ವಿಧಾನಸಭಾ ಚುನಾವಣೆ ಹಿನ್ನೆಲೆ| ಸುನಿಲ್ ಕುಮಾರ್ ಗೆ ಸಿಗುತ್ತಾ ಬಿಜೆಪಿ ಸಾರಥ್ಯ? ಹಿಂದುಳಿದ ವರ್ಗಗಳ ಓಲೈಕೆಗೆ ಮುಂದಾಗಿದೆ ಕೇಸರಿ ಪಡೆ
ಸಮಗ್ರ ನ್ಯೂಸ್: ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕೇಂದ್ರ ಬಿಜೆಪಿ ನಾಯಕತ್ವ ಹಿಂದುಳಿದ ವರ್ಗಗಳನ್ನು ಸೆಳೆಯಲು ಹವಣಿಸುತ್ತಿದೆ. ಇದಕ್ಕಾಗಿ ಬಿಜೆಪಿ ಪಾಳಯದಲ್ಲಿನ ಪ್ರಭಾವಿ ಯುವ ನಾಯಕರಿಗೆ ಮಣೆ ಹಾಕಲು ಕೇಸರಿ ಪಡೆ ಸಜ್ಜಾಗಿದೆ. ಜೆಡಿಎಸ್‌ನ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರಂತಹ ಪ್ರಾದೇಶಿಕ ನಾಯಕರಿಗೆ, ಪಕ್ಷವು ಪರ್ಯಾಯ ನಾಯಕರನ್ನು ಬೆಳೆಸಲು ನೋಡುತ್ತಿದೆ. ವಿಧಾನಸಭಾ ಚುನಾವಣೆಯಲ್ಲಿ ಜಾತಿ ಅಂಶವು ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ಹೈಕಮಾಂಡ್ ಅರಿತುಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಮುಖ್ಯಮಂತ್ರಿ ಬಸವರಾಜ […]