August 2022

ಭೀಕರ ರಸ್ತೆ ಅಪಘಾತ ಮಹಾರಾಷ್ಟ್ರದ ಮಾಜಿ ಸಚಿವ ನಿಧನ

ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇನಲ್ಲಿ ಇಂದು ಬೆಳಗ್ಗೆ ಸಂಭವಿಸಿದ ಅಪಘಾತದಲ್ಲಿ ಶಿವಸಂಗ್ರಾಮ್ ಮುಖ್ಯಸ್ಥ ಹಾಗೂ ಮಾಜಿ ಸಚಿವ ವಿನಾಯಕ್ ಮೇಟೆ ಮೃತಪಟ್ಟಿದ್ದಾರೆ. ರವಿವಾರ ಮುಂಜಾನೆ ಮಡಪ್ ಸುರಂಗದ ಬಳಿ ಕಾರು ಅಪಘಾತಗೊಂಡಿದ್ದು ಕಾರಿನಲ್ಲಿದ್ದ ಮಾಜಿ ಸಚಿವ ಸೇರಿ ಭದ್ರತಾ ಸಿಬ್ಬಂದಿಗಳೂ ಗಾಯಗೊಂಡಿದ್ದಾರೆ. ವಿನಾಯಕ್ ಅವರಿಗೆ ತಲೆ , ಕೈ, ಕಾಲು ಸೇರಿದಂತೆ ಹಲವೆಡೆ ತೀವ್ರ ಗಾಯಗೊಂಡ ಹಿನ್ನೆಲೆ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ. ನಿಧನರಾದ ವಿನಾಯಕ್ ಅವರು ಮರಾಠ ಮೀಸಲಾತಿ ವಿಚಾರಕ್ಕೆ ಸಂಬಂಧಪಟ್ಟಂತೆ ಚರ್ಚಿಸಲು ಮುಂಬೈಗೆ […]

ಭೀಕರ ರಸ್ತೆ ಅಪಘಾತ ಮಹಾರಾಷ್ಟ್ರದ ಮಾಜಿ ಸಚಿವ ನಿಧನ Read More »

ಬಿಲಿಯನೇರ್ ಉದ್ಯಮಿ ಷೇರು ಮಾರುಕಟ್ಟೆಯ ದಿಗ್ಗಜ ಅಸ್ತಂಗತ

ಶೇರು ಮಾರುಕಟ್ಟೆಯ ಅತೀ ದೊಡ್ಡ ಹೆಸರು, ಬಿಲಿಯನೇರ್ ಉದ್ಯಮಿ ರಾಕೇಶ್ ಜುಂಜುನ್‌ವಾಲಾ ಭಾನುವಾರ ಬೆಳಿಗ್ಗೆ ನಿಧನರಾದರು. ಬಿಲಿಯನೇರ್ ಉದ್ಯಮಿ, ಷೇರು ವ್ಯಾಪಾರಿ ಮತ್ತು ಹೂಡಿಕೆದಾರ ರಾಕೇಶ್​ ಜುಂಜುನ್​ವಾಲಾ (62) ಅವರು ಹೃದಯಾಘಾತದಿಂದ ಭಾನುವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಮುಂಬೈನ ಬ್ರೀಚ್​ ಕ್ಯಾಂಡಿ ಆಸ್ಪತ್ರೆಯಲ್ಲಿ ಬೆಳಗ್ಗೆ 6.45ರ ಸುಮಾರಿಗೆ ವಿಧಿವಶರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಶೇರು ಮಾರುಕಟ್ಟೆಯ ತನ್ನ ಹಿಡಿತದ ಕಾರಣದಿಂದ ರಾಕೇಶ್ ಜುಂಜುನ್ ವಾಲಾ ಅವರನ್ನು “ಬಿಗ್ ಬುಲ್ ಆಫ್ ಇಂಡಿಯಾ” ಮತ್ತು “ಕಿಂಗ್ ಆಫ್ ಬುಲ್ ಮಾರ್ಕೆಟ್”

ಬಿಲಿಯನೇರ್ ಉದ್ಯಮಿ ಷೇರು ಮಾರುಕಟ್ಟೆಯ ದಿಗ್ಗಜ ಅಸ್ತಂಗತ Read More »

ಸುಳ್ಯ: ಜಾಲತಾಣಗಳಲ್ಲಿ ಸಾಮಾಜಿಕ ಕಳಕಳಿ ತೆರೆದಿಟ್ಟ ಯುವಕ| ಉರಿ ತಡೆದುಕೊಳ್ಳಲಾಗದೆ ‘ಕೀಬೋರ್ಡ್ ವಾರಿಯರ್’ ಎಂದ ನ.ಪಂ ಅಧ್ಯಕ್ಷ|

ಸಮಗ್ರ ನ್ಯೂಸ್: ಸುಳ್ಯ ನಗರದಲ್ಲಿ ಹಲವಾರು ಸಮಸ್ಯೆಗಳ ಜೊತೆಗೆ ಜನ ಬದುಕುತ್ತಿದ್ದಾರೆ. ಮನವಿ ಕೊಟ್ಟರೂ ಆಮೆ ನಡಿಗೆಯ ಅಭಿವೃದ್ಧಿ ಮಾಡುತ್ತಿರುವ ಸ್ಥಳೀಯ ನ.ಪಂ‌ ಆಡಳಿತ ಜನರ ಸಮಸ್ಯೆಗಳನ್ನು ಆಲಿಸುವತ್ತ ಚಿಂತಿಸುತ್ತಿಲ್ಲ ಎಂಬುದು ನಗರವಾಸಿಗಳ ಆರೋಪ. ಆದರೆ ಕೆಲವೊಮ್ಮೆ ಇದರಿಂದ ಜನ ರೋಸಿ ಹೋದಾಗ ಜಾಲತಾಣಗಳಲ್ಲಿ ಸಮಸ್ಯೆಗಳ ಕುರಿತಂತೆ ಮಾತನಾಡುತ್ತಾರೆ. ಆದರೆ ನ.ಪಂ‌ ಮಾತ್ರ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬದಲು ಜನರನ್ನೇ ಅಪರಾದಿಗಳನ್ನಾಗಿ ಮಾಡುತ್ತಿದೆ. ಇದೀಗ ಮತ್ತೊಬ್ಬ ಯುವಕ ಸುಳ್ಯ ನ.ಪಂ‌ ಆಡಳಿತದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. https://m.facebook.com/story.php?story_fbid=640038614142407&id=100044088233880&sfnsn=wiwspmo

ಸುಳ್ಯ: ಜಾಲತಾಣಗಳಲ್ಲಿ ಸಾಮಾಜಿಕ ಕಳಕಳಿ ತೆರೆದಿಟ್ಟ ಯುವಕ| ಉರಿ ತಡೆದುಕೊಳ್ಳಲಾಗದೆ ‘ಕೀಬೋರ್ಡ್ ವಾರಿಯರ್’ ಎಂದ ನ.ಪಂ ಅಧ್ಯಕ್ಷ| Read More »

ಸ್ವಾತಂತ್ರ್ಯದ ನಡಿಗೆಗೆ ಅಳವಡಿಸಿದ ಟಿಪ್ಪು ಸುಲ್ತಾನ್ ಪ್ಲೆಕ್ಸ್ ಹರಿದ ಕಿಡಿಗೇಡಿಗಳು| ಬೆಂಗಳೂರಿನಲ್ಲಿ ಕಟ್ಟೆಚ್ಚರ

ಸಮಗ್ರ ನ್ಯೂಸ್: ನಗರದ ಕೆ.ಆರ್‌. ಸರ್ಕಲ್‌ ಹಾಗೂ ಹಡ್ಸನ್‌ ಸರ್ಕಲ್‌ನಲ್ಲಿ ಕಾಂಗ್ರೆಸ್‌ ಕಾಲ್ನಡಿಗೆ ಜಾಥಕ್ಕೆ ಹಾಕಿದ ಕಾಂಗ್ರೆಸ್‌ ಟಿಪ್ಪು ಸುಲ್ತಾನ್‌ ಫೆಕ್ಸ್‌ ಗಳನ್ನು ಕಿಡಿಗೇಡಿಗಳು ಹರಿದುಹಾಕಿ ಕೃತ್ಯವೆಸಗಿದ ಘಟನೆ ಬೆಳಕಿಗೆ ಬಂದಿದೆ. ಈ ಘಟನಾ ಸ್ಥಳಕ್ಕೆ ಹಲಸೂರು ಗೇಟು ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಹೆಚ್ಚಿನ ಸಂಖ್ಯೆಯ ಪೊಲೀಸರ ನಿಯೋಜನೆ ಮಾಡಲಾಗಿದೆ. ಈ ಬಗ್ಗೆ ಮಾತನಾಡಿದ ಮಧ್ಯಾಹ್ನ 12 ಗಂಟೆಗೆ ಆರಂಭವಾಗುತ್ತದೆ. ಸ್ವಾತಂತ್ರ್ಯ ನಡಿಗೆ ಬರುವವರಿಗೆ ಉಚಿತ ಮೆಟ್ರೋ ಅವಕಾಶ ಕಲ್ಪಿಸಲಾಗಿದೆ. ಸ್ವಾತಂತ್ರ್ಯ

ಸ್ವಾತಂತ್ರ್ಯದ ನಡಿಗೆಗೆ ಅಳವಡಿಸಿದ ಟಿಪ್ಪು ಸುಲ್ತಾನ್ ಪ್ಲೆಕ್ಸ್ ಹರಿದ ಕಿಡಿಗೇಡಿಗಳು| ಬೆಂಗಳೂರಿನಲ್ಲಿ ಕಟ್ಟೆಚ್ಚರ Read More »

ದ್ವಾದಶ ರಾಶಿಗಳ ವಾರ ಭವಿಷ್ಯ

ಮೇಷ:ಕಡೆಯ ಭಾಗದ ಶ್ರಾವಣವು ಕೃಷ್ಣ ಪದಲ್ಲಿ ನಡೆದು ಚಂದ್ರ ಬಲವು, ಗುರು ಬಲವು ಇಲ್ಲದೆ ಕಾರ್ಯಗಳಲ್ಲಿ ಆತಂಕ ತರುತ್ತದೆ. ಕೆಲಸಗಳಲ್ಲಿ ತೃಪ್ತಿ, ಸಂತೋಷ ನಿರೀಕ್ಷಿತ ಮಟ್ಟದಲ್ಲಿ ಕೊಡಲಾಗುವುದಿಲ್ಲ. ಗುರು ಪ್ರಾರ್ಥನೆಯೊಂದಿಗೆ ಗುರು ವಂದನೆ ಸಲ್ಲಿಸಿ. ಸಾಧ್ಯವಾದಲ್ಲಿ ದಂಪತಿ ಗಳಿಗೆ ಇಚ್ಛಾ ಭೋಜನ ಮಾಡಿಸಿದರೆ ಕಾರ್ಯಗಳಲ್ಲಿ ವಿಘ್ನಗಳು ನಿವಾರಣೆಯಾಗುತ್ತವೆ. ವೃಷಭವೃಷಭ ರಾಶಿಯಲ್ಲಿ ಅಂಗಾರಕನು ಇದ್ದು, ರಾಶ್ಯಾಧಿಪತಿ ಶುಕ್ರನು ಕಟಕ ರಾಶಿಯಲ್ಲಿದ್ದಾನೆ. ರವಿ ಸಂಯುಕ್ತನಾಗಿದ್ದು ಅನನ್ಯವಾದ, ದೃಢವಾದ ಭಕ್ತಿಯನ್ನು ದೇವರಲ್ಲಿ ಇರಿಸಿ, ಸುಬ್ರಹ್ಮಣ್ಯನನ್ನು ಬಲವಾಗಿ ನಂಬಿದರೆ ಕೆಲಸಗಳು ಮುಂದೆ ಸಾಗುತ್ತವೆ.

ದ್ವಾದಶ ರಾಶಿಗಳ ವಾರ ಭವಿಷ್ಯ Read More »

ಯಾವುದೇ ವಾಹನದ ಮೇಲೆ ಭಾರತದ ಧ್ವಜ ಹೊದಿಸುವ ಮೊದಲು ಎಚ್ಚರ|ಮೂರು ವರ್ಷ ಜೈಲು ಶಿಕ್ಷೆ ತಪ್ಪಿದಲ್ಲ!

ನವದೆಹಲಿ; ಭಾರತವು ಈ ವರ್ಷ ಆಗಸ್ಟ್ 15 ರಂದು 75 ನೇ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿದೆ ಮತ್ತು ‘ಆಜಾದಿ ಕಾ ಅಮೃತ್ ಮಹೋತ್ಸವ’ ಆಚರಿಸಲು ‘ಹರ್ ಘರ್ ತಿರಂಗ’ ಅಭಿಯಾನದ ಭಾಗವಾಗಿ 75ನೇ ಸ್ವಾತಂತ್ರ್ಯ ದಿನಾಚರಣೆಗೆ ತಮ್ಮ ಮನೆಯಲ್ಲಿ ಭಾರತೀಯ ರಾಷ್ಟ್ರಧ್ವಜವನ್ನು ಹಾರಿಸುವಂತೆ ಪ್ರಧಾನಿ ನರೇಂದ್ರ ಮೋದಿ ನಾಗರಿಕರನ್ನು ಒತ್ತಾಯಿಸಿದ್ದಾರೆ. ಆದರೆ ಕಾರು, ಬೈಕ್ ಅಥವಾ ಇತರ ಯಾವುದೇ ವಾಹನದ ಮೇಲೆ ಭಾರತದ ಧ್ವಜವನ್ನು ಹೊದಿಸಿದರೆ ನಿಮ್ಮನ್ನು ಜೈಲಿಗೆ ಹಾಕಬಹುದು. ಆಗಸ್ಟ್ 2 ರಿಂದ 15 ರ

ಯಾವುದೇ ವಾಹನದ ಮೇಲೆ ಭಾರತದ ಧ್ವಜ ಹೊದಿಸುವ ಮೊದಲು ಎಚ್ಚರ|ಮೂರು ವರ್ಷ ಜೈಲು ಶಿಕ್ಷೆ ತಪ್ಪಿದಲ್ಲ! Read More »

ಮಂಗಳೂರು: ಟ್ರಾಫಿಕ್ ಪೊಲೀಸ್ ಜೊತೆ ಕಿರಿಕ್ ಮಾಡಿದ ಸಿಟಿಬಸ್ ಸಿಬ್ಬಂದಿ| ಓರ್ವ ಚಾಲಕ ಪೊಲೀಸ್ ವಶ

ಸಮಗ್ರ ನ್ಯೂಸ್: ಮಂಗಳೂರು ನಗರ ಹೊರವಲಯದ ತಲಪಾಡಿಯಲ್ಲಿ ಸಿಟಿ ಬಸ್‌ ಸಿಬ್ಬಂದಿ ಹಾಗೂ ಸಂಚಾರಿ ಪೊಲೀಸರ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಸಂಚಾರ ರದ್ದುಗೊಳಿಸಿ ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಓರ್ವ ಚಾಲಕನನ್ನು ಪೊಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ. ದಕ್ಷಿಣ ಸಂಚಾರಿ ಪೊಲೀಸ್‌ ಠಾಣೆಯ ಎಎಸ್‌ಐ ಆಲ್ಬಟ್೯ ಲಸ್ರಾದೋ ನೇತೃತ್ವದಲ್ಲಿ ಇಂದು ಬೆಳಗ್ಗೆ ತಲಪಾಡಿ ಚೆಕ್‌ಪೋಸ್ಟ್‌ ಬಳಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಓವರ್‌ ಸ್ಪೀಡ್‌ನಲ್ಲಿ ತೆರಳುತ್ತಿದೆ ಎಂದು ಖಾಸಗಿ ಬಸ್‌ನ ಫೋಟೋ ತೆಗೆದು

ಮಂಗಳೂರು: ಟ್ರಾಫಿಕ್ ಪೊಲೀಸ್ ಜೊತೆ ಕಿರಿಕ್ ಮಾಡಿದ ಸಿಟಿಬಸ್ ಸಿಬ್ಬಂದಿ| ಓರ್ವ ಚಾಲಕ ಪೊಲೀಸ್ ವಶ Read More »

ಮಡಿಕೇರಿ: ನಿಯಂತ್ರಣ ತಪ್ಪಿದ ಬಸ್ ಚರಂಡಿಗೆ| 11 ಮಂದಿ ಗಂಭೀರ

ಸಮಗ್ರ ನ್ಯೂಸ್: ಮಡಿಕೇರಿಯಲ್ಲಿ ಡೆಡ್ಲಿ ಆ್ಯಕ್ಸಿಡೆಂಟ್​ ನಡೆದಿದ್ದು, ಇಲ್ಲಿನ ಆನೆಕಾಡು ತಿರುವಿನಲ್ಲಿ ಘಟನೆ ಸಂಭವಿಸಿದೆ. ಸರ್ಕಾರಿ ಬಸ್​ನಲ್ಲಿ 40 ಮಂದಿ ಪ್ರಯಾಣ ನಡೆಸುತ್ತಿದ್ದು, 11 ಮಂದಿಗೆ ಗಂಭೀರ ಗಾಯಗಳಾಗಿದೆ. ಹಾಸನದಿಂದ ಮಡಿಕೇರಿಗೆ ಸರ್ಕಾರಿ ಬಸ್​ ತೆರಳುತ್ತಿದ್ದು, ಆನೆಕಾಡು ಇಳಿಜಾರಿನಲ್ಲಿ ನಿಯಂತ್ರಣ ತಪ್ಪಿದೆ. ಬಸ್​ನಲ್ಲಿದ್ದ 11 ಮಂದಿಗೆ ಗಂಭೀರ ಗಾಯಗಳಾಗಿದೆ. ಗಾಯಾಳುಗಳು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನಾ ಸ್ಥಳಕ್ಕೆ ಶಾಸಕ ಅಪ್ಪಚ್ಚು ರಂಜನ್​ ಭೇಟಿ ನೀಡಿದ್ಧಾರೆ.

ಮಡಿಕೇರಿ: ನಿಯಂತ್ರಣ ತಪ್ಪಿದ ಬಸ್ ಚರಂಡಿಗೆ| 11 ಮಂದಿ ಗಂಭೀರ Read More »

ಕೋರ್ಟ್ ಆವರಣದಲ್ಲೇ ಪತ್ನಿಯ ಕತ್ತುಸೀಳಿದ ಪತಿ

ಸಮಗ್ರ ನ್ಯೂಸ್: ಪತ್ನಿ ಜೀವನಾಂಶ ಕೋರಿ ಕೋರ್ಟ್‌ ಮೊರೆ ಹೋಗಿದ್ದಕ್ಕೆ ಆಕ್ರೋಶ ಪತಿ ಕೋರ್ಟ್‌ ಆವರಣದಲ್ಲೇ ಪತ್ನಿಯ ಕತ್ತು ಕೊಯ್ದು ಹಾಕಿದ ಘೋರ ಘಟನೆ ಹಾಸನದಲ್ಲಿ ಬೆಳಕಿಗೆ ಬಂದಿದೆ. ಪತ್ನಿ ಚೈತ್ರ ಕೋರ್ಟ್‌ ಆವರಣದ ಶೌಚಾಲಯಕ್ಕೆ ತೆರಳಿದ ವೇಳೆ ಹೊಂಚು ಹಾಕಿ ಕೂತಿದ್ದ ಪತಿ ಶಿವಕುಮಾರ್‌ ಚೈತ್ರಾಳ ಕತ್ತುಕೊಯ್ದು ಕೃತ್ಯವೆಸಗಿದ್ದಾನೆ. ಸಾವು ಬದುಕಿನ ಹೋರಾಡುತ್ತಿರುವ ಗಾಯಾಳು ಚೈತ್ರಳನ್ನು ಹೊಳೆನರಸೀಪುರ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊಳೆನರಸೀಪುರ ಟೌನ್‌ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕೋರ್ಟ್ ಆವರಣದಲ್ಲೇ ಪತ್ನಿಯ ಕತ್ತುಸೀಳಿದ ಪತಿ Read More »

ಕಾಲೇಜ್ ಫೆಸ್ಟ್ ನಲ್ಲಿ ಗಲಾಟೆ| ನಮಾಝ್ ಮುಗಿಸಿ ಬಂದ ವಿದ್ಯಾರ್ಥಿ ಕೊಲೆಯಾದ

ಸಮಗ್ರ ನ್ಯೂಸ್: ವಿದ್ಯಾರ್ಥಿಯೊಬ್ಬನನ್ನ ತಾನು ವ್ಯಾಸಾಂಗ ಮಾಡ್ತಿದ್ದ ಕಾಲೇಜಿನ 50 ಮೀಟರ್ ಅಂತರದಲ್ಲೇ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಕೆ.ಜಿ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 18 ವರ್ಷದ ಅರ್ಬಜ್ ಎಂಬ ವಿದ್ಯಾರ್ಥಿಯನ್ನ ಚಾಕು ಇರಿದು ಹತ್ಯೆ ಮಾಡಲಾಗಿದೆ. ಶುಕ್ರವಾರ(ಆ.12) ಮಧ್ಯಾಹ್ನ 2.30ರ ಸುಮಾರಿಗೆ ಇದೇ ಕಾಲೇಜಿನಿಂದ ಕೆಳಗೆ ಬಂದಿದ್ದ ವಿದ್ಯಾರ್ಥಿ ಇದ್ದಕ್ಕಿದ್ದಂತೆ ಚಾಕು ಇರಿತದಿಂದ ರಕ್ತ ಸ್ರಾವವಾಗಿ ಒದ್ದಾಡುತ್ತಿದ್ದ. ಆತನನ್ನ ನೋಡಿದ್ದ ಸ್ಥಳೀಯರು ಖಾಸಗಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆದರೆ ಆಸ್ಪತ್ರೆಗೆ ಹೋಗುವ ನಡುವೆ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ

ಕಾಲೇಜ್ ಫೆಸ್ಟ್ ನಲ್ಲಿ ಗಲಾಟೆ| ನಮಾಝ್ ಮುಗಿಸಿ ಬಂದ ವಿದ್ಯಾರ್ಥಿ ಕೊಲೆಯಾದ Read More »