Ad Widget .

ಡಿ.ವಿ ಸದಾನಂದ ಗೌಡರು ಭೂಮಿ ಮೇಲಿದ್ದಾರಾ..? ಅವರ ಫೋನ್ ನಂಬರ್ ಇದ್ರೆ ಕೊಡಿ…!!
ಜಾಲತಾಣಗಳಲ್ಲಿ ಪೋಸ್ಟರ್ ವೈರಲ್

ಸಮಗ್ರ ನ್ಯೂಸ್: ಕೆಲದಿನಗಳ ಹಿಂದೆಯಷ್ಟೇ ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯಾಗಿದ್ದು ಎಲ್ಲಾ ನಾಯಕರು ಅವರ ಮನೆಗೆ ಬೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಅದರೆ ಸುಳ್ಯದವರೇ ಆದ ಮಾಜಿ ಮುಖ್ಯಮಂತ್ರಿ, ಡಿ.ವಿ ಸದಾನಂದ ಗೌಡರು ಬಾರದೇ ಇರುವುದು ಕಾರ್ಯಕರ್ತರ‌ ಕೆಂಗಣ್ಣಿಗೆ ಗುರಿಯಾಗಿದೆ. ಈ ಕುರಿತು ಜಾಲತಾಣಗಳಲ್ಲಿ ಅಸಮಾದಾನ ವ್ಯಕ್ತಪಡಿಸಿರುವ ಪೋಸ್ಟರ್ ವೈರಲ್ ಆಗಿದೆ.

Ad Widget . Ad Widget .

ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಬಂಧಿಸಿದಂತೆ ಅವರ ಮನೆಗೆ ರಾಜ್ಯದ ಮುಖ್ಯಮಂತ್ರಿಗಳು ಸೇರಿದಂತೆ ಸಚಿವರು, ಶಾಸಕರು ಹಾಗೂ ಕೆಲ ಸಂಘಟನೆಯ ಮುಖ್ಯಸ್ಥರು, ಕಾರ್ಯಕರ್ತರು ಬೇಟಿ ನೀಡಿ ಸಾಂತ್ವನ ಹೇಳಿದ್ದು, ಪರಿಹಾರವನ್ನೂ ನೀಡಿದ್ದಾರೆ.

Ad Widget . Ad Widget .

ಆದರೆ ಪಕ್ಕದ ಊರಿನವರಾದ ಸುಳ್ಯ ತಾಲೂಕಿನ, ಮಂಡೆಕೋಲು ಗ್ರಾಮದ ದೇವರಗುಂಡದವರಾದ ಮಾಜಿ ಮುಖ್ಯ ಮಂತ್ರಿಯಾಗಿರುವ ಡಿ.ವಿ ಸದಾನಂದ ಗೌಡರು ಬಾರದೇ ಇರುವುದು ಮತ ನೀಡಿ ಗೆಲ್ಲಿಸಿದ ಕಾರ್ಯಕರ್ತರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ಇದೀಗ ಜಾಲತಾಣಗಳಲ್ಲಿ ಪೋಷ್ಟರ್ ವೈರಲ್ ಆಗಿದ್ದು `ನಮ್ಮೂರಿನಲ್ಲಿ @ಡಿ.ವಿ ಸದಾನಂದ ಗೌಡ ಅಂತ ಒಬ್ರು ಇದ್ರು. ಈಗ ಅವರು ಭೂಮಿ ಮೇಲೆ ಇದ್ದಾರಾ ಯಾರಿಗಾದ್ರು ಗೊತ್ತಾ? ಯಾಕಂದ್ರೆ ಅವರ ಊರಿನಲ್ಲೇ ಒಂದು ಕೊಲೆಯಾಗಿದೆ ತಿಳಿಸಬೇಕಿತ್ತು ಅವರ ಫೋನ್ ನಂಬರ್ ಯಾರಲ್ಲಾದರೂ ಇದ್ರೆ ಕೊಡಿ ನಾನಾದರು ಫೋನ್ ಮಾಡಿ ಹೇಳ್ತೇನೆ’ ಎನ್ನುವ ಬರವಣಿಗೆಯಲ್ಲಿ ಇದೀಗ ಜಾಲತಾಣಗಳಲ್ಲಿ ವೈರಲ್ ಅಗುತ್ತಿದೆ.

Leave a Comment

Your email address will not be published. Required fields are marked *