Ad Widget .

ಮಗನನ್ನು ಉಳಿಸಿಜೊಡಲು ಸಿಎಂಗೆ ಮನವಿ ಸಲ್ಲಿಸಲು ಬಂದ ಮಹಿಳೆ ಅಸ್ವಸ್ಥ

ಸಮಗ್ರ ನ್ಯೂಸ್; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಲು ಬಂದಿದ್ದ, ಮಹಿಳೆಯೊಬ್ಬರು ಅಸ್ವಸ್ಥಗೊಂಡು ಕುಸಿದು ಬಿದ್ದ ಘಟನೆ ನಗರದ ವಿಮಾನ ನಿಲ್ದಾಣದಲ್ಲಿ ಭಾನುವಾರ ನಡೆಯಿತು.

Ad Widget . Ad Widget .

ಗೋಕುಲ ರಸ್ತೆಯ ಗಾಂಧಿನಗರದ ಭಾರತಿ ಅಸ್ವಸ್ಥಗೊಂಡವರು. ಅಸ್ಥಿಮಜ್ಜೆ ಸಮಸ್ಯೆಯಿಂದ ಬಳಲುತ್ತಿದ್ದ 31 ವರ್ಷದ ತಮ್ಮ ಏಕೈಕ ಪುತ್ರ ಸೂರಜ್‌ನನ್ನು ಎಸ್‌ಡಿಎಂ ಆಸ್ಪತ್ರೆಗೆ ದಾಖಲಿಸಿರುವ ಅವರು, ಚಿಕಿತ್ಸೆಗೆ ಸಿಎಂ ಬಳಿ ನೆರವು ಕೋರಲು ಬಂದಿದ್ದರು.

Ad Widget . Ad Widget .

ಭಾರತಿ ಅವರಿಂದ ಮನವಿ ಸ್ವೀಕರಿಸಿದ್ದ ಸಿಎಂ, ಚಿಕಿತ್ಸೆಗೆ ನೆರವಾಗುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದ್ದರು. ನಂತರ, ಅವರ ಕಾರು ಹೊರಡುವಾಗ ಹಿಂದೆ ಬಂದ ಮಹಿಳೆ ಅಸ್ವಸ್ಥಗೊಂಡು ಕುಸಿದು ಬಿದ್ದರು. ತಕ್ಷಣ ಸ್ಥಳದಲ್ಲಿದ್ದ ಗೋಕುಲ ರಸ್ತೆ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಜೆ.ಎಂ. ಖಾಲಿಮಿರ್ಚಿ ಹಾಗೂ ಇತರರು ಭಾರತಿ ಅವರಿಗೆ ನೀರು‌ ಕುಡಿಸಿ‌ ಉಪಚರಿಸಿದರು. ನಂತರ, ತಮ್ಮ ವಾಹನದಲ್ಲೇ ಅವರನ್ನು ಆಸ್ಪತ್ರೆಗೆ ಬಿಟ್ಟು ಬಂದರು.

Leave a Comment

Your email address will not be published. Required fields are marked *