Ad Widget .

ಒರಿಸ್ಸಾದ ಸಮುದ್ರ ತೀರದಲ್ಲಿ ಚಿತ್ರ ಕಲಾವಿದನಿಂದ ಮೂಡಿದ ಕಿಚ್ಚ ಸುದೀಪ್ ಅವರ ಮರಳು ಶಿಲ್ಪ ನಿರ್ಮಾಣ

ಬೆಂಗಳೂರು: ಅಭಿನಯ ಚಕ್ರವರ್ತಿ ಸುದೀಪ್ ಅವರು ರಾಷ್ಟ್ರದಾದ್ಯಂತ ಖ್ಯಾತಿ ಜೊತೆಗೆ ಅಭಿಮಾನ ಸಮೂಹವನ್ನು ಹೊಂದಿರುವ ಕನ್ನಡದ ಮೇರುನಟ.

Ad Widget . Ad Widget .

ಸೆಪ್ಟೆಂಬರ್ 2ರಂದು ಸುದೀಪ್ ಅವರ ಜನ್ಮದಿನ. ಈ ಜನ್ಮದಿನವನ್ನು ಸ್ಮರಣೀಯವಾಗಿಸಲು ಮತ್ತು ಸಂಭ್ರಮವನ್ನು ಹೆಚ್ಚು ಮಾಡಲು ಮಾನಸ್ ಕುಮಾರ್ ಎಂಬ ಹೆಸರಾಂತ ಮರಳುಶಿಲ್ಪಿ ಒರಿಸ್ಸಾದ ಸಮುದ್ರ ತೀರದಲ್ಲಿ ಕಿಚ್ಚ ಸುದೀಪ್ ಅವರ ಮರಳು ಶಿಲ್ಪವನ್ನು ನಿರ್ಮಿಸುವ ಮೂಲಕ ಶುಭಾಶಯಗಳನ್ನು ತಿಳಿಸಿದ್ದಾರೆ.

Ad Widget . Ad Widget .

ಈ ಶಿಲ್ಪವು 20 ಅಡಿ ಅಗಲ, 7 ಅಡಿ ಎತ್ತರವಿದೆ. ಈ ಶಿಲ್ಪಕ್ಕಾಗಿ ಸುಮಾರು 20 ಟನ್ ಮರಳನ್ನು ಬಳಸಲಾಗಿದೆ ಎಂದು ಶಿಲ್ಪಿ ತಿಳಿಸಿದ್ದಾರೆ.

ಸುದೀಪ್ ಅವರ ಆಪ್ತರಾದ ವೀರಕಪುತ್ರ ಶ್ರೀನಿವಾಸ ಅವರು ಯಾವ ಫೋಟೋ ಬಳಸಬೇಕು ಮತ್ತು ಕನ್ನಡ ಬರವಣಿ ಹೇಗಿರಬೇಕು ಎಂಬ ಗೊಂದಲಕ್ಕೆ ಅಗತ್ಯವಿದ್ದ ಮಾಹಿತಿಯನ್ನು ನೀಡಿರುವುದನ್ನು ತಿಳಿಸಿದರು.

ದಕ್ಷಿಣ ಭಾರತದಲ್ಲಿಯೇ ಈ ಮರಳು ಶಿಲ್ಪ ಗೌರವಕ್ಕೆ ಪಾತ್ರವಾಗುತ್ತಿರುವ ಎರಡನೇ ಕಲಾವಿದರೆಂದರೆ ಅದು ಕಿಚ್ಚ ಸುದೀಪ್ ಅವರು ಮಾತ್ರ. ಈ ಹಿಂದೆ 2020ರಲ್ಲಿ ಡಾ.ವಿಷ್ಣುವರ್ಧನ್ ಅವರ 70ನೇ ಜನ್ಮದಿನ ಪ್ರಯುಕ್ತ ಮರಳು ಶಿಲ್ಪದ ಗೌರವ ನೀಡಲಾಗಿತ್ತು ಎಂಬುದು ಬಿಟ್ಟರೆ ಇದುವರೆಗೆ ಯಾವುದೇ ದಕ್ಷಿಣ ಭಾರತದ ನಟರಿಗೆ ಈ ಗೌರವ ದಕ್ಕಿರಲಿಲ್ಲ.

ಈಗ ಎರಡನೆಯವರಾಗಿ ಕಿಚ್ಚ ಸುದೀಪ್ ಅವರು ಅಂತಹ ಗೌರವವಕ್ಕೆ ಪಾತ್ರರಾಗಿದ್ದಾರೆ. ಅಂಚೆ ಇಲಾಖೆಯಿಂದ ವಿಶೇಷ ಲಕೋಟೆಯ ಗೌರವವನ್ನು ಪಡೆದಿದ್ದಂತಹ ಸುದೀಪ್ ಅವರು ಈಗ ಮರಳು ಶಿಲ್ಪ ಗೌರವಕ್ಕೂ ಪಾತ್ರರಾಗಿರುವುದು ಅವರ ಅಭಿಮಾನಿಗಳನ್ನು ಖುಷಿಯಿಂದ ಕುಣಿಯುವಂತೆ ಮಾಡಿದೆ.

Leave a Comment

Your email address will not be published. Required fields are marked *