September 2022

ಅಂಜನಾದ್ರಿ ದೇವಸ್ಥಾನದ ದೇವರ ದರ್ಶನ ಸಮಯದಲ್ಲಿ ಬದಲಾವಣೆ

ಸಮಗ್ರ ನ್ಯೂಸ್: ಗಂಗಾವತಿ (ಕೊಪ್ಪಳ) ತಾಲ್ಲೂಕಿನ ಚಿಕ್ಕರಾಂಪುರ ಸಮೀಪದ ಐತಿಹಾಸಿಕ ಧಾರ್ಮಿಕ ಪುಣ್ಯಕ್ಷೇತ್ರ ಅಂಜನಾದ್ರಿ ಬೆಟ್ಟದ ದೇವರ ದರ್ಶನ ಸಮಯವನ್ನು ಬೆಳಿಗ್ಗೆ 7ರಿಂದ ಸಂಜೆ 5.30ವರೆಗೆ ನಿಗದಿಪಡಿಸಿ ಆಂಜನೇಯ ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಯು‌.ನಾಗರಾಜ್ ಆದೇಶ ಹೊರಡಿಸಿದ್ದಾರೆ. ಅಂಜನಾದ್ರಿ ದೇವಸ್ಥಾನ ಅರಣ್ಯ ಪ್ರದೇಶದಲ್ಲಿದ್ದು, ಇಲ್ಲಿನ ಚಿರತೆ, ಕರಡಿ ಸೇರಿ ಇತರೆ ವನ್ಯಜೀವಿಗಳು ನಿವಾಸ ಮಾಡುತ್ತಿವೆ. ಈ ಕಡೆ ಬೆಟ್ಟದ ಸುತ್ತಮುತ್ತ ಚಿರತೆ ಹಾವಳಿ ಹೆಚ್ಚಾಗಿದ್ದು, ದೇವಸ್ಥಾನ ಕಚೇರಿ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿತ್ತು. ದೇವಸ್ಥಾನಕ್ಕೆ ಆಗಮಿಸುವ ಭಕ್ತರು ಆಂಜನೇಯ ದೇವರ […]

ಅಂಜನಾದ್ರಿ ದೇವಸ್ಥಾನದ ದೇವರ ದರ್ಶನ ಸಮಯದಲ್ಲಿ ಬದಲಾವಣೆ Read More »

ಹುಣಸೂರು: ಪ್ರೀತಿಸಿ ವಿವಾಹವಾದ ಒಂದೇ ವರ್ಷಕ್ಕೆ ಸಂಸಾರದಲ್ಲಿ ಬಿರುಕು ಬಿಟ್ಟ ಪ್ರಕರಣ/ಪ್ರಕರಣ ದಾಖಲಿಸದಿದ್ದಲ್ಲಿ ಅಂಬೇಡ್ಕರ್ ರಕ್ಷಣಾ ವೇದಿಕೆಯಿಂದ ಪ್ರತಿಭಟನೆಯ ಎಚ್ಚರಿಕೆ

ಸಮಗ್ರ ನ್ಯೂಸ್: ಪ್ರೀತಿಸಿ ವಿವಾಹವಾದ ಒಂದೇ ವರ್ಷಕ್ಕೆ ಸಂಸಾರದಲ್ಲಿ ಬಿರುಕು ಬಿಟ್ಟಿದ್ದು,‌‌ಪತ್ನಿಗೆ ಪತಿ ಕೈಕೊಟ್ಟಿರುವ ಘಟನೆ ಬಗ್ಗೆ ಪತ್ನಿ ಠಾಣೆ ದೂರು ನೀಡಿದ್ದರು. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸದಕ್ಕೆ ಅಂಬೇಡ್ಕರ್ ರಕ್ಷಣಾ ವೇದಿಕೆಯಿಂದ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ. ಹುಣಸೂರು ತಾಲೂಕಿನ ಮರೂರು ಗ್ರಾಮದ ಅಭಿಷೇಕನನ್ನು ಅಶ್ವಿನಿ ಎಂಬಾಕೆ ಜೂನ್ 2021ರಲ್ಲಿ ಪ್ರೀತಿಸಿ ಇಬ್ಬರ ಕುಟುಂಬದಲ್ಲೂ ಒಪ್ಪಿಗೆ ಮೇರೆಗೆ ಮದುವೆಯಾಗಿದ್ದರು. ಆದರೆ ಇದೀಗ ಕೆಲ ದಿನಗಳಿಂದ ಇಬ್ಬರನ್ನು ಬೇರ್ಪಡಿಸುವ ಪ್ರಯತ್ನ ನಡೆದಿದೆ. ಇದಕ್ಕೆ ಅಕೆಯ ಜಾತಿ ಕಾರಣ

ಹುಣಸೂರು: ಪ್ರೀತಿಸಿ ವಿವಾಹವಾದ ಒಂದೇ ವರ್ಷಕ್ಕೆ ಸಂಸಾರದಲ್ಲಿ ಬಿರುಕು ಬಿಟ್ಟ ಪ್ರಕರಣ/ಪ್ರಕರಣ ದಾಖಲಿಸದಿದ್ದಲ್ಲಿ ಅಂಬೇಡ್ಕರ್ ರಕ್ಷಣಾ ವೇದಿಕೆಯಿಂದ ಪ್ರತಿಭಟನೆಯ ಎಚ್ಚರಿಕೆ Read More »

ವಿವಿಧ ಬೇಡಿಕೆಗಳ ಈಡೇರಿಕೆಗೆ ಉಕ್ಕಡ ದೇವಿಗೆ ಪತ್ರ ಬರೆದ ಭಕ್ತೆ| ದೇವಿ ಮಾರಮ್ಮನಿಗೆ ಬರೆದ ಪತ್ರ ವೈರಲ್

ಸಮಗ್ರ ನ್ಯೂಸ್: ‘ಅಮ್ಮ ತಾಯೇ.. ಮಗನಾದ ರಮೇಶ, ಸೊಸೆಯಾದ ಮಂಜುಳಾ ಇವರಿಬ್ಬರ ತಿಂಗಳ ಸಂಬಳವನ್ನು ರಾಜಮ್ಮ ಬಸವರಾಜುರವರ ಕೈಗೆ ಕೊಡಬೇಕು., ಹಾಗೆ ಬುದ್ಧಿ ಕೊಡು ತಾಯೇ. ಇವರಿಬ್ಬರೂ ಮನೆ ಮಠ ಅಂತ ಪ್ರೀತಿಯಿಂದ ಮಾತನಾಡಬೇಕು ಜತಗೆ ಫೋನ್‌ ಮಾಡಬೇಕು.’ ಇದು ಉಕ್ಕಡದ ಮಾರಮ್ಮನಿಗೆ ಭಕ್ತೆಯೊಬ್ಬರು ಬರೆದಿರುವ ಪತ್ರದ ಒಕ್ಕಣೆ. ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ದಕ್ಷಿಣಕಾಶಿ ಎಂದೇ ಖ್ಯಾತಿಯಾಗಿರುವ ಕಳಸೇಶ್ವರ ಸ್ವಾಮಿ ದೇವಾಲಯದ ಹುಂಡಿಯಲ್ಲಿ ಭಕ್ತರ ಹರಕೆ ಪತ್ರವು ಲಭ್ಯವಾಗಿದೆ. ದೇವರಿಗೆ ಪತ್ರ ಬರೆದ ಭಕ್ತರೊಬ್ಬರು ಬೇಡಿಕೆಗಳ

ವಿವಿಧ ಬೇಡಿಕೆಗಳ ಈಡೇರಿಕೆಗೆ ಉಕ್ಕಡ ದೇವಿಗೆ ಪತ್ರ ಬರೆದ ಭಕ್ತೆ| ದೇವಿ ಮಾರಮ್ಮನಿಗೆ ಬರೆದ ಪತ್ರ ವೈರಲ್ Read More »

ಕಳಸ:ನನ್ನ ಮದುವೆ ಯಾವುದೇ ವಿಘ್ನವಿಲ್ಲದೆ ನೆರವೇರುವಂತೆ ಮಾಡು ಎಂದ ಮಾರಮ್ಮನಿಗೆ ಪತ್ರ ಬರೆದ ಭಕ್ತ

ಸಮಗ್ರ ನ್ಯೂಸ್:  ಭಕ್ತರೊಬ್ಬರು ಮಾರಮ್ಮ ದೇವಿಯ ಬಳಿ ಬೇಡಿಕೊಂಡು ಬರೆದಿರುವ ವಿಚಿತ್ರ ಪತ್ರ ಕಳಸ ತಾಲೂಕಿನ ದಕ್ಷಿಣಕಾಶಿಎಂದೇ ಖ್ಯಾತಿಯಾಗಿರೋ ಕಳಸೇಶ್ವರ ಸ್ವಾಮಿಯ ದೇವಸ್ಥಾನದಿಂದ ವರದಿಯಾಗಿದೆ. ಕಳಸ ತಾಲೂಕಿನ ದಕ್ಷಿಣಕಾಶಿ ಎಂದೇ ಖ್ಯಾತಿಯಾಗಿರೋ ಕಳಸೇಶ್ವರ ಸ್ವಾಮಿಯ ದೇವಸ್ಥಾನದಲ್ಲಿರುವ ಉಕ್ಕಡ ಮಾರಮ್ಮನ ಗುಡಿಯಲ್ಲಿರುವ ದೇವರ ಹುಂಡಿಯಲ್ಲಿ ಈ ಪತ್ರ ಪತ್ತೆಯಾಗಿದೆ ಅದರಲ್ಲಿ ಭಕ್ತರೊಬ್ಬರು ಮಾರಮ್ಮ ದೇವಿಯ ಬಳಿ ತಮ್ಮ ಕಷ್ಟಗಳನ್ನು ದೂರಮಾಡು ಮನೆಯವರಿಗೆ ಒಳ್ಳೆಯ ಕೆಲಸ ಕೊಡಿಸು, ಮದುವೆ ಯಾವುದೇ ವಿಘ್ನವಿಲ್ಲದೆ ನಡೆಯುವ ಹಾಗೆ ಮಾಡು ದೇವರೇ ಎಂದು ಮಾರಮ್ಮನಿಗೆ

ಕಳಸ:ನನ್ನ ಮದುವೆ ಯಾವುದೇ ವಿಘ್ನವಿಲ್ಲದೆ ನೆರವೇರುವಂತೆ ಮಾಡು ಎಂದ ಮಾರಮ್ಮನಿಗೆ ಪತ್ರ ಬರೆದ ಭಕ್ತ Read More »

ಕರಾವಳಿಗೆ ಕಾಲಿಟ್ಟ ಪೋಸ್ಟರ್ ಅಭಿಯಾನ| ಬೆಳ್ತಂಗಡಿ ಶಾಸಕರಿಗೆ ತಟ್ಟಿದ ‘PAY MLA’ ಬಿಸಿ|

ಸಮಗ್ರ ನ್ಯೂಸ್: ರಾಜ್ಯ ಕಾಂಗ್ರೆಸ್ ಪೇ ಸಿಎಂ ಪೋಸ್ಟರ್ ಅಭಿಯಾನದ ಬೆನ್ನಲ್ಲೆ ಇದೀಗ ಕರಾವಳಿಗೂ ಪೇ ಎಂಎಲ್ ಎ ಪೋಸ್ಟರ್ ಅಭಿಯಾನ ಎಂಟ್ರಿ ಕೊಟ್ಟಿದ್ದು, ಶಾಸಕರ ಫೋಟೋ ಹಾಕಿ ಕಾಂಗ್ರೆಸ್ ಕಾರ್ಯಕರ್ತರು ಕ್ಯಾಂಪೇನ್ ಶುರು ಮಾಡಿದ್ದಾರೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಫೋಟೋ ಹಾಕಿ ಯುವ ಕಾಂಗ್ರೆಸ್ ಕಾರ್ಯಕರ್ತರು ಕ್ಯಾಂಪೇನ್ ಶುರು ಮಾಡಿದ್ದು, ಬೆಳ್ತಂಗಡಿಯ ಬಸ್ ನಿಲ್ದಾಣ, ಸಾರ್ವಜನಿಕ ಶೌಚಾಲಯ ಹಾಗೂ ಬಸ್ ಗಳಲ್ಲಿ ಪೇ ಎಂಎಲ್ ಎ ಪೋಸ್ಟರ್ ಅಂಟಿಸಿ ಅಭಿಯಾನ ಆರಂಭಿಸಿದ್ದಾರೆ. ಬೆಂಗಳೂರಿನಲ್ಲಿ

ಕರಾವಳಿಗೆ ಕಾಲಿಟ್ಟ ಪೋಸ್ಟರ್ ಅಭಿಯಾನ| ಬೆಳ್ತಂಗಡಿ ಶಾಸಕರಿಗೆ ತಟ್ಟಿದ ‘PAY MLA’ ಬಿಸಿ| Read More »

ಭಟ್ಕಳ: ಡಿವೈಡರ್ ಗೆ ಡಿಕ್ಕಿ ಹೊಡೆದ ಕಾರು| ಚಾಲಕ ಸ್ಥಳದಲ್ಲೇ ಸಾವು

ಸಮಗ್ರ ನ್ಯೂಸ್: ಅತಿ ವೇಗವಾಗಿ ಬಂದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸಾವನ್ನಪ್ಪಿದ್ದು ಮೂವರು ಗಾಯಗೊಂಡಿರುವ ಘಟನೆ ಭಟ್ಕಳ ತಾಲೂಕಿನ ಬೈಪಾಸ್ ರಸ್ತೆಯಲ್ಲಿ ಸಂಭವಿಸಿದೆ. ಮೃತ ವ್ಯಕ್ತಿಯನ್ನು ಉನೈಜ್ ಹಮ್ಜದ ಖತೀಬ್ (20) ರಂಗಿನಕಟ್ಟೆ ನಿವಾಸಿ ಎಂದು ತಿಳಿದು ಬಂದಿದೆ. ಈತ ತನ್ನ ಮೂವರು ಸ್ನೇಹಿತರೊಂದಿಗೆ ಕಾರಿನಲ್ಲಿ ಕುಂದಾಪುರ ಕಡೆಯಿಂದ ಭಟ್ಕಳ ಕಡೆಗೆ ಕಾರು ಚಲಾಸಿಕೊಂಡು ಬರುತ್ತಿರುವಾಗ ದುರ್ಘಟನೆ ಸಂಭವಿಸಿದೆ. ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು

ಭಟ್ಕಳ: ಡಿವೈಡರ್ ಗೆ ಡಿಕ್ಕಿ ಹೊಡೆದ ಕಾರು| ಚಾಲಕ ಸ್ಥಳದಲ್ಲೇ ಸಾವು Read More »

ಉಪ್ಪಿನಂಗಡಿ: ವಿದ್ಯಾರ್ಥಿಗಳ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಹೊಡೆದಾಟ

ಸಮಗ್ರ ನ್ಯೂಸ್: ಕ್ಷುಲ್ಲಕ ಕಾರಣಕ್ಕೆ ಹೊಡೆದಾಟ ನಡೆಸಿದ್ದ ವಿದ್ಯಾರ್ಥಿಗಳ ಎರಡು ತಂಡಗಳು ಸಂಘರ್ಷಕ್ಕೆ ಸಿದ್ಧವಾಗಿ ಅನಪೇಕ್ಷಿತ ಘಟನಾವಳಿಗೆ ಕಾರಣವಾಗುವ ಸಾಧ್ಯತೆಯನ್ನು ಪೊಲೀಸರ ಸಕಾಲಿಕ ಮಧ್ಯೆ ಪ್ರವೇಶದಿಂದಾಗಿ ತಡೆಗಟ್ಟಿದ ಘಟನೆ ಉಪ್ಪಿನಂಗಡಿಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ನಡೆದಿದೆ. ಗುರುವಾರ ಸಂಜೆ ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿಯೋರ್ವ ದ್ವಿತೀಯ ಪಿಯು ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ್ದು, ಈ ಘಟನೆಗೆ ಸಂಬಂಧಿಸಿ ಶುಕ್ರವಾರ ಉಭಯ ವಿದ್ಯಾರ್ಥಿಗಳ ಬೆಂಬಲಿಗರು ಜಮಾಯಿಸಿ ಹೊಡೆದಾಟಕ್ಕೆ ಸಿದ್ಧರಾಗಿದ್ದರು. ಇದರ ಬಗ್ಗೆ ಮಾಹಿತಿ ಪಡೆದ ಉಪ್ಪಿನಂಗಡಿ ಎಸ್ಸೆ„

ಉಪ್ಪಿನಂಗಡಿ: ವಿದ್ಯಾರ್ಥಿಗಳ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಹೊಡೆದಾಟ Read More »

ಉಡುಪಿ: ಭಾಸ್ಕರ ಶೆಟ್ಟಿ ಕೊಲೆ ಪ್ರಕರಣ| ‌ಜೀವಾವಧಿ ಶಿಕ್ಷೆಯಾದವರಿಗೆ ಜಾಮೀನು ಸಿಕ್ಕಿದ್ದು ಹೇಗೆ? ಮಾಧ್ಯಮದ ಮುಂದೆ ಗುಲಾಬಿ ಶೆಟ್ಟಿ ಅಳಲು

ಸಮಗ್ರ ನ್ಯೂಸ್: ಉದ್ಯಮಿ ಭಾಸ್ಕರ ಶೆಟ್ಟಿಯವರನ್ನು ಕೊಲೆಗೈದು ಹೋಮಕುಂಡದಲ್ಲಿ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಗೀಡಾದ ಭಾಸ್ಕರ ಶೆಟ್ಟಿ ತಾಯಿ‌ ಗುಲಾಬಿ‌ ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು, ಹಣ ಇದ್ದವರಿಗೆ ಒಂದು ಕಾನೂನು, ಪಾಪದವರಿಗೆ ಇನ್ನೊಂದು ಕಾನೂನಾ? ಜೀವಾವಧಿ ಶಿಕ್ಷೆ ಪ್ರಕಟ ಆದವರಿಗೆ ಜಾಮೀನು ಹೇಗೆ ಸಿಕ್ಕಿದೆ? ಎಂದು ಪ್ರಶ್ನಿಸಿದ್ದಾರೆ. ಭಾಸ್ಕರ್ ಶೆಟ್ಟಿ ಕೊಲೆ ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನೀಡಿದೆ. ರಾಜೇಶ್ವರಿ ಶೆಟ್ಟಿ, ನವನೀತ್, ನಿರಂಜನ್ ಭಟ್‌ಗೆ ಜಾಮೀನು ಮಂಜೂರು ಮಾಡಿದೆ. ಜೂನ್ 8,

ಉಡುಪಿ: ಭಾಸ್ಕರ ಶೆಟ್ಟಿ ಕೊಲೆ ಪ್ರಕರಣ| ‌ಜೀವಾವಧಿ ಶಿಕ್ಷೆಯಾದವರಿಗೆ ಜಾಮೀನು ಸಿಕ್ಕಿದ್ದು ಹೇಗೆ? ಮಾಧ್ಯಮದ ಮುಂದೆ ಗುಲಾಬಿ ಶೆಟ್ಟಿ ಅಳಲು Read More »

ಮತ್ತೆ ರಾಜ್ಯದ ಜನರಿಗೆ ಶಾಕ್ ಟ್ರೀಟ್ಮೆಂಟ್ ನೀಡಲು ಎಸ್ಕಾಂಗಳ ತಯಾರಿ| ಪ್ರತೀ ಯೂನಿಟ್ ಗೆ 43 ಪೈಸೆ ಏರಿಸಲು ನಿರ್ಧಾರ

ಸಮಗ್ರ ನ್ಯೂಸ್: ವಿದ್ಯುತ್ ಖರೀದಿ ದರ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಆ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಲು ಎಸ್ಕಾಂಗಳು ನಿರ್ಧರಿಸಿವೆ. ಈ ಮೂಲಕ ರಾಜ್ಯದ ಜನರಿಗೆ ದರ ಏರಿಕೆಯ ಶಾಕ್ ನೀಡಲು ನಿಗಮಗಳು ತಯಾರಿ ನಡೆಸಿವೆ. ಆರು ತಿಂಗಳ ಕಾಲ ಯೂನಿಟ್ ವಿದ್ಯುತ್ ಗೆ 43 ಪೈಸೆವರೆಗೆ ಹೆಚ್ಚು ಹಣ ಪಾವತಿಸಬೇಕಿದೆ. ಇಂಧನ ಹೊಂದಾಣಿಕೆ ವೆಚ್ಚದ ರೂಪದಲ್ಲಿ ವಿದ್ಯುತ್ ಖರೀದಿ ದರದ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಲು ಎಸ್ಕಾಂಗಳು ನಿರ್ಧರಿಸಿವೆ. ಕಳೆದ ಏಪ್ರಿಲ್ ತಿಂಗಳಲ್ಲಿ 35 ಪೈಸೆಯಷ್ಟು ವಿದ್ಯುತ್ ದರ ಏರಿಕೆ

ಮತ್ತೆ ರಾಜ್ಯದ ಜನರಿಗೆ ಶಾಕ್ ಟ್ರೀಟ್ಮೆಂಟ್ ನೀಡಲು ಎಸ್ಕಾಂಗಳ ತಯಾರಿ| ಪ್ರತೀ ಯೂನಿಟ್ ಗೆ 43 ಪೈಸೆ ಏರಿಸಲು ನಿರ್ಧಾರ Read More »

ದಸರಾ ಹಿನ್ನಲೆ; ಮಂಗಳೂರು ತಾಲೂಕಿನ ಶಾಲೆಗಳಿಗೆ ಹೆಚ್ಚುವರಿ ನಾಲ್ಕು ದಿನ ರಜೆ

ಸಮಗ್ರ ನ್ಯೂಸ್: ಮಂಗಳೂರು ತಾಲೂಕಿನ ಎಲ್ಲ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ನವರಾತ್ರಿ ಹಬ್ಬದ ಆಚರಣೆಗೆ ಪೂರಕವಾಗುವಂತೆ ದಸರಾ ರಜೆಯನ್ನು ಸೆ. 28ರಿಂದ ಅ. 1ರ ವರೆಗೆ ಹೆಚ್ಚುವರಿಯಾಗಿ (4 ದಿನಗಳು) ನೀಡಲು ಸರಕಾರ ಶುಕ್ರವಾರ ಆದೇಶಿಸಿದೆ. ಆದರೆ ಇದು ದ.ಕ. ಜಿಲ್ಲೆಯ ಇತರ ತಾಲೂಕುಗಳಿಗೆ ಅನ್ವಯಿಸುವುದಿಲ್ಲ. 2022-23ನೇ ಸಾಲಿನಲ್ಲಿ ರಾಜ್ಯದ ಎಲ್ಲ ಶಾಲೆಗಳ ಶೈಕ್ಷಣಿಕ ಚಟುವಟಿಕೆಗಳನ್ನು ನಿಗದಿ ಪಡಿಸಿ ಶಾಲೆಗಳಿಗೆ ದಸರಾ ರಜೆಯನ್ನು ಅ. 3ರಿಂದ ಅ. 16ರ ವರೆಗೆ ನಿಗದಿಪಡಿಸಲಾಗಿತ್ತು. ಸರಕಾರ ಇದೀಗ ಮಂಗಳೂರು

ದಸರಾ ಹಿನ್ನಲೆ; ಮಂಗಳೂರು ತಾಲೂಕಿನ ಶಾಲೆಗಳಿಗೆ ಹೆಚ್ಚುವರಿ ನಾಲ್ಕು ದಿನ ರಜೆ Read More »