September 2022

ಸುಳ್ಯ: ಜಾಲ್ಸೂರಿನಲ್ಲಿದೆ ಬಂಟ್ವಾಳದ ಶುದ್ಧ ಕುಡಿಯುವ ನೀರಿನ ಘಟಕ!

ಸಮಗ್ರ ನ್ಯೂಸ್: ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಜಾಲ್ಸೂರಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಲಾಗಿದ್ದು, ಘಟಕ ತಟಸ್ಥವಾಗಿದ್ದು, ಸಾರ್ವಜನಿಕವಾಗಿ ಉಪಯೋಗ ಇಲ್ಲದಂತಾಗಿದೆ. ಕೆಲ ವರ್ಷಗಳಿಂದ ಸಾರ್ವಜನಿಕರಿಗಾಗಿಯೇಶುದ್ಧ ನೀರಿನ ಘಟಕ ನಿರ್ಮಿಸಲಾಗಿತ್ತು. ಆದರೆ ಉದ್ಘಾಟನೆ ನಡೆದ ಬಳಿಕ ಕೆಲವೇ ಕೆಲವು ದಿನ ಮಾತ್ರ ಇದರ ಸದುಪಯೋಗವನ್ನು ಜನರು ಪಡೆದಿದ್ದರು ಅಷ್ಟೆ. ಆನಂತರ ಅದು ಕೆಟ್ಟು ಹೋಗಿದ್ದು ಅದನ್ನು ಸರಿಪಡಿಸುವ ಕಡೆ ಯಾರು ಕೂಡ ತಲೆ ಹಾಕಲಿಲ್ಲ. ತಾಲೂಕಿನ ಹಲವೆಡೆ‌ ಇಂಥಹ ಘಟಕಗಳು ನಿರ್ಮಾಣವಾಗಿದ್ದು, ಬಹುತೇಕ ಘಟಕಗಳು ಸರ್ಕಾರಿ […]

ಸುಳ್ಯ: ಜಾಲ್ಸೂರಿನಲ್ಲಿದೆ ಬಂಟ್ವಾಳದ ಶುದ್ಧ ಕುಡಿಯುವ ನೀರಿನ ಘಟಕ! Read More »

ಮುಸ್ಲಿಂ ರಾಷ್ಟ್ರ ಇರಾನ್ ನಲ್ಲಿ ಹಿಜಾಬ್ ವಿರುದ್ದ ತಿರುಗಿ ಬಿದ್ದ ಯುವತಿಯರು| ಭದ್ರತಾ ಪಡೆ ಗುಂಡಿಗೆ ಐವರು ಸಾವು

ಸಮಗ್ರ ನ್ಯೂಸ್: ರಾಜ್ಯದಲ್ಲಿ ಹಿಜಾಬ್ ಬೇಕು ಅಂತಾ ಯುವತಿಯರು ಬೀದಿಗಿಳಿದು ಹೋರಾಟ ಮಾಡುತ್ತಿದ್ದರೆ ಅತ್ತ ಮುಸ್ಲಿಂ ರಾಷ್ಟ್ರ ಇರಾನ್ ನಲ್ಲಿ ಹಿಜಾಬ್ ವಿರುದ್ದವೇ ಯುವತಿಯರು ತಿರುಗಿ ಬಿದ್ದಿದ್ದಾರೆ. ಪ್ರತಿಭಟನೆ ವಿಕೋಪಕ್ಕೆ ತಿರುಗಿದ್ದು, ಐವರು ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾನೆ. ಇರಾನ್ ನ ಬೀದಿಬೀದಿಗಳಲ್ಲಿ ಹಿಜಾಬ್ ಕಿತ್ತೆಸೆದು ಆಕ್ರೋಶ ಹೊರಹಾಕುತ್ತಿದ್ದಾರೆ. ಹಿಜಾಬ್ ವಿರೋಧಿ ಹೋರಾಟದಲ್ಲಿದ್ದ ಯುವತಿಯೊಬ್ಬಳ ಸಾವಿನ ಬಳಿಕ ಭುಗಿಲೆದ್ದ ಆಕ್ರೋಶಕ್ಕೆ ರಾಜಧಾನಿ ಟೆಹ್ರಾನ್ ನಲುಗಿ ಹೋಗಿದೆ.ಕರ್ನಾಟಕದಲ್ಲಿ ಹಿಜಾಬ್ ಬೇಕು ಅಂತಾ ವಿದ್ಯಾರ್ಥಿನಿಯರು ಬೀದಿಗಿಳಿದು ಹೋರಾಟ ಮಾಡಿದ್ರು. ಹಿಜಾಬ್ ಹಂಗಾಮ

ಮುಸ್ಲಿಂ ರಾಷ್ಟ್ರ ಇರಾನ್ ನಲ್ಲಿ ಹಿಜಾಬ್ ವಿರುದ್ದ ತಿರುಗಿ ಬಿದ್ದ ಯುವತಿಯರು| ಭದ್ರತಾ ಪಡೆ ಗುಂಡಿಗೆ ಐವರು ಸಾವು Read More »

ಕೆಎಸ್​ಎಪಿಎಸ್​ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ; ಡಿಗ್ರಿ ಆಗಿದ್ರೆ ಅರ್ಜಿ ಸಲ್ಲಿಸಿ

ಸಮಗ್ರ‌ ನ್ಯೂಸ್: ಕರ್ನಾಟಕ ರಾಜ್ಯ ಏಡ್ಸ್​ ಪ್ರಿವೆನ್ಷನ್​ ಸೊಸೈಟಿಯಿಂದ ಕ್ಲಸ್ಟರ್​ ಪ್ರೋಗ್ರಾಂ ಮ್ಯಾನೇಜರ್​ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 11 ಹುದ್ದೆಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಪದವೀಧರ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಫ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಅಕ್ಟೋಬರ್​ 14, 2022. ಈ 11 ಹುದ್ದೆಗಳಲ್ಲಿ ಮೂರು ಹುದ್ದೆಗಳನ್ನು ಕಲ್ಯಾಣ ಕರ್ನಾಟಕ ಅಭ್ಯರ್ಥಿಗಳಿಗೆ ಮೀಸಲಿರಿಸಲಾಗಿದೆ. ಈ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ನಡೆಸಲಾಗುವುದು.

ಕೆಎಸ್​ಎಪಿಎಸ್​ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ; ಡಿಗ್ರಿ ಆಗಿದ್ರೆ ಅರ್ಜಿ ಸಲ್ಲಿಸಿ Read More »

ಜನಪ್ರಿಯ ಹಾಸ್ಯನಟ ರಾಜು ಶ್ರೀವಾಸ್ತವ ನಿಧನ

ಸಮಗ್ರ ನ್ಯೂಸ್: ಜನಪ್ರಿಯ ಹಾಸ್ಯನಟ ರಾಜು ಶ್ರೀವಾಸ್ತವ ಅವರು ತಮ್ಮ 58 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್)ಯಲ್ಲಿ ಹಾಸ್ಯನಟ ಕೊನೆಯುಸಿರೆಳೆದರು. ಆಗಸ್ಟ್ 10 ರಂದು ಹೃದಯಾಘಾತಕ್ಕೊಳಗಾದ ನಂತರ ರಾಜು ಅವರನ್ನು ಏಮ್ಸ್ ಗೆ ದಾಖಲಿಸಲಾಗಿತ್ತು. ಅದರೆ ಅವರಿಗೆ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ.

ಜನಪ್ರಿಯ ಹಾಸ್ಯನಟ ರಾಜು ಶ್ರೀವಾಸ್ತವ ನಿಧನ Read More »

ಜಿಮ್ ಗಳಲ್ಲಿ ಪ್ರೋಟಿನ್ ಪೌಡರ್ ಮಾರಟ ಮಾಡುವವರ ವಿರುದ್ಧ ಕಠಿಣ ಕ್ರಮ

ಬೆಂಗಳೂರು : ರಾಜ್ಯದ ಕೆಲ ಜಿಮ್ ಗಳಲ್ಲಿ ಪ್ರೋಟೀನ್ ಪೌಡರ್ ಮಾರಾಟ ಮಾಡಲಾಗುತ್ತಿದ್ದು, ಪ್ರೋಟೀನ್ ಪೌಡರ್ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ರಾಜ್ಯದ ಹಲವು ಜಿಮ್​ನಲ್ಲಿ ಬಳಸುವ ಪ್ರೋಟೀನ್​ ಪೌಡರ್ ಬ್ಯಾನ್‌ ಮಾಡುವಂತೆ ಸದನದಲ್ಲಿ ಒತ್ತಾಯ ಮಾಡಲಾಗಿದೆ. ಈ ಬಗ್ಗೆ ಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಸತೀಶ್​ ರೆಡ್ಡಿ ಜಿಮ್​ಗಳಲ್ಲಿ ಬಳಕೆ ಮಾಡುವ ಪ್ರೋಟೀನ್ ಪೌಡರ್‌ಗಳ ಬಗ್ಗೆ ಸದನದ ಗಮನ ಸೆಳೆದರು. ಇದೇ ವೇಳೆ ಪ್ರೋಟೀನ್ ಪೌಡರ್ ಮಾರಾಟದ ಬಗ್ಗೆ ಸಮಗ್ರ ತನಿಖೆ

ಜಿಮ್ ಗಳಲ್ಲಿ ಪ್ರೋಟಿನ್ ಪೌಡರ್ ಮಾರಟ ಮಾಡುವವರ ವಿರುದ್ಧ ಕಠಿಣ ಕ್ರಮ Read More »

ವಿಜಯಪುರ: ಅಕ್ರಮವಾಗಿ ಶಿಕ್ಷಕರ ನೇಮಕ ವಿಚಾರ| ಬಂಧಿತರ ಸಂಖ್ಯೆ ಮೂರಕ್ಕೇರಿಕೆ

ಸಮಗ್ರ ನ್ಯೂಸ್: ಅಕ್ರಮವಾಗಿ ಶಿಕ್ಷಕರ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಅಕ್ರಮ ನೇಮಕಾತಿಯಲ್ಲೂ ವಿಜಯಪುರ ಜಿಲ್ಲೆಗೂ ನಂಟು ಹೊಂದಿದ್ದು,ಅಕ್ರಮವಾಗಿ ನೇಮಕಾತಿಯಾಗಿರೋ ಮತ್ತೋರ್ವ ಶಿಕ್ಷಕನ ಬಂಧನವಾಗಿದೆ. ಬಂಧಿತರ ಸಂಖ್ಯೆ ಇದೀಗ ಮೂರಕ್ಕೇರಿದೆ. ವಿಜಯಪುರ ಜಿಲ್ಲಾ ಮೂಲದ ಅಶೋಕ ಚವ್ಹಾಣ್ ಬಂಧಿತ ಮತ್ತೋರ್ವ ಶಿಕ್ಷಕರಾಗಿದ್ದಾರೆ. ಜಿಲ್ಲೆಯ ಬಸವನಬಾಗೇಬಾಡಿ ತಾಲೂಕಿನ ಭೈರವಾಡಗಿ ಗ್ರಾಮದ ಸರ್ಕಾರಿ ಪ್ರೌಢ ಶಾಲಾ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದ ಅಶೋಕ ಚವ್ಹಾಣ್ ಇವರ ವಿರುದ್ಧ ಸೂಕ್ತ ಮಾಹಿತಿ ಕಲೆ ಹಾಕಿ ಅಕ್ರಮ ನೇಮಕಾತಿ ಹೊಂದಿದ್ದನ್ನು ಖಚಿತಪಡಿಸಿಕೊಂಡಿರೋ ಸಿಓಡಿ ಅಧಿಕಾರಿಗಳು ಇದೀಗ

ವಿಜಯಪುರ: ಅಕ್ರಮವಾಗಿ ಶಿಕ್ಷಕರ ನೇಮಕ ವಿಚಾರ| ಬಂಧಿತರ ಸಂಖ್ಯೆ ಮೂರಕ್ಕೇರಿಕೆ Read More »

ಬಿಕ್ಷಾಟನೆ ನಿರ್ಮೂಲನೆಯ ಜನಜಾಗೃತಿ ವಾಹನಕ್ಕೆ ಅಪರ ಜಿಲ್ಲಾಧಿಕಾರಿಯಿಂದ ಹಸಿರು ನಿಶಾನೆ

ಸಮಗ್ರ ನ್ಯೂಸ್: ಬಿಕ್ಷಾಟನೆ ನಿರ್ಮೂಲನೆಯ ಜನಜಾಗೃತಿ ವಾಹನಕ್ಕೆ ಅಪರ ಜಿಲ್ಲಾಧಿಕಾರಿಗಳಾದ ರಮೇಶ ಕಳಸದ ಅವರು ಸೆ. 20ರಂದು, ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿ ಹಸಿರು ನಿಶಾನೆ ತೋರಿದರು. ಈ ವೇಳೆ ಮಾತನಾಡಿದ ಅವರು, ಕರ್ನಾಟಕ ಬಿಕ್ಷಾಟನೆ ನಿಷೇಧ ಅಧಿನಿಯಮ 1975ರ ಸೆಕ್ಷನ್ 3ರನ್ವಯ ಭೀಕ್ಷೆ ಬೇಡುವುದನ್ನು ನಿಷೇಧಿಸಲಾಗಿದೆ. ಭಿಕ್ಷೆ ಬೇಡುವುದು ಮತ್ತು ನೀಡುವುದು ಅಪರಾಧವಾಗಿದೆ. ಈ ಬಗ್ಗೆ ಸಾರ್ವಜನಿಕರು ಅರಿಯಬೇಕು ಎಂದು ತಿಳಿಸಿದರು. ಈ ವೇಳೆ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ರಾಮನಗೌಡ ಕನ್ನೊಳ್ಳಿ ಅವರು ಮಾತನಾಡಿ,

ಬಿಕ್ಷಾಟನೆ ನಿರ್ಮೂಲನೆಯ ಜನಜಾಗೃತಿ ವಾಹನಕ್ಕೆ ಅಪರ ಜಿಲ್ಲಾಧಿಕಾರಿಯಿಂದ ಹಸಿರು ನಿಶಾನೆ Read More »

ಸುಳ್ಯ: 7 ದಶಕಗಳಿಂದ ದುರಸ್ಥಿಯಾಗದೆ ಉಳಿದ ಶೇಣಿ- ಹೊಸಮಜಲು ರಸ್ತೆ| ಪ್ರಚಾರಕ್ಕಷ್ಟೆ ಜನಪ್ರತಿನಿಧಿಗಳು, ರಸ್ತೆ ಅಭಿವೃದ್ಧಿ ಮಾಡೋರು ಯಾರು?

ಸಮಗ್ರ ನ್ಯೂಸ್: ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳೇ ಕಳೆದರೂ ಗ್ರಾಮೀಣ ಭಾರತ ಇಂದಿಗೂ ಅದೇ ಪರಿಸ್ಥಿತಿಯಲ್ಲಿದೆ ಎಂಬುದು ಅಉಳ್ಯ ತಾಲೂಕಿನಲ್ಲಿ ಮತ್ತೆ‌ಮತ್ತೆ ಸಾಬೀತಾಗುತ್ತಿದೆ. ಇದಕ್ಕೆ ಮತ್ತೊಂದು ಜ್ವಲಂತ ಉದಾಹರಣೆ ದ.ಕ ಜಿಲ್ಲೆಯ‌ ಸುಳ್ಯ ತಾಲೂಕಿನ ಅಮರ ಪಡ್ನೂರು‌ ಗ್ರಾಮದ ಶೇಣಿ-ಹೊಸಮಜಲು ರಸ್ತೆ. ಈ‌ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಜನರು ನಡೆದುಕೊಂಡು ಹೋಗುವುದಕ್ಕೆ ಕಷ್ಟ ಪಡುವಂತಾಗಿದೆ. ಸುಳ್ಯ ತಾಲೂಕಿನ ಅಮರಪಡ್ನೂರು ಗ್ರಾಮದ ವ್ಯಾಪ್ತಿಯ ರಸ್ತೆ ಇದಾಗಿದ್ದು ಸತತ ಹತ್ತು ವರ್ಷಗಳಿಂದ ಸಂಪೂರ್ಣ ಹದಗೆಟ್ಟಿದೆ. ಸಂಪೂರ್ಣ ಕೆಸರುಮಯವಾಗಿರುವ ಈ ರಸ್ತೆ

ಸುಳ್ಯ: 7 ದಶಕಗಳಿಂದ ದುರಸ್ಥಿಯಾಗದೆ ಉಳಿದ ಶೇಣಿ- ಹೊಸಮಜಲು ರಸ್ತೆ| ಪ್ರಚಾರಕ್ಕಷ್ಟೆ ಜನಪ್ರತಿನಿಧಿಗಳು, ರಸ್ತೆ ಅಭಿವೃದ್ಧಿ ಮಾಡೋರು ಯಾರು? Read More »

ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ| ಇನ್ಮುಂದೆ 5.30 ಗಂಟೆಗಳ ತರಗತಿ ಕಡ್ಡಾಯ

ಸಮಗ್ರ ನ್ಯೂಸ್: ರಾಜ್ಯದ ಪೂರ್ವ ಪ್ರಾಥಮಿಕ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಐದೂವರೆ ಗಂಟೆ ತರಗತಿ ಕಡ್ಡಾಯವಾಗಿ ನಡೆಸಬೇಕು ಎಂದು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಶಿಕ್ಷಣ ಇಲಾಖೆಯ ನಿಯಮದಂತೆ ಶಾಲೆಗಳನ್ನು ಪ್ರತಿದಿನ ಐದೂವರೆ ಗಂಟೆಗಳು ನಡೆಸುವುದು ಕಡ್ಡಾಯವಾಗಿರುತ್ತದೆ. ಶನಿವಾರವೂ ಅರ್ಧ ದಿನ ಶಾಲೆಯನ್ನು ನಡೆಸಬೇಕಾಗಿರುತ್ತದೆ. ಈ ನಿಯಮದಂತೆ ಶಾಲೆಗಳನ್ನು ನಡೆಸಲು ಇಲಾಖೆಯು ಉಲ್ಲೇಖ (2) ರಲ್ಲಿ ಬೆಂಗಳೂರು ನಗರಕ್ಕೆ ಸೀಮಿತಗೊಳಿಸಿ ಬೆಳಗ್ಗೆ 8 ರಿಂದ 8.30 ರೊಳಗೆ ಶಾಲೆಯನ್ನು ಪ್ರಾರಂಭಿಸಿ ವಿರಾಮದ ಅವಧಿಯನ್ನು ಹೊರತುಪಡಿಸಿ ಐದೂವರೆ ಗಂಟೆಗಳ

ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ| ಇನ್ಮುಂದೆ 5.30 ಗಂಟೆಗಳ ತರಗತಿ ಕಡ್ಡಾಯ Read More »

ಮಂಗಳೂರು ದಸರಾಕ್ಕೆ ಭರ್ಜರಿ ಸಿದ್ದತೆ| ತಾಯಿ‌ ಶಾರದೆಯ ಶೃಂಗಾರಕ್ಕೆ ಮುಸ್ಲಿಂ ಕುಟುಂಬದದಿಂದ ಸೀರೆ ಕಸೂತಿ

ಸಮಗ್ರ ನ್ಯೂಸ್: ಮಂಗಳೂರಿನಲ್ಲಿ ಈ ಬಾರಿ ಅದ್ಧೂರಿ ದಸರಾ ಮಹೋತ್ಸವ ನಡೆಯಲಿದ್ದು ಭರ್ಜರಿ ಸಿದ್ದತೆಗಳು ಅಂತಿಮ ಹಂತದಲ್ಲಿವೆ. ಸೆಪ್ಟೆಂಬರ್​ 26ರಿಂದ ಅಕ್ಟೋಬರ್​ 6ರ ರವರೆಗೆ ದಸರಾ ಸಡಗರ ಮನೆ ಮಾಡಲಿದೆ. ಪ್ರತಿವರ್ಷದಂತೆ ಈ ವರ್ಷವೂ ಸಹ ಶಾರದೆಯ ಶೋಭಾಯಾತ್ರೆ ನಡೆಯಲಿದೆ. ಈ ಬಾರಿ ತಾಯಿ ಶಾರದೆಗೆ 8 ಲಕ್ಷದ ಮೌಲ್ಯದ ಸೀರೆಯನ್ನು ಉಡಿಸಲಾಗುತ್ತದೆ. ಚಿನ್ನ ಹಾಗೂ ಬೆಳ್ಳಿ ಮಿಶ್ರಿತ ಜರಿ ಸೀರೆಯೊಂದಿಗೆ ದೇವಿ‌ ಮೆರೆಯಲಿದ್ದಾಳೆ. ಇನ್ನು ಈ ಸೀರೆಯನ್ನು ವಾರಣಾಸಿಯ ಮುಸ್ಲಿಂ ಕುಟುಂಬದವರು ತಯಾರು ಮಾಡಿರುವುದು ಮತ್ತೊಂದು

ಮಂಗಳೂರು ದಸರಾಕ್ಕೆ ಭರ್ಜರಿ ಸಿದ್ದತೆ| ತಾಯಿ‌ ಶಾರದೆಯ ಶೃಂಗಾರಕ್ಕೆ ಮುಸ್ಲಿಂ ಕುಟುಂಬದದಿಂದ ಸೀರೆ ಕಸೂತಿ Read More »