June 2022

ಮತ್ತೆ ಹೆಚ್ಚುತ್ತಿರುವ ಕೋವಿಡ್| ಆರೋಗ್ಯ ಇಲಾಖೆಯಿಂದ ಹೊಸ ಮಾರ್ಗಸೂಚಿ ಪ್ರಕಟ

ಸಮಗ್ರ ನ್ಯೂಸ್: ಸಿಲಿಕಾನ್ ಸಿಟಿಯಲ್ಲಿ ದಿನೆ ದಿನೇ ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಕೋವಿಡ್ ಲಕ್ಷಣಗಳಿರುವವರನ್ನು ಶಾಲೆ, ಕಾಲೇಜು ಮತ್ತು ಕಚೇರಿಗೆ ಹಾಜರಾಗದಂತೆ ಸೂಚಿಸುವುದು, ಮಾಸ್ಕ್ ಸೇರಿದಂತೆ ಹಲವು ವಿಷಯ ಒಳಗೊಂಡ ಮಾರ್ಗಸೂಚಿಯನ್ನು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರಡಿಸಿದೆ. ಮಾರ್ಗಸೂಚಿಯಲ್ಲಿ ಏನಿದೆ?: ಬೆಂಗಳೂರು ನಗರ ವ್ಯಾಪ್ತಿಗೆ ಅನ್ವಯಿಸಿ ಶಿಕ್ಷಣ ಸಂಸ್ಥೆ, ಕಾಲೇಜು ಹಾಗೂ ಅಪಾರ್ಟ್‌ಮೆಂಟ್‌ಗಳಲ್ಲಿ ಕೋವಿಡ್ ಪರೀಕ್ಷೆ, ಚಿಕಿತ್ಸೆ, ಕ್ವಾರಂಟೈನ್, ಪ್ರವೇಶ ಕುರಿತ ಪರಿಷ್ಕೃತ ಮಾರ್ಗಸೂಚಿಯನ್ನು ಪ್ರಕಟಿಸಲಾಗಿದೆ. ಸೋಂಕು ಕಂಡು ಬಂದರೆ […]

ಮತ್ತೆ ಹೆಚ್ಚುತ್ತಿರುವ ಕೋವಿಡ್| ಆರೋಗ್ಯ ಇಲಾಖೆಯಿಂದ ಹೊಸ ಮಾರ್ಗಸೂಚಿ ಪ್ರಕಟ Read More »

ನೂಪುರ್ ಶರ್ಮಾರನ್ನು ಬೆಂಬಲಿಸಿ ಪೋಸ್ಟ್ ಹಾಕಿದವರ ರುಂಡ ಚೆಂಡಾಡಿದ ದುಷ್ಕರ್ಮಿಗಳು| ಮೋದಿಯನ್ನೂ ಕೊಲ್ಲುವುದಾಗಿ ಬೆದರಿಕೆ

ಸಮಗ್ರ ನ್ಯೂಸ್: ನುಪೂರ್ ಶರ್ಮಾ ಬೆಂಬಲಿಸಿ ಪೋಸ್ಟ್ ಹಾಕಿದ್ದಕ್ಕೆ ರಾಜಸ್ಥಾನದ ಉದಯಪುರದಲ್ಲಿ ಅಂಗಡಿ ಮಾಲೀಕನ ಶಿರಚ್ಛೇದ ಮಾಡಲಾಗಿದೆ. ವ್ಯಕ್ತಿಯನ್ನು ದುಷ್ಕರ್ಮಿಗಳು ಶಿರಶ್ಚೇಧ ಮಾಡಿದ್ದಾರೆ. ಉದಯಪುರ ನಗರದ ಮಾಲ್ಡಾಸ್ ಸ್ಟ್ರೀಟ್ ಪ್ರದೇಶದಲ್ಲಿ ಘಟನೆ ನಡೆದಿದೆ. ಶಿರಚ್ಛೇದನದ ಬಳಿಕ ದುಷ್ಕರ್ಮಿಗಳು ವಿಡಿಯೋ ಬಿಡುಗಡೆ ಮಾಡಿದ್ದಾರೆ. ಶಿರಚ್ಛೇದನ ಮಾಡಿದ್ದಕ್ಕೆ ಹೆಮ್ಮೆಯಿದೆ ಎಂದು ದುಷ್ಕರ್ಮಿಗಳು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆನ್ನಲಾಗಿದೆ. ಉದಯಪುರದ ಧನ್ಮಂಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮೃತ ಕನ್ಹಯ್ಯಾ ಲಾಲ್ ಟೈಲರಿಂಗ್

ನೂಪುರ್ ಶರ್ಮಾರನ್ನು ಬೆಂಬಲಿಸಿ ಪೋಸ್ಟ್ ಹಾಕಿದವರ ರುಂಡ ಚೆಂಡಾಡಿದ ದುಷ್ಕರ್ಮಿಗಳು| ಮೋದಿಯನ್ನೂ ಕೊಲ್ಲುವುದಾಗಿ ಬೆದರಿಕೆ Read More »

ಸುಳ್ಯ: ಮರ್ಕಂಜದಲಲ್ಲಿ ಗಣಿಗಾರಿಕೆ ತಕ್ಷಣ ನಿಲ್ಲಿಸುವಂತೆ ಅಂಬೇಡ್ಕರ್ ರಕ್ಷಣಾ ವೇದಿಕೆಯಿಂದ ತಾಲೂಕು ಕಚೇರಿಯ ಮುಂಭಾಗ ಧರಣಿ

ಸುಳ್ಯ: ಮರ್ಕಂಜ ಗ್ರಾಮದ ಅಳವುಪಾರೆ ಎಂಬಲ್ಲಿಗಣಿಗಾರಿಕೆ ನಡೆಯುತ್ತಿದೆ ಇದನ್ನು ತಕ್ಷಣ ನಿಲ್ಲಿಸಬೇಕೆಂದು ಅಂಬೇಡ್ಕರ್ ರಕ್ಷಣಾ ವೇದಿಕೆ ವತಿಯಿಂದ ಮಾನ್ಯ ಜಿಲ್ಲಾಧಿಕಾರಿಯವರಿಗೆ ಸುಳ್ಯ ತಹಶೀಲ್ದಾರ್ ಅವರಿಗೆ ಮತ್ತು ಸಂಬಂಧಪಟ್ಟ ಇಲಾಖೆಯವರಿಗೆ ದಿನಾಂಕ 28/4/2022 ರಂದು ಮನವಿ ಪತ್ರ ಕೊಟ್ಟು ಮನವಿ ಮಾಡಲಾಯಿತು. ಮನವಿ ಮಾಡಿ ಇಷ್ಟು ದಿನ ಕಳೆದರು ಯಾವುದೇ ಒಂದು ಕ್ರಮ ಕೈಗೊಂಡಿಲ್ಲ ಇವತ್ತು ಸುಳ್ಯ ತಾಲೂಕಿನ ಎಲ್ಲಾ ಕಡೆ ಭೂಕಂಪದ ಅನುಭವ ಎರಡು ಬಾರಿ ಆಗಿದೆ ಇದೆಲ್ಲ ಆಗಲು ಕಾರಣ ಈ ಗಣಿಗಾರಿಕೆ ಈ ಗಣಿಗಾರಿಕೆಗೆ

ಸುಳ್ಯ: ಮರ್ಕಂಜದಲಲ್ಲಿ ಗಣಿಗಾರಿಕೆ ತಕ್ಷಣ ನಿಲ್ಲಿಸುವಂತೆ ಅಂಬೇಡ್ಕರ್ ರಕ್ಷಣಾ ವೇದಿಕೆಯಿಂದ ತಾಲೂಕು ಕಚೇರಿಯ ಮುಂಭಾಗ ಧರಣಿ Read More »

ಸುಳ್ಯ: ಗಣಿಗಾರಿಕೆ ಸ್ಫೋಟಕಗಳಿಂದ ಭೂಮಿ ಕಂಪನ| ಮರ್ಕಂಜ ಗ್ರಾಮಸ್ಥರ ದೂರಿಗೆ ಸುಳ್ಯ ತಹಶಿಲ್ದಾರರಿಂದ ಸ್ಪಂದನೆ

ಸಮಗ್ರ ನ್ಯೂಸ್: ಮರ್ಕಂಜ ಗ್ರಾಮದ ವ್ಯಾಪ್ತಿಯಲ್ಲಿ ಇದೀಗ ಕೆಲವು ದಿನಗಳಿಂದ ಭೂಮಿ ಕಂಪನಗೊಳ್ಳುತ್ತಿದ್ದು, ಜೂ.28ರಂದು ಮುಂಜಾನೆ ಸುಮಾರು 7-45 ಸಮಯದಲ್ಲಿ ಭಾರೀ ಶಬ್ಧದೊಂದಿಗೆ ಭೂಮಿ ಕಂಪನಗೊಂಡಿದೆ. ಮರ್ಕಂಜ ಗ್ರಾಮದ ಅಳವುಪಾರೆ ಎಂಬಲ್ಲಿ ಸುಮಾರು ಸಮಯದಿಂದ ಕರಿಗಲ್ಲು ಗಣಿಗಾರಿಕೆ ಕೂಡಾ ನಡೆದುಕೊಂಡು ಬರುತ್ತಿದೆ. ಈ ಗ್ರಾಮದಲ್ಲಿ ಬಂಡೆಕಲ್ಲುಗಳನ್ನು ಒಡೆಯುವ ಸಲುವಾಗಿ ಅಪಾಯಕಾರಿ ಸ್ಫೋಟಕಗಳನ್ನು ಬಳಸುತ್ತಿದ್ದಾರೆ. ಈ ಸ್ಫೋಟಕವನ್ನು ಉಪಯೋಗಿಸಿ ಬಂಡೆಕಲ್ಲುಗಳನ್ನು ಒಡೆಯುವಾಗ ಕಟ್ಟಡದೊಂದಿಗೆ ಭೂಮಿಯು ಕಂಪನಗೊಳ್ಳುತ್ತಿದ್ದು, ಸುತ್ತಮುತ್ತಲಿನ ನಾಗರಿಕರು ಭಯಭೀತರಾಗಿರುತ್ತಾರೆ. ಇದರಿಂದಾಗಿ ಮನೆಯಲ್ಲಿ ವಾಸವಿರಲು ಜನತೆ ಭಯಪಡುತ್ತಿದ್ದು, ಇಂದು

ಸುಳ್ಯ: ಗಣಿಗಾರಿಕೆ ಸ್ಫೋಟಕಗಳಿಂದ ಭೂಮಿ ಕಂಪನ| ಮರ್ಕಂಜ ಗ್ರಾಮಸ್ಥರ ದೂರಿಗೆ ಸುಳ್ಯ ತಹಶಿಲ್ದಾರರಿಂದ ಸ್ಪಂದನೆ Read More »

ಕೊಡಗು: ಭೂಕಂಪನದ ಬಳಿಕ ಗುಡ್ಡ ಕುಸಿತದ ಆತಂಕ| ಮನೆ ಮೇಲೆ ಬಿದ್ದ ಬಂಡೆಕಲ್ಲು

ಸಮಗ್ರ ನ್ಯೂಸ್: ಲಘು ಭೂಕಂಪನದ ಅನುಭವದಿಂದ ಕಂಗಾಲಾಗಿರುವ ಕೊಡಗು ಜಿಲ್ಲೆಯ ಜನತೆಗೆ ಈಗ ಮತ್ತೊಂದು ಆಘಾತ ಉಂಟಾಗಿದೆ. ಭಾರಿ ಗಾತ್ರದ ಬಂಡೆ ಕಲ್ಲು ಮನೆಯ ಮೇಲೆ ಉರುಳಿಬಿದ್ದ ಪರಿಣಾಮ ಮನೆಗೆ ಭಾಗಶಃ ಹಾನಿಯಾಗಿರುವ ಘಟನೆ ಜಿಲ್ಲೆಯ ಕರಿಕೆಯ ಕುಂಡತ್ತಿಕಾನ ಗ್ರಾಮದಲ್ಲಿ ಘಟನೆ ನಡೆದಿದೆ. ಅದೃಷ್ಟವಶಾತ್ ಮನೆ ಮಾಲೀಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಲ್ಲಿನ ಕರಿಕೆ ನಿವಾಸಿ ಜಾನಕಿ ಎಂಬುವರ ಮನೆ ಮೇಲೆ ರಾತ್ರಿ ವೇಳೆ ಬಂಡೆಕಲ್ಲು ಉರುಳಿ ಬಿದ್ದಿದೆ. ರಾತ್ರಿ‌ ಮನೆ ವೇಲೆ ಬಂಡೆ ಬಿದ್ದಿದ್ದು, ಮನೆಯ ಮಾಲೀಕರು

ಕೊಡಗು: ಭೂಕಂಪನದ ಬಳಿಕ ಗುಡ್ಡ ಕುಸಿತದ ಆತಂಕ| ಮನೆ ಮೇಲೆ ಬಿದ್ದ ಬಂಡೆಕಲ್ಲು Read More »

ಸಂಪಾಜೆ: ಮತ್ತೆ ಭೂಕಂಪನ!; ಆತಂಕದಲ್ಲಿ ಜನತೆ

ಸಮಗ್ರ ನ್ಯೂಸ್: ಇಂದು ಮುಂಜಾನೆ ಸುಳ್ಯ, ಸಂಪಾಜೆ, ಕೊಡಗು ಗಡಿಭಾಗದಲ್ಲಿ ಭೂಕಂಪನವಾಗಿದ್ದು, ಇದೀಗ ಸಂಜೆ ಸಂಪಾಜೆ ಪರಿಸರದ ಕೆಲವೆಡೆ ಮತ್ತೆ ಭೂಮಿ ಕಂಪಿಸಿದೆ ಎನ್ನಲಾಗಿದೆ. ಸಂಜೆ 4.40ರ ಸುಮಾರಿಗೆ ಭೂಮಿ ಕಂಪಿಸಿರುವ ಬಗ್ಗೆ ಸ್ಥಳೀಯರು ವಾಟ್ಸಪ್ ಮೂಲಕ ಸಂದೇಶ ನೀಡಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ. ಸಂಪಾಜೆ, ಶೆಟ್ಯಡ್ಕ, ದಬ್ಬಡ್ಕ ಸೇರಿದಂತೆ ಸಂಪಾಜೆ ಹಾಗೂ ಕೊಡಗು ಭಾಗಗಳಲ್ಲಿ ಮತ್ತೆ ಭೂಮಿ‌ ಕಂಪಿಸಿದೆ. ಕೊಡಗಿನಲ್ಲಿ ಪ್ರಾಕೃತಿಕ ವಿಕೋಪದ ತುರ್ತು ಸಹಾಯವಾಣಿ ತೆರೆಯಲಾಗಿದ್ದು, ಜನರು ಭಯಭೀತರಾಗಿದ್ದಾರೆ.

ಸಂಪಾಜೆ: ಮತ್ತೆ ಭೂಕಂಪನ!; ಆತಂಕದಲ್ಲಿ ಜನತೆ Read More »

ರೈಲು ದುರಂತ; 40ಕ್ಕೂ ಹೆಚ್ಚು ಮಂದಿ ಸಾವು, ಹಲವರಿಗೆ ಗಾಯ

ಸಮಗ್ರ ನ್ಯೂಸ್ : ಆಮೆರಿಕದಲ್ಲಿ ಭೀಕರ ರೈಲು ಅಪಘಾತ ಸಂಭವಿಸಿದ್ದು, 40 ಕ್ಕೂ ಹೆಚ್ಚು ಪ್ರಯಾಣಿಕರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡ ಘಟನೆಯೊಂದು ನಡೆದಿದೆ. ಮಿಸೌರಿಯ ಮೆಂಡನ್ ನಲ್ಲಿ ಸೋಮವಾರ ಮಧ್ಯಾಹ್ನ ಅಮ್ಟ್ರಾಕ್ ರೈಲು ಡಂಪ್ ಟ್ರಕ್ ಗೆ ಡಿಕ್ಕಿ ಹೊಡೆದು ಹಳಿ ತಪ್ಪಿದ ಪರಿಣಾಮ 40 ಮಂದಿ ಸಾವನ್ನಪ್ಪಿದ್ದಾರೆ. ಹಲವು ಪ್ರಯಾಣಿಕರು ಗಾಯಗೊಂಡಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಲಾಸ್ ಏಂಜಲೀಸ್ನಿಂದ ಚಿಕಾಗೋಗೆ 243 ಪ್ರಯಾಣಿಕರು ಮತ್ತು 12 ಸಿಬ್ಬಂದಿಗಳನ್ನು ಕರೆದೊಯ್ಯುತ್ತಿದ್ದ

ರೈಲು ದುರಂತ; 40ಕ್ಕೂ ಹೆಚ್ಚು ಮಂದಿ ಸಾವು, ಹಲವರಿಗೆ ಗಾಯ Read More »

ನಡುಗಿದ ಸುಳ್ಯ, ಕೊಡಗು| ವರದಿ ಬಿಡುಗಡೆಗೊಳಿಸಿದ ಪ್ರಾಕೃತಿಕ ವಿಕೋಪ ಉಸ್ತುವಾರಿ ಕೇಂದ್ರ| 3.0 ತೀವ್ರತೆಯ ಭೂಕಂಪದ ಕೇಂದ್ರ ಯಾವುದು ಗೊತ್ತಾ?

ಸಮಗ್ರ ನ್ಯೂಸ್: ಇಂದು ಮುಂಜಾನೆ ದ.ಕ ಜಿಲ್ಲೆಯ ಸುಳ್ಯ ಗಡಿಭಾಗ ಮತ್ತು ಕೊಡಗಿನ ಗಡಿ ಪ್ರದೇಶಗಳಲ್ಲಿ ಸಂಭವಿಸಿದ ಭೂಕಂಪನದ ಕುರಿತಂತೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಬುಲೆಟಿನ್ ಬಿಡುಗಡೆಗೊಳಿಸಿದೆ. ರಿಕ್ಟರ್ ಮಾಪಕದಲ್ಲಿ 3.0 ದಾಖಲಾಗಿದ್ದು, ಭೂಕಂಪದ ಕೇಂದ್ರ ಬಿಂದು ಕೊಡಗು ಜಿಲ್ಲೆಯ ಚೆಂಬು ಗ್ರಾಮ ಎಂದು ತಿಳಿದುಬಂದಿದೆ. ಬೆಳಿಗ್ಗೆ 7 ಗಂಟೆ 45 ನಿಮಿಷ 47 ಸೆಕೆಂಡಿಗೆ ಈ ಭೂಕಂಪನ ಸಂಭವಿಸಿದ್ದು, ಮಡಿಕೇರಿ – ದಕ್ಷಿಣ ಕನ್ನಡ ಗಡಿಗ್ರಾಮವಾಗಿರುವ ಚೆಂಬುವಿನಿಂದ 5.2 ವಾಯುವ್ಯ ದಿಕ್ಕಿನಲ್ಲಿ

ನಡುಗಿದ ಸುಳ್ಯ, ಕೊಡಗು| ವರದಿ ಬಿಡುಗಡೆಗೊಳಿಸಿದ ಪ್ರಾಕೃತಿಕ ವಿಕೋಪ ಉಸ್ತುವಾರಿ ಕೇಂದ್ರ| 3.0 ತೀವ್ರತೆಯ ಭೂಕಂಪದ ಕೇಂದ್ರ ಯಾವುದು ಗೊತ್ತಾ? Read More »

ಕೆರೆಯಲ್ಲಿ ಕುರಿಯನ್ನು ಸ್ನಾನ ಮಾಡಿಸಲು ಹೋಗಿ ಕಾಲು ಜಾರಿ ಬಿದ್ದು ವ್ಯಕ್ತಿ ಸಾವು

ಸಮಗ್ರ ನ್ಯೂಸ್ : ತುಮಕೂರು ಹೋಬಳಿಯ ತಿಂಗಳೂರು ಗ್ರಾಮದ ತಿಮ್ಮಯ್ಯ (62) ಎಂಬವರು ಕೆರೆಯಲ್ಲಿ ಕುರಿಯ ಮೈ ತೊಳೆಯಲು ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆಯೊಂದು ಸೋಮವಾರ ಮಧ್ಯಾಹ್ನ ನಡೆದಿದೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಗ್ರಾಮಸ್ಥರು ನೀರಿನಲ್ಲಿ ಶೋಧ ಕಾರ್ಯ ನಡೆಸಿದರೂ ಮೃತದೇಹ ಸಿಗಲಿಲ್ಲ. ಕೊನೆಗೆ ಅಗ್ನಿಶಾಮಕ ಮತ್ತು ತುರ್ತುಸೇವಾ ಕಚೇರಿಗೆ ವಿಷಯ ತಿಳಿಸಿದರು. ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಶವವನ್ನು ಹೊರತೆಗೆದರು.

ಕೆರೆಯಲ್ಲಿ ಕುರಿಯನ್ನು ಸ್ನಾನ ಮಾಡಿಸಲು ಹೋಗಿ ಕಾಲು ಜಾರಿ ಬಿದ್ದು ವ್ಯಕ್ತಿ ಸಾವು Read More »

ರಾಜ್ಯದ ಜನತೆಗೆ ಗುಡ್ ನ್ಯೂಸ್; ಯಶಸ್ವಿನಿ ಆರೋಗ್ಯ ವಿಮಾ ಯೋಜನೆ ಮರು ಜಾರಿಗೆ ಚಿಂತನೆ

ಸಮಗ್ರ ನ್ಯೂಸ್ : ರಾಜ್ಯ ಸರ್ಕಾರವು ಜನತೆಗೆ ಇದೀಗ ಗುಡ್ ನ್ಯೂಸ್ ನೀಡಿದ್ದು, ಕರ್ನಾಟಕದಲ್ಲಿ ಯಶಸ್ವಿನಿ ಆರೋಗ್ಯ ವಿಮಾ ಯೋಜನೆ ಮರು ಜಾರಿ ಮಾಡುವ ಚಿಂತನೆ ನಡೆಸಿದೆ. ಈ ಬಗ್ಗೆ ಮಾಹಿತಿ ನೀಡಿದ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ರಾಜ್ಯದಲ್ಲಿ ಅಕ್ಟೋಬರ್ ನಿಂದ ಮತ್ತೆ ಯಶಸ್ವಿನಿ ಯೋಜನೆ ಜಾರಿಗೆ ಚಿಂತನೆ ನಡೆಸಲಾಗಿದೆ. ರಾಜ್ಯದಲ್ಲಿ 6 ಸಾವಿರ ಕೋಟಿಗೂ ಅಧಿಕ ಸಾಲ ಮನ್ನಾ ಮಾಡಲಾಗಿದೆ. ಇನ್ನೂ 31 ಸಾವಿರ ರೈತರ ಸಾಲ ಮನ್ನಾ ಬಾಕಿ ಇದ್ದು, ಈ ವಿಚಾರ

ರಾಜ್ಯದ ಜನತೆಗೆ ಗುಡ್ ನ್ಯೂಸ್; ಯಶಸ್ವಿನಿ ಆರೋಗ್ಯ ವಿಮಾ ಯೋಜನೆ ಮರು ಜಾರಿಗೆ ಚಿಂತನೆ Read More »