ಸುಳ್ಯ: ವರದಿ ಕೈಸೇರುವವರೆಗೆ ಮರ್ಕಂಜದಲ್ಲಿ ಗಣಿಗಾರಿಕೆ ನಿಲ್ಲಿಸುವ ಭರವಸೆ, ಪ್ರತಿಭಟನೆ ಹಿಂತೆಗೆತ, ಗಣಿ ಇಲಾಖೆಯ ಮಹಜರಿಗೆ ಸಹಿ ಹಾಕದ ಸ್ಥಳೀಯರು
ಸಮಗ್ರ ನ್ಯೂಸ್: ಗಣಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ ವರದಿ ಪ್ರಕಟಿಸುವ ತನಕ ಗಣಿಗಾರಿಕೆ ನಿಲ್ಲಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಸುಳ್ಯ ತಾಲೂಕಿನ ಮರ್ಕಂಜ ಅಳವುಪಾರೆಯಲ್ಲಿ ನಡೆದ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂತೆಗೆದುಕೊಳ್ಳಲಾಗಿದೆ. ಗ್ರಾಮಸ್ಥರ ಆಕ್ರೋಶದ ಹಿನ್ನೆಲೆಯಲ್ಲಿ ಜಿಲ್ಲಾ ಗಣಿ ಅಧಿಕಾರಿಗಳು ಮರ್ಕಂಜದಲ್ಲಿ ನಡೆಯುತ್ತಿರುವ ಕಗ್ಗಲ್ಲಿನ ಗಣಿಗಾರಿಕೆ ಹಾನಿ ಪ್ರದೇಶಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಮರ್ಕಂಜದ ಮಿನುಂಗೂರು ದೇವಸ್ಥಾನ, ಮಾಡ್ನೂರು ಹಿ.ಪ್ರಾ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅಧಿಕಾರಿಗಳು ಈ ಕುರಿತು ವರದಿ ನೀಡುವುದಾಗಿ […]