021-22 ಮತ್ತು 2022-23 ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಸೇರಿ ಒಟ್ಟು 42 ಶಾಲೆಗಳಲ್ಲಿ ಶೂನ್ಯ ದಾಖಲಾತಿ ಆಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ವಿಭಾಗದ 8 ಶಾಲೆಗಳು, ಬೆಳ್ತಂಗಡಿ ವಿಭಾಗದ 2, ಮಂಗಳೂರು ಉತ್ತರ ವಿಭಾಗದ 12, ಮಂಗಳೂರು ದಕ್ಷಿಣ ವಿಭಾಗದ 9, ಮೂಡಬಿದ್ರೆ

ದ.ಕ ಜಿಲ್ಲೆಯ 42 ಶಾಲೆಗಳಲ್ಲಿ ಶೂನ್ಯ ದಾಖಲಾತಿ| ಮುಚ್ಚುವ ಭೀತಿಯಲ್ಲಿ ಶಿಕ್ಷಣ ಸಂಸ್ಥೆಗಳು Read More »

ಸೋಮವಾರಪೇಟೆ: ಚೂರಿಯಿಂದ ಇರಿದು ಮಹಿಳೆಯ ಹತ್ಯೆ

ಸಮಗ್ರ ನ್ಯೂಸ್: ಸೋಮವಾರಪೇಟೆ ತಾಲೂಕು ಮಾದಾಪುರ ಗ್ರಾಮದ ಜಂಬೂರುಬಾಣೆಯಸಾಹೀರಾ (35) ಎಂಬ ಮಹಿಳೆ ಯನ್ನು ಸ್ಥಳೀಯ ವ್ಯಕ್ತಿಯೋರ್ವರು ಚೂರಿ ಯಿಂದ ಇರಿದು ಹತ್ಯೆಗೈದ ಘಟನೆ ವರದಿ ಯಾಗಿದೆ. ಜಂಬೂರುಬಾಣೆಯ ಇಗ್ಗೋಡ್ಲುವಿನಲ್ಲಿ ಘಟನೆ ನಡೆದಿದ್ದು ಆರೋಪಿ ಪೂವಯ್ಯ (ಬೊಳ್ಳು)ಪೋಲಿಸರಿಗೆ ಶರಣಾಗಿರುವುದಾಗಿ ತಿಳಿದುಬಂದಿದೆ.ಸೋಮವಾರಪೇಟೆ ಪೋಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಮುಂದುವರಿದಿದೆ.

ಸೋಮವಾರಪೇಟೆ: ಚೂರಿಯಿಂದ ಇರಿದು ಮಹಿಳೆಯ ಹತ್ಯೆ Read More »

ಸುಳ್ಯ: ಬೈಕ್ ಅಪಘಾತ/ಎರಡೂ ಕಾಲು ಕಳೆದುಕೊಂಡ ವೃದ್ಧ

ಸಮಗ್ರ ನ್ಯೂಸ್: ಅಜ್ಜಾವರ ಗ್ರಾಮದ ಅಡ್ಪಂಗಾಯ ಬಸ್ ನಿಲ್ದಾಣ ಬಳಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವೃದ್ದನಿಗೆ ಎದುರಿನಿಂದ ಬಂದ ಬೈಕ್ ಡಿಕ್ಕಿ ಹೊಡೆದು ವೃದ್ದನ ಎರಡೂ ಕಾಲು ತುಂಡಾಗಿ ಗಂಭೀರ ಗಾಯಗೊಂಡ ಘಟನೆ ಸೆ.೧೫ ರಂದು ವರದಿಯಾಗಿದೆ. ಕಾಲು ಕಳೆದುಕೊಂಡ ವೃದ್ಧನ್ನು ಮುದರ ಎಂದು ಗುರುತಿಸಲಾಗಿದೆ. ಇವರು ಹಾಗೂ ಪ್ರಭಾಕರ ಎಂಬವರು ನಡೆದುಕೊಂಡು ಹೋಗುತ್ತಿದ್ದಾಗ, ಮಂಡೆಕೋಲಿನಿಂದ ಸುಳ್ಯ ಕಡೆಗೆ ಹೋಗುತ್ತಿದ್ದ ಮಂಡೆಕೋಲಿನ ಮಾರ್ಗ ಎಂಬಲ್ಲಿಯ ಕೌಶಿಕ್ ಎಂಬವರು ಚಲಾಯಿಸುತ್ತಿದ್ದ ಬೈಕ್ ಇಬ್ಬರಿಗೂ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಬಸಕ್ಕೆ

ಸುಳ್ಯ: ಬೈಕ್ ಅಪಘಾತ/ಎರಡೂ ಕಾಲು ಕಳೆದುಕೊಂಡ ವೃದ್ಧ Read More »

ಗೂಡ್ಸ್‌ ಲಾರಿ ಢಿಕ್ಕಿ| ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿ ಮೃತ್ಯು

ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಮುಂಭಾಗದಲ್ಲಿ ಬುಧವಾರ ಬೆಳ್ಳಂಬೆಳಗ್ಗೆ 6 ಗಂಟೆಗೆ ಸುಮಾರಿಗೆ ಅಪರಿಚಿತ ಗೂಡ್ಸ್‌ ಲಾರಿ ಢಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿ ಸಮರ್ಥ್ (14) ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾನೆ. ಸಮರ್ಥ್ ತಂದೆ ಪ್ರಭಾಕರ್ ನಿನ್ನೆ ಅಪಘಾತದ ಸ್ಥಳದಲ್ಲೇ ಮೃತಪಟ್ಟಿದ್ದರು. ಮೃತರಾದ ಪ್ರಭಾಕರ್ ಹಾಗೂ ಮಗ ಸಮರ್ಥ್ ಬೆಳಗಾವಿಯಿಂದ ಮಂಗಳವಾರ ರಾತ್ರಿ ಸರಕಾರಿ ಬಸ್ಸು ಮೂಲಕ ಹೊರಟು ಕಾಪು ಸಮೀಪದ ಕುತ್ಯಾರಿನ ಆನೆಗುಂದಿ ಸಂಸ್ಥಾನದ ವಿದ್ಯಾ ಸಂಸ್ಥೆಯಲ್ಲಿ ಓದುತ್ತಿದ್ದ ಮಗನನ್ನು

ಗೂಡ್ಸ್‌ ಲಾರಿ ಢಿಕ್ಕಿ| ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿ ಮೃತ್ಯು Read More »