Ad Widget .

ವಿಫಲವಾಗಿದ್ಯಾಕೆ ಇಲಾಖೆ ಮುನಿಸಿಕೊಳ್ಳುವನೇ ಕಾರ್ಯಕರ್ತ..!

ಅದೊಂದು ಘಟನೆ ಹಿಂದೂ ಕಾರ್ಯಕರ್ತರೆಲ್ಲ ತಡ ರಾತ್ರಿ ರಸ್ತೆಯಲ್ಲಿ ಧರಣಿ ಕೂರುವಂತೆ ಮಾಡಿತ್ತು. ಬಿಜೆಪಿ ರಾಜ್ಯಧ್ಯಕ್ಷರ ಕಾರನ್ನು ಮಾತ್ರವಲ್ಲ ಇಡೀ ರಾಜ್ಯವನ್ನೆ ಅಲುಗಾಡಿಸಿತು. ರಣ ಭೀಕರತೆಯ ವಿಷಯ ತಿಳಿಯುತ್ತಿದ್ದಂತೆ ಸಿಎಂ ಟ್ವೀಟ್ ಮಾಡಿ ಅಗಲಿದ ಕಾರ್ಯಕರ್ತನಿಗೆ ಸಂತಾಪ ಸೂಚಿಸುವಷ್ಟರ ಮಟ್ಟಕ್ಕೆ ಪ್ರಚಾರ ಪಡೆದಿತ್ತು. ದೆಹಲಿಯಲ್ಲಿದ್ದ ಶಾಸಕರು ರಾತೋ ರಾತ್ರಿ ಸ್ವ ಕ್ಷೇತ್ರದತ್ತ ಹೊರಟ ಬರುವಂತೆ ಮಾಡಿದ್ದಲ್ಲದೆ. ಘಟನೆ ನಡೆದು ಕೆಲವೆ ಗಂಟೆಗಳಲ್ಲಿ ಜನರ ಆಕ್ರೋಶ ಮುಗಿಲು ಮುಟ್ಟಿದ ಕಾರಣ ಗಲ್ಲಿ ಗಲ್ಲಿಗಳಲ್ಲಿ ಪೋಲಿಸರು ಜಮಾಯಿಸಿದರೂ. ರಾತ್ರಿ ಕಳೆದು ಬೆಳಗಾಗುತ್ತಲೆ ಇಡೀ ಊರಿಗೂರೆ ನೀರವ ಮೌನ ಆವರಿಸಿತು. ಜನ ರಸ್ತೆಯಲ್ಲಿ ಸಾಲು ನಿಂತು ಸಾಗಿ ಬರುತ್ತಿದ್ದ ಅದೊಂದು ಶವದ ಮೆರವಣಿಗೆಯಲ್ಲಿ ಪಾಲ್ಘೊಂಡು ಬಿಳಿ ಬಟ್ಟೆ ಹೊದ್ದು ಮಲಗಿದ್ದಾತನ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತಿದ್ದರು.

Ad Widget . Ad Widget .

ಅಲ್ಲಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಜನಸ್ತೋಮವೆ ನೆರದಿತ್ತು, ಸುತ್ತಲಿನ ಕಟ್ಟಡಗಳ ಮಾಳಿಗೆಯಲ್ಲಿ ಕೂಡ ಇಕ್ಕೆರೆದು ಕಾಣುತ್ತಿದ್ದವು ಅಭಿಮಾನಿಗಳ ದಂಡು. ಒಂದು ದಿನ ಮೂರು ತಾಲೂಕಿನ ಇಡೀ ಅಂಗಡಿ ಮುಂಗಟ್ಟುಗಳು ಬಂದ್, ಶಾಲಾ ಕಾಲೇಜಿಗೆ ರಜೆ ಘೋಷಿಸಿ ಆದೇಶವೂ ಬಂತು. ನಿಮಿಷಗಳು ಕಳೆದಂತೆ ಮೇಲಿಂದ ಮೇಲೆ ರಾಜಕೀಯ ನಾಯಕರ ದಂಡೆ ಬೆಳ್ಳಾರೆ ಎಂಬ ಕುಗ್ರಾಮಕ್ಕೆ ದೌಡಾಯಿಸಿದವು. ಇಲ್ಲಿ ಸೇರಿದ ಪ್ರತಿಯೊಬ್ಬರ ಮುಖದಲ್ಲೂ ಹೇಳ ತೀರಿದ ಭಾವನೆ ಮಡುಗಟ್ಟಿತ್ತು. ಮಾತಿನಲ್ಲಿ ಬಿಂಬಿಸಲಾಗದ ಅಗಾದ ಸ್ನೇಹವನ್ನು ಕಳೆದುಕೊಂಡೆವು ಎಂಬ ನೋವು ಎಲ್ಲರ ಮನಸಲ್ಲೂ ಅಂಟಿಕೊಂಡಿರುವುದು ಭಾಸವಾಗುತ್ತಿತ್ತು. ಹಾಗಾದರೆ ಅಲ್ಲಿ ಅಂತಹದ್ದೇನು ನಡೆದಿರಬಹುದು ಎಂಬ ಪ್ರಶ್ನೆ ಪ್ರತಿಯೊಬ್ಬರಲ್ಲೂ ಕಾಡುತ್ತಿದೆಯಲ್ಲವೆ.

Ad Widget . Ad Widget .

ಅಲ್ಲಿ ಮೆರವಣಿಗೆಯಲ್ಲಿ ಸಾಗಿ ಬಂದಿರುವುದು ಒಬ್ಬ ಮಂತ್ರಿಯ ಶವವಲ್ಲ, ಆಟದಲ್ಲೋ, ಪಾಠದಲ್ಲೋ ಹೀಗೆ ವಿವಿಧ ಕ್ಷೇತ್ರದಲ್ಲಿ ಹೆಸರು ಗಳಿಸಿ ರಾಜ್ಯಕ್ಕೆ ಚಿರಪರಿಚಿತನಾದವನಲ್ಲ. ನೆಟ್ಟಾರು ಎಂಬ ಪುಟ್ಟ ಹಳ್ಳಿಯಲ್ಲಿ ಒಂದು ಸಣ್ಣ ಬಡ ಕುಟುಂಬದಲ್ಲಿ ಜನಿಸಿದ ಸಾಮಾನ್ಯ ವ್ಯಕ್ತಿ ಪ್ರವೀಣ್ ಎಂಬವನ
ಶವ ಅದು. ಹೊಟ್ಟೆ ಪಾಡಿಗಾಗಿ ಕೋಳಿ ಅಂಗಡಿ ಮಾಡಿ ಅದರಲ್ಲಿ ಕೆಲಸ ಮಾಡಿಕೊಂಡು ದೇವರು ಈ ಭೂಮಿಗೆ ಜನ್ಮಿಸಿದ್ದಾನೆ ಎಂಬ‌ ಕಾರಣಕ್ಕೆ ಭಾರತ ಮಾತೆಯ ಮಗನಾಗಿ ಉತ್ತಮ ಜೀವನ ಸಾಗಿಸುವಂತಹ ಗುಣವನ್ನಿಟ್ಟುಕೊಂಡು ಎಲ್ಲರ ಜೊತೆಗೆ ಬಾಂಧವ್ಯ ಹೊಂದಿದ್ದ. ದೊಡ್ಡ ಹುದ್ದೆ ಅಲಂಕರಿಸದಿದ್ದರೂ ಸಹ ತನ್ನಿಂದಾದ ಕೊಡುಗೆ ಈ ಸಮಾಜಕ್ಕೆ ಇರಲಿ ಎಂಬ ಕಾರಣಕ್ಕೋ ಏನೋ ಭಾರತೀಯ ಜನತಾ ಪಾರ್ಟಿಯ ಸಕ್ರೀಯ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದ ಅಷ್ಟೆ.

ಅದಕ್ಕಾಗಿಯೆ ಅವನು ರಾಕ್ಷಸರ ಕೆಂಗಣ್ಣಿಗೆ ಗುರಿಯಾದನೆ..! ಅಥವಾ ಇನ್ಯಾವುದೋ ವೈಯಕ್ತಿಕ ವಿಚಾರಕ್ಕೆ ಅವನ ಮೇಲೆ ಕಣ್ಣಿಟ್ಟಿದ್ದರೂ ತಿಳಿಯುವ ಮುನ್ನವೆ ಆತನ‌ ಮೇಲೆ ದುಷ್ಕರ್ಮಿಗಳು ತಲವಾರು ದಾಳಿ ನಡೆಸಿ ರಕ್ತ ಚೆಲ್ಲಿ ಪರಾರಿಯಾದರು. ಆಸ್ಪತ್ರೆಯ ಮುಂಭಾಗ ಮಾತ್ರವಲ್ಲದೆ ಆತನ ಶವದ ಮೆವಣಿಗೆಯಲ್ಲೂ ಆತ್ಮೀಯರು, ಹಿಂದೂ ಕಾರ್ಯಕರ್ತರು ಸೇರಿದಂತೆ ಜನಸ್ತೋಮವೆ ಹರಿದು ಬಂದು ಈ ಕೊಲೆಗೆ ನ್ಯಾಯ ದೊರಕಿಸಿಕೊಡುವಂತೆ ಪಟ್ಟು ಹಿಡಿದರು. ಅಂದು ನಡೆದ ರಣ ಭೀಕರತೆಗೆ ಇನ್ನು ಉತ್ತರ ಹುಡುಕಿಕೊಡಬೇಕಾದ ಖಾಕಿ ಪಡೆಯೆ ಕಂಗಲಾಗಿರುವುದಂತು ಸುಳ್ಳಲ್ಲ. ಯಾಕೆಂದರೆ ಪೋಲಿಸರಿಗೆ ತಲೆ ನೋವಾಗಿದೆ ಪರಿಣಮಿಸಿದೆ ಈ ಘಟನೆ. ಶವದ ಅಂತಿಮ ದರ್ಶನಕ್ಕೆ ಆಗಮಿಸಿದ ಕರಾವಳಿಯ ಜನಪ್ರಿಯ ನಾಯಕರಾದ ನಳಿನ್ ಕುಮಾರ್ ಕಟೀಲ್ ಆಗಮಿಸಿದ್ದು ಅಂದು ಅಲ್ಲಿ ನೆರೆದಿರುವ ಜನರು ಆಕ್ರೋಶಭರಿತರಾಗಿ ಬಿಜೆಪಿ ರಾಜ್ಯಧ್ಯಕ್ಷರ ಕಾರನ್ನು ಅಲುಗಾಡಿಸಿದ ರಭಸಕ್ಕೆ ಇಡೀ ರಾಜ್ಯ ಸರಕಾರಕ್ಕೆ ಬಿರುಗಾಳಿ ಅಪ್ಪಳಿಸಿದಂತಾಗಿತ್ತು. ಸರಕಾರ ಇನ್ನೇನೊ ದೂಳಿಪಟವಾಗಬಹುದು ಎಂಬ ಸೂಚನೆ ತಿಳಿದುಕೊಂಡ ರಾಜ್ಯ ಬಿಜೆಪಿ ವಲಯ ತಂಡೋಪ ತಂಡವಾಗಿ ಅಗಲಿದ ಪ್ರವೀಣ್ ಮನೆಗೆ ಭೇಟಿ ನೀಡಿ ಪರಿಹಾರ ನೀಡಿಲಾರಂಭಿದರು.

ಇಲಾಖೆಯ ಎಡಿಜಿಪಿ ಬಂದು ಮುಕ್ಕಾಂ ಹೂಡುವಷ್ಟರ ಮಟ್ಟಕ್ಕೆ ನಡೆದೋಗಿರುವ ಆ ಭೀಕರ ರಕ್ತ ಚರಿತ್ರೆಯ ರಾಕ್ಷಸರನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆ ಕೊಡುವ ಭರವಸೆ ನೀಡಿದರು. ಘಟನೆಗೆ ಸಂಬಂಧಿಸಿದಂತೆ ಜನರ ಕೋಪಕ್ಕೆ ತುತ್ತಾದ ಅಧಿಕಾರಿಗಳನ್ನು ಕೂಡ ಬದಲಾವಣೆ ಮಾಡಿ ತಕ್ಕ ಮಟ್ಟಕ್ಕೆ ತಣಿಸುವ ಕೆಲವನ್ನು ಸಹ ಮಾಡಿತು ಸರಕಾರ. ಆ ಘಟನೆ ನಡೆದು ಎರಡು ವಾರಗಳೆ ಕಳೆದಿವೆ. ಈಗ ಉಳಿದಿರುವ ಪ್ರಶ್ನೆ “ಕೊಲೆ ಗಡುಕರು ಯಾರು..?”. ಹಾಗದರೆ ಇದು ಪೋಲಿಸರಿಗೆ ಬೇದಿಸಲಾಗದಷ್ಟು ದೊಡ್ಡ ಘಟನೆಯೆ? ಈಗಾಗಲೆ ಹಲವು ಮಂದಿಯನ್ನು ಕೇಸ್ ಗೆ ಸಂಬಂಧಿಸಿದ ತನಿಖೆಗಾಗಿ ಕಸ್ಟಡಿಯಲ್ಲಿ ಇರಿಸಲಾಗಿದೆಯಾದರೂ ಕೊಲೆಯ ಪ್ರಮುಖ ಆರೋಪಿಗಳು ಯಾರು ಅನ್ನೋದನ್ನು ಇನ್ನು ಪತ್ತೆಯಾಗಿಲ್ಲ.

ಪ್ರವೀಣ್ ಹತ್ಯೆ ಮಾಡಿದವರು ಯಾರೆಂಬುದು ತಿಳಿದಿದೆ ಎಂಬ ಮಾತನ್ನು ಎಡಿಜಿಪಿ ಹೇಳಿದರೆ, ತಲವಾರು ಬೀಸಿದವನು ಮನೆ ಬಿಟ್ಟು ಓಡಿ ಹೋಗಿದ್ದಾನೆ ಎಂಬ ಉತ್ತರ ಪೋಲಿಸರ ಬಾಯಿಂದ ಕೇಳಿ ಬರುತ್ತಿದೆ. ನಾವು ಕಠಿಣ ಶಿಕ್ಷೆ ಕೊಟ್ಟೆ ಕೊಡುತ್ತೇವೆ ಕೊಲೆ ಮಾಡಿರುವವರು ಸ್ಥಳಿಯರೆ ಎಂದು ಗೃಹ ಸಚಿವರ Statement ಒಂದು ಕಡೆಯಾದರೆ ನಾವು ಎನ್ ಐ ಎ ತನಿಖೆಗೆ ನೀಡಲಿದ್ದೇವೆ ಎಂದು ಕೇಂದ್ರ ಸರಕಾರಕ್ಕೆ ಮನವಿ ಮಾಡುತ್ತಿದ್ದಾರೆ ಮುಖ್ಯ ಮಂತ್ರಿಗಳು, ಸಂಸದರು. ಮೇಲ್ನೋಟಕ್ಕೆ ಇದೆಲ್ಲವೂ ಡ್ರಾಮ ಅನ್ನೋದು ಪ್ರಾಥಮಿಕ ಶಾಲಾ ವಿದ್ಯಾರ್ಥಿಗೂ ತಿಳಿಯಬಹುದು. ಯಾಕೆಂದರೆ ಕೊಲೆಗಡುಕರು ಸ್ಥಳಿಯರೆ ಎಂದು ಹೇಳಿದ ಗೃಹ ಸಚಿವರು ತಪ್ಪಿತಸ್ಥರನ್ನು ಹಿಡಿದು ತಂದು ಜೈಲಿಗಟ್ಟುವಲ್ಲಿ ಇಲಾಖೆ ವಿಫಲವಾಗಿರುವುದು ಯಾಕೆ.!

ಒಂದು ಸಣ್ಣ ಕುರುಹು ಇಲ್ಲದಿರುವ ಅದೆಷ್ಟೊ ದೊಡ್ಡ ಘಟನೆಗಳನ್ನು ಭೇದಿಸಿದ ಪೋಲಿಸರಿಗೆ ಪ್ರವೀಣ್ ಕೊಲೆ ವಿಚಾರದಲ್ಲಿ ಬೇರೆ ಬೇರೆ ಆಯಾಮಗಳಲ್ಲಿಯೂ ತನಿಖೆಗಳನ್ನು ಕೈಗೆತ್ತಿಕೊಂಡ ಪೋಲಿಸ್ ಅಧಿಕಾರಿಗಳಿಗೆ ಆರೋಪಿಗಳನ್ನು ಪತ್ತೆ ಹಚ್ಚೋದು ದೊಡ್ಡ ತಲೆನೋವಾಗಿರುವುದರ ಹಿಂದಿನ ಗುಟ್ಟೇನು..! ಇಂತಹದ್ದೆ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿರುತ್ತಿದ್ದರೆ ಈಗಾಗಲೇ ಆರೋಪಿಗಳು ತಾವಾಗಿಯೇ ಪೋಲಿಸರ ಮುಂದೆ ಶರಣಾಗುತ್ತಿದ್ದರು. ಕರ್ನಾಟಕದಲ್ಲಿ ಆರೋಪಿಗಳಿಗೆ ಬಹಳ ವಿಶೇಷತೆಯ ವಾತಾವರಣ ಇದೆ. ಜೈಲಿನಲ್ಲಿ ಬಿರಿಯಾನಿ ತಿನ್ನಿಸಿದ ಸರಕಾರ ಕರ್ನಾಟಕದ ಘನ ಸರಕಾರ ಹಾಗಾಗಿ ಇಲ್ಲಿನ ವ್ಯವಸ್ಥೆ ಮತ್ತು ಆಡಳಿತದ ಮೇಲೆ ಜನರು ನಂಬಿಕೆ ಕಳೆದುಕೊಳ್ಳುವಂತಾಗಿದೆ. ಬೀಗ ಜಡಿದು ಪರಾರಿಯಾದವನ ಮನೆ ಎದುರು ಜೆಸಿಬಿ ನಿಲ್ಲಿಸಿ ಪ್ರವೀಣ್ ಕೊಲೆಗಡುಕರು ಅದೆಲ್ಲಿ ಮೂಲೆಯಲ್ಲಿ ಅಡಗಿದ್ದರೂ ಕೂಡ ಪ್ರತ್ಯಕ್ಷವಾಗುವರು. ಉತ್ತರದಲ್ಲಿರುವ ಆ ಕಾನೂನು ದಕ್ಷಿಣ ಕನ್ನಡದ ಅದೊಂದು ರಕ್ತ ಚರಿತ್ರೆಗೆ ಜಾರಿಯಾಗಲಿ ಎಂಬ ಕರ್ನಾಟಕದ ಪ್ರತಿಯೊಬ್ಬನ ಅಭಿಮತ.

ದಿನ ಕಳೆದು ವರುಷಗಳೆ ಉರುಳಿದರೂ ನೆಟ್ಟಾರಿನ ಪ್ರವೀಣ್ ಮೇಲೆ ತಲವಾರು ಬೀಸಿದವರನ್ನು ಪತ್ತೆ ಹಚ್ಚುವುದರಲ್ಲಿ ಇಲಾಖೆ ವಿಫಲವಾದರೆ ಮುಂದೆ ರಾಜ್ಯ ಬಿಜೆಪಿ ಸರಕಾರದ ಮೇಲೆ ಇದರ ಪರಿಣಾಮ ಬೀರಲಿದೆ. ಈಗಾಗಲೆ ಜನ ಹಿಂದುಗಳ ಆಧಾರದ ಮೇಲೆ ಆಡಳಿತ ಹಿಡಿದಿರುವ ಭಾರತೀಯ ಜನತಾ ಪಾರ್ಟಿ ಕೇಂದ್ರದಿಂದ ಗ್ರಾಮದ ಮೂಲೆ ಮೂಲೆಗಳಲ್ಲಿಯೂ ಬೇರೂರಿದೆ. ತಮ್ಮದೆ ಪಕ್ಷದ ನಿಷ್ಠಾವಂತ ಕಾರ್ಯಕರ್ತನ ಸಾವಿಗೆ ತಕ್ಕ ನ್ಯಾಯ ಒದಗಿಸಿಕೊಡಲಾಗದಿದ್ದರೆ ಬೇಸರಗೊಂಡ ಹಿಂದೂ ಕಾರ್ಯಕರ್ತರೆಲ್ಲರೂ ಒಟ್ಟಾಗಿ ಹೊಸ ಪಕ್ಷದ ಮೊರೆ ಹೋಗುವುದರಲ್ಲಿ ಅನುಮಾನವಿಲ್ಲ. ಹಾಗಾಗಿ ನಿಗೂಡವಾಗಿರುವ ಆ ಘಟನೆಯ ರೂವಾರಿಗಳ ಹೆಡೆಮುರಿ ಕಟ್ಟಬೇಕಾದ ಸವಾಲು ಕೇವಲ ಪೋಲಿಸ್ ಇಲಾಖೆಗೆ ಮಾತ್ರವಲ್ಲ ರಾಜ್ಯ ಬಿಜೆಪಿಗೂ ತಟ್ಟಲಿದೆ ಬಿಸಿ.


ಹರೀಶ್ ಪುತ್ತೂರು
ಯುವ ಬರಹಗಾರರು

Leave a Comment

Your email address will not be published. Required fields are marked *