Ad Widget .

ಭೂಮಿಯ ಮೂಲಕ ಹಾದು ಹೋಗಲಿದೆ ಕ್ಷುದ್ರ ಗ್ರಹ! ನಾಸಾ ಹೇಳಿದ್ದೇನು ?

ಮುಂದಿನ ಮೂರು ದಿನಗಳಲ್ಲಿ ಕನಿಷ್ಠ ಮೂರು ಕ್ಷುದ್ರ ಆಕಾಶ ಕಾಯಗಳು ಭೂಮಿಗೆ ಅತೀ ಸನಿಹವಾಗಿ ಹಾದುಹೋಗಲಿವೆ.  ಈ ಕ್ಷುದ್ರ ಕಾಯ ರವಿವಾರ ಬೆಳಗ್ಗೆ ಭೂಮಿಯಿಂದ 47 ಲಕ್ಷ ಕಿ.ಮೀ. ದೂರದಲ್ಲಿ ಪ್ರತೀ ಸೆಕುಂಡಿಗೆ 5.7 ಕಿ.ಮೀ. ವೇಗದಲ್ಲಿ ಹಾದುಹೋಗಲಿದೆ.

Ad Widget . Ad Widget .

ಅತೀ ದೊಡ್ಡದಾಗಿರುವ 110 ಅಡಿ ಅಗಲದ ಕ್ಷುದ್ರ ಗ್ರಹ ಅಪ್ಪಳಿಸಿದರೆ ಪ್ಯಾರಿಸ್‌ನಷ್ಟು ದೊಡ್ಡದಾದ ಕುಳಿ ಉಂಟಾಗಬಹುದು ಎಂದು ನಾಸಾ ವಿಜ್ಞಾನಿಗಳು ಹೇಳಿದ್ದಾರೆ.

Ad Widget . Ad Widget .

ನಾಸಾದ ಆಸ್ಟರಾಯ್ಡ ವಾಚ್‌ ಭೂಮಿಗೆ 75 ಲಕ್ಷ ಕಿ.ಮೀ. ಆಸುಪಾಸಿಗೆ ಬರುವ ಕ್ಷುದ್ರಗ್ರಹ, ಧೂಮಕೇತುಗಳ ಬಗ್ಗೆ ನಿಗಾ ಇರಿಸುತ್ತದೆ. ಭೂಮಿಯಿಂದ ಇಷ್ಟು ದೂರದಲ್ಲಿ ಹಾದುಹೋಗುವ 150 ಮೀ.ಗಳಿಗಿಂತ ದೊಡ್ಡದಾದ ಕ್ಷುದ್ರಕಾಯಗಳನ್ನು “ಅಪಾಯಕಾರಿ’ ಎಂದು ಗುರುತಿಸಲಾಗುತ್ತದೆ.

ಕ್ಷುದ್ರಗ್ರಹಗಳು ಗ್ರಹಗಳ ತುಣುಕುಗಳಾಗಿವೆ, ಅದು ವಿಶಾಲವಾದ, ಮಿತಿಯಿಲ್ಲದ ಶೂನ್ಯತೆಯಲ್ಲಿ ತಿರುಗುತ್ತಲೇ ಇರುತ್ತದೆ. ದಶಕಗಳಿಂದ, ವಿಜ್ಞಾನಿಗಳು ಕೆಲವು ಬೃಹತ್ ಬಾಹ್ಯಾಕಾಶ ಕ್ಷುದ್ರಗ್ರಹಗಳು ಭೂಮಿಗೆ ಅಪಾಯವನ್ನುಂಟುಮಾಡುತ್ತವೆ ಎಂದು ಎಚ್ಚರಿಸಿದ್ದಾರೆ. ಇದರ ಪರಿಣಾಮವಾಗಿ, ನಾಸಾ ಸೇರಿದಂತೆ ವಿವಿಧ ಬಾಹ್ಯಾಕಾಶ ಸಂಸ್ಥೆಗಳು ಭೂಮಿಯನ್ನು ಸಂಭಾವ್ಯ ಹಾನಿಕಾರಕ ಕ್ಷುದ್ರಗ್ರಹಗಳಿಂದ ರಕ್ಷಿಸಲು ತಂತ್ರವನ್ನು ಅಭಿವೃದ್ಧಿಪಡಿಸುತ್ತಿವೆ. ಈ ಕಾರ್ಯತಂತ್ರದ ಭಾಗವಾಗಿ NASA ತನ್ನ ಡಬಲ್ ಕ್ಷುದ್ರಗ್ರಹ ಮರುನಿರ್ದೇಶನ ಪರೀಕ್ಷೆ (DART) ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.

Leave a Comment

Your email address will not be published. Required fields are marked *