August 2022

ಕರಾವಳಿಯಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು| ಕಾಸರಗೋಡಿನಲ್ಲಿ ರೈಲು ಹಳಿ ತಪ್ಪಿಸಲು ಯತ್ನ

ಸಮಗ್ರ ನ್ಯೂಸ್: ಮಂಗಳೂರು ಗಡಿ ಭಾಗದಲ್ಲಿ ಕಿಡಿಗೇಡಿಗಳು ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದು, ಕಾಸರಗೋಡಿನ ರೈಲ್ವೆ ಹಳಿಗಳ ಮೇಲೆ ಕಾಂಕ್ರೀಟ್ ತುಂಡು ಇಟ್ಟು ರೈಲ್ವೆ ಹಳಿಗಳನ್ನು ತಪ್ಪಿಸಲು ಕಿಡಿಗೇಡಿಗಳು ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ. ಆಗಸ್ಟ್ 21 ರಂದು ಕಾಸರಗೋಡಿನ ಕೋಟಿಕುಳಂ-ಬೇಕಳ ಮಧ್ಯೆ ರೈಲ್ವೆ ಹಳಿಗಳ ಮೇಲೆ ಕಿಡಿಗೇಡಿಗಳು ಕಬ್ಬಿಣ್ಣದ ಸರಳುಗಳು, ಕಾಂಕ್ರೀಟ್ ಇಟ್ಟು ರೈಲು ಹಳಿಗಳನ್ನು ತುಂಡು ಮಾಡಲು ಯತ್ನಿಸಿರುವ ಘಟನೆ ನಡೆದಿದೆ. ರೈಲ್ವೆ ಗಾರ್ಡ್ ಸಮಯ ಪ್ರಜ್ಞೆಯಿಂದ ಭಾರೀ ದುರಂತ ತಪ್ಪಿದೆ. ಹಳಿ ಮೇಲೆ […]

ಕರಾವಳಿಯಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು| ಕಾಸರಗೋಡಿನಲ್ಲಿ ರೈಲು ಹಳಿ ತಪ್ಪಿಸಲು ಯತ್ನ Read More »

ಮಂಗಳೂರಿಗೆ ಮೋದಿ ಭೇಟಿ ಹಿನ್ನಲೆ| ಅಧಿಕಾರಿಗಳಿಂದ ಮಹತ್ವದ ಸಭೆ

ಸಮಗ್ರ ನ್ಯೂಸ್: ಸೆಪ್ಟೆಂಬರ್​ 2 ರಂದು ಮಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದು, ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಮಂಗಳೂರು ನಗರ ಜಿಲ್ಲಾ ಪಂಚಾಯತ್​ ಸಭಾಂಗಣದಲ್ಲಿ ಸಭೆ ನಡೆಸಲಾಯಿತು. ಕೇಂದ್ರದ ಯೋಜನೆಗಳ ಫಲಾನುಭವಿಗಳನ್ನು ಕಾರ್ಯಕ್ರಮಕ್ಕೆ ಕರೆತರಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ನವಮಂಗಳೂರು ಬಂದರಿನಲ್ಲಿ ಪ್ರಧಾನಿ ಮೋದಿ 3,600 ಕೋಟಿ ವೆಚ್ಚದ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಮಂಗಳೂರು ನಗರದ ಗೋಲ್ಡ್ ಪಿಂಚ್ ಮೈದಾನದಲ್ಲಿ ಬೃಹತ್​ ಕಾರ್ಯಕ್ರಮ ನಡೆಯಲಿದ್ದು, ಅಧಿಕಾರಿಗಳೊಂದಿಗೂ ಸಭೆಯ ಸಿದ್ಧತೆ, ಭದ್ರತೆ ಬಗ್ಗೆ ಚರ್ಚಿಸಲಾಯಿತು..

ಮಂಗಳೂರಿಗೆ ಮೋದಿ ಭೇಟಿ ಹಿನ್ನಲೆ| ಅಧಿಕಾರಿಗಳಿಂದ ಮಹತ್ವದ ಸಭೆ Read More »

ಗುಡ್ ನ್ಯೂಸ್:ವಾರದ 6 ದಿನವೂ ಮಂಗಳೂರು- ಬೆಂಗಳೂರು ರೈಲು ಸಂಚಾರಕ್ಕೆ ಅನುಮತಿ

ಸಮಗ್ರ ನ್ಯೂಸ್: ಮಂಗಳೂರು- ಬೆಂಗಳೂರು ರೈಲ್ವೆ ಪ್ರಯಾಣಿಕರಿಗೆ ಕೇಂದ್ರ ರೈಲ್ವೆ ಸಚಿವಾಲಯವು ಸಂತಸದ ಸುದ್ದಿಯನ್ನು ನೀಡಿದೆ. ಇನ್ನು ಮುಂದೆ ವಾರದಲ್ಲಿ 3 ದಿನ ಮೈಸೂರು ಮಾರ್ಗವಾಗಿ ಮಂಗಳೂರು- ಬೆಂಗಳೂರು ಮಧ್ಯೆ ಸಂಚರಿಸುತ್ತಿದ್ದ ರೈಲು ಸೇವೆಯನ್ನು 6 ದಿನಗಳಿಗೆ ಹೆಚ್ಚಿಸಬೇಕೆಂಬ ನೈಋತ್ಯ ರೈಲ್ವೆಯ ಪ್ರಸ್ತಾವನೆಗೆ ಕೇಂದ್ರ ರೈಲ್ವೇ ಸಚಿವಾಲಯ ಅನುಮೋದನೆ ನೀಡಿದೆ. ಮುಂದಿನ ಕೆಲವೇ ದಿನಗಳಲ್ಲಿ ವಾರದಲ್ಲಿ 6 ದಿನ ಮಂಗಳೂರು-ಬೆಂಗಳೂರು ರೈಲು ಮೈಸೂರು ಮಾರ್ಗವಾಗಿ ಸಂಚರಿಸಲಿದೆ. ರೈಲು ಸಂಖ್ಯೆ 16585/586 ಬೆಂಗಳೂರು- ಮಂಗಳೂರು ರೈಲಿನ ಸಂಚಾರವನ್ನು ಹೆಚ್ಚಿಸಲು

ಗುಡ್ ನ್ಯೂಸ್:ವಾರದ 6 ದಿನವೂ ಮಂಗಳೂರು- ಬೆಂಗಳೂರು ರೈಲು ಸಂಚಾರಕ್ಕೆ ಅನುಮತಿ Read More »

ಗಣೇಶ ಹಬ್ಬಕ್ಕೆ ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ; ಈ ನಿಯಮ ಪಾಲನೆ ಕಡ್ಡಾಯ

ಸಮಗ್ರ ನ್ಯೂಸ್: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರಸ್ನೇಹಿ ಗಣೇಶ ಹಬ್ಬ ಆಚರಿಸಲು ತೀರ್ಮಾನಿಸಿದ್ದು, ಮಾರ್ಗಸೂಚಿ ಪ್ರಕಟಿಸಿದೆ. ಗೌರಿ ಗಣೇಶ ಹಬ್ಬದ ವೇಳೆ ಸಾರ್ವಜನಿಕರು ಬಣ್ಣರಹಿತ ಮಣ್ಣಿನ ಗಣೇಶ ಮೂರ್ತಿಗಳೊಂದಿಗೆ ಹಬ್ಬ ಆಚರಿಸಿ, ಸ್ಥಳೀಯ ಸಂಸ್ಥೆಗಳು ನಿಗದಿಪಡಿಸಿದ ಸ್ಥಳಗಳಲ್ಲಿ ಮೂರ್ತಿಗಳನ್ನು ವಿಸರ್ಜಿಸುವುದು. 5 ಅಡಿ ಎತ್ತರದ ಮಣ್ಣಿನ ವಿಗ್ರಹಗಳನ್ನು ಮಾತ್ರ ತಯಾರಿಸಲು ಅನುಮತಿ ನೀಡುವುದು. ಯಾವುದೇ ಕಾರಣಕ್ಕೂ ತಿಂಗಳುಗಳವರೆಗೆ ಗಣೇಶನನ್ನು ಕೂರಿಸುವಂತಿಲ್ಲ. ಬೇರೆ ರಾಜ್ಯದಿಂದ ಬರುವಂತಹ ಪಿಓಪಿ ವಿಗ್ರಹಗಳನ್ನು ತಡೆಗಟ್ಟಲು ಸಂಬಂಧಿಸಿದ ಚೆಕ್‍ಪೋಸ್ಟ್ ಅಧಿಕಾರಿಗಳಿಗೆ ಸೂಕ್ತ

ಗಣೇಶ ಹಬ್ಬಕ್ಕೆ ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ; ಈ ನಿಯಮ ಪಾಲನೆ ಕಡ್ಡಾಯ Read More »

ಲೈನ್ ಮ್ಯಾನ್ ಹೆಲ್ಮೆಟ್ ಧರಿಸದ್ದಕ್ಕೆ ದಂಡ ವಿಧಿಸಿದ ಪೊಲೀಸ್| ಕೆರಳಿದ ಲೈನ್ ಮ್ಯಾನ್ ಮಾಡಿದ್ದೇನು ಗೊತ್ತಾ?

ಸಮಗ್ರ ನ್ಯೂಸ್: ಹೆಲ್ಮೆಟ್ ಧರಿಸದ ಲೈನ್ ಮ್ಯಾನ್ ಗೆ ಪೊಲೀಸರು ಆರು ಸಾವಿರ ರೂಪಾಯಿ ದಂಡ ವಿಧಿಸಿದ್ದ ಘಟನೆಯ ನಂತರ ಇದರಿಂದ ಆಕ್ರೋಶಗೊಂಡ ಲೈನ್ ಮ್ಯಾನ್ ಠಾಣಾ ಭವನ್ ಪೊಲೀಸ್ ಠಾಣೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಸೇಡು ತೀರಿಸಿಕೊಂಡ ಘಟನೆ ಉತ್ತರಪ್ರದೇಶದಲ್ಲಿ ನಡೆದಿರುವುದಾಗಿ ವರದಿ ವಿವರಿಸಿದೆ. ಲೈನ್ ಮ್ಯಾನ್ ಮೊಹಮ್ಮದ್ ಮೆಹತಾಬ್ ಪೊಲೀಸ್ ಠಾಣೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ” ನನ್ನ ತಿಂಗಳ ಸಂಬಳ 5,000 ಸಾವಿರ ರೂಪಾಯಿ. ಆದರೆ

ಲೈನ್ ಮ್ಯಾನ್ ಹೆಲ್ಮೆಟ್ ಧರಿಸದ್ದಕ್ಕೆ ದಂಡ ವಿಧಿಸಿದ ಪೊಲೀಸ್| ಕೆರಳಿದ ಲೈನ್ ಮ್ಯಾನ್ ಮಾಡಿದ್ದೇನು ಗೊತ್ತಾ? Read More »

ರಾಜ್ಯ ಸರ್ಕಾರ ಆರೋಗ್ಯ ಕ್ಷೇತ್ರಕ್ಕೆ ಒತ್ತು, ರಾಜ್ಯದ ಮೊದಲ ಆರೋಗ್ಯ ಮಿಷನ್ ಬಿಡುಗಡೆ- ಸಿಎಂ ಬೊಮ್ಮಾಯಿ

ಸಮಗ್ರ ನ್ಯೂಸ್ : ರಾಜ್ಯ ಸರ್ಕಾರ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿದ್ದು, 100 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು ಎಂದು CM ಬೊಮ್ಮಾಯಿ ಹೇಳಿದ್ದಾರೆ. ಶೀಘ್ರದಲ್ಲೇ 9 ಜಿಲ್ಲೆಗಳಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸಿ, ಮುಂದಿನ 25 ವರ್ಷಗಳನ್ನು ಗುರಿಯಾಗಿಸಿಕೊಂಡು ‘ವಿಷನ್ ಡಾಕ್ಯುಮೆಂಟ್’ ಬಿಡುಗಡೆ ಮಾಡಿ, 60 ವರ್ಷ ಮೇಲ್ಪಟ್ಟವರಿಗೆ ಉಚಿತ ನೇತ್ರ ಪರೀಕ್ಷೆ ಎಂದಿದ್ದಾರೆ.

ರಾಜ್ಯ ಸರ್ಕಾರ ಆರೋಗ್ಯ ಕ್ಷೇತ್ರಕ್ಕೆ ಒತ್ತು, ರಾಜ್ಯದ ಮೊದಲ ಆರೋಗ್ಯ ಮಿಷನ್ ಬಿಡುಗಡೆ- ಸಿಎಂ ಬೊಮ್ಮಾಯಿ Read More »

ಕಾಪು ; ಉದ್ಯೋಗದಲ್ಲಿದ್ದ ಯುವತಿ ನಾಪತ್ತೆ

ಕಾಪು : ಮೊಬೈಲ್ ಶಾಪ್ ನ ಉದ್ಯೋಗಿ ಉದ್ಯಾವರ ಸಂಪಿಗೆನಗರದ ಯುವತಿ ನಾಪತ್ತೆಯಾದ ಘಟನೆಯೊಂದು ಆ.23 ರಂದು ನಡೆದಿದೆ. ನೇತ್ರಾವತಿ (20) ಕಾಣೆಯಾದ ಯುವತಿ. ಕಳೆದ ಮೂರು ತಿಂಗಳಿನಿಂದ ಉದ್ಯಾವರದ ಸ್ಮಾರ್ಟ್ ಮೊಬೈಲ್ ಶಾಪ್ ನಲ್ಲಿ ಕೆಲಸ ಮಾಡಿಕೊಂಡಿದ್ದ ನೇತ್ರಾವತಿ ಆ.22 ರಂದು ರಾತ್ರಿ ಊಟ ಮಾಡಿ ಮಲಗಿದ್ದು ಆ.23 ರಂದು ಬೆಳಗ್ಗೆ 5.30 ಕ್ಕೆ ಮನೆಯವರು ನೋಡಿದ್ದರು. ಮನೆಯವರೆಲ್ಲರೂ ಸೇರಿ ಅಕ್ಕಪಕ್ಕದವರ ಮನೆಗಳಲ್ಲಿ ಸಂಬಂಧಿಕರ ಮನೆಗಳಲ್ಲಿ ಪರಿಚಯದವರಲ್ಲಿ ವಿಚಾರಿಸಿದ್ದು ಈವರೆಗೂ ಪತ್ತೆಯಾಗಿರುವುದಿಲ್ಲ ಎಂದು ಅವರ ಅಕ್ಕ ವಿಜಯಲಕ್ಷ್ಮೀ

ಕಾಪು ; ಉದ್ಯೋಗದಲ್ಲಿದ್ದ ಯುವತಿ ನಾಪತ್ತೆ Read More »

ಇಂದು ಉಡುಪಿಗೆ ರಾಜ್ಯದ ರಾಜ್ಯಪಾಲರ ಆಗಮನ

ಸಮಗ್ರ ನ್ಯೂಸ್: ಉಡುಪಿ ಜಿಲ್ಲೆ ರಜತ ಮಹೋತ್ಸವ ಕಾರ್ಯಕ್ರಮಕ್ಕೆ ರಾಜ್ಯದ ರಾಜ್ಯಪಾಲರ ಆಗಮನ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿರುವುದರಿಂದ ಆ.25ರಂದು ಬೆಳಗ್ಗೆ 9ಗಂಟೆಯಿಂದ ರಾತ್ರಿ 10 ಗಂಟೆ ವರೆಗೆ ನಗರದಲ್ಲಿ ಸಂಚಾರದ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ. ಅಜ್ಜರಕಾಡು ಮೈದಾನ ಮುಂಭಾಗಕ್ಕೆ ಜಿಲ್ಲಾಡಳಿತದಿಂದ ನೀಡಲಾದ ಪಾಸ್ ಇರುವ ವಿಐಪಿ ವಾಹನಗಳಿಗೆ ಪುರಭವನದ ಪಕ್ಕದ ರಸ್ತೆಯಲ್ಲಿ, ಕಾರ್ಯಕ್ರಮಕ್ಕೆ ಆಗಮಿಸುವ ಕುಂದಾಪುರ, ಮಲ್ಪೆ, ಕಾಪು ಹಾಗೂ ಪಡುಬಿದ್ರೆ ಕಡೆಯಿಂದ ಆಗಮಿಸುವ ಸಾರ್ವಜನಿಕರ ವಾಹನಗಳಿಗೆ ಸೈಂಟ್ ಸಿಸಿಲಿ ಶಾಲೆಯ ಮೈದಾನದಲ್ಲಿ, ಅಲೆವೂರು, ಮೂಡುಬೆಳ್ಳೆ,

ಇಂದು ಉಡುಪಿಗೆ ರಾಜ್ಯದ ರಾಜ್ಯಪಾಲರ ಆಗಮನ Read More »

ಒಂದೇ ತರಗತಿಯ 3 ವಿದ್ಯಾರ್ಥಿಗಳು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

ಸಮಗ್ರ ನ್ಯೂಸ್: ಒಂದೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಮೂವರು ವಿದ್ಯಾರ್ಥಿನಿಯರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಹಿಂದುಳಿದ ವರ್ಗಗಳ ವಸತಿ ನಿಲಯದಲ್ಲಿ ಇದ್ದುಕೊಂಡು ಸರ್ಕಾರಿ ಪಿಯು ಕಾಲೇಜಿನಲ್ಲಿ ದ್ವಿತೀಯ ವರ್ಷದ ಕಲಾ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ಈ ವಿದ್ಯಾರ್ಥಿನಿಯರು ಮಂಗಳವಾರ ಸಂಜೆ ಇಲಿ ಪಾಷಾಣ ಸೇವಿಸಿದ್ದು, ಅಸ್ವಸ್ಥಗೊಂಡಿದ್ದ ಅವರನ್ನು ಮೊದಲಿಗೆ ಜೆಸಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳವಾರ ಸಂಜೆ

ಒಂದೇ ತರಗತಿಯ 3 ವಿದ್ಯಾರ್ಥಿಗಳು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ Read More »

ಮುಳ್ಳಯ್ಯನಗಿರಿಯಲ್ಲಿ ನಿರ್ಮಾಣವಾಗಲಿದೆ 21 ಅಡಿ ಎತ್ತರದ ಆಂಜನೇಯ

ಸಮಗ್ರ ನ್ಯೂಸ್: ಕರ್ನಾಟಕದ ಅತ್ಯಂತ ಎತ್ತರದ ಪ್ರದೇಶ ಮುಳ್ಳಯ್ಯನಗಿರಿ ತಪ್ಪಲಿನಲ್ಲಿ 21 ಅಡಿಯ ಬೃಹತ್ ಪರ್ವತಾಂಜನೇಯ ಮೂರ್ತಿ ನಿರ್ಮಾಣಗೊಳ್ಳಲಿದೆ. ಪಶ್ಚಿಮಘಟ್ಟಗಳ ಸಾಲಿನಲ್ಲಿರುವ ಚಿಕ್ಕಮಗಳೂರು ತಾಲೂಕಿನ ದತ್ತಪೀಠ ಮಾರ್ಗದ ಕವಿಕಲ್‍ಗಂಡಿ ಎಂಬ ಸ್ಥಳದಲ್ಲಿರುವ ಆಂಜನೇಯನ ಗುಡಿ ಬಳಿ 21 ಅಡಿ ಎತ್ತರದ ಆಂಜನೇಯ ನೆಲೆ ನಿಲ್ಲಲಿದ್ದಾನೆ. ಈಗಾಗಲೇ ಮೂರ್ತಿ ಕೆತ್ತನೆಗೆ ಶಾಸಕ ಸಿ.ಟಿ.ರವಿ ನೇತೃತ್ವದಲ್ಲಿ ಸಿದ್ಧತೆ ನಡೆದಿದ್ದು ತುಮಕೂರು ಜಿಲ್ಲೆ ಶಿರಾ ತಾಲೂಕಿನಿಂದ ಕೃಷ್ಣಶಿಲೆ ಕಲ್ಲುಗಳು ಕೂಡ ಚಿಕ್ಕಮಗಳೂರು ನಗರಕ್ಕೆ ಆಗಮಿಸಿವೆ. ನಗರದ ದ್ವಾರಬಾಗಿಲು ದಾಸರಹಳ್ಳಿ ಬಳಿ ಕಲ್ಲುಗಳಿಗೆ

ಮುಳ್ಳಯ್ಯನಗಿರಿಯಲ್ಲಿ ನಿರ್ಮಾಣವಾಗಲಿದೆ 21 ಅಡಿ ಎತ್ತರದ ಆಂಜನೇಯ Read More »