Ad Widget .

ರಾಜ್ಯದಲ್ಲಿ ಕಟ್ಟೆಚ್ಚರವಹಿಸಿ, ಸಂಘಟನೆಗಳ ಮುಖಂಡರು ಎಚ್ಚರದಿಂದಿರಿ| ಅಹಿತಕರ ಘಟನೆ ಸಾಧ್ಯತೆ ಹಿನ್ನಲೆ ಪೊಲೀಸರಿಂದ ಹೈ ಅಲರ್ಟ್

ಸಮಗ್ರ ನ್ಯೂಸ್: ರಾಜ್ಯದಲ್ಲಿ ಪಿಎಫ್‌ಐ ಮತ್ತು ಎಸ್‌ಡಿಪಿಐ ಸಂಘಟನೆಗಳ ಕಚೇರಿಗಳ ಮೇಲೆ ಎನ್‌ಐಎ ಹಾಗೂ ಪೊಲೀಸರ ದಾಳಿ ನಡೆದ ಬಳಿಕ ಎಲ್ಲ ಕಡೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗಳು ನಡೆಯುತ್ತಿದೆ. ಹೀಗಾಗಿ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪಾಲನೆಗಾಗಿ ಕಟ್ಟೆಚ್ಚರ ವಹಿಸುವಂತೆ ಎಲ್ಲಾ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

Ad Widget . Ad Widget .

ಮೈಸೂರು, ಮಂಗಳೂರು, ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಮತ್ತು ಕಲಬುರಗಿ ನಗರಗಳ ಪೊಲೀಸ್‌ ಕಮೀಷನರ್‌ಗಳು, ಎಲ್ಲ ಜಿಲ್ಲಾ ಪೊಲೀಸ್‌ ಅಧೀಕ್ಷಕರಿಗೆ ಕಳುಹಿಸಿರುವ ಸುತ್ತೋಲೆಯಲ್ಲಿ ಹಲವು ಮಹತ್ವದ ಸೂಚನೆಗಳನ್ನು ನೀಡಲಾಗಿದೆ. ರಾಜ್ಯದ ಕೆಲವು ಭಾಗಗಳಲ್ಲಿ ರಾತ್ರಿ ಅಹಿತಕರ ಘಟನೆ ನಡೆಯುವ ಸಾಧ್ಯತೆಗಳಿವೆ ಎಂಬ ನೆಲೆಯಲ್ಲಿ ಈ ಎಚ್ಚರಿಕೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಅಲೋಕ್‌ ಕುಮಾರ್‌ ಅವರು ಈ ಸುತ್ತೋಲೆ ಹೊರಡಿಸಿದ್ದಾರೆ.

Ad Widget . Ad Widget .

ಪೊಲೀಸರಿಂದ ಏನೇನು ಸೂಚನೆಗಳು?:
೧. ಗುರುವಾರ ಸಂಜೆ ಆರು ಗಂಟೆಯಿಂದ ಶುಕ್ರವಾರ ಬೆಳಗ್ಗೆ ಆರು ಗಂಟೆವರೆಗೆ ಪರಿಣಾಮಕಾರಿಯಾಗಿ ಗಸ್ತು ನಿರ್ವಹಿಸಬೇಕು.
೨. ಸಿವಿಲ್ ಮತ್ತು ಕೆಎಸ್‌ಆರ್‌ಪಿ ಸಿಬ್ಬಂದಿ ತುಕಡಿಗಳನ್ನು ಬಂದೋಬಸ್ತು ಕಾರ್ಯಕ್ಕಾಗಿ ನಿಯೋಜಿಸಬೇಕು.

  1. ಸಾಮಾಜಿಕ ಮಾಧ್ಯಮ ಮೇಲ್ವಿಚಾರಣೆ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ರೀತಿಯ ಪ್ರಚೋದನಾಕಾರಿ ಹೇಳಿಕೆಗಳನ್ನು ಮತ್ತು ಪೋಸ್ಟ್‌ಗಳನ್ನು ಹಾಕದಂತೆ ತೀವ್ರ ನಿಗಾ ವಹಿಸುವುದು.
  2. ಸೂಕ್ಷ್ಮ ಪ್ರದೇಶಗಳಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಸಂಜೆ 6.00 ರಿಂದ ಮರು ದಿನ 11.00 ಗಂಟೆ ವರೆಗೆ ಗಸ್ತು ಕೈಗೊಳ್ಳುವುದು ಹಾಗೂ ಹಿರಿಯ ಅಧಿಕಾರಿಗಳು ಸಹ ಬೆಳಿಗ್ಗೆ 11.00 ಘಂಟೆಯವರೆಗೆ ತಮ್ಮ ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಗಸ್ತು ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು.
    ೫. ಕೆಲವು ಸೂಕ್ಷ್ಮ ಮತ್ತು ಆತಿ ಸೂಕ್ಷ್ಮ ಪ್ರದೇಶಗಳಲ್ಲಿ ಗಸ್ತುಗಳನ್ನು ಮಾಡುವುದು ಹಾಗೂ ಪಿಕೆಂಟಿಂಗ್‌ಗಳನ್ನು ನೇಮಿಸುವುದು.
    ೬. ನಗರ / ಪಟ್ಟಣದ ಯಾವುದೇ ಭಾಗದಲ್ಲಿ ಜನ ಸಂದಣಿ ಸೇರಲು ಆಸ್ಪದವನ್ನು ನೀಡಬಾರದು ಹಾಗೂ ಅವಶ್ಯಕತೆಯಿದ್ದಲ್ಲಿ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳುವುದು.
    ೭. ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶಗಳಲ್ಲಿ, ನಾಕಾಬಂದಿ ವ್ಯವಸ್ಥೆಯನ್ನು ಕೈಗೊಂಡು ವಾಹನಗಳ ತಪಾಸಣೆಯನ್ನು ಮಾಡುವುದರ ಬಗ್ಗೆ ಕ್ರಮ ಜರುಗಿಸುವುದು.
    ೮. ಕೇಂದ್ರ ಸರ್ಕಾರದ ಸಂಸ್ಥೆ/ಕಚೇರಿಗಳ ಭದ್ರತೆಯ ದೃಷ್ಟಿಯಿಂದ ಯಾವುದೇ ಹಾನಿಯಾಗದಂತೆ ಮುಂಜಾಗ್ರತಾ ಕ್ರಮ ವಹಿಸುವುದು.

Leave a Comment

Your email address will not be published. Required fields are marked *