Ad Widget .

ಸೊಸೆಯ ತಲೆಯನ್ನೇ ಕತ್ತರಿಸಿ ಪೊಲೀಸ್ ಠಾಣೆಗೆ ತಂದ ಅತ್ತೆ

ಸಮಗ್ರ ನ್ಯೂಸ್: ಮಹಿಳೆಯೊಬ್ಬಳು ತನ್ನ ಸೊಸೆಯ ಕತ್ತರಿಸಿ, ಆ ತಲೆಯೊಂದಿಗೆ ಪೊಲೀಸ್ ಠಾಣೆಗೆ ಬಂದಿರುವ ಆಘಾತಕಾರಿ ಘಟನೆ ಆಂಧ್ರಪ್ರದೇಶದ ಅಣ್ಣಮಯ್ಯ ಜಿಲ್ಲೆಯಲ್ಲಿ ನಡೆದಿದೆ.

Ad Widget . Ad Widget .

ಆಂಧ್ರದ ರಾಯಚೋಟಿ ಪುರಸಭಾ ವ್ಯಾಪ್ತಿಯ ಕೊತ್ತಕೋಟ ರಾಮಪುರಂ ನಿವಾಸಿ ಸುಬ್ಬಮ್ಮ ಎಂಬ ಮಹಿಳೆ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ತನ್ನ ಸೊಸೆ ವಸುಂಧರಾಳನ್ನು ಕೊಂದಿರುವುದಾಗಿ ತಪ್ಪೊಪ್ಪಿಕೊಂಡಿದ್ದು, ಶರಣಾಗಲು ಪೊಲೀಸ್ ಠಾಣೆಗೆ ಬಂದಿದ್ದಾಳೆ.

Ad Widget . Ad Widget .

ಅಣ್ಣಮಯ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರ್ಷವರ್ಧನ್ ರಾಜು ಪ್ರಕಾರ, ಆರೋಪಿಗಳು ಆಸ್ತಿ ವಿವಾದದಿಂದಾಗಿ ಸೊಸೆಯ ತಲೆ ಕತ್ತರಿಸಿ ಕೊಂದಿದ್ದಾರೆ. ಮೃತ ಮಹಿಳೆ 35 ವರ್ಷದವರಾಗಿದ್ದು, ಆಕೆಯ ಅತ್ತೆಯೊಂದಿಗೆ ಒಂದೇ ಮನೆಯಲ್ಲಿ ವಾಸವಾಗಿದ್ದರು. ಮೃತ ಮಹಿಳೆಗೆ ಇಬ್ಬರು ಪುತ್ರಿಯರಿದ್ದು, ಪತಿ ಮೃತಪಟ್ಟಿದ್ದರು. ಆರೋಪಿ ವೃದ್ಧೆ ತನ್ನ ಮಗ ಸಾವನ್ನಪ್ಪಿದ ನಂತರ ಸೊಸೆ ಮತ್ತು ಮೊಮ್ಮಕ್ಕಳೊಂದಿಗೆ ಮನೆಯಲ್ಲಿ ವಾಸವಾಗಿದ್ದರು. ಅತ್ತೆ-ಸೊಸೆ ನಡುವೆ ಆಸ್ತಿಯ ವಿಷಯಕ್ಕೆ ಜಗಳ ನಡೆಯುತ್ತಿತ್ತು.

ಮೃತ ಮಹಿಳೆ ತನ್ನ ಗಂಡನ ಸಾವಿನ ನಂತರ ಮಲ್ಲಿ ಎಂಬ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು. ಇದರಿಂದ ಕೋಪಗೊಂಡಿದ್ದ ಅತ್ತೆ ತನ್ನ ಸೊಸೆಗೆ ಸದಾ ಬೈಯುತ್ತಿದ್ದರು ಅಣ್ಣಮಯ್ಯ ಜಿಲ್ಲಾ ಎಸ್​ಪಿ ಹೇಳಿದ್ದಾರೆ.

ಆ ವೃದ್ಧೆ ಕುವೈತ್‌ಗೆ ಹೋಗಿ ಸಾಕಷ್ಟು ಆಸ್ತಿಯನ್ನು ಸಂಪಾದಿಸಿದ್ದರು. ಹಾಗಾಗಿ, ಸೊಸೆ ತನ್ನ ಆಸ್ತಿಯನ್ನು ಬಾಯ್​​ಫ್ರೆಂಡ್​​ಗೆ ಕೊಡಬಹುದು ಎಂಬ ಆತಂಕ ಆಕೆಗಿತ್ತು. ಇದರಿಂದ ಆರೋಪಿ ವೃದ್ಧೆ ತನ್ನ ಮೊಮ್ಮಗಳಿಗೆ ಅನ್ಯಾಯವಾಗಬಹುದೆಂಬ ಭಯದಿಂದ ತನ್ನ ಸೊಸೆ ಹಾಗೂ ಆಕೆಯ ಗೆಳೆಯನನ್ನು ಮನೆಗೆ ಕರೆದು ಇತ್ತೀಚೆಗಷ್ಟೇ ಛೀಮಾರಿ ಹಾಕಿದ್ದರು. ಇದನ್ನು ಅರಗಿಸಿಕೊಳ್ಳಲಾಗದೆ ಅತ್ತೆ- ಸೊಸೆ ನಡುವೆ ವಾಗ್ವಾದ ನಡೆದಿದೆ. ಅದಾದ ಬಳಿಕ ಆಕೆ ತನ್ನ ಸೊಸೆಯನ್ನು ಕೊಲೆ ಮಾಡಿದ್ದಾಳೆ. ನಂತರ ಆಕೆ ತಾನು ಕತ್ತರಿಸಿದ ಸೊಸೆಯ ತಲೆಯನ್ನು ಹಿಡಿದು ಪೋಲೀಸ್ ಠಾಣೆಗೆ ಬಂದಿದ್ದಾಳೆ.

Leave a Comment

Your email address will not be published. Required fields are marked *