Ad Widget .

ರಾಕೆಟ್‌ನಲ್ಲಿ ಇಂಧನ ಸೋರಿಕೆ| ಎರಡು ಗಂಟೆ ತಡವಾಗಿ ಉಡಾವಣೆ

ಕೇಪ್‌ ಕ್ಯಾನವೆರಲ್‌: ಚಂದಿರನ ಅಂಗಳಕ್ಕೆ ಮನುಷ್ಯನನ್ನು ಕಳುಹಿಸಿ ಮತ್ತೊಮ್ಮೆ ಇತಿಹಾಸ ಸೃಷ್ಟಿಸುವ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (NASA) ಮಹತ್ವಾಕಾಂಕ್ಷೆ ಯೋಜನೆಗೆ ಶನಿವಾರ ಮತ್ತೊಮ್ಮೆ ಅಡ್ಡಿ ಎದುರಾಯಿತು.

Ad Widget . Ad Widget .

ಉಡಾವಣೆಗೆ ಸಜ್ಜಾಗಿದ್ದ 322 ಅಡಿ ಉದ್ದದ ರಾಕೆಟ್‌ನಲ್ಲಿ ಇಂಧನ ಸೋರಿಕೆಯಾಗುತ್ತಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ವಿಜ್ಞಾನಿಗಳ ತಂಡ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತು.

Ad Widget . Ad Widget .

ಇಂಧನ ಸೋರಿಕೆಯಿಂದ ಯಾವುದೇ ಹಾನಿಯಾಗಿಲ್ಲ ಎಂದು ನಾಸಾ ತಿಳಿಸಿದೆ. ಎಂಜಿನಿಯರ್‌ಗಳು ದೋಷವನ್ನು ಸರಿಪಡಿಸಿದ ನಂತರ, ಎರಡು ಗಂಟೆ ತಡವಾಗಿ ರಾಕೆಟ್‌ ಅನ್ನು ಉಡಾವಣೆ ಮಾಡಲಾಯಿತು.

Leave a Comment

Your email address will not be published. Required fields are marked *