ಮಂಗಳೂರು: ಸಂಘಟನೆಗಳ ಮುತ್ತಿಗೆ ಸಾಧ್ಯತೆ ಹಿನ್ನಲೆ| ರೋಹಿತ್ ಚಕ್ರತೀರ್ಥರ ಸನ್ಮಾನ ಕಾರ್ಯಕ್ರಮ ದಿಢೀರ್ ರದ್ದು
ಸಮಗ್ರ ನ್ಯೂಸ್: ಚಿಂತಕ ಹಾಗೂ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷರಾಗಿದ್ದ ರೋಹಿತ್ ಚಕ್ರತೀರ್ಥರಿಗೆ ಮಂಗಳೂರಿನಲ್ಲಿ ಜೂನ್ 25ರ ಶನಿವಾರದಂದು ಆಯೋಜಿಸಲಾಗಿದ್ದ ‘ನಾಗರಿಕ ಸನ್ಮಾನ’ ಕಾರ್ಯಕ್ರಮ ರದ್ದಾಗಿದೆ. ಕಾರ್ಯಕ್ರಮದ ಸಂಘಟಕ ನಾಗೇಶ್ ಶೆಣೈ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಶಾಂತಿ ಸುವ್ಯವಸ್ಥೆಗೆ ಭಂಗ ಬರುವ ಬಗ್ಗೆ ನಮಗೆ ಮಾಹಿತಿ ಬಂತು. ಅಲ್ಲದೇ, ಸೋಷಿಯಲ್ ಮೀಡಿಯಾಗಳಲ್ಲಿ ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕುವ ಬಗ್ಗೆ ಕೆಲವರು ಪೋಸ್ಟ್ ಹಾಕಿದ್ದರು. ನಮ್ಮ ಕಾರ್ಯಕ್ರಮದಿಂದ ಮಂಗಳೂರಿನ ಶಾಂತಿ-ಸುವ್ಯವಸ್ಥೆಗೆ ಭಂಗ ಬರುವುದು ಬೇಡ ಎಂದು ಕಾರ್ಯಕ್ರಮ ರದ್ದು […]