July 2022

ಸುಳ್ಯ:ಬೇರೊಬ್ಬನ ಬದಲಿಗೆ ಪ್ರವೀಣ್ ಹತ್ಯೆ? ತಪ್ಪು ಮಾಹಿತಿಯಿಂದ ನಡೆಯಿತೇ ಕಗ್ಗೊಲೆ?

ಸಮಗ್ರ ನ್ಯೂಸ್: ಕರಾವಳಿಯನ್ನೇ ಬೆಚ್ಚಿಬೀಳಿಸಿದ್ದ ಬಿಜೆಪಿ ಮುಖಂಡ ಪ್ರವೀಣ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಆರೋಪಿಗಳು ಹತ್ಯೆಗೆ ನಡೆದಿದ್ದ ಪ್ಲ್ಯಾನ್ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ. ಶಫೀಕ್ ಮತ್ತು ಝಾಕೀರ್ ಇಬ್ಬರು ಬಂಧಿತರು. ಹತ್ಯೆಗೆ ನಿಜವಾದ ಕಾರಣರಾದ ಹಂತಕರ ಬಂಧನವಾಗಿಲ್ಲ. ಹಂತಕರಿಗಾಗಿ ಪೊಲೀಸರ ತಂಡ ರಚಿಸಿದ್ದು ಐಪಿಎಸ್ ಅಧಿಕಾರಿ ನೇತೃತ್ವದ ತಂಡ ಕೇರಳದಲ್ಲಿ ಬೀಡುಬಿಟ್ಟಿದೆ. ಮಾಹಿತಿಯ ಪ್ರಕಾರ ಇಬ್ಬರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎನ್ನಲಾಗಿದೆ. ಶಫೀಕ್ ಮಾಹಿತಿ […]

ಸುಳ್ಯ:ಬೇರೊಬ್ಬನ ಬದಲಿಗೆ ಪ್ರವೀಣ್ ಹತ್ಯೆ? ತಪ್ಪು ಮಾಹಿತಿಯಿಂದ ನಡೆಯಿತೇ ಕಗ್ಗೊಲೆ? Read More »

ಕಷ್ಟಕ್ಕೆ ಮಿಡಿಯುವ ರಾಮ್ ಸೇನಾ

ಸಮಗ್ರ ನ್ಯೂಸ್: ಬಿಜೆಪಿ ಯುವ ಮೋರ್ಚ ಕಾರ್ಯಕರ್ತರಾಗಿದ್ದ ಪ್ರವೀಣ್ ನೆಟ್ಟಾರ್ ರವರ ಮನೆಗೆ ಸುರಪುರ ಜಿಲ್ಲೆಯ ರಾಮ್ ಸೇನಾ ಭೇಟಿ ನೀಡಿದೆ. ಈ ವೇಳೆ ಸುರಪುರ ಶಾಸಕರು ಶ್ರೀರಾಮ ಸೇನೆ ಯುವಕರ ಮುಖಾಂತರ 2ಲಕ್ಷ ರೂ. ಯನ್ನು ಕಳುಹಿಸಿ ಕುಟುಂಬ ಸದಸ್ಯರಿಗೆ ದೂರವಾಣಿ ಮೂಲಕ ಸಾಂತ್ವನ ಹೇಳಿದ್ದಾರೆ. ಅಲ್ಲದೆ ಈ ಸಂದರ್ಭದಲ್ಲಿ ಮಾತನಾಡಿದ ರಾಜು ಗೌಡರು ಬಿಜೆಪಿ ಸರಕಾರ ಇದ್ದರೂ ಇಂತಹ ಘಟನೆ ನಡೆದದ್ದು ತುಂಬಾ ದುಃಖಕರ ಸಂಗತಿ. ಇಂತಹ ಪರಿಸ್ಥಿತಿಯಲ್ಲಿ ರಾಮ ಸೇನಾಯಿಂದ ಯಾವುದೇ ಸಹಾಯಕ

ಕಷ್ಟಕ್ಕೆ ಮಿಡಿಯುವ ರಾಮ್ ಸೇನಾ Read More »

ನಗರಸಭೆ ಮಾಜಿ ಅಧ್ಯಕ್ಷ ನ ಬರ್ಬರ ಹತ್ಯೆ| ಹೊಟ್ಟೆಗೆ ತಲವಾರು ಚುಚ್ಚಿದ ಹಂತಕರು

ಸಮಗ್ರ ನ್ಯೂಸ್: ನಗರಸಭೆ ಮಾಜಿ ಅಧ್ಯಕ್ಷರೊಬ್ಬರನ್ನು ಹಾಡಹಗಲೇ ಬರ್ಬರವಾಗಿ ಕೊಲೆ ಮಾಡಿ, ಹೊಟ್ಟೆಗೆ ತಲವಾರು ಚುಚ್ಚಿ ಅದನ್ನು ಹಂತಕರು ಹಾಗೇ ಬಿಟ್ಟು ಹೋಗಿರುವಂತಹ ಭೀಕರ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ. ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಶಹಬಾದ್ ಪಟ್ಟಣದ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಶಹಬಾದ್ ನಗರಸಭೆ ಮಾಜಿ ಅಧ್ಯಕ್ಷ, ನಗರಸಭೆಯ ಹಾಲಿ ಅಧ್ಯಕ್ಷೆಯ ಪತಿ ಗಿರೀಶ್ ಕಂಬಾನುರ್ ಅವರನ್ನು ಕೊಲೆ‌ ಮಾಡಲಾಗಿದೆ. ನಾಲ್ವರು ಯುವಕರು ಮಾರಕಾಸ್ತ್ರಗಳಿಂದ ಮನಸೋ ಇಚ್ಛೆ ದಾಳಿ ಮಾಡಿ, 15 ರಿಂದ 20 ಬಾರಿ

ನಗರಸಭೆ ಮಾಜಿ ಅಧ್ಯಕ್ಷ ನ ಬರ್ಬರ ಹತ್ಯೆ| ಹೊಟ್ಟೆಗೆ ತಲವಾರು ಚುಚ್ಚಿದ ಹಂತಕರು Read More »

ಡಿ.ವಿ ಸದಾನಂದ ಗೌಡರು ಭೂಮಿ ಮೇಲಿದ್ದಾರಾ..? ಅವರ ಫೋನ್ ನಂಬರ್ ಇದ್ರೆ ಕೊಡಿ…!!
ಜಾಲತಾಣಗಳಲ್ಲಿ ಪೋಸ್ಟರ್ ವೈರಲ್

ಸಮಗ್ರ ನ್ಯೂಸ್: ಕೆಲದಿನಗಳ ಹಿಂದೆಯಷ್ಟೇ ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯಾಗಿದ್ದು ಎಲ್ಲಾ ನಾಯಕರು ಅವರ ಮನೆಗೆ ಬೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಅದರೆ ಸುಳ್ಯದವರೇ ಆದ ಮಾಜಿ ಮುಖ್ಯಮಂತ್ರಿ, ಡಿ.ವಿ ಸದಾನಂದ ಗೌಡರು ಬಾರದೇ ಇರುವುದು ಕಾರ್ಯಕರ್ತರ‌ ಕೆಂಗಣ್ಣಿಗೆ ಗುರಿಯಾಗಿದೆ. ಈ ಕುರಿತು ಜಾಲತಾಣಗಳಲ್ಲಿ ಅಸಮಾದಾನ ವ್ಯಕ್ತಪಡಿಸಿರುವ ಪೋಸ್ಟರ್ ವೈರಲ್ ಆಗಿದೆ. ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಬಂಧಿಸಿದಂತೆ ಅವರ ಮನೆಗೆ ರಾಜ್ಯದ ಮುಖ್ಯಮಂತ್ರಿಗಳು ಸೇರಿದಂತೆ ಸಚಿವರು, ಶಾಸಕರು ಹಾಗೂ ಕೆಲ ಸಂಘಟನೆಯ ಮುಖ್ಯಸ್ಥರು, ಕಾರ್ಯಕರ್ತರು ಬೇಟಿ

ಡಿ.ವಿ ಸದಾನಂದ ಗೌಡರು ಭೂಮಿ ಮೇಲಿದ್ದಾರಾ..? ಅವರ ಫೋನ್ ನಂಬರ್ ಇದ್ರೆ ಕೊಡಿ…!!
ಜಾಲತಾಣಗಳಲ್ಲಿ ಪೋಸ್ಟರ್ ವೈರಲ್
Read More »

ಶಾಂತಿಗಾಗಿ ಲಾಕ್ ಆಯ್ತು ಕರಾವಳಿ| ವಾಣಿಜ್ಯ ವಹಿವಾಟುಗಳು ಬಂದ್

ಸಮಗ್ರ ನ್ಯೂಸ್: ಕೋಮುದಳ್ಳುರಿಯಿಂದ ಕಾದು ಕೆಂಡವಾಗಿರುವ ಕರಾವಳಿಯನ್ನು ತಂಪುಗೊಳಿಸಲು ದ.ಕ ಜಿಲ್ಲಾ ಪೊಲೀಸ್ ಕಠಿಣ ಕ್ರಮ ಕೈಗೊಂಡಿದ್ದು, ಇದೀಗ ಕರಾವಳಿ ಸಂಪೂರ್ಣ ಲಾಕ್ ಆಗಿದೆ. ದ.ಕ ಜಿಲ್ಲೆಯ ಎಲ್ಲಾ ವಾಣಿಜ್ಯ ವಹಿವಾಟುಗಳನ್ನು ಇಂದು ಸಂಜೆ ಆರರಿಂದ ಮುಚ್ಚಲು ದ.ಕ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಆದೇಶಿಸಿದ್ದು, ಇದೀಗ ಮಂಗಳೂರು ಸೇರಿದಂತೆ ಜಿಲ್ಲೆ ಸಂಪೂರ್ಣ ಸ್ಥಬ್ಧವಾಗಿದೆ. ಎಲ್ಲೆಲ್ಲೂ ಪೊಲೀಸ್ ಹದ್ದಿನಗಣ್ಣು ನೆಟ್ಟಿದ್ದು, ಅನುಮಾನ್ಪದ ಚಲನ ವಲನಗಳನ್ನು ಗಮನಿಸುತ್ತಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.

ಶಾಂತಿಗಾಗಿ ಲಾಕ್ ಆಯ್ತು ಕರಾವಳಿ| ವಾಣಿಜ್ಯ ವಹಿವಾಟುಗಳು ಬಂದ್ Read More »

ಚಿಕನ್ ಅಂಗಡಿಯೇ ಪ್ರವೀಣ್ ಪ್ರಾಣಕ್ಕೆ ಕುತ್ತಾಯಿತೇ? ಮತ್ತೊಂದು ಶಾಕಿಂಗ್ ಮಾಹಿತಿ…

ಸಮಗ್ರ ನ್ಯೂಸ್: ಬಿಜೆಪಿ ಕಾರ್ಯಕರ್ತ ಪ್ರವೀಣ್​ ನೆಟ್ಟಾರ್​ಗೆ ಮೊದಲೇ ಸಾವಿನ ಸುಳಿವು ಸಿಕ್ಕಿತ್ತಾ ಎಂಬ ಪ್ರಶ್ನೆ ಈಗ ಉದ್ಭವಿಸಿದೆ. ಇದಕ್ಕೆ ಕಾರಣ, ಪ್ರವೀಣ್​ ಸಹೋದರ ರಂಜಿತ್​ ನೀಡಿರುವ ಸ್ಫೋಟಕ ಮಾಹಿತಿ. ಕಳೆದ ಹಲವು ದಿನಗಳಿಂದ ಪ್ರವೀಣ್​ಗೆ ಕೊಲೆ ಬೆದರಿಕೆ ಕರೆಗಳು ಬರುತ್ತಿರುವ ಬಗ್ಗೆ ರಂಜಿತ್ ಹೇಳಿದರು. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ ಕೂಡಲೇ ಕರೆಗಳು ಬರುತ್ತಿದ್ದವು. ಈ ಬಗ್ಗೆ ಬೆಳ್ಳಾರೆ ಪೊಲೀಸರಿಗೆ ತಿಳಿಸಲಾಗಿತ್ತು ಎಂದಿದ್ದಾರೆ. ಬೆಳ್ಳಾರೆಯಲ್ಲಿ ದೊಡ್ಡ ಮಟ್ಟದಲ್ಲಿ ಚಿಕನ್, ಮಟನ್ ದಂಧೆ ನಡೆಯುತ್ತಿದೆ. ಚಿಕನ್, ಮಟನ್​,

ಚಿಕನ್ ಅಂಗಡಿಯೇ ಪ್ರವೀಣ್ ಪ್ರಾಣಕ್ಕೆ ಕುತ್ತಾಯಿತೇ? ಮತ್ತೊಂದು ಶಾಕಿಂಗ್ ಮಾಹಿತಿ… Read More »

ಮಂಗಳೂರು: ಅಹಿತಕರ ಘಟನೆ ಹಿನ್ನಲೆ; ಸಂಜೆ 6 ಗಂಟೆಗೆ ಅಂಗಡಿ ಮುಂಗಟ್ಟು ಮುಚ್ಚಲು ಡಿ.ಸಿ ಆದೇಶ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಸಂಜೆ 6 ಗಂಟೆಗೆ ಮುಚ್ಚುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಆದೇಶಿಸಿದ್ದಾರೆ. ಇಂದು ಸಂಜೆ (ಜು.29) ರಿಂದ ಆ.1 ರವರೆಗೆ ಈ ಆದೇಶ ಜಾರಿಯಲ್ಲಿರುತ್ತದೆ. ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮಾತ್ರ ಅಂಗಡಿ-ಮುಂಗಟ್ಟು ತೆರೆಯಲು ಅನುಮತಿಯಿದೆ. ಉಳಿದಂತೆ ಸಂಜೆ 6 ಗಂಟೆಯಿಂದ ಮರುದಿನ ಬೆಳಗ್ಗೆ 6 ಗಂಟೆಯವರೆಗೆ ಮುಚ್ಚಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಮಂಗಳೂರು: ಅಹಿತಕರ ಘಟನೆ ಹಿನ್ನಲೆ; ಸಂಜೆ 6 ಗಂಟೆಗೆ ಅಂಗಡಿ ಮುಂಗಟ್ಟು ಮುಚ್ಚಲು ಡಿ.ಸಿ ಆದೇಶ Read More »

ಪ್ರವೀಣ್ ಹತ್ಯೆ ತನಿಖೆ‌ ಎನ್ಐಎ ಗೆ – ಸಿ ಎಂ‌ ಬೊಮ್ಮಾಯಿ

ಸಮಗ್ರ ನ್ಯೂಸ್: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆಯನ್ನು ಎನ್ ಐಎಗೆ ಒಪ್ಪಿಸಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ. ಎನ್ಐಎ ತನಿಖೆಗೆ ಒಪ್ಪಿಸುವ ಬಗ್ಗೆ ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ಪ್ರವೀಣ್ ಕೊಲೆ ಪ್ರಕರಣದಲ್ಲಿ ಅಂತಾರಾಜ್ಯ ನಂಟು ಇರುವ ಹಿನ್ನೆಲೆಯಲ್ಲಿ ಎನ್ ಐಎ ತನಿಖೆಗೆ ಒಪ್ಪಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಪ್ರವೀಣ್ ಹತ್ಯೆ ತನಿಖೆ‌ ಎನ್ಐಎ ಗೆ – ಸಿ ಎಂ‌ ಬೊಮ್ಮಾಯಿ Read More »

“ಎಚ್ಚರದಿಂದಿರಿ, ಒಬ್ಬೊಬ್ಬರೇ ಸುತ್ತಾಡಬೇಡಿ” – ಉಡುಪಿ ಎಸ್.ಪಿ ಸೂಚನೆ

ಸಮಗ್ರ ನ್ಯೂಸ್: ಪ್ರವೀಣ್ ನೆಟ್ಟಾರು ಹತ್ಯೆಯ ನಂತರ ನಿನ್ನೆ ಸಂಜೆ ಸುರತ್ಕಲ್‌ನಲ್ಲಿ ಫಾಝಿಲ್ ಎಂಬ ಯುವಕನ ಕೊಲೆ ನಡೆದಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ವಿವಿಧ ಸಂಘಟನೆಗಳ ಪ್ರಮುಖರಿಗೆ ಎಚ್ಚರದಿಂದಿರಲು ಪೊಲೀಸ್ ಇಲಾಖೆಯಿಂದ ಸಂದೇಶ ರವಾನೆ ಮಾಡಲಾಗಿದೆ. ಕೊಲೆ ನಡೆದಿರುವುದರಿಂದ ಪೊಲೀಸ್ ಇಲಾಖೆ ವಿಶೇಷ ಕಾರ್ಯಾಚರಣೆ ನಡೆಸುತ್ತಿದೆ. ಮತ್ತು ಸಂಘ ಪರಿವಾರ ಸಹಿತವಾಗಿ ವಿವಿಧ ಸಂಘಟನೆಯ ಪ್ರಮುಖರು ಎಚ್ಚರದಿಂದಿರುವಂತೆ ಮತ್ತು ರಾತ್ರಿ ವೇಳೆಯಲ್ಲಿ ಒಬ್ಬೊಬ್ಬರಾಗಿ ಸುತ್ತಾಡದಂತೆ ಸಲಹೆ ನೀಡಲಾಗಿದೆ. ಜಿಲ್ಲೆಯ ನಗರ ಮತ್ತು ಗ್ರಾಮೀಣ ಭಾಗ ಸೇರಿದಂತೆ ಸೂಕ್ಷ್ಮ

“ಎಚ್ಚರದಿಂದಿರಿ, ಒಬ್ಬೊಬ್ಬರೇ ಸುತ್ತಾಡಬೇಡಿ” – ಉಡುಪಿ ಎಸ್.ಪಿ ಸೂಚನೆ Read More »

ಪ್ರಮೋದ್ ಮುತಾಲಿಕ್ ನ ಅರೆಸ್ಟ್ ಮಾಡಿದ ಪೊಲೀಸರು| ದ.ಕ ಪ್ರವೇಶಿಸದಂತೆ ತಡೆ

ಸಮಗ್ರ ನ್ಯೂಸ್: ಪ್ರವೀಣ್ ಹತ್ಯೆ ಬೆನ್ನಲ್ಲೆ ಮುಂಜಾಗೃತಾ ಕ್ರಮವಾಗಿ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಗೆ ದಕ್ಷಿಣಕನ್ನಡ ಪ್ರವೇಶಕ್ಕೆ ಜಿಲ್ಲಾಡಳಿತ ನಿಷೇಧ ಹೇರಿದ್ದು, ಆದರೂ ಮುತಾಲಿಕ್ ಇಂದು ದಕ್ಷಿಣಕನ್ನಡ ಜಿಲ್ಲೆಗೆ ಆಗಮಿಸಿದ್ದು, ಅವರನ್ನು ಹೆಜಮಾಡಿಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಿಜೆಪಿ ಯುವ ಮುಖಂಡ ಪ್ರವೀಣ್ ಹತ್ಯೆ ಬೆನ್ನಲ್ಲೆ ದಕ್ಷಿಣಕನ್ನಡ ಜಿಲ್ಲಾಡಳಿತ ಮುಂಜಾಗೃತಾ ಕ್ರಮವಾಗಿ ಪ್ರಮೋದ್ ಮುತಾಲಿಕ್ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ ಹೇರಿತ್ತು, ಪ್ರಮೋದ್ ಮುತಾಲಿಕ್ ಪ್ರವೀಣ್ ಮನೆಗೆ ಭೇಟಿ ನೀಡುವ ಸಾಧ್ಯತೆ ಇದೆ ಎಂಬ ಮಾಹಿತಿ ಹಿನ್ನಲೆ

ಪ್ರಮೋದ್ ಮುತಾಲಿಕ್ ನ ಅರೆಸ್ಟ್ ಮಾಡಿದ ಪೊಲೀಸರು| ದ.ಕ ಪ್ರವೇಶಿಸದಂತೆ ತಡೆ Read More »