June 2022

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಈ ವಾರ ನಿಮ್ಮ ರಾಶಿಗಳಲ್ಲಿ ಉಂಟಾಗುವ ಬದಲಾವಣೆಗಳೇನು? ಯಾರಿಗೆ ಯಾವ ಶುಭಫಲವಿದೆ, ಪರಿಹಾರೋಪಾಯಗಳನ್ನು ತಿಳಿದುಕೊಳ್ಳೋಣ ಬನ್ನಿ… ಮೇಷ ರಾಶಿ:ಹಿರಿಯರೊಂದಿಗೆ ಮನಃಸ್ತಾಪ ಆಗುವ ಸಾಧ್ಯತೆ. ಇಷ್ಟಮಿತ್ರರ ಆಗಮನದಿಂದ ಮನಸ್ಸಿಗೆ ಸಂತೋಷವಾಗುತ್ತದೆ. ನೌಕಾಯಾನದಲ್ಲಿ ಕೆಲಸ ಮಾಡುತ್ತಿರುವವರಿಗೆ ಸಮಯ ಉತ್ತಮವಾಗಿರುತ್ತದೆ. ಪ್ರಸಕ್ತ ರಾಜಕೀಯದಲ್ಲಿ ಇರುವವರಿಗೆ ಅನಿರೀಕ್ಷಿತ ಸುದ್ದಿಯೊಂದು ದಿಗ್ಭ್ರಮೆ ಮೂಡಿಸುತ್ತದೆ. ಸ್ಥಿರಾಸ್ತಿಯ ದಾಖಲೆಯಲ್ಲಿದ್ದ ತೊಡಕುಗಳು ನಿವಾರಣೆಯಾಗುತ್ತವೆ. ಹಿರಿಯರಿಗೆ ತೀರ್ಥಕ್ಷೇತ್ರಗಳ ದರ್ಶನಭಾಗ್ಯ ಒದಗಿಬರುತ್ತದೆ. ನಿಮ್ಮ ನಿರೀಕ್ಷಿತ ಕಾರ್ಯದಲ್ಲಿ ನೀವು ಮೇಲುಗೈ ಸಾಧಿಸುವಿರಿ. ಹಣದ ಒಳಹರಿವು ನಿಮ್ಮ ನಿರೀಕ್ಷೆಯಷ್ಟು ಇರುತ್ತದೆ. ಇಲ್ಲಸಲ್ಲದ […]

ದ್ವಾದಶ ರಾಶಿಗಳ ವಾರಭವಿಷ್ಯ Read More »

ಪುತ್ತೂರು: ಹಿಂದೂ ಕಾರ್ಯಕರ್ತ ಕಾರ್ತಿಕ್ ಮೇರ್ಲ ಕೊಲೆ ಆರೋಪಿಯ ಬರ್ಬರ ಹತ್ಯೆ

ಪುತ್ತೂರು: ಮೂರು ವರ್ಷಗಳ ಹಿಂದೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತ ಕಾರ್ತಿಕ್ ಮೇರ್ಲ ಹತ್ಯೆಯ ಪ್ರಮುಖ ಆರೋಪಿ ಆರ್ಯಾಪು ನಿವಾಸಿ ಚರಣ್ ರಾಜ್ ರೈ(28) ನನ್ನು ಪೆರ್ಲಂಪಾಡಿ ಬಳಿ ಶನಿವಾರ ಬರ್ಬರವಾಗಿ ಹತ್ಯೆ ಮಾಡಲಾಗಿದೆ. 2019 ಸೆ.3 ರಂದು ರಾತ್ರಿ ಸಂಪ್ಯದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಬಳಿ ಹಿಂದೂ ಜಾಗರಣ ವೇದಿಕೆಯ ಪುತ್ತೂರು ತಾಲೂಕು ಪ್ರಧಾನ ಕಾರ್ಯದರ್ಶಿ ಕಾರ್ತಿಕ್ ಮೇರ್ಲ (27) ರವರನ್ನು ಪುತ್ತೂರಿನ ಹೊರವಲಯ ಸಂಪ್ಯದಲ್ಲಿರುವ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಮುಂಭಾಗದಲ್ಲಿಯೇ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.

ಪುತ್ತೂರು: ಹಿಂದೂ ಕಾರ್ಯಕರ್ತ ಕಾರ್ತಿಕ್ ಮೇರ್ಲ ಕೊಲೆ ಆರೋಪಿಯ ಬರ್ಬರ ಹತ್ಯೆ Read More »

ಪುತ್ತೂರು: ಹಿಜಾಬ್ ಧರಿಸಿ ಬಂದ ಮತ್ತೋರ್ವ ವಿದ್ಯಾರ್ಥಿನಿ ಅಮಾನತು

ಸಮಗ್ರ ನ್ಯೂಸ್: ಇಲ್ಲಿನ ಉಪ್ಪಿನಂಗಡಿ ಸರಕಾರಿ ಪ್ರ.ದ. ಕಾಲೇಜಿನಲ್ಲಿ ಶುಕ್ರವಾರ ಮತ್ತೆ ಹಿಜಾಬ್‌ ಧರಿಸಿ ತರಗತಿಗೆ ಆಗಮಿಸಿದ್ದ ವಿದ್ಯಾರ್ಥಿನಿಯೊಬ್ಬಳನ್ನು ಅಮಾನತುಗೊಳಿಸಲಾಗಿದೆ. ಕಾನೂನು ಉಲ್ಲಂಘನೆ ಪದೇಪದೆ ಇಲ್ಲಿ ನಡೆಯುತ್ತಿದ್ದು, ಈ ಹಿಂದಿನ ಪ್ರಾಂಶುಪಾಲರ ನಿರ್ಗಮನದ ಬಳಿಕ ಹೆಚ್ಚಿದೆ. ಶುಕ್ರವಾರ ತರಗತಿಯಲ್ಲಿ ಹಿಜಾಬ್‌ ಧಾರಣೆಯನ್ನು ಪ್ರತಿಭಟಿಸಿ ತರಗತಿ ಬಹಿಷ್ಕರಿಸಲಾಗಿತ್ತು. ಈ ಮಧ್ಯೆ ತರಗತಿಯೊಳಗೆ ಹಿಜಾಬ್‌ ಧರಿಸಿದ್ದ ವಿದ್ಯಾರ್ಥಿನಿಯನ್ನು ಪ್ರಾಂಶು ಪಾಲರು ವಾರದ ಮಟ್ಟಿಗೆ ಅಮಾನತು ಗೊಳಿಸಿದ್ದಾರೆ.

ಪುತ್ತೂರು: ಹಿಜಾಬ್ ಧರಿಸಿ ಬಂದ ಮತ್ತೋರ್ವ ವಿದ್ಯಾರ್ಥಿನಿ ಅಮಾನತು Read More »

8 ರನ್‌ಗೆ ಆಲೌಟ್; ಈ ರನ್ ಗಳಿಸಲು ಬರೋಬ್ಬರಿ 8.1 ಓವರ್ ಖರ್ಚು| ಹೀಗೊಂದು ಹೀನಾಯ ಕ್ರಿಕೆಟ್ ಪಂದ್ಯ!

ಸಮಗ್ರ ನ್ಯೂಸ್::ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಅತೀ ಕಡಿಮೆ ರನ್​ಗಳಿಸಿದ ಕೆಟ್ಟ ದಾಖಲೆ ಟರ್ಕಿ ದೇಶದ ಹೆಸರಿನಲ್ಲಿದೆ. 2019 ರಲ್ಲಿ ಚೆಕ್ ರಿಪಬ್ಲಿಕ್ ವಿರುದ್ದದ ಪಂದ್ಯದಲ್ಲಿ ಟರ್ಕಿ ತಂಡವು ಕಡಿಮೆ ಮೊತ್ತಕ್ಕೆ ಆಲೌಟ್ ಆಗಿತ್ತು. ಕ್ರಿಕೆಟ್​ ತಂಡದಲ್ಲಿ ಒಟ್ಟು 11 ಆಟಗಾರರಿರುತ್ತಾರೆ. ಹನ್ನೊಂದು ಆಟಗಾರರು ಒಂದೊಂದು ರನ್​ ಕಲೆಹಾಕಿದರೂ ಎರಡಂಕಿ ಮೊತ್ತವಾಗುತ್ತೆ. ಆದರೆ ಇಲ್ಲೊಂದು ತಂಡ ಕೇವಲ 8 ರನ್​ಗೆ ಆಲೌಟ್ ಆಗಿ ಅಚ್ಚರಿ ಮೂಡಿಸಿದೆ. ಅದು ಕೂಡ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಎಂಬುದು ವಿಶೇಷ. ಹೌದು, ಅಂಡರ್-19 ಮಹಿಳಾ

8 ರನ್‌ಗೆ ಆಲೌಟ್; ಈ ರನ್ ಗಳಿಸಲು ಬರೋಬ್ಬರಿ 8.1 ಓವರ್ ಖರ್ಚು| ಹೀಗೊಂದು ಹೀನಾಯ ಕ್ರಿಕೆಟ್ ಪಂದ್ಯ! Read More »

ವಿಟ್ಲ: ಅನ್ನಭಾಗ್ಯ ಅಕ್ಕಿಗೆ ಕನ್ನ| ಆರೋಪಿ ಮತ್ತು ವಾಹನ ವಶ

ಸಮಗ್ರ ನ್ಯೂಸ್: ಅನ್ನಭಾಗ್ಯ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವೇಳೆ ವಿಟ್ಲ ಪೊಲೀಸರು ಪತ್ತೆ ಹಚ್ಚಿದ್ದು, ಒಬ್ಬ ಆರೋಪಿ ಮತ್ತು ಸ್ವತ್ತುಗಳನ್ನು ವಶಕ್ಕೆ ಪಡೆದ ಘಟನೆ ಬೋಳಂತೂರು ಗ್ರಾಮದ ಎನ್.ಸಿ ರೋಡ್ ಎಂಬಲ್ಲಿ ನಡೆದಿದೆ‌. ಲಾರಿ ಚಾಲಕ ಮಡಿಕೇರಿ ಮೂಲದ ಚಂದ್ರೇಶ್ ಬಂಧಿತ ಆರೋಪಿಯಾಗಿದ್ದಾನೆ. ಈತ ಬೋಳಂತೂರು ಸಮೀಪದ ನಾರ್ಶ ಎಂಬಲ್ಲಿಗೆ ಲಾರಿಯಲ್ಲಿ ಸುಮಾರು 15 ಟನ್ ಅಕ್ಕಿಯನ್ನು ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದು, ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ವಿಟ್ಲ ಪೊಲೀಸರ ತಂಡ ಆರೋಪಿ ಮತ್ತು

ವಿಟ್ಲ: ಅನ್ನಭಾಗ್ಯ ಅಕ್ಕಿಗೆ ಕನ್ನ| ಆರೋಪಿ ಮತ್ತು ವಾಹನ ವಶ Read More »

ಪಠ್ಯಪುಸ್ತಕ ಪರಿಷ್ಕರಣೆ ಎಡವಟ್ಟು| ಮೂರು ಮತ್ತು ನಾಲ್ಕನೇ ತರಗತಿಯಲ್ಲಿ ಒಂದೇ ಪದ್ಯ

ಸಮಗ್ರ‌ ನ್ಯೂಸ್: ರಾಜ್ಯದಲ್ಲಿ ಪಠ್ಯಪುಸಕ್ತ ಪರಿಷ್ಕರಣಾ ವಿವಾದ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸಮಿತಿ ಅಧ್ಯಕ್ಷರಾಗಿರುವ ರೋಹಿತ್ ಚಕ್ರತೀರ್ಥ ಅವರ ವಿರುದ್ಧ ಕ್ರಮತೆಗೆದುಕೊಳ್ಳಬೇಕೆಂದು ಆಗ್ರಹಿಸುತ್ತಿದ್ದಾರೆ. ಈ ನಡುವೆ ಪಠ್ಯಪುಸ್ತಕ ಪರಿಶೀಲನಾ ಸಮಿತಿಯಿಂದ ಮತ್ತೊಂದು ಎಡವಟ್ಟು ನಡೆದಿದೆ. 3 ಮತ್ತು 4ನೇ ತರಗತಿ ಪುಸ್ತಕಗಳಲ್ಲಿ ಒಂದೇ ಪದ್ಯವನ್ನು ಸೇರ್ಪಡೆಗೊಳಿಸಿದ್ದು, ದಿನಕ್ಕೊಂದು ಯಡವಟ್ಟು ಬಹಿರಂಗವಾಗುತ್ತಿವೆ. ಬಿ.ಎಂ ಶರ್ಮಾರವರು ‘ಬಾವಿಯಲ್ಲಿ ಚಂದ್ರ’ ಎಂಬ ಪದ್ಯವನ್ನು ಎರಡು ತರಗತಿಗಳಲ್ಲಿ ಸೇರಿಸಿ ಸಮಿತಿ ಎಡವಟ್ಟು ಮಾಡಿದೆ. ಬಾವಿಯಲ್ಲಿ ಚಂದ್ರ ಶೀರ್ಷಿಕೆಯ ಪದ್ಯವನ್ನು ಹಿಂದಿನ ಸಮಿತಿಯು 3ನೇ

ಪಠ್ಯಪುಸ್ತಕ ಪರಿಷ್ಕರಣೆ ಎಡವಟ್ಟು| ಮೂರು ಮತ್ತು ನಾಲ್ಕನೇ ತರಗತಿಯಲ್ಲಿ ಒಂದೇ ಪದ್ಯ Read More »

ರಾಜ್ಯ ರಾಜಕಾರಣಕ್ಕೆ ಬರ್ತಾರಾ ಶೋಭಾ ಕರಂದ್ಲಾಜೆ? ಕೇಂದ್ರ ಸಚಿವೆ ಹೇಳಿದ್ದೇನು?

ಸಮಗ್ರ ನ್ಯೂಸ್: ಶೋಭಾ ಕರಂದ್ಲಾಜೆ ಕೇಂದ್ರ ಸರ್ಕಾರದಲ್ಲಿ ಒಳ್ಳೆ ಹುದ್ದೆಯಲ್ಲಿ ನಿರತರಾಗಿದ್ದಾರೆ. ರಾಜ್ಯ ಬಿಟ್ಟು ಕೇಂದ್ರಕ್ಕೆ ಹೋದ ಮೇಲೆ ಮತ್ತೆ ರಾಜ್ಯ ರಾಜಕಾರಣಕ್ಕೆ ಬರುತ್ತಾರಾ? ಎಂಬೆಲ್ಲಾ ಪ್ರಶ್ನೆಗಳು ಎದ್ದಿದ್ದವು. ಇದೀಗ ಈ ವಿಚಾರಕ್ಕೆ ಅವರೇ ಸ್ಪಷ್ಟನೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ರಾಜ್ಯ ರಾಜಕಾರಣಕ್ಕೆ ಮತ್ತೆ ಹಿಂತಿರುಗಿ ಬರುವುದಿಲ್ಲ ಎಂದಿದ್ದಾರೆ. ಕೇಂದ್ರದಲ್ಲಿ ನರೇಂದ್ರ ಮೋದಿಯವರು ನನಗೆ ಕೃಷಿ ಇಲಾಖೆಯ ಜವಾಬ್ದಾರಿ ನೀಡಿದ್ದಾರೆ. ಅಷ್ಟೇ ಅಲ್ಲ ಅನೇಕ ರಾಜ್ಯಗಳ ಚುನಾವಣಾ ಉಸ್ತುವಾರಿಯ ಜವಾಬ್ದಾರಿಯನ್ನು ನೀಡಿದ್ದಾರೆ. ಇದರಲ್ಲಿ ನಾನು ತುಂಬಾ ಖುಷಿಯಾಗಿದ್ದೇನೆ.

ರಾಜ್ಯ ರಾಜಕಾರಣಕ್ಕೆ ಬರ್ತಾರಾ ಶೋಭಾ ಕರಂದ್ಲಾಜೆ? ಕೇಂದ್ರ ಸಚಿವೆ ಹೇಳಿದ್ದೇನು? Read More »

ಬೆಳ್ತಂಗಡಿ: ಲವ್ ಜಿಹಾದ್ ಆತಂಕ| ಸೌತಡ್ಕ ಮಹಾಗಣಪತಿ ದೇವಸ್ಥಾನಕ್ಕೆ ಅನ್ಯಕೋಮಿನ ವಾಹನಗಳಿಗೆ ನಿರ್ಬಂಧ|

ಸಮಗ್ರ ನ್ಯೂಸ್: ಕೋಮು ಸಾಮರಸ್ಯ ಸಂಬಂಧಿಸಿದಂತೆ ಕಳೆದ ಕೆಲವು ತಿಂಗಳಿನಿಂದ ರಾಜ್ಯದಲ್ಲಿ ಹಲವು ವಿಚಾರಗಳು ಚರ್ಚೆಗೆ ಗ್ರಾಸವಾಗಿವೆ. ರಾಷ್ಟ್ರಮಟ್ಟದಲ್ಲೂ ಸದ್ದು ಮಾಡಿದೆ. ಅದರಲ್ಲಿ ಹಿಂದೂಯೇತರರನ್ನು ಜಾತ್ರೆಗಳಲ್ಲಿ ನಿರ್ಬಂಧಿಸಿದ್ದು ಕೂಡ ಒಂದು. ಇದೀಗ ಅದೆಲ್ಲವೂ ತಣ್ಣಗಾಗಿರುವ ನಡುವೆ ಮತ್ತೆ ದಕ್ಷಿಣ ಕನ್ನಡದ ಪ್ರಖ್ಯಾತ ದೇವಸ್ಥಾನ ಸೌತಡ್ಕ ಗಣಪತಿ ದೇವಾಲಯದಲ್ಲಿ ಮತ್ತೊಂದು ವಿವಾದ ಹುಟ್ಟಿಕೊಂಡಿದೆ. ಲವ್ ಜಿಹಾದ್ ಗೆ ಸಂಬಂಧಿಸಿದಂತೆ ಕಳೆದ ವಾರ ಇಲ್ಲಿನ ಮುಸ್ಲಿಂ ಯುವಕನೋರ್ವ ಹಿಂದೂ ಭಕ್ತೆಯನ್ನು ವಿವಾಹವಾಗಿದ್ದು, ಈ ಕಾರಣದಿಂದ ದೇವಸ್ಥಾನಕ್ಕೆ ಹಿಂದೂಯೇತರ ವಾಹನಗಳಿಗೆ ಸಂಘಟನೆಗಳು

ಬೆಳ್ತಂಗಡಿ: ಲವ್ ಜಿಹಾದ್ ಆತಂಕ| ಸೌತಡ್ಕ ಮಹಾಗಣಪತಿ ದೇವಸ್ಥಾನಕ್ಕೆ ಅನ್ಯಕೋಮಿನ ವಾಹನಗಳಿಗೆ ನಿರ್ಬಂಧ| Read More »

ಪತ್ರಕರ್ತರ ಮೇಲೆ ವಿದ್ಯಾರ್ಥಿನಿಯಿಂದ ಪ್ರತಿದೂರು| ಜಾಮೀನು ರಹಿತ ಕೇಸ್ ಜಡಿದ ಉಪ್ಪಿನಂಗಡಿ ಪೊಲೀಸರ ನಡೆಗೆ ಆಕ್ರೋಶ

ಸಮಗ್ರ ನ್ಯೂಸ್: ಕಳೆದ ಕೆಲ ದಿನಗಳಿಂದ ಸರಕಾರಿ ಕಾಲೇಜು ಬಹಳಷ್ಟು ಸದ್ದು ಮಾಡುತ್ತಿದ್ದು ಇದೀಗ ಇನ್ನೊಂದು ಬೆಳವಣಿಗೆಯಿಂದ ಸುದ್ದಿಯಾಗಿದೆ. ವಿದ್ಯಾರ್ಥಿನಿಯೊಬ್ಬಳು ನೀಡಿದ ದೂರಿನಂತೆ ವರದಿಗಾರರಾದ ಅಜಿತ್ ಕುಮಾರ್, ಪ್ರವೀಣ್ ಕುಮಾರ್ ಹಾಗೂ ಸಿದ್ದೀಕ್ ನೀರಾಜೆ ವಿರುದ್ಧ ಎಫ್ಐಆರ್ ದಾಖಲಾಗಿದೆ. ಜೂನ್ 2ರಂದು 9.30 ರ ಸುಮಾರಿಗೆ ಅಜಿತ್ ಕುಮಾರ್ ಎಂಬಾತ ವಿದ್ಯಾರ್ಥಿನಿಯ ಶಾಲನ್ನು ಎಳೆಯಲು ಪ್ರಯತ್ನಿಸಿದ್ದು, ಆಕೆ ತಪ್ಪಿಸಿಕೊಂಡಾಗ ಪ್ರವೀಣ್ ಕುಮಾರ್ ಎಂಬಾತ ಪ್ರಚೋದನೆ ನೀಡಿದ್ದಾನೆ. ಈ ವೇಳೆ ಅಜಿತ್ ಕುಮಾರ್ ವಿದ್ಯಾರ್ಥಿನಿಯ ವಿಡಿಯೋ ಮಾಡಿದ್ದು, ಇದನ್ನು

ಪತ್ರಕರ್ತರ ಮೇಲೆ ವಿದ್ಯಾರ್ಥಿನಿಯಿಂದ ಪ್ರತಿದೂರು| ಜಾಮೀನು ರಹಿತ ಕೇಸ್ ಜಡಿದ ಉಪ್ಪಿನಂಗಡಿ ಪೊಲೀಸರ ನಡೆಗೆ ಆಕ್ರೋಶ Read More »

ಪ್ರಾಥಮಿಕ ಶಿಕ್ಷಕರ ನೇಮಕಾತಿ ಪರೀಕ್ಷೆ-ಮಾದರಿ ಉತ್ತರಗಳು ಪ್ರಕಟ

ಸಮಗ್ರ ನ್ಯೂಸ್: ಕಳೆದ ಮೇ ತಿಂಗಳ 21ಮತ್ತು 22 ದಿನಾಂಕಗಳಂದು ನಡೆದ ರಾಜ್ಯ ಪ್ರಾಥಮಿಕ ಶಿಕ್ಷಕರ ನೇಮಕಾತಿ ಪರೀಕ್ಷೆಯ ಮಾದರಿ ಉತ್ತರಗಳು ಇಲಾಖಾ ಜಾಲತಾಣದಲ್ಲಿ ಪ್ರಕಟಗೊಂಡಿವೆ. ಈ ಕುರಿತಂತೆ ಯಾವುದೇ ಆಕ್ಷೇಪಣೆಗಳಿದ್ದರೆ ಅದನ್ನು ಸಲ್ಲಿಸಲು ದಿನಾಂಕ 03-06-2022 ರಿಂದ 10-06-2022ರ ವರೆಗೆ ಇಲಾಖೆ ಕಾಲಾವಕಾಶ ಕಲ್ಪಿಸಿದೆ. ಅಭ್ಯರ್ಥಿಗಳು ಜಾಲತಾಣದಲ್ಲಿ ತಮ್ಮ ಅರ್ಜಿ ಸಂಖ್ಯೆ ಮತ್ತು ಜನನ ದಿನಾಂಕ ನಮೂದಿಸಿ ಲಾಗಿನ್‌ ಆಗಿ ಆಕ್ಷೇಪಣೆಗಳನ್ನು ಸಲ್ಲಿಸಬಹುದು. ಇದಕ್ಕಾಗಿ ಸಂಸ್ಕರಣಾ ಶುಲ್ಕ ರೂ. 50/- ಪಾವತಿಸಬೇಕಿದೆ.

ಪ್ರಾಥಮಿಕ ಶಿಕ್ಷಕರ ನೇಮಕಾತಿ ಪರೀಕ್ಷೆ-ಮಾದರಿ ಉತ್ತರಗಳು ಪ್ರಕಟ Read More »