August 2022

ದರ್ಪ ತೋರಿದ ಪಿಎಸ್ಐ ಅಮಾನತುಗೊಳಿಸಿದ ಬಳ್ಳಾರಿ ಎಸ್ಪಿ

ಸಮಗ್ರ ನ್ಯೂಸ್: ಕುರುಗೋಡು ಪಿ ಎಸ್ ಐ ಆಗಿದ್ದ ಮಣಿಕಂಠ ಅವರನ್ನು ಬಳ್ಳಾರಿ ಎಸ್ ಪಿ ಸೈದುಲು ಅಡಾವತ್ ಅವರು ಅಮಾನತುಗೊಳಿಸಿ ಶುಕ್ರವಾರ ಆದೇಶ ಹೊರಡಿಸಿದ್ದಾರೆ. ಮೂರು ದಿನಗಳ ಹಿಂದೆ ಬ್ಯಾನರ್ ಹರಿದ ಪ್ರಕರಣಕ್ಕೆ ಸಂಬಂಧಿಸಿ ನಡೆದ ಸಾರ್ವಜನಿಕ ಸಭೆ ವೇಳೆ ಕಾನೂನು ಸುವ್ಯವಸ್ಥೆ ವಿಚಾರವಾಗಿ ಹೋದಾಗ ಸಾರ್ವಜನಿಕರ ಎದುರಲ್ಲೇ ವ್ಯಕ್ತಿಯೊಬ್ಬರ ಮೇಲೆ ಪಿ ಎಸ್ ಐ ಮಣಿಕಂಠ ಹಲ್ಲೆ ಮಾಡಿ ಅವಾಚ್ಯ ಶಬ್ದ ಗಳಿಂದ ನಿಂದಿಸಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ನಿನ್ನೆಯಿಂದ ವೈರಲ್ ಆಗಿತ್ತು. ದೂರು […]

ದರ್ಪ ತೋರಿದ ಪಿಎಸ್ಐ ಅಮಾನತುಗೊಳಿಸಿದ ಬಳ್ಳಾರಿ ಎಸ್ಪಿ Read More »

ರಾಜ್ಯದ ಆರು ಪೊಲೀಸ್ ಅಧಿಕಾರಿಗಳಿಗೆ ಕೇಂದ್ರ ಗೃಹ ಸಚಿವಾಲಯದಿಂದ ಪದಕ

ಸಮಗ್ರ ನ್ಯೂಸ್: ಪೊಲೀಸ್ ಇಲಾಖೆಯಲ್ಲಿ ಉತ್ತಮ ತನಿಖೆ ನಡೆಸಿದ ಪೊಲೀಸರಿಗೆ ನೀಡುವ ಕೇಂದ್ರ ಗೃಹ ಸಚಿವಾಲಯದ ಪದಕಕ್ಕೆ ಕರ್ನಾಟಕ ರಾಜ್ಯದ ಆರು ಪೊಲೀಸ್ ಅಧಿಕಾರಿಗಳು ಆಯ್ಕೆಯಾಗಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಪ್ರತಿವರ್ಷ ನೀಡುವ ಈ ಉನ್ನತ ಪದಕಕ್ಕೆ ದೇಶದ ಎಲ್ಲಾ ರಾಜ್ಯಗಳಲ್ಲಿ ಉತ್ತಮ ಕೆಲಸ ಮಾಡಿದ ಅಧಿಕಾರಿಗಳನ್ನು ಆಯ್ಕೆ ಮಾಡಲಾಗುತ್ತದೆ. ಸದ್ಯ ಈ ವರ್ಷ ದೇಶದಾದ್ಯಂತ ಸಿವಿಲ್ ಪೊಲೀಸ್ ಸಿಬಿಐ, ಎನ್ ಸಿಬಿ ಸೇರಿ 151 ಅಧಿಕಾರಿಗಳನ್ನು ಈ ಪದಕಕ್ಕೆ ಆಯ್ಕೆ ಮಾಡಲಾಗಿದ್ದು, ಪಟ್ಟಿ ಬಿಡುಗಡೆಯಾಗಿದೆ. ಈ

ರಾಜ್ಯದ ಆರು ಪೊಲೀಸ್ ಅಧಿಕಾರಿಗಳಿಗೆ ಕೇಂದ್ರ ಗೃಹ ಸಚಿವಾಲಯದಿಂದ ಪದಕ Read More »

ಒಂದು ಸಿನಿಮಾದ ಬೆಲೆ ಧ್ವಜಕ್ಕೆ ಇಲ್ವೇ? ಜಾಲತಾಣಗಳಲ್ಲಿ ಚರ್ಚೆ ಹುಟ್ಟುಹಾಕಿದ ಧ್ವಜ‌ ಮಾರಾಟ ವಿಷಯ

ಸಮಗ್ರ ನ್ಯೂಸ್: ದೇಶಾದ್ಯಂತ ಹರ್ ಘರ್ ತಿರಂಗಾ ಅಭಿಯಾನದಡಿ ತ್ರಿವರ್ಣ ಧ್ವಜಗಳನ್ನು ಮಾರಾಟ ಮಾಡುತ್ತಿದ್ದು, ಈ‌ ಧ್ವಜ ಮಾರಾಟವು ಈಗ ಜಾಲತಾಣಗಳಲ್ಲಿ ಚರ್ಚಾ ವಸ್ತುವಾಗಿದೆ. ಧ್ವಜವೊಂದಕ್ಕೆ 20 ರಿಂದ 25 ರೂ ನೀಡಿ ಖರೀದಿ ಮಾಡಲಾಗುತ್ತಿದ್ದು, ಸಿನಿಮಾವೊಂದರ ಟಿಕೆಟ್ ಉಚಿತ ಹಂಚುತ್ತಿದ್ದ ಬಿಜೆಪಿ ಮತ್ತು ಆರ್ ಎಸ್ ಎಸ್ ನಾಯಕರ ಕುರಿತಂತೆ ಟೀಕೆ ಮತ್ತು ಪ್ರತ್ಯಾಸ್ತ್ರಗಳು ಬಳಕೆಯಾಗುತ್ತಿವೆ. ಈ ಹಿಂದೆ ತೆರೆಕಂಡಿದ್ದ ‘ದಿ ಕಾಶ್ಮೀರಿ ಫೈಲ್ಸ್’ ಸಿನಿಮಾ ವೀಕ್ಷಣೆಗೆ ಶಾಸಕರು, ಸಂಸದರು ಸೇರಿದಂತೆ ಹಲವು ಬಿಜೆಪಿ ಮುಖಂಡರು

ಒಂದು ಸಿನಿಮಾದ ಬೆಲೆ ಧ್ವಜಕ್ಕೆ ಇಲ್ವೇ? ಜಾಲತಾಣಗಳಲ್ಲಿ ಚರ್ಚೆ ಹುಟ್ಟುಹಾಕಿದ ಧ್ವಜ‌ ಮಾರಾಟ ವಿಷಯ Read More »

ಸೊಸೆಯ ತಲೆಯನ್ನೇ ಕತ್ತರಿಸಿ ಪೊಲೀಸ್ ಠಾಣೆಗೆ ತಂದ ಅತ್ತೆ

ಸಮಗ್ರ ನ್ಯೂಸ್: ಮಹಿಳೆಯೊಬ್ಬಳು ತನ್ನ ಸೊಸೆಯ ಕತ್ತರಿಸಿ, ಆ ತಲೆಯೊಂದಿಗೆ ಪೊಲೀಸ್ ಠಾಣೆಗೆ ಬಂದಿರುವ ಆಘಾತಕಾರಿ ಘಟನೆ ಆಂಧ್ರಪ್ರದೇಶದ ಅಣ್ಣಮಯ್ಯ ಜಿಲ್ಲೆಯಲ್ಲಿ ನಡೆದಿದೆ. ಆಂಧ್ರದ ರಾಯಚೋಟಿ ಪುರಸಭಾ ವ್ಯಾಪ್ತಿಯ ಕೊತ್ತಕೋಟ ರಾಮಪುರಂ ನಿವಾಸಿ ಸುಬ್ಬಮ್ಮ ಎಂಬ ಮಹಿಳೆ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ತನ್ನ ಸೊಸೆ ವಸುಂಧರಾಳನ್ನು ಕೊಂದಿರುವುದಾಗಿ ತಪ್ಪೊಪ್ಪಿಕೊಂಡಿದ್ದು, ಶರಣಾಗಲು ಪೊಲೀಸ್ ಠಾಣೆಗೆ ಬಂದಿದ್ದಾಳೆ. ಅಣ್ಣಮಯ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರ್ಷವರ್ಧನ್ ರಾಜು ಪ್ರಕಾರ, ಆರೋಪಿಗಳು ಆಸ್ತಿ ವಿವಾದದಿಂದಾಗಿ ಸೊಸೆಯ ತಲೆ ಕತ್ತರಿಸಿ ಕೊಂದಿದ್ದಾರೆ. ಮೃತ ಮಹಿಳೆ

ಸೊಸೆಯ ತಲೆಯನ್ನೇ ಕತ್ತರಿಸಿ ಪೊಲೀಸ್ ಠಾಣೆಗೆ ತಂದ ಅತ್ತೆ Read More »

ಹಂತಕರ ಅಡಗುದಾಣಗಳಾಗುತ್ತಿವೆಯೇ ಕೇರಳದ ಮಸೀದಿಗಳು? ಹಣ, ಆಶ್ರಯ ನೀಡಿದವರಿಗೆ ಶಿಕ್ಷೆ ಏನು?

ಸಮಗ್ರ ನ್ಯೂಸ್: ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಬಂಧಿಸಿದಂತೆ ತನಿಖೆ ವೇಳೆ ಒಂದೊಂದೇ ಅಂಶಗಳು ಬೆಳಕಿಗೆ ಬರುತ್ತಿವೆ. ಈ ನಡುವೆ ಸದ್ದು ಮಾಡ್ತಿರೋದು ಹಂತಕರು ಮಸೀದಿಯಲ್ಲಿ ಅಡಗಿ ಕುಳಿತ ವಿಚಾರ. ಪ್ರವೀಣ್ ನೆಟ್ಟಾರುರವರನ್ನು ಹತ್ಯೆಗೈದ ಮೂವರು ಹಂತಕರು ಕೇರಳಕ್ಕೆ ಪರಾರಿಯಾಗಿ‌ ಅಡಗಿಕೊಳ್ಳಲು ಆಶ್ರಯ ಕೊಟ್ಟಿದ್ದು ಅಲ್ಲಿನ ಒಂದು ಮಸೀದಿ. ಹೀಗೆ ಮಸೀದಿಗೆ ತೆರಳಿ ಅಲ್ಲಿ ಅಡಗಿಕೊಳ್ಳಲು‌ ಮಸೀದಿಯ ಮುಖ್ಯಸ್ಥರು ಹೇಗೆ ಸಹಾಯ ಮಾಡಿದರೋ ಗೊತ್ತಿಲ್ಲ? ಆದರೆ‌ ಹಂತಕರೆಂದು ಗೊತ್ತಿದ್ದೂ ಅವರಿಗೆ ಸಹಾಯ‌ ಮಾಡಿದ್ದರೆ

ಹಂತಕರ ಅಡಗುದಾಣಗಳಾಗುತ್ತಿವೆಯೇ ಕೇರಳದ ಮಸೀದಿಗಳು? ಹಣ, ಆಶ್ರಯ ನೀಡಿದವರಿಗೆ ಶಿಕ್ಷೆ ಏನು? Read More »

ಧರ್ಮಸ್ಥಳ: ಜನಜಾಗೃತಿ ವೇದಿಕೆಯಿಂದ ಹಂಚಿದ ಧ್ವಜ ವಿರೂಪ!?

ಸಮಗ್ರ ನ್ಯೂಸ್: ಅಖಿಲ ಭಾರತ‌ ಜನಜಾಗೃತಿ ವೇದಿಕೆಯಿಂದ ಧರ್ಮಸ್ಥಳದಲ್ಲಿ ನಡೆದ ನವಜೀವನ ಸದಸ್ಯರ ಶತದಿನೋತ್ಸವ ಕಾರ್ಯಕ್ರಮದಲ್ಲಿ ಹಂಚಲ್ಪಟ್ಟ ತ್ರಿವರ್ಣ ಧ್ವಜಗಳು ವಿರೂಪಗೊಂಡಿವೆ ಎಂಬ ಸುದ್ದಿಯೊಂದು ವೈರಲ್ ಆಗುತ್ತಿದೆ. ಇಂದು ಧರ್ಮಾಧಿಕಾರಿ ಪೂಜ್ಯ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ‘ಹರ್ ಘರ್ ತಿರಂಗಾ’ ಅಭಿಯಾನಕ್ಕೆ ಯೋಜನೆ‌ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಚಾಲನೆ ನೀಡಿದರು. ಈ ವೇಳೆ ನವಜೀವನ ಸದಸ್ಯರು ಮತ್ತು ಧ.ಗ್ರಾ.ಯೋಜನೆಯ ಸದಸ್ಯರಿಗೆ ನೀಡಲಾದ ಧ್ವಜಗಳಲ್ಲಿ ರಾಷ್ಟ್ರಧ್ವಜವನ್ನು ವಿರೂಪಗೊಳಿಸಲಾಗಿದೆ ಎಂದು ಹೇಳಲಾಗಿದೆ. ಇದಕ್ಕೆ ಪೂರಕವಾಗಿ ಕೆಲವು ಧ್ವಜಗಳಲ್ಲಿ ಅಶೋಕ

ಧರ್ಮಸ್ಥಳ: ಜನಜಾಗೃತಿ ವೇದಿಕೆಯಿಂದ ಹಂಚಿದ ಧ್ವಜ ವಿರೂಪ!? Read More »

ಶಿರಸಿ ಮಾರಿಕಾಂಬೆ ಭಕ್ತರಿಗೆ ಸಿಹಿ ಸುದ್ದಿ. ದೇವಾಲಯದ ಕೀರ್ತಿಗೆ ಸೇರಿತು ಮತ್ತೊಂದು ಗರಿಮೆ

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕು ಎಂದರೆ ಸಾಕು ಮೊದಲು ನೆನಪಾಗುವುದೇ ಪುರಾಣ ಪ್ರಸಿದ್ಧ ಶ್ರೀ ಮಾರಿಕಾಂಬಾ ದೇವಾಲಯ. ಶಿರಸಿ ಮಾರಿಕಾಂಬೆ ಎರಡು ವರ್ಷಕ್ಕೊಮ್ಮೆ ನಡೆಯುವ ಜಾತ್ರೆ ಹಾಗು ಮಾರಿಕೋಣ ಹೀಗೆ ಹಲವಾರಿ ವಿಷಯಕ್ಕೆ ಪ್ರಸಿದ್ದಿ. ಇದೀಗ ಮಾರಿಕಾಂಬಾ ದೇವಾಲಯಕ್ಕೆ ಮತ್ತೊಂದು ಹಿರಿಮೆ ದೊರೆತಿದೆ. ಇದೀಗ ಮಾರಿಕಾಂಬಾ ದೇವಸ್ಥಾನದಲ್ಲಿ ಭಕ್ತರಿಗೆ ನೀಡಲಾಗುವ ಪ್ರಸಾದಕ್ಕೆ ಬಿಎಚ್​​ಒಜಿ ಪ್ರಮಾಣ ದೊರಕಿದ್ದು ದೇಗುಲದ ಹಿರಿಮೆ ಹೆಚ್ಚಾಗಿದೆ. ದೇವಸ್ಥಾನಗಳಲ್ಲಿ ಪ್ರಸಾದ ರೂಪದಲ್ಲಿ ನೀಡಲಾಗುವ ಆಹಾರದ ಗುಣಮಟ್ಟ, ದೇವರಿಗೆ ಅರ್ಪಿಸಲಾಗುವ ನೈವೇದ್ಯದ ಗುಣಮಟ್ಟ , ಪ್ರಸಾದ

ಶಿರಸಿ ಮಾರಿಕಾಂಬೆ ಭಕ್ತರಿಗೆ ಸಿಹಿ ಸುದ್ದಿ. ದೇವಾಲಯದ ಕೀರ್ತಿಗೆ ಸೇರಿತು ಮತ್ತೊಂದು ಗರಿಮೆ Read More »

ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ; ಇಬ್ಬರು ಮೃತ್ಯು

ಶಿವಮೊಗ್ಗ :ಶಿವಮೊಗ್ಗ ಹೊರವಲಯದ ಅಬ್ಬಲಗೆರೆ ಬಳಿ ಅಪಘಾತ ಸಂಭವಿಸಿ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ ಘಟನೆಯೊಂದು ವರದಿಯಾಗಿದೆ. ನ್ಯಾಮತಿ ಮೂಲದ ರಾಮ್ ಕುಮಾರ್ 22 ಹಾಗು ಮಲ್ಲಿಕಾರ್ಜುನ 30 ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಐಪಿಸಿ ಕಂಪನಿಯಲ್ಲಿ ಕಾರ್ಮಿಕ ರಾಗಿರುವ ಇವರಿಬ್ಬರು ರಾತ್ರಿ ಪಾಳಿ ಕೆಲಸ ಮಾಡಿ, ಮುಂಜಾನೆ ಶಿಫ್ಟ್ ಮುಗಿಸಿಕೊಂಡು ಮನೆಗೆ ವಾಪಸ್ಸಾಗಲು ಮುಂದಾಗಿದ್ದರು. ಬೈಕ್ ಚಲಾಯಿಸುತ್ತಿದ್ದವರು ನಿದ್ದೆಯ ಮಂಪರಿನಲ್ಲಿದ್ದರು. ಈ ವೇಳೆ ಅಬ್ಬಲಗೆರೆ ಬಳಿ ಡಿಸೇಲ್ ಖಾಲಿಯಾಗಿ ಲಾರಿಯೊಂದು ರಸ್ತೆ ಬದಿ ನಿಂತಿತ್ತು. ಬೈಕ್ ನಲ್ಲಿ ಬಂದವರಿಗೆ ತಕ್ಷಣಕ್ಕೆ

ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ; ಇಬ್ಬರು ಮೃತ್ಯು Read More »

ಗೋವಾಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಮರಕ್ಕೆ ಡಿಕ್ಕಿ; 10ಕ್ಕೂ ಹೆಚ್ಚು ಮಂದಿಗೆ ಗಾಯ

ಸಮಗ್ರ ನ್ಯೂಸ್ : ಗೋವಾಗೆ ತೆರಳುತ್ತಿದ್ದ ಖಾಸಗಿ ಬಸ್ ಮರಕ್ಕೆ ಡಿಕ್ಕಿಯಾಗಿರುವ ಘಟನೆ ರಾಮನಗರ-ಬೆಳಗಾವಿ ರಾಜ್ಯ ಹೆದ್ದಾರಿಯ ಕುಂಬಾರ್ಡಾ ಬಳಿ ನಡೆದಿದೆ. ಬೆಂಗಳೂರಿನಿಂದ ಗೋವಾಗೆ ತೆರಳುತ್ತಿದ್ದ ಖಾಸಗಿ ಬಸ್ ಖಾನಾಪುರ ತಾಲೂಕಿನ ಕುಂಬಾರ್ಡಾ ಗ್ರಾಮದ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಬಸ್​ ಚಾಲಕ, ನಿರ್ವಾಹಕ ಸೇರಿ 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.ಅಪಘಾತ ಸ್ಥಳಕ್ಕೆ ಲೋಂಡಾ ಉಪ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಗೋವಾಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಮರಕ್ಕೆ ಡಿಕ್ಕಿ; 10ಕ್ಕೂ ಹೆಚ್ಚು ಮಂದಿಗೆ ಗಾಯ Read More »

ಮಂಗಳೂರು: ಗೆಳೆಯನ ಪ್ರಾಣ ಕಸಿದ ಹೆದ್ದಾರಿ ಗುಂಡಿ| ಮಿತ್ರನ ಸಾವಿಗೆ ನ್ಯಾಯ ಕೊಡಿಸಲು ಏಕಾಂಗಿ ಹೋರಾಟ

ಸಮಗ್ರ ನ್ಯೂಸ್: ನಗರದೊಳಗಿನ ಮತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿನ ಗುಂಡಿಗಳ ದುರಸ್ತಿ ಮಾಡುವಂತೆ ಹಾಗೂ ಸಮರ್ಪಕ ರಸ್ತೆಗೆ ಆಗ್ರಹಿಸಿ ಯುವಕನೋರ್ವ ಮಂಗಳೂರು ಮಹಾನಗರ ಪಾಲಿಕೆ ಮುಂಭಾಗ ಏಕಾಂಗಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ಮಂಗಳೂರಿನ ಲಿಖಿತ್ ಎಂಬ ಯುವಕ ಈ ಏಕಾಂಗಿ ಹೋರಾಟ ನಡೆಸಿದ್ದು, ಇತ್ತೀಚೆಗೆ ನಂತೂರಿನಲ್ಲಿ ರಸ್ತೆಗುಂಡಿಗೆ ಬಿದ್ದು ಮೃತಪಟ್ಟ ಗೆಳೆಯ ಆತಿಷ್‌ನ ನ್ಯಾಯಕ್ಕಾಗಿ ಆಗ್ರಹಿಸಿ ಈ ವಿನೂತನ ಶೈಲಿಯ ಪ್ರತಿಭಟನೆ ನಡೆಸಿದ್ದಾನೆ. ಈ ವೇಳೆ ಮಾಧ್ಯಮದ ಜೊತೆ ಮಾತನಾಡಿದ ಲಿಖಿತ್, ಮಿತ್ರ ಆತಿಷ್ ನಂತೂರ್‌ನಲ್ಲಿ ರಸ್ತೆಯಲ್ಲಿದ್ದ

ಮಂಗಳೂರು: ಗೆಳೆಯನ ಪ್ರಾಣ ಕಸಿದ ಹೆದ್ದಾರಿ ಗುಂಡಿ| ಮಿತ್ರನ ಸಾವಿಗೆ ನ್ಯಾಯ ಕೊಡಿಸಲು ಏಕಾಂಗಿ ಹೋರಾಟ Read More »