September 2022

“ಅನಾಥ ಶವಗಳ‌ ಅಂತ್ಯಸಂಸ್ಕಾರ ಮಾಡುತ್ತಿರುವ ಅಯೂಬ್ ಗೆ ಪದ್ಮಶ್ರೀ ನೀಡಿ”| ಕೇಂದ್ರಕ್ಕೆ ಪತ್ರ‌ ಬರೆದ‌ ಸಂಸದ ಪ್ರತಾಪ್ ಸಿಂಹ

ಸಮಗ್ರ ನ್ಯೂಸ್: ಅನಾಥ ಶವಗಳ ಅಂತ್ಯಸಂಸ್ಕಾರದ ಮೂಲಕ ಸಮಾಜಕ್ಕೆ ತಮ್ಮದೇ ಆದ ರೀತಿಯಲ್ಲಿ ವಿಶಿಷ್ಟ ಸೇವೆ ಸಲ್ಲಿಸುತ್ತಿರುವ ಮೈಸೂರಿನ ಅಯೂಬ್ ಅಹ್ಮದ್‌ ಅವರಿಗೆ 2023ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ನೀಡುವ ಮೂಲಕ ಗೌರವಿಸಬೇಕು ಎಂದು ಸಂಸದ ಪ್ರತಾಪ ಸಿಂಹ ಹಾಗೂ ಶಾಸಕ ತನ್ವೀರ್ ಸೇಠ್‌ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ವಿನಂತಿಸಿದ್ದಾರೆ. ಮೈಸೂರಿನ ಎನ್.ಆರ್.ಮೊಹಲ್ಲಾ ಎ.ಜೆ.ಬ್ಲಾಕ್ ನಿವಾಸಿಯಾಗಿರುವ ಅಯೂಬ್, ಕಳೆದ 23 ವರ್ಷಗಳಿಂದ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅಮೆರಿಕದ ಹಾರ್ಮೊನಿ ಇನ್​ಸ್ಟಿಟ್ಯೂಟ್ ಅಯೂಬ್ ಅವರಿಗೆ ಈಗಾಗಲೇ ಡಾಕ್ಟರೇಟ್ […]

“ಅನಾಥ ಶವಗಳ‌ ಅಂತ್ಯಸಂಸ್ಕಾರ ಮಾಡುತ್ತಿರುವ ಅಯೂಬ್ ಗೆ ಪದ್ಮಶ್ರೀ ನೀಡಿ”| ಕೇಂದ್ರಕ್ಕೆ ಪತ್ರ‌ ಬರೆದ‌ ಸಂಸದ ಪ್ರತಾಪ್ ಸಿಂಹ Read More »

ಧಾರಾವಾಹಿಗಳಿಂದ ಬ್ಯಾನ್ ಆದ ನಟ ಅನಿರುದ್ದ್ ಏನ್ಮಾಡ್ತಿದಾರೆ ಗೊತ್ತಾ? ಶೀಘ್ರದಲ್ಲೇ ಬಹುದೊಡ್ಡ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ವಿಷ್ಣು ಅಳಿಯ!

ಸಮಗ್ರ ನ್ಯೂಸ್: ಜೊತೆ ಜೊತೆಯಲಿ ಧಾರಾವಾಹಿಯ ವಿಷಯ ಸಾಮಾಜಿಕ ಜಾಲತಾಣದಲ್ಲಿ ಬಹಳ ಸುದ್ದಿಯಲ್ಲಿದೆ ಎನ್ನಬಹುದು. ಧಾರಾವಾಹಿ ಆರಂಭ ಆದಾಗ ಟಿ ಆರ್ ಪಿ ವಿಷಯದಲ್ಲಿ ಬಹಳ ಸುದ್ದಿಯಲ್ಲಿ ಇದ್ದ ಜೊತೆ ಜೊತೆಯಲಿ ಧಾರಾವಾಹಿ ಇದೀಗ ಅನಿರುದ್ಧ್ ಜಟ್ಕರ್ ಬ್ಯಾನ್ ಆಗಿರುವ ವಿಷಯದ ಕಾರಣ ಸಾಮಾಜಿಕ ಜಾಲತಾಣದಲ್ಲಿ ಮಾಧ್ಯಮಗಳಲ್ಲಿ ಬಹಳ ಸುದ್ದಿಯಲ್ಲಿ ಇದೆ ಎಂದು ಹೇಳಬಹುದು. ಹೌದು ನಟ ಅನಿರುದ್ಧ್ ಜಟ್ಕರ್ ಅವರು ಧಾರಾವಾಹಿಯ ಶೂಟಿಂಗ್ ಸಮಯದಲ್ಲಿ ಧಾರಾವಾಹಿ ತಂಡದ ಅಸಹನೆ ತೋರಿದ್ದಾರೆ ಹಾಗೂ ಶೂಟಿಂಗ್ ಸಮಯದಲ್ಲಿ ಜಗಳವನ್ನ

ಧಾರಾವಾಹಿಗಳಿಂದ ಬ್ಯಾನ್ ಆದ ನಟ ಅನಿರುದ್ದ್ ಏನ್ಮಾಡ್ತಿದಾರೆ ಗೊತ್ತಾ? ಶೀಘ್ರದಲ್ಲೇ ಬಹುದೊಡ್ಡ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ವಿಷ್ಣು ಅಳಿಯ! Read More »

ಪುನೀತ್ ಹುಟ್ಟುಹಬ್ಬವನ್ನು ಸ್ಪೂರ್ತಿ ದಿನವನ್ನಾಗಿ ಆಚರಿಸಲು ರಾಜ್ಯ ಸರ್ಕಾರದಿಂದ ಘೋಷಣೆ

ಸಮಗ್ರ ನ್ಯೂಸ್ : ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬವನ್ನು ಇನ್ನು ಮುಂದೆ ‘ಪ್ರೇರಣಾ ದಿನ’ವನ್ನಾಗಿ ಆಚರಣೆ ಮಾಡಲಾಗುವುದು ಎಂದು ಕರ್ನಾಟಕ ಸರ್ಕಾರ ಘೋಷಿಸಿದೆ. ಮಾರ್ಚ್ 17, ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬವಾಗಿದ್ದು ಆ ದಿನವನ್ನು ಪ್ರೇರಣಾ ದಿನವನ್ನಾಗಿ ಆಚರಿಸಲಾಗುತ್ತದೆ. ಪುನೀತ್ ರಾಜ್‌ಕುಮಾರ್, ತಮ್ಮ ಸಿನಿಮಾ, ಸಾಮಾಜಿಕ ಕಾರ್ಯಗಳಿಂದ ಕೋಟ್ಯಾಂತರ ಮಂದಿಗೆ ಸ್ಪೂರ್ತಿ ತುಂಬಿದ್ದಾರೆ. ಹಾಗಾಗಿ ಅವರ ಹುಟ್ಟುಹಬ್ಬವನ್ನು ಸ್ಪೂರ್ತಿಯ ದಿನ ಅಥವಾ ಪ್ರೇರಣಾ ದಿನವನ್ನಾಗಿ ಆಚರಿಸಲು ಸರ್ಕಾರ ನಿರ್ಧರಿಸಿದೆ. ಪುನೀತ್ ರಾಜ್‌ಕುಮಾರ್ ಹಲವು ಸಾಮಾಜಿಕ ಕಾರ್ಯಗಳನ್ನು ಮಾಡಿದ್ದರು. ಅಪ್ಪು

ಪುನೀತ್ ಹುಟ್ಟುಹಬ್ಬವನ್ನು ಸ್ಪೂರ್ತಿ ದಿನವನ್ನಾಗಿ ಆಚರಿಸಲು ರಾಜ್ಯ ಸರ್ಕಾರದಿಂದ ಘೋಷಣೆ Read More »

ವಿಮ್ಸ್ ಆಸ್ಪತ್ರೆಯ ಎಡವಟ್ಟಿಗೆ 8 ವರ್ಷದ ಬಾಲಕ ಸಾವು

ಸಮಗ್ರ ನ್ಯೂಸ್ ; ವಿಮ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಾಗಿದ್ದ 8 ವರ್ಷದ ಬಾಲಕ ಮೃತಪಟ್ಟಿರುವ ಬಗ್ಗೆ ತಡವಾಗಿ ಮಾಹಿತಿ ದೊರಕಿದೆ. ಸಿರುಗುಪ್ಪದ ಕೆ.ಮಹೇಶ್ ಹಾಗೂ ಈರಮ್ಮ ದಂಪತಿಗಳ ಪುತ್ರ ನಿಖಿಲ್ (08) ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ. ದಿನಾಂಕ 11ರಂದು ನಿಖಿಲ್‍ನನ್ನು ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಡೆಂಗ್ಯೂ ಜ್ವರಕ್ಕೆ ಸಂಬಂಧಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಬುಧವಾರ ಸರಣಿ ಸಾವುಗಳ ಪ್ರಕರಣ ಹೊರ ಬಂದಿದ್ದು, ಈ ವಿಚಾರ ಕೂಡ ಬಹಿರಂಗ ಆಗಿದೆ. ಮೃತ ಬಾಲಕ ನಿಖಿಲ್‍ನ ತಾಯಿ ಈರಮ್ಮ

ವಿಮ್ಸ್ ಆಸ್ಪತ್ರೆಯ ಎಡವಟ್ಟಿಗೆ 8 ವರ್ಷದ ಬಾಲಕ ಸಾವು Read More »

ವೃದ್ಧೆಯ ಮಾಂಗಲ್ಯ ಸರ ಕಳ್ಳತನಕ್ಕೆ ಯತ್ನ, ಸಿಕ್ಕಿ ಬಿದ್ದ ಸರಗಳ್ಳಿ

ಚಿಕ್ಕಬಳ್ಳಾಪುರ:  ಮಹಿಳೆಯೊಬ್ಬಳು ಸರ ಕಳ್ಳತನಕ್ಕೆ ಯತ್ನಿಸಿ, ಗ್ರಾಮಸ್ಥರಿಂದಲೇ ಗೂಸಾ ತಿಂದಿರುವ ಘಟನೆಯೊಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆದಿದೆ. ದೊಡ್ಡಬಳ್ಳಾಪುರ ತಾಲ್ಲೂಕಿನ ಕನಸವಾಡಿ ಗ್ರಾಮದಲ್ಲಿ ವೃದ್ಧೆಯ ಬಳಿ ಮಾಂಗಲ್ಯ ಸರ ಕಸಿದು ಪರಾರಿಯಾಗಲು ಯತ್ನಿಸಿ ಸಿಕ್ಕಿಬಿದ್ದ ಕಳ್ಳಿಗೆ ಗ್ರಾಮಸ್ಥರೇ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಸರಗಳ್ಳಿಯನ್ನು ನಂದಿನಿ ಎಂದು ಗುರುತಿಸಲಾಗಿದೆ. ಮಧುರೈ-ಹೆಸರುಘಟ್ಟ ರಸ್ತೆಯಲ್ಲಿ ಬೆಳಿಗ್ಗೆಯಿಂದಲೂ ಬೈಕ್ ಸವಾರನೊಂದಿಗೆ ಮಹಿಳೆ ಸುತ್ತಾಡುತ್ತಿದ್ದಳು. ನಂತರ ಕನಸವಾಡಿ ಗ್ರಾಮದಲ್ಲಿ ವೃದ್ಧೆಯ ಮಾಂಗಲ್ಯ ಸರಕ್ಕೆ ಕೈ ಹಾಕಿ ಕಿತ್ತುಕೊಳ್ಳಲು ಯತ್ನಿಸಿ, ಬೈಕ್‌ನಿಂದ ಕೆಳಕ್ಕೆ ಬಿದ್ದಿದ್ದಾಳೆ.

ವೃದ್ಧೆಯ ಮಾಂಗಲ್ಯ ಸರ ಕಳ್ಳತನಕ್ಕೆ ಯತ್ನ, ಸಿಕ್ಕಿ ಬಿದ್ದ ಸರಗಳ್ಳಿ Read More »

ಸೆ.17 ರಂದು ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ

ಬೆಂಗಳೂರು : 2022ರ ಸೆಪ್ಟೆಂಬರ್ 17 ರಂದು ನಡೆಯು ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಲು ಸಚಿವರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 2022 ರ ಸೆಪ್ಟೆಂಬರ್ 17 ರಂದು ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ಅಂಗವಾಗಿ ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳಲ್ಲಿ ಈ ಕೆಳಗೆ ಸೂಚಿಸಿರುವಂತೆ ಮುಖ್ಯಮಂತ್ರಿಗಳು, ಸಚಿವರು ಹಾಗೂ ಜಿಲ್ಲಾಧಿಕಾರಿಗಳನ್ನು ದ್ವಜಾರೋಹಣ ಮಾಡಲು ನೇಮಿಸಲಾಗಿದೆ.

ಸೆ.17 ರಂದು ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ Read More »

ನಿಂತಿದ್ದ ಬಸ್ ಹಿಂದಕ್ಕೆ ಚಲಿಸಿ ಭಾರಿ ದೊಡ್ಡ ಆಪತ್ತಿನಿಂದ ರಕ್ಷಿಸಿದ ಫಿಲೋಮಿನಾ ಕಾಲೇಜು ವಿದ್ಯಾರ್ಥಿ

ಪುತ್ತೂರು : ನಿಲ್ಲಿಸಿದ್ದ ಬಸ್‌ ಹಿಮ್ಮುಖವಾಗಿ ಚಲಿಸಿದಾಗ, ಚಾಲಕನ ಹಿಂದಿನ ಸೀಟ್‌ನಲ್ಲಿ ಕುಳಿತಿದ್ದ ವಿದ್ಯಾರ್ಥಿ ಸಿಜಾನ್ ಹಸನ್ ತಕ್ಷಣ ಬಸ್ ಅನ್ನು ನಿಯಂತ್ರಿಸಿ ಜನರ ರಕ್ಷಣೆ ಮಾಡಿದ್ದಾನೆ. ಪುತ್ತೂರು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್‌ನಲ್ಲಿ ಅನೇಕ ಪ್ರಯಾಣಿಕರ ಜೊತೆಗೆ, ಸೇಂಟ್ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿ ಸಿಜಾನ್ ಕುಳಿತಿದ್ದರು. ಇದ್ದಕ್ಕಿದ್ದಂತೆ ಬಸ್ ಹಿಮ್ಮುಖವಾಗಿ ಚಲಿಸಲಾರಂಭಿಸಿತು. ತಕ್ಷಣ ಚಾಲಕನ ಸೀಟಿಗೆ ಜಿಗಿದ ಸಿಜಾನ್ ಬ್ರೇಕ್ ಹಾಕಿ ಬಸ್ ಅನ್ನು ನಿಲ್ಲಿಸಿದರು. ಅಷ್ಟರಲ್ಲಿ ಇನ್ನೊಂದು ಬಸ್‌ನ ಚಾಲಕ ಬಂದು ಹ್ಯಾಂಡ್

ನಿಂತಿದ್ದ ಬಸ್ ಹಿಂದಕ್ಕೆ ಚಲಿಸಿ ಭಾರಿ ದೊಡ್ಡ ಆಪತ್ತಿನಿಂದ ರಕ್ಷಿಸಿದ ಫಿಲೋಮಿನಾ ಕಾಲೇಜು ವಿದ್ಯಾರ್ಥಿ Read More »

ರಾಜ್ಯದ ಗ್ರಾಮ ವಿದ್ಯುತ್ ಪ್ರತಿನಿಧಿಗಳಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್

ಬೆಂಗಳೂರು : ರಾಜ್ಯದ 3,854 ಗ್ರಾಮ ವಿದ್ಯುತ್ ಪ್ರತಿನಿಧಿಗಳಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು, ಶೀಘ್ರವೇ ಗ್ರಾಮ ವಿದ್ಯುತ್ ಪ್ರತಿನಿಧಿಗಳ ಸೇವೆ ಕಾಯಂ ಮಾಡಲಾಗುವುದು ಎಂದು ಇಂಧನ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ. ವಿಧಾನಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಚಿವರು, ರಾಜ್ಯದಲ್ಲಿ 2004 ರಿಂದ ಗ್ರಾಮ ವಿದ್ಯುತ್ ಸಹಾಯಕರಾಗಿ ಕೆಲಸ ಮಾಡುತ್ತಿರುವ 3,854 ಮಂದಿ ಗ್ರಾಮ ವಿದ್ಯುತ್ ಪ್ರತಿನಿಧಿಗಳ ಸೇವೆ ಕಾಯಂಗೊಳಿಸುವ ಸಂಬಂಧ ಶೀಘ್ರವೇ, ಸಿಎಂ ಬಸವರಾಜ ಬೊಮ್ಮಾಯಿ ಜೊತೆಗೆ ಸಮಾಲೋಚಿಸಿ, ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು

ರಾಜ್ಯದ ಗ್ರಾಮ ವಿದ್ಯುತ್ ಪ್ರತಿನಿಧಿಗಳಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್ Read More »

‘ಅಕ್ರಮ ಸಕ್ರಮ’ ಅವಧಿ ಒಂದು ವರ್ಷ ವಿಸ್ತರಣೆ’ – ರಾಜ್ಯ ಸರ್ಕಾರ

ಬೆಂಗಳೂರು: ರಾಜ್ಯ ಸರಕಾರವು ಅಕ್ರಮ- ಸಕ್ರಮ ಅರ್ಜಿ ಸಲ್ಲಿಕೆ ಅವಧಿಯನ್ನು ಒಂದು ವರ್ಷಗಳ‌ ಕಾಲ ವಿಸ್ತರಣೆ ಮಾಡಿದ್ದು, ಇದಕ್ಕೆ ಸಂಬಂಧಪಟ್ಟಂತೆ ಕಂದಾಯ ಇಲಾಖೆ ತಿದ್ದುಪಡಿ ವಿಧೇಯಕವನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ. 94 ಎ ತಿದ್ದುಪಡಿ ಮೂಲಕ ನಮೂನೆ 57ರಲ್ಲಿ ಅರ್ಜಿ ಸಲ್ಲಿಸಿ ಸರಕಾರಿ ಭೂಮಿಯಲ್ಲಿ ನಡೆಸುತ್ತಿದ್ದ ಅಕ್ರಮ ಸಾಗುವಾಳಿಯನ್ನು ಸಕ್ರಮಗೊಳಿಸಿಕೊಳ್ಳುವುದಕ್ಕೆ ಅವಕಾಶವಿತ್ತು. ಆದರೆ ಈ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಮತ್ತೆ ಒಂದು ವರ್ಷದ ಅವಧಿಗೆ ವಿಸ್ತರಣೆ ಮಾಡುವುದಕ್ಕೆ ಸರಕಾರ ನಿರ್ಧರಿಸಿದೆ. ಇನ್ನು ಯಾವುದೇ ಒಬ್ಬ ವ್ಯಕ್ತಿ ತನ್ನ ಸ್ವಾಧೀನಕ್ಕೆ

‘ಅಕ್ರಮ ಸಕ್ರಮ’ ಅವಧಿ ಒಂದು ವರ್ಷ ವಿಸ್ತರಣೆ’ – ರಾಜ್ಯ ಸರ್ಕಾರ Read More »

ಮುಲ್ಕಿ: ಅನ್ಯಕೋಮಿನ ಯುವಕನ ಜೊತೆ ಪತ್ತೆಯಾದ ಹಿಂದೂ ಯುವತಿ| ಯುವಕ ಬಂಧನ; ಯುವತಿ ಪರಾರಿ

ಸಮಗ್ರ ನ್ಯೂಸ್: ಅನ್ಯ ಕೋಮಿನ ಯುವಕನೋರ್ವನ ಜೊತೆ ಯುವತಿಯೋರ್ವಳು ಪತ್ತೆಯಾಗಿದ್ದು, ಯುವಕ ಈಗ ಪೊಲೀಸರ ಅತಿಥಿಯಾಗಿರುವ ಘಟನೆಯೊಂದು ನಡೆದಿದೆ. ಸ್ಥಳೀಯ ಯುವಕರ ಕಾರ್ಯಾಚರಣೆಯಿಂದ ಅನ್ಯಕೋಮಿನ ಯುವಕನ ಬಂಧನವಾಗಿದೆ. ಈ ಘಟನೆ ಮಂಗಳೂರು ಹೊರವಲಯದ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕೆಎಸ್ ರಾವ್ ನಗರ ಪೊಲೀಸ್ ಕ್ವಾರ್ಟರ್ಸ್ ಬಳಿ ನಡೆದಿದೆ. ಫಯಿಮ್ ಎಂಬಾತನೇ ಬಂಧಿತ ವ್ಯಕ್ತಿ. ಉಡುಪಿಯ ಕಟಪಾಡಿಯಲ್ಲಿ ವಾಸ್ತವ್ಯವಿರುವ ಉತ್ತರ ಪ್ರದೇಶ ಮೂಲದ ಈತ ಕಟಪಾಡಿಯಲ್ಲಿ ಸೆಲೂನ್ ಅಂಗಡಿಯಲ್ಲಿ ಕೆಲಸಕ್ಕಿದ್ದು ತನ್ನ ಮಿತ್ರ ಗುಲ್ಬಾಮ್ ಎಂಬವರ ರೂಮ್‌ಗೆ

ಮುಲ್ಕಿ: ಅನ್ಯಕೋಮಿನ ಯುವಕನ ಜೊತೆ ಪತ್ತೆಯಾದ ಹಿಂದೂ ಯುವತಿ| ಯುವಕ ಬಂಧನ; ಯುವತಿ ಪರಾರಿ Read More »