ಸಮಗ್ರ ನ್ಯೂಸ್: ದೇಶಾದ್ಯಂತ ಹರ್ ಘರ್ ತಿರಂಗಾ ಅಭಿಯಾನದಡಿ ತ್ರಿವರ್ಣ ಧ್ವಜಗಳನ್ನು ಮಾರಾಟ ಮಾಡುತ್ತಿದ್ದು, ಈ ಧ್ವಜ ಮಾರಾಟವು ಈಗ ಜಾಲತಾಣಗಳಲ್ಲಿ ಚರ್ಚಾ ವಸ್ತುವಾಗಿದೆ.
ಧ್ವಜವೊಂದಕ್ಕೆ 20 ರಿಂದ 25 ರೂ ನೀಡಿ ಖರೀದಿ ಮಾಡಲಾಗುತ್ತಿದ್ದು, ಸಿನಿಮಾವೊಂದರ ಟಿಕೆಟ್ ಉಚಿತ ಹಂಚುತ್ತಿದ್ದ ಬಿಜೆಪಿ ಮತ್ತು ಆರ್ ಎಸ್ ಎಸ್ ನಾಯಕರ ಕುರಿತಂತೆ ಟೀಕೆ ಮತ್ತು ಪ್ರತ್ಯಾಸ್ತ್ರಗಳು ಬಳಕೆಯಾಗುತ್ತಿವೆ.
ಈ ಹಿಂದೆ ತೆರೆಕಂಡಿದ್ದ ‘ದಿ ಕಾಶ್ಮೀರಿ ಫೈಲ್ಸ್’ ಸಿನಿಮಾ ವೀಕ್ಷಣೆಗೆ ಶಾಸಕರು, ಸಂಸದರು ಸೇರಿದಂತೆ ಹಲವು ಬಿಜೆಪಿ ಮುಖಂಡರು ಉಚಿತ ಟಿಕೆಟ್ ಗಳನ್ನು ನೀಡಿದ್ದು, ಮನೆ ಮನೆಗೆ ಧ್ವಜವನ್ನು ಉಚಿತವಾಗಿ ಸರ್ಕಾರ ಅಥವಾ ಜನಪ್ರತಿನಿಧಿಗಳು ನೀಡುತ್ತಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ.