June 2022

ಕಾರವಾರ: ಸಾವಿನಲ್ಲೂ ಕರ್ತವ್ಯ ಪ್ರಜ್ಞೆ ಮೆರೆದ ಕೆಎಸ್ಆರ್ಟಿಸಿ ಚಾಲಕ

ಸಮಗ್ರ ನ್ಯೂಸ್: ಕೆಎಸ್‌ಆರ್‌ಟಿಸಿ ಬಸ್ ಚಾಲಕ ಸಾವಿನಲ್ಲೂ ಕರ್ತವ್ಯಪ್ರಜ್ಞೆ ಮೆರೆದಿದ್ದಾರೆ. ಉತ್ತರಕನ್ನಡ ಜಿಲ್ಲೆ ಮುಂಡಗೋಡ ತಾಲೂಕಿನ ಮೈನಳ್ಳಿ ಬಳಿ ಕೆಎಸ್‌ಆರ್‌ಟಿಸಿ ಬಸ್​ ಚಾಲಕ ಮಲ್ಲಪ್ಪ ಸೋಮಪ್ಪನವರ (56) ಬಸ್​ ಚಲಾಯಿಸುತ್ತಿರುವಾಗಲೇ ಎದೆ ನೋವು ಕಾಣಿಸಿಕೊಂಡಿದೆ. ಆಗ ಚಾಲಕ ಮಲ್ಲಪ್ಪ ಕೂಡಲೇ ಬಸ್​ನ್ನು ರಸ್ತೆಯ ಪಕ್ಕಕ್ಕೆ ನಿಲ್ಲಿಸಿದ್ದಾರೆ. ತಕ್ಷಣ ಬಸ್​ನಲ್ಲಿದ 38 ಪ್ರಯಾಣಿಕರು ಕೆಳಗಿಳಿದಿದ್ದಾರೆ. ನಂತರ ಪ್ರಯಾಣಿಕರು ಚಾಲಕನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಾಲಕ ಆಸ್ಪತ್ರೆಗೆ ಹೋಗುವಷ್ಟರಲ್ಲೇ ಸಾವನ್ನಪ್ಪಿದ್ದನು ಎಂದು ವೈದ್ಯರು ಹೇಳಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ […]

ಕಾರವಾರ: ಸಾವಿನಲ್ಲೂ ಕರ್ತವ್ಯ ಪ್ರಜ್ಞೆ ಮೆರೆದ ಕೆಎಸ್ಆರ್ಟಿಸಿ ಚಾಲಕ Read More »

ಉಪಚು‌ನಾವಣೆ; ಪಿಣರಾಯಿಗೆ ಮುಖಭಂಗ| ಸ್ಥಾನ ಉಳಿಸಿಕೊಂಡ ಕಾಂಗ್ರೆಸ್

ಸಮಗ್ರ ನ್ಯೂಸ್: ಕೇರಳದ ಎರ್ನಾಕುಲಂ ಜಿಲ್ಲೆಯ ತ್ರಿಕ್ಕಕರ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಭಾರೀ ಅಂತರದಿಂದ ಗೆಲುವು ದಾಖಲಿಸಿರುವ ಕಾಂಗ್ರೆಸ್ ತನ್ನ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಉಮಾ ಥಾಮಸ್ ತನ್ನ ಸಮೀಪದ ಪ್ರತಿಸ್ಪರ್ಧಿ ಎಲ್ ಡಿಎಫ್ ಅಭ್ಯರ್ಥಿ ಡಾ.ಜೋ ಜೋಸೆಫ್ ಅವರನ್ನು 25,000ಕ್ಕೂ ಅಧಿಕ ಮತಗಳ ಅಂತರದಿಂದ ಸೋಲಿಸಿದರು. ಕಾಂಗ್ರೆಸ್ ಶಾಸಕ ಪಿ.ಟಿ. ಥಾಮಸ್ ನಿಧನದ ಹಿನ್ನೆಲೆಯಲ್ಲಿ ಉಪಚುನಾವಣೆ ನಡೆದಿದೆ. ದಿವಂಗತ ಶಾಸಕರ ಪತ್ನಿ ಉಮಾ ಥಾಮಸ್‌ ಅವರನ್ನು ಕಾಂಗ್ರೆಸ್‌ ಕಣಕ್ಕಿಳಿಸಿತು. ಆಡಳಿತಾರೂಢ

ಉಪಚು‌ನಾವಣೆ; ಪಿಣರಾಯಿಗೆ ಮುಖಭಂಗ| ಸ್ಥಾನ ಉಳಿಸಿಕೊಂಡ ಕಾಂಗ್ರೆಸ್ Read More »

ಹಿಂಪಡೆಯದ ನಾಮಪತ್ರ| ಆರು ಮಂದಿ ರಾಜ್ಯಸಭಾ ಚುನಾವಣೆ ಕಣದಲ್ಲಿ| ಸಿದ್ದು ರಾಜಕೀಯ ದಾಳಕ್ಕೆ ಬಲಿಯಾಗೋರು ಯಾರು?

ಸಮಗ್ರ ನ್ಯೂಸ್: ರಾಜ್ಯಸಭೆ ಚುನಾವಣೆಗಾಗಿ ಇಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿತ್ತು. ಆದರೆ ಯಾವುದೇ ಪಕ್ಷದ ಅಭ್ಯರ್ಥಿಗಳು ಇಂದು ನಾಮಪತ್ರ ಹಿಂಪಡೆಯದ ಕಾರಣ, ಅಂತಿಮವಾಗಿ ಕಣದಲ್ಲಿ 6 ಅಭ್ಯರ್ಥಿಗಳು ಇದ್ದಾರೆ. ಜೂನ್ 10ರಂದು ನಡೆಯಲಿರುವಂತ ರಾಜ್ಯಸಭೆಯ ಚುನಾವಣೆಗೆ ಇಂದು ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನವಾಗಿತ್ತು. ಕಾಂಗ್ರೆಸ್ ಹಾಗೂ ಜೆಡಿಎಸ್ ಹೊಂದಾಣಿಕೆಯೊಂದಿಗೆ, ಕಾಂಗ್ರೆಸ್ ಪಕ್ಷದ 2ನೇ ಅಭ್ಯರ್ಥಿಯು ನಾಮಪತ್ರ ವಾಪಾಸ್ ಪಡೆಯಲಿದ್ದಾರೆ ಎನ್ನಲಾಗುತ್ತಿತ್ತು. ಆದರೆ ಕಾಂಗ್ರೆಸ್ ಪಕ್ಷದ ಶಾಸಕಾಂಗ ನಾಯಕ ಸಿದ್ಧರಾಮಯ್ಯ ಮಾತ್ರ ನಾವು ಯಾವುದೇ ಕಾರಣಕ್ಕೂ ನಾಮಪತ್ರ

ಹಿಂಪಡೆಯದ ನಾಮಪತ್ರ| ಆರು ಮಂದಿ ರಾಜ್ಯಸಭಾ ಚುನಾವಣೆ ಕಣದಲ್ಲಿ| ಸಿದ್ದು ರಾಜಕೀಯ ದಾಳಕ್ಕೆ ಬಲಿಯಾಗೋರು ಯಾರು? Read More »

ಕುಕ್ಕೆ ಸುಬ್ರಹ್ಮಣ್ಯ – ಗುಂಡ್ಯ ಅರಣ್ಯ ಪ್ರದೇಶದ ಚಿತ್ರ ಹಂಚಿಕೊಂಡ ಆನಂದ್‌ ಮಹೀಂದ್ರ

ಸಮಗ್ರ ನ್ಯೂಸ್: ಕುಕ್ಕೆ ಸುಬ್ರಹ್ಮಣ್ಯ-ಗುಂಡ್ಯ ನಡುವೆ ಸಾಗುವ ಅರಣ್ಯ ಪ್ರದೇಶದ ಚಿತ್ರವೊಂದನ್ನು ಮಹೀಂದ್ರ ಗ್ರೂಪ್‌ನ ಚೇರ್‌ರ್ಮೆನ್‌ ಆಗಿರುವ ಆನಂದ್‌ ಮಹೀಂದ್ರ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಈ ಸುದ್ದಿ ವೈರಲ್‌ ಆಗಿದೆ. ಕೆಲವು ದಿನಗಳ ಹಿಂದೆ ವಿಸಿಟ್‌ ಉಡುಪಿ ಎಂಬ ಟ್ವಿಟರ್‌ ಖಾತೆಯವರು ಈ ಚಿತ್ರವನ್ನು ಟ್ವೀಟ್‌ ಮಾಡಿದ್ದು, ಕುಕ್ಕೆ ಸುಬ್ರಹ್ಮಣ್ಯಕ್ಕೆ ಅರಣ್ಯ ಪ್ರದೇಶ ಮಧ್ಯೆ ಸಾಗುವ ಗುಂಡ್ಯ ಬಳಿಯ ಹೆದ್ದಾರಿಯ ಚಿತ್ರವನ್ನು ಜಗತ್ತಿನ ಅತ್ಯಂತ ಸುಂದರ ಕಾಡಿನ ಪ್ರಯಾಣ ಎಂಬ ಶೀರ್ಷಿಕೆಯಡಿ ಅಪ್‌ಲೋಡ್‌ ಮಾಡಿದ್ದರು. ಇದೀಗ

ಕುಕ್ಕೆ ಸುಬ್ರಹ್ಮಣ್ಯ – ಗುಂಡ್ಯ ಅರಣ್ಯ ಪ್ರದೇಶದ ಚಿತ್ರ ಹಂಚಿಕೊಂಡ ಆನಂದ್‌ ಮಹೀಂದ್ರ Read More »

ಒಂದೇ ಟ್ವೀಟ್; ಕೂಡಲೇ ಪ್ರಾಬ್ಲಂ ಕ್ಲಿಯರ್| ಪ್ರಧಾನಿ ಮೋದಿ ಸ್ಪಂದನೆಗೆ ಮಂಡ್ಯದ ಯುವಕ ಫುಲ್ ಖುಷ್

ಸಮಗ್ರ ನ್ಯೂಸ್: ಎರಡು ವರ್ಷದಿಂದ ಬಗೆಹರಿಯದೇ ಉಳಿದಿದ್ದ ಸಮಸ್ಯೆಯನ್ನು ಪ್ರಧಾನಮಂತ್ರಿ ಮೋದಿ ಎರಡೇ ದಿನಕ್ಕೆ ಬಗೆಹರಿಸಿದ್ದಾರೆ. ಮಂಡ್ಯದ ತಂಡಸನಹಳ್ಳಿಯ ಯುವಕ ಚರ್ಮ ರೋಗದಿಂದ ಬಳಲುತ್ತಿದ್ದು, ಆಧಾರ್ ಕಾರ್ಡ್ ನಲ್ಲಿ ಥಂಬ್ ಇಂಪ್ರೆಷನ್ ತೆಗೆದುಕೊಳ್ಳಲು ಸಾಧ್ಯವಾಗದ ಕಾರಣ, ಆಧಾರ್ ಕಾರ್ಡ್ ಬ್ಲಾಕ್ ಆಗಿತ್ತು. ಮಂಡ್ಯದ ತಂಡಸನಹಳ್ಳಿಯ ಯುವಕ ನೂತನ್‌ಗೆ ವಿಚಿತ್ರ ಚರ್ಮ ರೋಗದಿಂದ ಬಳಲುತ್ತಿದ್ದರು. ನೂತನ್ ಗೆ ಈ ಹಿಂದೆ ಯೇ ಆಧಾರ್ ಕಾರ್ಡ್ ಮಾಡಿಸಲಾಗಿತ್ತು. ಆದರೆ ಚರ್ಮ ರೋಗವಿದ್ದ ಕಾರಣ ಆಧಾರ್ ಕಾರ್ಡ್ ಮಾಡಿಸುವ ವೇಳೆ ಥಂಬ್

ಒಂದೇ ಟ್ವೀಟ್; ಕೂಡಲೇ ಪ್ರಾಬ್ಲಂ ಕ್ಲಿಯರ್| ಪ್ರಧಾನಿ ಮೋದಿ ಸ್ಪಂದನೆಗೆ ಮಂಡ್ಯದ ಯುವಕ ಫುಲ್ ಖುಷ್ Read More »

ಬೆಳ್ತಂಗಡಿ: ಅಡಿಕೆ ಕಳ್ಳ ಸಾಗಣೆ ತಡೆಯುವಂತೆ ಪ್ರಧಾನಿಗೆ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಪತ್ರ

ಸಮಗ್ರ ನ್ಯೂಸ್: ಅಡಕೆ ಕಳ್ಳ ಸಾಗಾಣೆ ತಡೆಯುವಂತೆ ಪ್ರಧಾನಿ ನರೇಂದ್ರ ಮೋದಿಗೆ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಪತ್ರ ಬರೆದು ಕಳವಳ ವ್ಯಕ್ತಪಡಿಸಿದ್ದಾರೆ. ಕ್ಯಾಂಪ್ಕೋದ ಅಡಕೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷರೂ ಆಗಿರುವ ಹೆಗ್ಗಡೆ, ರಾಜ್ಯಕ್ಕೆ ವಿದೇಶದಿಂದ ಅಡಕೆ ಅಕ್ರಮವಾಗಿ ಪ್ರವೇಶವಾಗುತ್ತಿದೆ. ಭಾರತ ಪ್ರತಿ ವರ್ಷ 15.63 ಲಕ್ಷ ಟನ್ ಅಧಿಕ ಉತ್ಪಾದಿಸಿ ಸ್ವಾವಲಂಬಿಯಾಗಿದೆ. ಆದರೂ ಪ್ರತಿ ವರ್ಷ 24 ಸಾವಿರ ಟನ್ ಅಡಕೆ ಆಮದು ಮಾಡಿಕೊಳ್ಳಲಾಗುತ್ತಿದೆ. ಕಳ್ಳ ಸಾಗಾಣೆದಾರರ ಅಕ್ರಮಗಳಿಂದ ಸ್ಥಳೀಯವಾಗಿ ಬೆಳೆದ ಅಡಕೆ

ಬೆಳ್ತಂಗಡಿ: ಅಡಿಕೆ ಕಳ್ಳ ಸಾಗಣೆ ತಡೆಯುವಂತೆ ಪ್ರಧಾನಿಗೆ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಪತ್ರ Read More »

ಮಂಗಳೂರು: ಪತ್ರಕರ್ತರ ಮೇಲೆ ಹಲ್ಲೆ‌ ಯತ್ನ ಪ್ರಕರಣ| ತಪ್ಪಿತಸ್ಥರ ವಿರುದ್ಧ ಕ್ರಮ – ಡಿಸಿ

ಸಮಗ್ರ ನ್ಯೂಸ್: ಪುತ್ತೂರು ಸಮೀಪದ ಉಪ್ಪಿನಂಗಡಿ ಸರಕಾರಿ ಕಾಲೇಜಿನ ಹಿಜಾಬ್ ಪ್ರಕರಣದ ವರದಿಗೆ ತೆರಳಿದ ಪತ್ರಕರ್ತರ ಮೇಲೆ ನಡೆದ ಹಲ್ಲೆಯ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ. ಹೇಳಿದರು. ಪತ್ರಿಕಾ ಸ್ವಾತಂತ್ರ್ಯದ ರಕ್ಷಣೆಗಾಗಿ ಮತ್ತು ದುಷ್ಕರ್ಮಿಗಳನ್ನು ಬಂಧಿಸುಂತೆ ಒತ್ತಾಯಿಸಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ನೀಡಿದ ಮನವಿಯನ್ನು ಸ್ವೀಕರಿಸಿ ಮಾತನಾಡಿದರು. ಕಾಲೇಜಿಗೆ ಪತ್ರಕರ್ತರು ವಾಸ್ತವ ವರದಿ ಮಾಡಲು ತೆರಳಿದಾಗ ವಿದ್ಯಾರ್ಥಿಗಳು ಪತ್ರಕರ್ತರನ್ನು

ಮಂಗಳೂರು: ಪತ್ರಕರ್ತರ ಮೇಲೆ ಹಲ್ಲೆ‌ ಯತ್ನ ಪ್ರಕರಣ| ತಪ್ಪಿತಸ್ಥರ ವಿರುದ್ಧ ಕ್ರಮ – ಡಿಸಿ Read More »

ಹಣದಾಸೆಗೆ ವಜ್ರದ ವ್ಯಾಪಾರಿಯ ಅಪಹರಣ| ಖಳನಟ ನಾರಾಯಣ್ ಸೇರಿದಂತೆ ನಾಲ್ಕು ಮಂದಿ‌ ಅರೆಸ್ಟ್

ಸಮಗ್ರ ನ್ಯೂಸ್: ಹಣಕ್ಕಾಗಿ ವಜ್ರದ ವ್ಯಾಪಾರಿಯನ್ನು ಅಪಹರಿಸಿ ಲಕ್ಷಾಂತರ ರೂಪಾಯಿ ವಸೂಲಿ ಮಾಡಿ ತಲೆಮರೆಸಿಕೊಂಡಿದ್ದ ಪ್ರಕರಣದಲ್ಲಿ ಕನ್ನಡದ ಖಳನಟ ಸೇರಿ ನಾಲ್ವರನ್ನು ಹೈಗ್ರೌಂಡ್ಸ್ ಪೊಲೀಸರು ಬಂಧಿಸಿದ್ದಾರೆ. ವೀರಪರಂಪರೆ, ದುಷ್ಟ ಹಾಗೂ‌ ಉಡಾ ಸೇರಿದಂತೆ 40ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಆರೋಪಿ ನಾರಾಯಣ ಹಾಗೂ ಸಹಚರರಾದ ಉಮೇಶ್, ನರ್ತನ್ ಹಾಗೂ ಅಶ್ವತ್ಥ ಎಂಬುವರನ್ನು ಬಂಧಿಸಿ ಜೈಲಿಗಟ್ಟಲಾಗಿದೆ ಎಂದು ಕೇಂದ್ರ ವಿಭಾಗದ ಪ್ರಭಾರ ಡಿಸಿಪಿ ಶರಣಪ್ಪ ತಿಳಿಸಿದ್ದಾರೆ. ಕಳೆದ ತಿಂಗಳು 20ರಂದು ನಗರದ ಶಿವಾನಂದ ಸರ್ಕಲ್ ಬಳಿ ವಜ್ರದ ವ್ಯಾಪಾರಿಯನ್ನ

ಹಣದಾಸೆಗೆ ವಜ್ರದ ವ್ಯಾಪಾರಿಯ ಅಪಹರಣ| ಖಳನಟ ನಾರಾಯಣ್ ಸೇರಿದಂತೆ ನಾಲ್ಕು ಮಂದಿ‌ ಅರೆಸ್ಟ್ Read More »

ಸುಳ್ಯ: ಮನೆಯೊಳಗೆ ಮನೆ ಮಾಲಿಕನ ಮೃತ ದೇಹ ಪತ್ತೆ|ತಿಂಗಳ ಹಿಂದೆ ಸಹೋದರನ ಸಾವು|ಸಾವಿನ ಸುತ್ತ ಅನುಮಾನದ ಹುತ್ತ..!

ತಿಂಗಳ ಹಿಂದೆ ಸಹೋದರನ ಸಾವು ಸಮಗ್ರ ನ್ಯೂಸ್: ಮನೆಯೊಳಗೆ‌ ಮನೆ ಯಜಮಾನ ಶವವಾಗಿ ಪತ್ತೆಯಾದ ಘಟನೆ ಜೂ.2 ರಂದು ರಾತ್ರಿ ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಪಂಜದಿಂದ ವರದಿಯಾಗಿದೆ. ಮೃತರನ್ನು ತಿರುಮಲೇಶ್ವರ ( 42ವ) ಎಂದು ಗುರುತಿಸಲಾಗಿದೆ. ಇವರು ಕೆಲವು ವರ್ಷಗಳಿಂದ ಮನೆಯಲ್ಲಿ ಒಬ್ಬಂಟಿಗರಾಗಿ ವಾಸವಾಗಿದ್ದರು. ತಿರುಮಲೇಶ್ವರ ಮನೆಯ ಪಕ್ಕದಲ್ಲಿ ವಾಸವಾಗಿದ್ದ ಅವರ ತಾಯಿ ಮತ್ತು ಸಹೋದರ ಕೆಲವು ಸಮಯಗಳ ಹಿಂದೆ ಅವರ ಜಾಗ ಮಾರಾಟ ಮಾಡಿ, ಕಡಬದಲ್ಲಿ ಜಾಗ ಖರೀದಿಸಿ ಮನೆ ಮಾಡಿಕೊಂಡಿದ್ದಾರೆ. ಮೇ.2 ರಂದು

ಸುಳ್ಯ: ಮನೆಯೊಳಗೆ ಮನೆ ಮಾಲಿಕನ ಮೃತ ದೇಹ ಪತ್ತೆ|ತಿಂಗಳ ಹಿಂದೆ ಸಹೋದರನ ಸಾವು|ಸಾವಿನ ಸುತ್ತ ಅನುಮಾನದ ಹುತ್ತ..! Read More »

ಸುಳ್ಯ ನ.ಪಂಗೆ ಕಸ ವಿಲೇ’ವರಿ’| ಸುಳ್ಯದ ಕಸ ಸಾಗಾಟ ಮತ್ತೆ ಸುಳ್ಳಾಯ್ತೇ!?

ಸಮಗ್ರ ನ್ಯೂಸ್: ಸುಳ್ಯ ನಗರ ಪಂಚಾಯತ್‌ನ ಕಸದ ಸಮಸ್ಯೆ ರಾಜ್ಯದಾದ್ಯಂತ ಬಹುದೊಡ್ಡ ಸುದ್ದಿಯಾಗಿದ್ದು ಅದರ ಬಗ್ಗೆ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಭಾರೀ ಸುದ್ದಿಯಾಗಿತ್ತು. ಈ ವಿಚಾರ ನಗರ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಪರಸ್ಪರ ವಾಗ್ವಾದ, ಕೆಸರೆರೆಚಾಟಕ್ಕೆ ಎಡೆಮಾಡಿ, ಸಾರ್ವಜನಿಕರು ನಗರ ಪಂಚಾಯತ್ ನ್ನು ನರಕ ಪಂಚಾಯತ್ ಎಂದು ಹೇಳುವ ಸ್ಥಿತಿಗೆ ಬಂದು ತಲುಪಿತ್ತು. ಈ ನಡುವೆ ಚಿತ್ರನಟ ಅನಿರುದ್ಧ್‌ರವರು ಸುಳ್ಯದ ಕಸದ ಸಮಸ್ಯೆಯ ಬಗ್ಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಇದು ಆಡಳಿತ ಪಕ್ಷದ

ಸುಳ್ಯ ನ.ಪಂಗೆ ಕಸ ವಿಲೇ’ವರಿ’| ಸುಳ್ಯದ ಕಸ ಸಾಗಾಟ ಮತ್ತೆ ಸುಳ್ಳಾಯ್ತೇ!? Read More »