Ad Widget .

ನೀವು ಆನ್ ಲೈನ್ ಆ್ಯಪ್ ಗಳಲ್ಲಿ ಖರೀದಿದಾರರೆ? ವಂಚನೆಗೆ ಒಳಗಾಗುತ್ತೀರಿ ಎಚ್ಚರ…!

ಸಮಗ್ರ ನ್ಯೂಸ್: ಆನ್ ಲೈನ್ ಆ್ಯಪ್ ಗಳ ಮೂಲಕ ತುಂಬಾ ಜನ ಬಹಳಷ್ಟು ಜನ ವಿವಿಧ ಉಡುಪು, ಗ್ರಹೋಪಯೋಗಿ ವಸ್ತುಗಳನ್ನು , ಸೌಂದರ್ಯ ವರ್ಧಕ, ಪಾದರಕ್ಷೆ ಸೇರಿದಂತೆ ಅನೇಕ ವಸ್ತುಗಳನ್ನು ಖರೀದಿ ಮಾಡುತ್ತಿರುತ್ತಾರೆ. ಖರೀದಿಸುವವರು ಸಂತುಷ್ಟ ಗ್ರಾಹಕರೋ ಇಲ್ಲವೋ ಅದು ಅವರವರ ಭಾವಕ್ಕೆ. ಆದರೆ ಇಲ್ಲಿ ಇದನ್ನೆ ಬಂಡವಾಳವಾಗಿಸಿ ಖದೀಮರ ತಂಡವೊಂದು ಸದ್ದಿಲ್ಲದೆ ವಂಚನಾ ಜಾಲ ವ್ಯಾಪಿಸಿದೆ.

Ad Widget . Ad Widget .

ಹೌದು, ಒಂದು ಜಿ.ಕೆ ಎಂಟರ್ ಪ್ರೈಸಸ್ ಎಂಬ ಹೆಸರಿನಲ್ಲಿ ಆನ್ ಲೈನ್ ಗ್ರಾಹಕರಿಗೆ ಸ್ಪೀಡ್ ಪೋಸ್ಟ್ ಮೂಲಕ ಕೂಪನ್ ಮನೆ ಮನೆಗೆ ಪತ್ರ ರವಾನಿಸಿ , ನೀವೂ ನಮ್ಮ ಅದೃಷ್ಟ ಗ್ರಾಹಕರಾಗಿದ್ದೀರಿ, ಮೀಶೋ, ಪ್ಲಿಪ್ ಕಾರ್ಟ್, ಸ್ನಾಪ್ ಡೀಲ್ ಕಂಪನಿಗಳ ಹೆಸರಲ್ಲಿ ಸಂಸ್ಥಾಪನಾ ವಾರ್ಷಿಕ ಮಹೋತ್ಸವದ ಅಂಗವಾಗಿ ನಾವು ಅದೃಷ್ಟ ಶಾಲಿ ಗ್ರಾಹಕರನ್ನು ಅದೃಷ್ಟ ಪರೀಕ್ಷೆಗೆ ಒಳಪಡಿಸಲಿದ್ದೇವೆ. ಅದರಂತೆ ನಮ್ಮ ಗ್ರಾಹಕರಾದ ತಾವು ಈ ಯೋಜನೆಯಲ್ಲಿ ಅವಕಾಶವನ್ನು ಹೊಂದಿದ್ದೀರಿ. ನಾವು ನಿಮಗೆ ಈ ಅರ್ಜಿ ಜೊತೆ, ವಿಶೇಷ ಕೂಪನ್ ಕಳಿಸುತ್ತಿದ್ದೇವೆ ಕೂಪನ್ ಸ್ಕ್ರೇಚ್ ಮಾಡಿ ಬಹುಮಾನ ಗೆಲ್ಲಿರಿ ಎಂಬ ಪತ್ರವನ್ನು ಕಳುಹಿಸಲಾಗಿದೆ.

Ad Widget . Ad Widget .

ಇಲ್ಲಿ ಸ್ಕ್ರೇಚ್ ಮಾಡಿದ ಗ್ರಾಹಕರ ಕೂಪನ್ ನಲ್ಲಿ ಹತ್ತೋ..ಹದೀನೈದೋ, ಲಕ್ಷ ಅಥವಾ ಅದಕ್ಕಿಂತ ಹೆಚ್ಚು , ಕೆಲವರಿಗೆ ಕಡಿಮೆ ಮೊತ್ತ ಬರುವ ಕೂಪನ್ ಕಳುಹಿಸಿ ಕೊಡಲಾಗುತ್ತಿದೆ. ಅಲ್ಲದೆ ಕೂಪನ್ ಕೋಡ್ ನಮೂದಿಸಿ ನಾವು ಕಳುಹಿಸಿದ ಅರ್ಜಿ ಭರ್ತಿ ಮಾಡಿ ಎಸ್ ಎಂ ಎಸ್ ಮಾಡಿ, ಎಂದು ಕೆಲವು ದೂರವಾಣಿ ನಂಬರ್ ನೀಡಲಾಗಿದೆ, ಕಸ್ಟಮರ್ ಹೆಲ್ಪ್ ಲೈನ್ ಎಂದು ಮತ್ತೆರಡು ಪೋನ್ ನಂಬರ್ ನೀಡಲಾಗಿದೆ, ಎಲ್ಲಾದರು ಗ್ರಾಹಕರು ಎಸ್ ಎಂ ಎಸ್ ಆಥವಾ ಕಸ್ಟಮರ್ ಕೇರ್ ಕರೆ ಮಾಡುತ್ತೀರೊ ವಂಚಕರು ಒಂದು ಹಂತದ ಗೆಲುವು ಪಡೆದರು ಎಂದಾಯಿತು. ನೀವು ಅವರ ಖೆಡ್ಡಾಕೆ ಬೀಳಲು ಸಿದ್ದರಾಗಿದ್ದಿರಿ ಎಂದಾಯಿತು.

ವಂಚನೆ ಯಾವ ರೀತಿ?
ನೀವು ಎಸ್ ಎಂ ಎಸ್, ಅಥವಾ ಕರೆ ಮಾಡಿದ್ದೀರಿ ಎಂದಾದರೆ ಅಲ್ಲಿಂದ ಸರಾಗವಾಗಿ ನಿಮ್ಮನು ಅದೃಷ್ಠ ಶಾಲಿ ಗ್ರಾಹಕ ನೀವೊಬ್ಬರೆ ಎಂದು ಬಿಂಬಿಸಿ ನಿಮ್ಮ ಹರುಪುಗೊಳಿಸುತ್ತಾರೆ. ನೀವು ಗೆದ್ದೀರೋದು ನಮ್ಮೆಲ್ಲಾ ಗ್ರಾಹಕರಲ್ಲಿ ಅತಿ ಹೆಚ್ಚು ಎಂದು ಹುರಿದುಂಬಿಸಲು ಪ್ರಾರಂಬಿಸುತ್ತಾರೆ. ನಿಮ್ಮ ಎಲ್ಲಾ ಬ್ಯಾಂಕ್ ದಾಖಲೆ ಪರಿಶೀಲಿಸಲಾಗಿದೆ, ಎಲ್ಲವೂ ಸರಿಯಿದೆ, ಇಷ್ಟು ಹಣ ನಿಮ್ಮ ಎಕೌಂಟಿಗೆ ಹಣ ಜಮಾವಣೆಯಾಗಲಿದೆ. ಆದರೆ ನಿಮ್ಮ ಎಕೌಂಟಲ್ಲಿ ಕನಿಷ್ಟ ಒಂದು ಮೊತ್ತ 60- 70 ಸಾವಿರ ಇರಬೇಕಾಗುತ್ತದೆ, ಎಂದು ಹಣ ಹಾಕಿಸಿ ಒಟಿಪಿ ಪಡೆದು ಹಣವನ್ನು ಲಪಾಟಾಯಿಸಲಾಗುತ್ತದೆ, ಇನ್ನು ಕೆಲವೊಮ್ಮೆ ಸರಕಾರಕ್ಕೆ ತೆರಿಗೆ ಹಣ ಮೊದಲೇ ಪಾವತಿ ಮಾಡಬೇಕು ಎಂದು ಹಣ ಹಾಕಿಸಿ ವಂಚಿಸಲಾಗುತ್ತದೆ. ಮತ್ತೆ ಆ ನಂಬರ್ ಗೆ ನೀವು ಕರೆ ಮಾಡಿದಲ್ಲಿ ಏನೂ ಮಾಹಿತಿಯೂ ಸಿಗೋದಿಲ್ಲ, ಈ ರೀತಿಯ ವಂಚನೆ ಜಾಲ ತನ್ನ ಕಬಂಧ ಬಾಹುಗಳನ್ನು ನಿಮ್ಮತ್ತ ಚಾಚುವ ಮುನ್ನ ಎಚ್ಚರ ಗ್ರಾಹಕ ಎಚ್ಚರ. ಆದರೆ ಈ ವಂಚಕರ ಜಾಲಕ್ಕೂ, ಆನ್ ಲೈನ್ ಕಂಪನೆಗಳಿಗು ಸಂಸ್ಥೆಗೆ ಯಾವುದೇ ಸಂಬಂದ ಇಲ್ಲ. ಆದರೆ ಗ್ರಾಹಕನ ವಿಳಾಸ ವಂಚಕರಿಗೆ ಹೇಗೆ ಸಿಕ್ಕಿತು ಎನ್ನುವುದಕ್ಕೆ ಈ ಸಂಸ್ಥೆಗಳೇ ಸಾರ್ವಜನಿಕವಾಗಿ ಉತ್ತರಿಸ ಬೇಕಿದೆ, ಒಟ್ಟಿನಲ್ಲಿ ಗ್ರಾಹಕರು ಎಚ್ಚರ ಇರಬೇಕಾಗಿದೆ.

Leave a Comment

Your email address will not be published. Required fields are marked *