Ad Widget .

ಅವಳಿ ಮಕ್ಕಳಿಗೆ ಜನ್ಮನೀಡಿದ 19ರ ಮಹಿಳೆ| ಆದರೆ ಎರಡೂ ಮಕ್ಕಳಿಗೆ ತಂದೆಯರು ಬೇರೆಬೇರೆ!! ಹೇಗೆ ಗೊತ್ತಾ ಈ ಸೀಕ್ರೆಟ್?

ಸಮಗ್ರ ಡಿಜಿಟಲ್ ಡೆಸ್ಕ್: 19 ವರ್ಷದ ಮಹಿಳೆಯೊಬ್ಬಳು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಅದರೇ ಈ ಅವಳಿ ಮಕ್ಕಳಿಗೆ ತಂದೆಯಂದಿರು ಬೇರೆ ಬೇರೆ..! ಅದು ಹೇಗೆ ಎಂದು ಆಶ್ಚರ್ಯಕರವಾಗುವುದು ಸಹಜ. ಈ ಮಹಿಳೆಯ ಗರ್ಭಧಾರಣೆಯು ಒಂದು ಮಿಲಿಯನ್ ನಲ್ಲಿ ಒಂದು ಮಾತ್ರ ಇಂತಹ ಘಟನೆ ನಡೆಯುತ್ತದೆ ಎಂಬ ಮಾಹಿತಿ ವೈದ್ಯರಿಂದ ಬಹಿರಂಗವಾಗಿದೆ.

Ad Widget . Ad Widget .

ಒಂದೇ ದಿನದಲ್ಲಿ ಇಬ್ಬರು ಪುರುಷರೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದರಿಂದ ಹೀಗೆ ಬೇರೆ ಬೇರೆ ವ್ಯಕ್ತಿಗಳಿಂದ ಒಟ್ಟಿಗೆ ಅವಳಿ ಮಕ್ಕಳು ಹುಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಋತುಚಕ್ರ ಮುಗಿದ ಕೆಲವೇ ದಿನಗಳಲ್ಲಿ ಒಂದೇ ದಿನ ಇಬ್ಬರು ವ್ಯಕ್ತಿಗಳ ಜೊತೆ ಲೈಂಗಿಕ ಕ್ರಿಯೆ ನಡೆಸಿದ ಕಾರಣ ಈ ರೀತಿ ಘಟನೆ ಸಂಭವಿಸಿದೆ ಎಂದಿದ್ದಾರೆ. ಇಂಥ ಕ್ರಿಯೆಯನ್ನು ವೈದ್ಯಕೀಯ ಭಾಷೆಯಲ್ಲಿ ಹೆಟೆರೊಪಟರ್ನಲ್ ಸೂಪರ್‌ಫೆಕಂಡೇಶನ್ (Heteropaternal Superfecundation) ಎಂದು ಕರೆಯಲಾಗುತ್ತದೆ. ಪ್ರಪಂಚದಲ್ಲಿ ಇಲ್ಲಿಯವರೆಗೆ 20 ಮಂದಿಯಲ್ಲಿ ಈ ರೀತಿಯ ಘಟನೆಗಳು ನಡೆದಿವೆ ಎಂದು ವರದಿಯಾಗಿದೆ.

Ad Widget . Ad Widget .

ಮಕ್ಕಳು ಹುಟ್ಟಿದಾಗ ಈ ವಿಷಯ ತಿಳಿದಿರಲಿಲ್ಲ. ಅವರ ಮೊದಲ ಹುಟ್ಟುಹಬ್ಬದ ಸಮಯದಲ್ಲಿ ತಾಯಿಗೆ ಈ ಮಕ್ಕಳ ತಂದೆ ಯಾರು ಎಂದು ನೋಡುವ ಹಂಬಲವಾಗಿದೆ. ಆದ್ದರಿಂದ ಡಿಎನ್​ಎ ಪರೀಕ್ಷೆ ಮಾಡಲಾಗಿದೆ. ಆದರೆ ವೈದ್ಯರಿಗೇ ಅಚ್ಚರಿ ಎನ್ನುವಂತೆ ಇಬ್ಬರು ಮಕ್ಕಳ ಡಿಎನ್​ಎ ಪರೀಕ್ಷೆ ಬೇರೆ ಬೇರೆ ರೀತಿ ಬಂದಿದೆ.

ನಂತರ ವೈದ್ಯರು ಯುವತಿಯ ಬಳಿ ಚರ್ಚಿಸಿದಾಗ ತಾನು ಒಂದೇ ದಿನ ಇಬ್ಬರ ಜತೆ ಲೈಂಗಿಕ ಸಂಪರ್ಕ ಹೊಂದಿರುವ ಬಗ್ಗೆ ತಿಳಿಸಿದ್ದಾಳೆ. ಈ ಸುದ್ದಿ ಇದೀಗ ಭಾರಿ ವೈರಲ್​ ಆಗಿದೆ. ಆಶ್ಚರ್ಯಕರ ಸಂಗತಿ ಬೆಳಕಿಗೆ ಬಂದಿದಂತೂ ನಿಜ.

Leave a Comment

Your email address will not be published. Required fields are marked *