July 2022

ದ.ಕ. ಜಿಲ್ಲೆಯಲ್ಲಿ ಜು. 6ರಂದು ಶಾಲೆ, ಕಾಲೇಜುಗಳಿಗೆ ರಜೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ಮುಂದುವರಿದಿದ್ದು ಈ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬುಧವಾರವೂ (ಜುಲೈ6 )ಜಿಲ್ಲೆಯ ಎಲ್ಲಾ ಶಾಲೆ, ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ. ನಿರಂತರ ಮಳೆಯಿಂದ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಸಾರ್ವಜನಿಕ ಹಿತಾಸಕ್ತಿಯನ್ನು ಪರಿಗಣಿಸಿ ಎಲ್ಲಾ ಅಂಗನವಾಡಿ ಕೇಂದ್ರಗಳು, ಶಾಲೆಗಳು, ಪಿಯು ಮತ್ತು ಪದವಿ ಕಾಲೇಜುಗಳಿಗೆ ಬುಧವಾರವೂ ರಜೆ ಘೋಷಿಸಲು ನಿರ್ಧರಿಸಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ದ.ಕ. ಜಿಲ್ಲೆಯಲ್ಲಿ ಜು. 6ರಂದು ಶಾಲೆ, ಕಾಲೇಜುಗಳಿಗೆ ರಜೆ Read More »

ಮನೆಯೊಂದರಿಂದ 10 ಗೋಣಿ ಕಾಳುಮೆಣಸು ಕದ್ದು ಸಾಗಿಸುತ್ತಿದ್ದ ಐದು ಆರೋಪಿಗಳ ಬಂಧನ

ಸಮಗ್ರ ನ್ಯೂಸ್ : ಕಳ್ಳರು ಮನೆಯೊಂದರಿಂದ ಕದ್ದಿದ್ದ 10 ಗೋಣಿ ಕಾಳುಮೆಣಸನ್ನು ಸಾಗಿಸುತ್ತಿದ್ದ ವೇಳೆ ಬೆಳ್ಳಾರೆ ಠಾಣಾ ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆಯೊಂದು ನಡೆದಿದೆ. ಬಂಧಿತ ಆರೋಪಿಗಳನ್ನು ಸುಳ್ಯ ತಾಲೂಕಿನ ಕಳಂಜಿ ಮನೆ ನಿವಾಸಿ ಮಂಜು, ಕೊಡಿಯಭೈಲು ಮನೆ ನಿವಾಸಿ ಪ್ರವೀಣ, ಜಾಲ್ಸೂರು ಗ್ರಾಮದ ಬರ್ಪೆಡ್ಕ ನಿವಾಸಿ ಪವನ್ ಕುಮಾರ್ ಹಾಗು ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಅಬ್ದುಲ್ ಬಾಶೀತ್ ಎಂದು ಗುರುತಿಸಲಾಗಿದೆ. ಈ ಕೃತ್ಯದಲ್ಲಿ ಒಟ್ಟು ಐವರು ಭಾಗಿಯಾಗಿದ್ದು ಇನ್ನೊಬ್ಬ ಅಪ್ರಾಪ್ತ ಬಾಲಕ. ಕೊಳ್ತಿಗೆ ಗ್ರಾಮದ

ಮನೆಯೊಂದರಿಂದ 10 ಗೋಣಿ ಕಾಳುಮೆಣಸು ಕದ್ದು ಸಾಗಿಸುತ್ತಿದ್ದ ಐದು ಆರೋಪಿಗಳ ಬಂಧನ Read More »

ಭಾರೀ ಮಳೆ ಹಿನ್ನಲೆ: ಕೊಡಗಿನ ಶಾಲಾ ಕಾಲೇಜುಗಳಿಗೆ ನಾಳೆ(ಜು.6) ರಜೆ ಘೋಷಣೆ

ಸಮಗ್ರ ನ್ಯೂಸ್: ಕೊಡಗು‌ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜುಲೈ 6 ರಂದು‌ ಬುಧವಾರ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಜಿಲ್ಲೆಯಲ್ಲಿ ಕಳೆದ ಕೆಲದಿನಗಳಿಂದ ಭಾರಿ ಮಳೆಯಾಗುತ್ತಿದ್ದು ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಕಾವೇರಿ, ಲಕ್ಷ್ಮಣತೀರ್ಥ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಭಾರೀ ಮಳೆ ಹಿನ್ನಲೆ: ಕೊಡಗಿನ ಶಾಲಾ ಕಾಲೇಜುಗಳಿಗೆ ನಾಳೆ(ಜು.6) ರಜೆ ಘೋಷಣೆ Read More »

ನಾಲ್ಕೇ ಗಂಟೆಗಳಲ್ಲಿ ಹಂತಕರ ಬಂಧಿಸಿದ ಹುಬ್ಬಳ್ಳಿ ಪೊಲೀಸರು| ಇಬ್ಬರು ಆರೋಪಿಗಳು ಅಂದರ್

ಸಮಗ್ರ ನ್ಯೂಸ್: ಹುಬ್ಬಳ್ಳಿ ನಗರದ ಖಾಸಗಿ ಹೋಟೆಲ್ ಬಳಿಯಲ್ಲಿ 40ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದ ಹಂತಕರನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಕೊಲೆಯಾದ‌ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಹಂತಕರಾದ ಕಲಘಟಗಿ ತಾಲೂಕು ಧುಮ್ಮವಾಡ ಗ್ರಾಮದ ಮಹಾಂತೇಶ ಶಿರೂರ, ಮಂಜುನಾಥ ಮರೇವಾಡನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ಇಬ್ಬರು ಕಾರಿನಲ್ಲಿ ಬೆಳಗಾವಿ ಕಡೆಗೆ ಹೋಗುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಇನ್ಸಪೆಕ್ಟರ್ ಜಗದೀಶ ಹಂಚಿನಾಳ ನೇತೃತ್ವದ ತನಿಖಾ ತಂಡವು

ನಾಲ್ಕೇ ಗಂಟೆಗಳಲ್ಲಿ ಹಂತಕರ ಬಂಧಿಸಿದ ಹುಬ್ಬಳ್ಳಿ ಪೊಲೀಸರು| ಇಬ್ಬರು ಆರೋಪಿಗಳು ಅಂದರ್ Read More »

ಅರ್ಧನಿಮಿಷದಲ್ಲಿ 60 ಬಾರಿ ಇರಿದು ಕೊಂದ ಹಂತಕರು| ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ದಾಖಲು

ಸಮಗ್ರ ನ್ಯೂಸ್: ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿಯವರನ್ನು ಹುಬ್ಬಳ್ಳಿಯ ಉಣಕಲ್ ಕ್ರಾಸ್ ಬಳಿಯ ಖಾಸಗಿ ಹೋಟೆಲ್ ನಲ್ಲಿ ಇಂದು ಹತ್ಯೆ ಮಾಡಿರುವ ಘಟನೆ ನಡೆದಿದೆ. ಇದರ ಸಿಸಿ ಟಿವಿ ಫುಟೇಜ್‌ ಈಗ ಬಹಿರಂಗವಾಗಿದ್ದು, ಇದರ ದೃಶ್ಯಗಳು ಎದೆ ನಡುಗಿಸುವಂತಿದೆ. ಚಂದ್ರಶೇಖರ ಗುರೂಜಿಯವರು ಹೋಟೆಲ್‌ ರಿಸೆಪ್ಶನ್‌ ಹಾಲ್‌ ಗೆ ಸಹಜವಾಗಿಯೇ ನಡೆದುಕೊಂಡು ಬಂದಿದ್ದಾರೆ. ಅವರಿಗಾಗಿಯೇ ಕಾದು ಕುಳಿತಿದ್ದ ಹಂತಕರ ಪೈಕಿ ಓರ್ವ ಕಾಲಿಗೆ ಬಿದ್ದಿದ್ದಾನೆ. ಆತನಿಗೆ ಚಂದ್ರಶೇಖರ ಗುರೂಜಿ ಆಶೀರ್ವದಿಸುವ ಸಂದರ್ಭದಲ್ಲಿಯೇ ಮತ್ತೊಬ್ಬ ಮೊದಲಿಗೆ ಎದೆಗೆ ಚಾಕು

ಅರ್ಧನಿಮಿಷದಲ್ಲಿ 60 ಬಾರಿ ಇರಿದು ಕೊಂದ ಹಂತಕರು| ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ದಾಖಲು Read More »

ಸರಳ ವಾಸ್ತು ಗುರೂಜಿ ಹತ್ಯೆ; ಗುರೂಜಿ ಆಪ್ತ ಮಹಾಂತೇಶ್ ಶಿರೂರ ಪತ್ನಿ ಪೋಲಿಸ್ ವಶ

ಸಮಗ್ರ ನ್ಯೂಸ್ : ಸರಳವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಅವರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರೂಜಿಯವರ ಆಪ್ತ ಮಹಾಂತೇಶ್ ಶಿರೂರ ಅವರ ಪತ್ನಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಂದ್ರಶೇಖರ್ ಗುರೂಜಿ ಹತ್ಯೆಯ ಹಿಂದೆ ಅವರ ಆಪ್ತ ಮಹಾಂತೇಶ್ ಕೈವಾಡವಿರುವ ಶಂಕೆ ವ್ಯಕ್ತವಾಗಿದ್ದು, ಪರಿಚಿತರಿಂದಲೇ ಗುರೂಜಿ ಕೊಲೆಯಾಗಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಹುಬ್ಬಳ್ಳಿಯ ಪೊಲೀಸರು ಗುರೂಜಿ ಆಪ್ತ ಮಹಾಂತೇಶ್ ಶಿರೂರ ಅವರ ಪತ್ನಿ ವನಜಾಕ್ಷಿಯನ್ನು ವಶಕ್ಕೆ ಪಡೆದಿದ್ದಾರೆ. ಹುಬ್ಬಳ್ಳಿಯ ಪ್ರೆಸಿಡೆಂಟ್ ಹೋಟೆಲ್ ನಲ್ಲಿ ಇಂದು ಮಧ್ಯಾಹ್ನ ಸರಳವಾಸ್ತು

ಸರಳ ವಾಸ್ತು ಗುರೂಜಿ ಹತ್ಯೆ; ಗುರೂಜಿ ಆಪ್ತ ಮಹಾಂತೇಶ್ ಶಿರೂರ ಪತ್ನಿ ಪೋಲಿಸ್ ವಶ Read More »

ಸುಳ್ಯ ; ಪೌರಕಾರ್ಮಿಕ ವಿಷ ಸೇವಿಸಿ ಆತ್ಮಹತ್ಯೆ

ಸಮಗ್ರ ನ್ಯೂಸ್ : ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ದುಗಲಡ್ಕದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ದುಗಲಡ್ಕ ನೀರಬಿದಿರೆ ನಿವಾಸಿ ದೇವನಾಥ ಎಂದು ಗುರುತಿಸಲಾಗಿದೆ. ನಗರ ಪಂಚಾಯತ್ ನಲ್ಲಿ ಕಸ ಸಂಗ್ರಹ ಮತ್ತು ವಿಲೇವಾರಿ ಘಟಕದಲ್ಲಿ ಪೌರ ಕಾರ್ಮಿಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಇವರು, ನಿನ್ನೆ ವಿಷ ಸೇವಿಸಿದ್ದು, ಕೂಡಲೇ ವಿಷಯ ತಿಳಿದ ಸ್ನೇಹಿತರು ಸುಳ್ಯದ ಆಸ್ಪತ್ರೆಗೆ ದಾಖಲಿಸಿದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಷ್ಟು ಹೊತ್ತಿಗಾಗಲೇ ಮೃತಪಟ್ಟಿದ್ದಾರೆ.

ಸುಳ್ಯ ; ಪೌರಕಾರ್ಮಿಕ ವಿಷ ಸೇವಿಸಿ ಆತ್ಮಹತ್ಯೆ Read More »

ಹರ್ಷ ಹತ್ಯೆ ಆರೋಪಿಗಳಿಗೆ ಜೈಲ್ ನಲ್ಲಿಯೂ ರಾಜಾತಿಥ್ಯ ಸಿಗುತ್ತಿದೆಯೇ..
ವಿಡಿಯೋ ಸ್ಕ್ರೀನ್ ರೆಕಾರ್ಡ್ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಸಮಗ್ರ ನ್ಯೂಸ್ : ಭಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣದ ಆರೋಪಿಗಳು ಬಂಧನಕ್ಕೊಳಗಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಆದರೆ, ಅವರಿಗೆ ಜೈಲ್​ನಲ್ಲಿ​ ರಾಜಾತಿಥ್ಯ ಸಿಗುತ್ತಿದೆಯೇ ಎಂಬ ಅನುಮಾನಗಳು ಕಾಡುತ್ತಿದೆ. ಕಾರಣ ಆರೋಪಿಗಳ ಕೈಗೆ ಮೊಬೈಲ್​ ಸಿಕ್ಕಿದ್ದು, ಅವರು ವಿಡಿಯೋ ಕರೆ ಮಾಡಿರುವ ಸ್ಕ್ರೀನ್​ ರೆಕಾರ್ಡ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹರ್ಷ ಹತ್ಯೆಯಾದ ಬಳಿಕ ಇಡೀ ಶಿವಮೊಗ್ಗ ನಗರವೇ ಹೊತ್ತಿ ಉರಿದಿತ್ತು. ಪರಿಸ್ಥಿತಿಯ ಗಂಭೀರತೆ ಅರಿತ ಪೊಲೀಸರು ಹತ್ಯೆ ನಡೆದ ಒಂದು ದಿನದ ಒಳಗಾಗಿ ಹತ್ಯೆ ಆರೋಪಿಗಳನ್ನು

ಹರ್ಷ ಹತ್ಯೆ ಆರೋಪಿಗಳಿಗೆ ಜೈಲ್ ನಲ್ಲಿಯೂ ರಾಜಾತಿಥ್ಯ ಸಿಗುತ್ತಿದೆಯೇ..
ವಿಡಿಯೋ ಸ್ಕ್ರೀನ್ ರೆಕಾರ್ಡ್ ಸಾಮಾಜಿಕ ಜಾಲತಾಣದಲ್ಲಿ ವೈರಲ್
Read More »

ಬೆಳ್ತಂಗಡಿ: ಮಲಗಿದ್ದಲ್ಲಿಯೇ ಗಂಡನನ್ನು ಬರ್ಬರವಾಗಿ ಕೊಂದ ಹೆಂಡತಿ

ಸಮಗ್ರ ನ್ಯೂಸ್: ಮಲಗಿದ್ದ ಗಂಡನನ್ನು ಹೆಂಡತಿಯೇ ಬರ್ಬರವಾಗಿ ಕೊಲೆ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಅಬಂನ್ ಕರೆ ಎಂಬಲ್ಲಿ‌ ನಡೆದಿದೆ. ಬೇಬಿ ಅಲಿಯಾಸ್ ಪೊಟ್ಟಸ್ ಬೇಬಿ(55) ಕೊಲೆಯಾದ ವ್ಯಕ್ತಿ. ಹೆಂಡತಿ ನಲ್ಲಮ್ಮ(50) ಕೊಲೆ ಮಾಡಿದ ಹೆಂಡತಿ. ಕೊಲೆ‌ ಮಾಡಿದ ಬಳಿಕ ಆಕೆ ಕತ್ತಿ ಹಿಡಿದು ಹೆಣದ ಮುಂದೆ ಕುಳಿತಿದ್ದು ಇಂದು ಬೆಳಗ್ಗೆ ಕೊಲೆ ಘಟನೆ ಬೆಳಕಿಗೆ ಬಂದಿದೆ. ಕ್ಷುಲ್ಲಕ ಕಾರಣಕ್ಕೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಭೇಟಿ ನೀಡಿದ್ದಾರೆ. ದಂಪತಿಗೆ

ಬೆಳ್ತಂಗಡಿ: ಮಲಗಿದ್ದಲ್ಲಿಯೇ ಗಂಡನನ್ನು ಬರ್ಬರವಾಗಿ ಕೊಂದ ಹೆಂಡತಿ Read More »

ಸರಳವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಭೀಕರ ಹತ್ಯೆ

ಸಮಗ್ರ ನ್ಯೂಸ್: ಹುಬ್ಬಳ್ಳಿಯಲ್ಲಿ ಸರಳವಾಸ್ತು ಖ್ಯಾತಿ ಚಂದ್ರಶೇಖರ್ ಗುರೂಜಿಯನ್ನು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಹುಬ್ಬಳ್ಳಿಯ ಖಾಸಗಿ ಹೋಟೆಲ್ ನಲ್ಲಿ ಚಾಕುವಿನಿಂದ ಇರಿದು ದುಷ್ಕರ್ಮಿಗಳು ಸರಳವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿಯ ಬರ್ಬರ ಹತ್ಯೆ ಮಾಡಲಾಗಿದೆ. ಸದ್ಯ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಗುರೂಜಿಯ ಮೃತದೇಹವನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಭಕ್ತರಂತೆ ಬಂದ ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಸರಳವಾಸ್ತು ಮೂಲಕ ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಚಂದ್ರಶೇಖರ ಗುರೂಜಿ ಖ್ಯಾತರಾಗಿದ್ದರು.

ಸರಳವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಭೀಕರ ಹತ್ಯೆ Read More »