July 2022

ರಸ್ತೆ ಬದಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ; ಸವಾರ ಸಾವು

ತುಮಕೂರು : ಊರುಕೆರೆ ಬಳಿಯಲ್ಲಿ ರಸ್ತೆಯ ಬಳಿಯಲ್ಲಿ ನಿಂತಿದ್ದ ಲಾರಿಗೆ ಬೈಕ್‌ ಡಿಕ್ಕಿ, ಸ್ಥಳದಲ್ಲೇ ಬೈಕ್‌ ಸವಾರ ಸಾವನ್ನಪ್ಪಿದ ಘಟನೆಯೊಂದು ನಡೆದಿದೆ. ಪಂಚರ್‌ ಆಗಿದ್ದ ಲಾರಿಯನ್ನು ರಸ್ತೆಯ ಬಳಿ ನಿಲ್ಲಿಸಿದ್ದರು. ಈ ವೇಳೆ ಲಾರಿಗೆ ಬೈಕ್‌ ಡಿಕ್ಕಿ ಹೊಡೆದು, ಸ್ಥಳದಲ್ಲೇ ಬೈಕ್‌ ಸವಾರ ಸಾವನ್ನಪ್ಪಿದ ಘಟನೆ ತುಮಕೂರು ಊರುಕೆರೆ ಬಳಿ ನಡೆದಿದೆ. ಬೊಮ್ಮನಹಳ್ಳಿಯ ನವೀನ್‌ ಕುಮಾರ್‌ (34) ಮೃತ ಪಟ್ಟ ಬೈಕ್‌ ಸವಾರ. ತುಮಕೂರಿನ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ರಸ್ತೆ ಬದಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ; ಸವಾರ ಸಾವು Read More »

ಮಂಗಳೂರು ನಿಂದ ಹೊಸದುರ್ಗ ಕ್ಕೆ ಪ್ರತಿಷ್ಠಿತ ವೋಲ್ಟೋ ಸಾರಿಗೆ ಆರಂಭ

ಉಡುಪಿ : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಮಂಗಳೂರು ವಿಭಾಗದಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಮಂಗಳೂರು-ಹೊಸದುರ್ಗ ಮಾರ್ಗದಲ್ಲಿ ಪ್ರತಿಷ್ಠಿತ ವೋಲ್ವೋ ಸಾರಿಗೆಯನ್ನು ಈಗಾಗಲೇ ಪ್ರಾರಂಭಿಸಲಾಗಿರುತ್ತದೆ. ಸಾರಿಗೆಯು ಮಂಗಳೂರಿನಿಂದ ರಾತ್ರಿ 9.30 ಕ್ಕೆ ಹೊರಟು ಸುರತ್ಕಲ್-ಪಡುಬಿದ್ರೆ-ಉಡುಪಿ-ಮಣಿಪಾಲ- ಕುಂದಾಪುರ-ಸಿದ್ದಾಪುರ-ಮಾಸ್ತಿಕಟ್ಟೆ-ತೀರ್ಥಹಳ್ಳಿ- ಶಿವಮೊಗ್ಗ-ಹೊಳೆಹೊನ್ನೂರು – ಚೆನ್ನಗಿರಿ-ಹೊಳಲ್ಕೆರೆ ಮಾರ್ಗವಾಗಿ ಹೊಸದುರ್ಗಕ್ಕೆ ಬೆಳಗ್ಗೆ 5.45 ಕ್ಕೆ ಹಾಗೂ ಮರುಪ್ರಯಾಣದಲ್ಲಿ ಹೊಸದುರ್ಗದಿಂದ ರಾತ್ರಿ 10 ಗಂಟೆಗೆ ಹೊರಟು ಬೆಳಗ್ಗೆ 6.15 ಕ್ಕೆ ಮಂಗಳೂರನ್ನು ತಲಪುತ್ತದೆ. ಸಾರಿಗೆಯಲ್ಲಿ ಮಂಗಳೂರಿನಿಂದ ಹೊಸದುರ್ಗಕ್ಕೆ ಪ್ರತಿ ಪ್ರಯಾಣಿಕರಿಗೆ ಒಟ್ಟು ಪ್ರಯಾಣದರ 700 ರೂ.

ಮಂಗಳೂರು ನಿಂದ ಹೊಸದುರ್ಗ ಕ್ಕೆ ಪ್ರತಿಷ್ಠಿತ ವೋಲ್ಟೋ ಸಾರಿಗೆ ಆರಂಭ Read More »

ಹಾವೇರಿ ಮೂಲದ ಯೋಧ ಹೃದಯಾಘಾತದಿಂದ ನಿಧನ

ಹಾವೇರಿ – ಪಂಜಾಬ್‍ನ ಪಠಾಣ್‍ಕೋಟ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹಾವೇರಿ ಮೂಲದ ಯೋಧ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ತಾಲ್ಲೂಕಿನ ಕೆ.ಬಿ.ತಿಮ್ಮಾಪುರ ಗ್ರಾಮದ ಸುತ್ತೂರು ಮಠ(40) ಮೃತಪಟ್ಟ ಯೋಧ. ಪಾರ್ಥೀವ ಶರೀರವನ್ನು ಇಂದು ಹುಟ್ಟೂರಿಗೆ ತರಲಾಗುತ್ತಿದ್ದು, ಅವರ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು. ಬಿಎಸ್‍ಎಫ್‍ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮಲ್ಲಿಕಾರ್ಜುನಯ್ಯ ಜುಲೈ 21ರ ಮುಂಜಾನೆ ಮೃತಪಟ್ಟಿದ್ದರು. ಇಂದು ಅವರ ಮೃತದೇಹ ಸ್ವಗ್ರಾಮಕ್ಕೆ ಆಗಮಿಸಲಿದ್ದು, ಅಂತ್ಯಸಂಸ್ಕಾರ ನೆರವೇರಲಿದೆ.

ಹಾವೇರಿ ಮೂಲದ ಯೋಧ ಹೃದಯಾಘಾತದಿಂದ ನಿಧನ Read More »

ಕಾರು ರಸ್ತೆ ಹೊಂಡಕ್ಕೆ ಬಿದ್ದು ವಿದ್ಯುತ್ ಕಂಬಕ್ಕೆ ಡಿಕ್ಕಿ

ಉಡುಪಿ : ಇಂದು ಬೆಳ್ಳಂಬೆಳ್ಳಗೆ ಕಾಪುವಿನಲ್ಲಿ ಕಾರು ರಸ್ತೆ ಹೊಂಡಕ್ಕೆ ಬಿದ್ದು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಘಟನೆಯೊಂದು ನಡೆದಿದೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ರಸ್ತೆ ಗುಂಡಿಗಳಿಂದ ಕೂಡಿದ್ದು ಮಳೆ ಬಂದ ಪರಿಣಾಮ ಗುಂಡಿಗಳಲ್ಲಿ ನೀರು ತುಂಬಿ ವಾಹನ ಸವಾರರಿಗೆ ಮೃತ್ಯುಕೂಪವಾಗಿ ಪರಿಣಮಿಸುತ್ತಿವೆ. ಕಾಪು ಬಳಿ ಕಾರು ರಸ್ತೆಯಲ್ಲಿದ್ದ ಹೊಂಡಕ್ಕೆ ಬಿದ್ದ ಪರಿಣಾಮ ಚಾಲಕಿಯ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಕಾರಿನ ಚಾಲಕಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಕಾಪು ಠಾಣಾ ಪೊಲೀಸರು

ಕಾರು ರಸ್ತೆ ಹೊಂಡಕ್ಕೆ ಬಿದ್ದು ವಿದ್ಯುತ್ ಕಂಬಕ್ಕೆ ಡಿಕ್ಕಿ Read More »

ತಾಂತ್ರಿಕ ದೋಷದಿಂದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

ರಾಮನಗರ: ತಾಂತ್ರಿಕ ದೋಷದಿಂದಾಗಿ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿರುವ ಘಟನೆ ನಡೆದಿದೆ. ಹೆಲಿಕಾಪ್ಟರ್ ನೋಡಲು ಸಾವಿರಾರು ಜನರು ಮುಗಿ ಬಿದ್ದಿದ್ದಾರೆ. ತಮಿಳುನಾಡಿನಿಂದ ಬೆಂಗಳೂರಿಗೆ ಬರುತ್ತಿದ್ದ ಹೆಲಿಕಾಪ್ಟರ್ ನಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು, ತಕ್ಷಣ ರಾಮನಗರದ ಎಸ್.ಬಿ.ಕಲ್ಯಾಣ ಮಂಟಪದ ಬಳಿ ಹೆಲಿಕಾಪ್ಟರ್ ನ್ನು ತುರ್ತು ಲ್ಯಾಂಡಿಂಗ್ ಮಾಡಲಾಗಿದೆ. ಹೆಲಿಕಾಪ್ಟರ್ ನಲ್ಲಿ ಇಬ್ಬರು ಪೈಲಟ್ ಗಳು ಮಾತ್ರ ಪ್ರಯಾಣಿಸುತ್ತಿದ್ದರು. ಹೆಲಿಕಾಪ್ಟರ್ ದುರಸ್ತಿ ಬಳಿಕ ಮತ್ತೆ ಹಾರಾಟ ನಡೆಸಿದೆ ಎಂದು ತಿಳಿದುಬಂದಿದೆ.

ತಾಂತ್ರಿಕ ದೋಷದಿಂದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ Read More »

ಕುಂದಾಪುರ: ಲಾಡ್ಜ್ ನಲ್ಲಿ ಪತ್ತೆಯಾದ ಭಿನ್ನಕೋಮಿನ ಜೋಡಿ; ಸಂಘಟನೆ ಕಾರ್ಯಕರ್ತರಿಂದ ದಾಳಿ

ಸಮಗ್ರ ನ್ಯೂಸ್: ಮಂಗಳೂರಿನಿಂದ ಬೈಂದೂರು ಸಮೀಪದ ಉಪ್ಪುಂದದ ಹೋಟೆಲ್‌ಗೆ ಬಂದಿದ್ದ ಅನ್ಯಕೋಮಿನ ಜೋಡಿಯೊಂದನ್ನು ಸಾರ್ವಜನಿಕರು ಬೈಂದೂರು ಪೊಲೀಸರಿಗೆ ಒಪ್ಪಿಸಿದ ಘಟನೆ ಶುಕ್ರವಾರ ನಡೆದಿದೆ. ಉಳ್ಳಾಲದ ತೊಕ್ಕೊಟ್ಟುವಿನಲ್ಲಿ ಗುಜಿರಿ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಅಮೀರ್ ಆಲಿ (45) ಎಂಬಾತ ಶುಕ್ರವಾರ ಮಧ್ಯಾಹ್ನದ ಸುಮಾರಿಗೆ ಎರ್ಟಿಕಾ ಕಾರಿನಲ್ಲಿ ಹಿಂದೂ ಧರ್ಮದ ಸುಮಾರು 28 ವರ್ಷದ ಯುವತಿಯೊಂದಿಗೆ ಉಪ್ಪುಂದದ ಪರಿಚಯ ಹೋಟೇಲ್‌ಗೆ ಕರೆ ತಂದಿದ್ದು ಲಾಡ್ಜ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಈ ವಿಚಾರ ಹಿಂದೂಪರ ಸಂಘಟನೆಯ ಕಾರ್ಯಕರ್ತರಿಗೆ ಗೊತ್ತಾಗಿ ಹೋಟೆಲ್‌ಗೆ ಮುತ್ತಿಗೆ ಹಾಕಿದ್ದು,

ಕುಂದಾಪುರ: ಲಾಡ್ಜ್ ನಲ್ಲಿ ಪತ್ತೆಯಾದ ಭಿನ್ನಕೋಮಿನ ಜೋಡಿ; ಸಂಘಟನೆ ಕಾರ್ಯಕರ್ತರಿಂದ ದಾಳಿ Read More »

ಪುತ್ತೂರು: ಪೂಜೆಗೆಂದು ತಂದ ಬೆಲ್ಲದೊಳಗಿತ್ತು ಬ್ಯಾಟರಿ

ಸಮಗ್ರ ನ್ಯೂಸ್: ಪೂಜೆಗೆಂದು ತಂದ‌ ಬೆಲ್ಲದೊಳಗೆ ಬ್ಯಾಟರಿ ಪತ್ತೆಯಾದ ಘಟನೆ ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರುನಲ್ಲಿ ನಡೆದಿದೆ. ಗ್ರಾಮದ ಪೆರ್ನಾಜೆ ರಾಮಕೃಷ್ಣ ಉಂಗ್ರುಪುಳಿತ್ತಾಯ ಎಂಬವರು‌ ಇಂದು ಬೆಳಗ್ಗೆ ಪೂಜೆಗೆಂದು ಬೆಲ್ಲ ತಂದಿದ್ದು ಈ ಬೆಲ್ಲದಲ್ಲಿ ಬ್ಯಾಟರಿ ಸಿಕ್ಕಿದೆ.

ಪುತ್ತೂರು: ಪೂಜೆಗೆಂದು ತಂದ ಬೆಲ್ಲದೊಳಗಿತ್ತು ಬ್ಯಾಟರಿ Read More »

ಮಂಗಳೂರು: ಕಂಬಕ್ಕೆ ಡಿಕ್ಕಿ ಹೊಡೆದ ರೈಲು

ರೈಲೊಂದು ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಕಂಕನಾಡಿ ರೈಲು ನಿಲ್ದಾಣದ ಬಳಿ ಶುಕ್ರವಾರ ತಡರಾತ್ರಿ ನಡೆದಿದೆ. ರೈಲಿನ ಎರಡು ಬೋಗಿಗಳು ಹಳಿ ತಪ್ಪಿದ ಪರಿಣಾಮ ಪಕ್ಕದಲ್ಲೇ ಇದ್ದ ಕಂಬಕ್ಕೆ ಢಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ. ಆದರೆ ಯಾವುದೇ ಅನಾಹುತ ಸಂಭವಿಸಿಲ್ಲ‌ ಎಂದು ತಿಳಿದುಬಂದಿದೆ.

ಮಂಗಳೂರು: ಕಂಬಕ್ಕೆ ಡಿಕ್ಕಿ ಹೊಡೆದ ರೈಲು Read More »

ವೆಸ್ಟ್ ಇಂಡೀಸ್ ಏಕದಿನ ಸರಣಿ| ಮೂರು ರನ್ ಗಳ ರೋಚಕ ಜಯ ಗಳಿಸಿದ ಇಂಡಿಯಾ

ಸಮಗ್ರ ನ್ಯೂಸ್: ಆತಿಥೇಯ ವೆಸ್ಟ್‌ ಇಂಡೀಸ್‌ ವಿರುದ್ಧದ ಮೂರು ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ 3 ರನ್‌ ಅಂತರದ ಗೆಲುವು ಸಾಧಿಸಿದೆ. ಟ್ರೆನಿಡಾಡ್‌ನ ಕ್ವೀನ್ಸ್‌ ಪಾರ್ಕ್‌ ಓವಲ್‌ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ವಿಂಡೀಸ್‌ ತಂಡದ ನಾಯಕ ನಿಕೋಲಸ್‌ ಪೂರನ್‌, ಭಾರತವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ರೋಹಿತ್‌ ಶರ್ಮಾ ಅನುಪಸ್ಥಿತಿಯಲ್ಲಿ ನಾಯಕತ್ವದ ಹೊಣೆ ಹೊತ್ತಿರುವ ಶಿಖರ್‌ ಧವನ್‌ ಹಾಗೂ ಶುಭಮನ್‌ ಗಿಲ್‌ ಭಾರತಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಈ ಜೋಡಿ,

ವೆಸ್ಟ್ ಇಂಡೀಸ್ ಏಕದಿನ ಸರಣಿ| ಮೂರು ರನ್ ಗಳ ರೋಚಕ ಜಯ ಗಳಿಸಿದ ಇಂಡಿಯಾ Read More »

ಮಂಗಳೂರು: ಕಾಲೇಜು ವಿದ್ಯಾರ್ಥಿಗಳ ಲಿಪ್ ಲಾಕ್ ಪ್ರಕರಣ| ಅಶ್ಲೀಲ ವಿಡಿಯೋ ವಿದ್ಯಾರ್ಥಿಗಳದ್ದಲ್ಲ ಎಂದ ಪೊಲೀಸರು

ಸಮಗ್ರ ನ್ಯೂಸ್: ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳ ಲಿಪ್ ಲಾಕ್ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಒಟ್ಟು 5 ಮಂದಿ ವಿದ್ಯಾರ್ಥಿಗಳನ್ನು ಬಂಧಿಸಿದ್ದು, ವಿಚಾರಣೆ ವೇಳೆ ಮಹತ್ವದ ಮಾಹಿತಿ ಹೊರಬಿದ್ದಿದೆ. ಬಂಧಿತರೆಲ್ಲರೂ ಅಪ್ರಾಪ್ತ ವಯಸ್ಸಿನವರಾಗಿದ್ದು, ಅವರನ್ನು ಬಾಲನ್ಯಾಯ ಮಂಡಳಿ ಮುಂದೆ ಹಾಜರುಪಡಿಸಿ ಹೆತ್ತವರಿಗೆ ಒಪ್ಪಿಸಿದೆ. ಅಗತ್ಯಬಿದ್ದಾಗ ತನಿಖಾಧಿಕಾರಿಗಳ ಮುಂದೆ ಹಾಜರಾಗುವಂತೆ ಆದೇಶ ನೀಡಿದೆ. ಬಂಧಿತರಲ್ಲಿ ವೀಡಿಯೋ ಚಿತ್ರೀಕರಣ ಮಾಡಿದವನು, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಮಾಡಿದವನು ಕೂಡ ಸೇರಿದ್ದಾರೆ. ಒಟ್ಟು ಸುಮಾರು 8 ಮಂದಿ ವಿದ್ಯಾರ್ಥಿಗಳು ಈ ಕೃತ್ಯದಲ್ಲಿ ಭಾಗವಹಿಸಿದ್ದು,

ಮಂಗಳೂರು: ಕಾಲೇಜು ವಿದ್ಯಾರ್ಥಿಗಳ ಲಿಪ್ ಲಾಕ್ ಪ್ರಕರಣ| ಅಶ್ಲೀಲ ವಿಡಿಯೋ ವಿದ್ಯಾರ್ಥಿಗಳದ್ದಲ್ಲ ಎಂದ ಪೊಲೀಸರು Read More »