September 2022

ಸುಳ್ಯ: ಅನೈತಿಕ ಚಟುವಟಿಕೆಯ ಅಡ್ಡೆಯಾಗುತ್ತಿದೆ ಕುರುಂಜಿ ಗುಡ್ಡೆ ಪಾರ್ಕ್..!? ಮಬ್ಬುಗತ್ತಲಲ್ಲಿ ನಡೀತಿದೆ ಪುಂಡಪೋಕರಿಗಳ ಕಾರುಬಾರು

ಸಮಗ್ರ ನ್ಯೂಸ್: ಹೇಳುವುದಕ್ಕೆ ಅದೊಂದು ಸುಂದರ ಪಾರ್ಕ್. ಸುಳ್ಯ ನಗರದ ತುತ್ತತುದಿಯಲ್ಲಿ ಕಳಶಪ್ರಾಯದಂತಿರುವ ಈ ಪಾರ್ಕ್ ನಲ್ಲಿ ಸಂಜೆಯಾಗುತ್ತಿದ್ದಂತೆ ಅನೈತಿಕ ಚಟುವಟಿಕೆಗಳು ನಡೆಯುತ್ತವೆ. ಗುಟ್ಕಾ, ಮದ್ಯ ಸೇವಿಸಿ ತೂರಾಡಲು ಬರುವವರ ಮಧ್ಯೆ ಸಭ್ಯಸ್ಥರು, ಮಹಿಳೆಯರು ಈ ಪಾರ್ಕ್ ಗೆ ಎಂಟ್ರಿಕೊಡಲು ಹಿಂದೆ ಮುಂದೆ ನೋಡ್ತಾರೆ. ಎಲ್ಲಾ ಗೊತ್ತಿದ್ದರೂ ಈ ಪಾರ್ಕ್ ನ ಉಸ್ತುವಾರಿಗಳು ಮಾತ್ರ ತಮಗೇನೂ ಸಂಬಂಧವಿಲ್ಲ‌ ಎಂಬಂತಿದ್ದಾರೆ. ಸುಳ್ಯ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಕುರುಂಜಿಗುಡ್ಡದ ಉದ್ಯಾನವು ಮಾದಕ,ಅನೈತಿಕ ಚಟುವಟಿಕೆಯ ಅಡ್ಡೆಯಾಗುತ್ತಿದೆ. ಕುರುಂಜಿಗುಡ್ಡೆ ಪಾರ್ಕ್ ಗೆ ಸುಳ್ಯ […]

ಸುಳ್ಯ: ಅನೈತಿಕ ಚಟುವಟಿಕೆಯ ಅಡ್ಡೆಯಾಗುತ್ತಿದೆ ಕುರುಂಜಿ ಗುಡ್ಡೆ ಪಾರ್ಕ್..!? ಮಬ್ಬುಗತ್ತಲಲ್ಲಿ ನಡೀತಿದೆ ಪುಂಡಪೋಕರಿಗಳ ಕಾರುಬಾರು Read More »

ಮಂಗಳೂರು: PFI ಮತ್ತು CFI ಕಚೇರಿಗಳಿಗೆ ಬೀಗ ಜಡಿದ ಖಾಕಿ ಪಡೆ

ಸಮಗ್ರ ನ್ಯೂಸ್: ಯುಎಪಿಎ ಕಾಯ್ದೆಯಡಿ ಕೇಂದ್ರ ಸರ್ಕಾರ ಪಿಎಫ್ಐ ಸೇರಿದಂತೆ 8 ಸಂಘಟನೆಗಳನ್ನು ನಿಷೇಧಿಸಿರುವ ಹಿನ್ನೆಲೆಯಲ್ಲಿ ಮಂಗಳೂರು ನಗರದಲ್ಲಿರುವ ಪಿಎಫ್ಐ ಮತ್ತು ಸಿಎಫ್ಐ ಸಂಘಟನೆಗಳ ಕಚೇರಿಗಳನ್ನು ಪೊಲೀಸರು ಸೀಲ್ ಮಾಡಿದ್ದಾರೆ. ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಸ್ಟೇಟ್ ಬ್ಯಾಂಕ್ ಬಳಿಯ ನೆಲ್ಲಿಕಾಯಿ ರಸ್ತೆಯಲ್ಲಿರುವ ಪಿಎಫ್ಐ ಕಚೇರಿ ಮತ್ತು ಬಂದರು ಪ್ರದೇಶದ ಅಝೀಝುದ್ದೀನ್ ರಸ್ತೆಯಲ್ಲಿರುವ ಸಿಎಫ್ಐ ಕಚೇರಿಗಳಲ್ಲಿ ಪರಿಶೀಲನೆ ಮಾಡಿ ಕಚೇರಿಗಳನ್ನು ಬೀಗಮುದ್ರೆ ಜಡಿದಿದ್ದಾರೆ. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ

ಮಂಗಳೂರು: PFI ಮತ್ತು CFI ಕಚೇರಿಗಳಿಗೆ ಬೀಗ ಜಡಿದ ಖಾಕಿ ಪಡೆ Read More »

ಮೀಶೋ ಆನ್‌ಲೈನ್ ಶಾಪಿಂಗ್|ಡ್ರೋನ್ ಕ್ಯಾಮರಾ ಆರ್ಡರ್‍ ಮಾಡಿದವನಿಗೆ ಸಿಕ್ತು ಒಂದು ಕೆಜಿ ಆಲೂಗಡ್ಡೆ!!

ಸಮಗ್ರ ನ್ಯೂಸ್: ಮೀಶೋ ಆನ್‌ಲೈನ್ ಶಾಪಿಂಗ್ ತಾಣದಲ್ಲಿ ಡ್ರೋನ್ ಕ್ಯಾಮರಾ ಆರ್ಡರ್‍ ಮಾಡಿದ್ದಾತನಿಗೆ ಒಂದು ಕೆಜಿ ಆಲೂಗಡ್ಡೆ ಡೆಲಿವರಿಯಾದ ಪ್ರಸಂಗ ನಡೆದಿದೆ. ಬಿಹಾರದ ವ್ಯಕ್ತಿಯೊಬ್ಬರು ಮೀಶೋದಲ್ಲಿ ಡ್ರೋನ್ ಕ್ಯಾಮರಾವನ್ನು ಆರ್ಡರ್ ಮಾಡಿದ್ದರು. ಆದರೆ ಅವರಿಗೆ ಡ್ರೋನ್ ಕ್ಯಾಮರಾ ಬದಲಾಗಿ ಒಂದು ಕೆಜಿ ಆಲೂಗಡ್ಡೆ ಪಾರ್ಸೆಲ್ ಬಂದಿದೆ. ಡೆಲಿವರಿ ಬಾಯ್‌ಗೆ ಸ್ಥಳದಲ್ಲೇ ಅದನ್ನು ಅನ್‌ಬಾಕ್ಸ್‌ ಮಾಡಲು ಹೇಳಿದ್ದು, ನಿಯಮ ಪ್ರಕಾರ ಆತ ಮಾಡಿರಲಿಲ್ಲ. ಆದರೆ ಬಾಕ್ಸ್ ತೆರೆದು ನೋಡುವಾಗ ಆಲೂಗಡ್ಡೆ ಪತ್ತೆಯಾಗಿದೆ. ಮೀಶೋದಿಂದ ಆಲೂಗಡ್ಡೆ ಪಾರ್ಸೆಲ್ ಬಂದಿರುವುದನ್ನು ನಳಂದದ

ಮೀಶೋ ಆನ್‌ಲೈನ್ ಶಾಪಿಂಗ್|ಡ್ರೋನ್ ಕ್ಯಾಮರಾ ಆರ್ಡರ್‍ ಮಾಡಿದವನಿಗೆ ಸಿಕ್ತು ಒಂದು ಕೆಜಿ ಆಲೂಗಡ್ಡೆ!! Read More »

ಚಿಕ್ಕಮಗಳೂರು : ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ ತಗುಲಿ ಹಸುಗಳು ಸಜೀವ ದಹನ| ದುಷ್ಕರ್ಮಿಗಳು ಬೆಂಕಿ ಹಾಕಿರುವ ಶಂಕೆ

ಸಮಗ್ರ ನ್ಯೂಸ್: ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ ತಗುಲಿ ಎರಡು ಹಸುಗಳು ಸಜೀವ ದಹನವಾದ ಘಟನೆ ಅಜ್ಜಂಪುರ ತಾಲೂಕಿನ ಶಿವನಿ ಸಮೀಪದ ಗಡಿರಂಗಾಪುರ ಗ್ರಾಮದಲ್ಲಿ ಸಂಭವಿಸಿದೆ. ಮೂರ್ತಿ ಎಂಬುವರಿಗೆ ಸೇರಿದ ಕೊಟ್ಟಿಗೆಯಾಗಿದ್ದು ಇವರು ನಾಲ್ಲೈದು ದಿನದಿಂದ ಮನೆಯಲ್ಲಿ ಇರಲಿಲ್ಲ ಎಂದು ತಿಳಿದು ಬಂದಿದೆ. ಈ ವೇಳೆ ಕೊಟ್ಟಿಗೆಗೆ ಬೆಂಕಿ ತಗುಲಿದೆ. ಈ ಸಂದರ್ಭ ಎರಡು ಹಸುಗಳು ಓಡಿಹೋಗಿ ಜೀವ ಉಳಿಸಿಕೊಂಡಿದ್ದು, ಇನ್ನೆರಡು ಹಸುಗಳು ಸಜೀವ ದಹನವಾಗಿದೆ. ಇನ್ನೂ ಕೊಟ್ಟಿಗೆ ಸಂಪೂರ್ಣ ಸುಟ್ಟು ಕರಕಲಾಗಿದೆ. ಇನ್ನೂ ಕೊಟ್ಟಿಗೆಗೆ ಬೆಂಕಿ ತಗಲುವ

ಚಿಕ್ಕಮಗಳೂರು : ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ ತಗುಲಿ ಹಸುಗಳು ಸಜೀವ ದಹನ| ದುಷ್ಕರ್ಮಿಗಳು ಬೆಂಕಿ ಹಾಕಿರುವ ಶಂಕೆ Read More »

ಬ್ಯಾನರ್ ನಲ್ಲಿ ಅನುಮತಿಯಿಲ್ಲದೆ ಗರ್ಭಿಣಿ‌ ಮಹಿಳೆಯ ಫೋಟೋ ಅಳವಡಿಕೆ| ಉಳ್ಳಾಲದಲ್ಲಿ ನಡೆಯಿತು ಪ್ಲೆಕ್ಸ್ ವಿವಾದ

ಸಮಗ್ರ ನ್ಯೂಸ್: ಪೋಷಣ್ ಅಭಿಯಾನದ ತಾಲೂಕು ಮಟ್ಟದ ಕಾರ್ಯಕ್ರಮದ ಒಂದು ಭಾಗವಾಗಿ ಏರ್ಪಡಿಸಿದ್ದ ಸೀಮಂತ ಕಾರ್ಯಕ್ರಮದ ಬ್ಯಾನರ್ ನಲ್ಲಿ ಹಿಂದೂ ಗರ್ಭಿಣಿಯ ಭಾವಚಿತ್ರ ಹಾಕಿ ಶಾಸಕ ಯು.ಟಿ. ಖಾದರ್ ಅವರ ಭಾವಚಿತ್ರದೊಂದಿಗೆ ಸ್ವಾಗತ ಕೋರುವ ಬ್ಯಾನರ್ ವಿವಾದಕ್ಕೆ ಕಾರಣವಾಗಿದ್ದು, ಹಿಂದೂ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಬ್ಯಾನರ್ ತೆರವುಗೊಳಿಸಿ, ಶಾಸಕ ಯು‌ಟಿ.ಖಾದರ್ ವಿರುದ್ದ ದಿಕ್ಕಾರ ಹಾಕಿದ ಘಟನೆ ಕೊಲ್ಯ ನಾರಾಯಣ ಗುರು ಸಭಾಂಗಣದಲ್ಲಿ ಬುಧವಾರ ನಡೆದಿದೆ. ಜಿಲ್ಲಾ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು

ಬ್ಯಾನರ್ ನಲ್ಲಿ ಅನುಮತಿಯಿಲ್ಲದೆ ಗರ್ಭಿಣಿ‌ ಮಹಿಳೆಯ ಫೋಟೋ ಅಳವಡಿಕೆ| ಉಳ್ಳಾಲದಲ್ಲಿ ನಡೆಯಿತು ಪ್ಲೆಕ್ಸ್ ವಿವಾದ Read More »

ಪಿಎಫ್ಐ, ಎಸ್ಡಿಪಿಐ ಬ್ಯಾನ್ ಮಾಡಲು ಶಾಸಕ ಖಾದರ್ ನನ್ನ ಬಳಿ ಕಣ್ಣೀರು ಹಾಕಿದ್ದರು – ನಳಿನ್ ಕುಮಾರ್

ಸಮಗ್ರ ನ್ಯೂಸ್: ಯು.ಟಿ ಖಾದರ್ ಅವರೇ ನಮ್ಮ ಬಳಿ ಬಂದು ಎಸ್‍ಡಿಪಿಐ , ಪಿಎಫ್‍ಐ ಸಂಘಟನೆಯನ್ನು ಬ್ಯಾನ್ ಮಾಡುವಂತೆ ಕಣ್ಣೀರು ಹಾಕಿದ್ದರು. ಇದಕ್ಕೆ ನನ್ನ ಬಳಿ ಸಾಕ್ಷಿ ಆಧಾರಗಳಿವೆ ಎಂದು ಎಲ್ಲಾ ಸಂಘಟನೆಗಳು ಬ್ಯಾನ್ ಅಗಬೇಕು ಎಂಬ ಯು.ಟಿ ಖಾದರ್ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿರುಗೇಟು ನೀಡಿದ್ದಾರೆ. ಚಿಕ್ಕೋಡಿಯಲ್ಲಿ ಮಾತನಾಡಿದ ಅವರು, ಎಸ್‍ಡಿಪಿಐ ಹಾಗೂ ಪಿಎಫ್‍ಐ ಕಾರ್ಯಕರ್ತರು ಯು.ಟಿ ಖಾದರ್ ಅವರನ್ನೇ ಹತ್ಯೆ ಮಾಡಲು ಮುಂದಾಗಿದ್ದರು. ಧಾರ್ಮಿಕ ಸಂಘಟನೆಯ ಹೆಸರಲ್ಲಿ ನಾವು ಯಾರನ್ನೂ

ಪಿಎಫ್ಐ, ಎಸ್ಡಿಪಿಐ ಬ್ಯಾನ್ ಮಾಡಲು ಶಾಸಕ ಖಾದರ್ ನನ್ನ ಬಳಿ ಕಣ್ಣೀರು ಹಾಕಿದ್ದರು – ನಳಿನ್ ಕುಮಾರ್ Read More »

ಬಿಜೆಪಿ ಕಾರ್ಯಕ್ರಮದಲ್ಲಿ ಕನ್ನಡದ ಕಗ್ಗೊಲೆ| ಬ್ಯಾನರ್ ನಲ್ಲಿನ ಕನ್ನಡ ಅಬ್ಬಾ..!

ಸಮಗ್ರ ನ್ಯೂಸ್: ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಕಾಗವಾಡ ಮತಕ್ಷೇತ್ರದ ವ್ಯಾಪ್ತಿಯಲ್ಲಿ ನಡೆದ ಫಲಾನುಭವಿಗಳ ಸಮಾರಂಭದ ಬ್ಯಾನರ್ ನಲ್ಲಿ ಕನ್ನಡ ಅಕ್ಷರಗಳ ಕಗ್ಗೊಲೆ ನಡೆದಿದೆ. ಬಿಜೆಪಿ ಶಾಸಕ ಶ್ರೀಮಂತ ಪಾಟೀಲ್ ಪ್ರತಿನಿಧಿಸುವ ಕಾಗವಾಡ ವಿಧಾನಸಭೆ ವ್ಯಾಪ್ತಿಯಲ್ಲಿ ನಡೆದ ಫಲಾನುಭವಿಗಳ ಸಭೆಯಲ್ಲಿ ಅಳವಡಿಸಿದ್ದ ಬ್ಯಾನರ್ ನಲ್ಲಿ ಕನ್ನಡ ಅಕ್ಷರಗಳನ್ನು ತಪ್ಪಾಗಿ ಬರೆದಿದ್ದರು. ಕರ್ನಾಟಕ ಜನಪ್ರಿಯ ಯೋಜನೆಗಳಲ್ಲಿ ಒಂದಾದ ಅನ್ನ ಭಾಗ್ಯವನ್ನು ,ಅಣ್ಣಭಾಗ್ಯ,ಹಾಗೂ ಜಲ ಜೀವನ ಮಿಷನ್ ಅನ್ನು “ ಜಲ ಜೀವನ ಮಿಷಣ ”

ಬಿಜೆಪಿ ಕಾರ್ಯಕ್ರಮದಲ್ಲಿ ಕನ್ನಡದ ಕಗ್ಗೊಲೆ| ಬ್ಯಾನರ್ ನಲ್ಲಿನ ಕನ್ನಡ ಅಬ್ಬಾ..! Read More »

ಪಿಎಫ್ಐ ಬ್ಯಾನ್‌ ಮಾಡಿರುವುದನ್ನು ಸ್ವಾಗತಿಸಿದ ಕಾಂಗ್ರೆಸ್

ಸಮಗ್ರ ನ್ಯೂಸ್: ದೇಶದಲ್ಲಿ ಪಾಪ್ಯುಲರ್ ಫ್ರಂಟ್‌ ಆಫ್‌ ಇಂಡಿಯಾ ಮತ್ತು ಅದರ ಸಹವರ್ತಿ ಸಂಘಟನೆಗಳನ್ನು ಐದು ವರ್ಷ ಅವಧಿಗೆ ಕೇಂದ್ರ ಸರ್ಕಾರ ನಿಷೇಧಿಸಲಾಗಿದೆ. ಕೇಂದ್ರ ಸರ್ಕಾರದ ನಿರ್ಧಾರವನ್ನು ಕರ್ನಾಟಕ ಕಾಂಗ್ರೆಸ್‌ ಸ್ವಾಗತಿಸಿದೆ. ಕರ್ನಾಟಕ ಕಾಂಗ್ರೆಸ್‌ ತನ್ನ ಅಧಿಕೃತ ಟ್ವಿಟ್ಟರ್‌ ಖಾತೆಯಲ್ಲಿ ಟ್ವೀಟ್‌ ಮಾಡಿ, ಸಂವಿಧಾನದ ಆಶಯಕ್ಕೆ ಹಾಗೂ ಭಾರತದ ಜಾತ್ಯತೀತ ತತ್ವಗಳಿಗೆ ವಿರುದ್ಧವಾಗಿರುವ ಯಾವುದೇ ಸಂಘಟನೆ ಅಥವಾ ರಾಜಕೀಯ ಪಕ್ಷಗಳನ್ನು ಕಾಂಗ್ರೆಸ್ ಪಕ್ಷ ವಿರೋಧಿಸಿಕೊಂಡೇ ಬಂದಿದೆ ಎಂದು ಹೇಳಿದೆ. ಪಿಎಫ್‌ಐ ಸೇರಿದಂತೆ ಸಮಾಜದಲ್ಲಿ ದ್ವೇಷ ಬಿತ್ತುವ, ಶಾಂತಿ,

ಪಿಎಫ್ಐ ಬ್ಯಾನ್‌ ಮಾಡಿರುವುದನ್ನು ಸ್ವಾಗತಿಸಿದ ಕಾಂಗ್ರೆಸ್ Read More »

ಪಿಎಫ್ಐ ಗೆ ಮತ್ತೊಂದು‌ ಆಘಾತ| ವೆಬ್ಸೈಟ್‌ ಹಾಗೂ ಸಾಮಾಜಿಕ ಮಾಧ್ಯಮ‌ ಖಾತೆಗಳಿಗೂ ನಿರ್ಬಂಧ

ಸಮಗ್ರ ನ್ಯೂಸ್: ದೇಶಾದ್ಯಂತ ಎನ್‌ಐಎ ದಾಳಿ ಬೆನ್ನಲ್ಲೇ ದೇಶದಲ್ಲಿ ಪ್ಯಾಪುಲರ್ ಫ್ರಂಟ್ ಆಫ್ ಇಂಡಿಯಾ (PFI) ನಿಷೇಧ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಇದರ ಬೆನ್ನಲ್ಲೇ, ಅವುಗಳ ಅಂಗಸಂಸ್ಥೆಗಳ ವೆಬ್‌ಸೈಟ್‌, ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ಬಂಧಿಸುವಂತೆ ಕೇಂದ್ರ ಆದೇಶ ಹೊರಡಿಸಿದೆ. ಅಂಗಸಂಸ್ಥೆಗಳ ‘ತೆಗೆದುಹಾಕುವಿಕೆ’ ಆದೇಶದ ಭಾಗವಾಗಿ, ಅಧಿಕೃತ ವೆಬ್‌ಸೈಟ್‌ಗಳು, ಟ್ವಿಟರ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಖಾತೆಗಳು, ಯೂಟ್ಯೂಬ್ ಚಾನೆಲ್‌ಗಳು ಅಥವಾ PFI, ರಿಹಬ್ ಇಂಡಿಯಾ ಫೌಂಡೇಶನ್ (RIF), ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (CFI), ಆಲ್ ಇಂಡಿಯಾ

ಪಿಎಫ್ಐ ಗೆ ಮತ್ತೊಂದು‌ ಆಘಾತ| ವೆಬ್ಸೈಟ್‌ ಹಾಗೂ ಸಾಮಾಜಿಕ ಮಾಧ್ಯಮ‌ ಖಾತೆಗಳಿಗೂ ನಿರ್ಬಂಧ Read More »

ನೀನು ನೋಡಲು ಕಪ್ಪಾಗಿದ್ಯಾ ಎಂದ ಪತಿಯನ್ನು ಕೊಚ್ಚಿ ಕೊಂದ ಪತ್ನಿ

ಚಂಡೀಗಢ: ನೀನು ನೋಡಲು ಕಪ್ಪಾಗಿದ್ಯಾ, ನಿನ್ನ ಮೈ ಬಣ್ಣ ಕಪ್ಪು ಎಂದು ಹೀಯಾಳಿಸುತ್ತಿದ್ದ ಪತಿಯನ್ನು ಪತ್ನಿ ಹತ್ಯೆಗೈದಿರುವ ಘಟನೆ ಛತ್ತೀಸ್‍ಗಢದ ದುರ್ಗ್ ಜಿಲ್ಲೆಯಲ್ಲಿ ನಡೆದಿದೆ. ಅನಂತ್ ಸೋನ್ವಾನಿ ಮೃತ ವ್ಯಕ್ತಿಯಾಗಿದ್ದಾರೆ ಮತ್ತು ಆರೋಪಿ ಪತ್ನಿಯನ್ನು ಸಂಗೀತಾ ಸೋನ್ವಾನಿ ಎಂದು ಗುರುತಿಸಲಾಗಿದೆ. ಸೋಮವಾರ ಸಂಗೀತಾಳನ್ನು ಬಂಧಿಸಿರುವುದಾಗಿ ಪೊಲೀಸ್ ಉಪವಿಭಾಗಾಧಿಕಾರಿ (ಪಟಾನ್ ಪ್ರದೇಶ) ದೇವಾಂಶ್ ರಾಥೋಡ್ ತಿಳಿಸಿದ್ದಾರೆ. ಈ ಸಂಬಂಧ ವಿಚಾರಣೆ ವೇಳೆ ಅನಂತ್ ನನ್ನನ್ನು ಯಾವಾಗಲೂ ಕೊಳಕಿ ಎಂದು ರೇಗಿಸುತ್ತಿದ್ದ ಮತ್ತು ಕಪ್ಪು ಮೈ ಬಣ್ಣ ಹೊಂದಿರುವ ಕಾರಣ

ನೀನು ನೋಡಲು ಕಪ್ಪಾಗಿದ್ಯಾ ಎಂದ ಪತಿಯನ್ನು ಕೊಚ್ಚಿ ಕೊಂದ ಪತ್ನಿ Read More »