June 2022

ದಲಿತ ಮುಖಂಡನ ಹತ್ಯೆ ಪ್ರಕರಣ|ಅಂಬೇಡ್ಕರ್ ರಕ್ಷಣಾ ವೇದಿಕೆ ಖಂಡನೆ

ಸಮಗ್ರ ನ್ಯೂಸ್: ತಮಕೂರಿನ ಗುಬ್ಬಿ ಪಟ್ಟಣದಲ್ಲಿ ಬುಧವಾರ ಮಧ್ಯಾಹ್ನ ಮಚ್ಚು-ಲಾಂಗ್ ನಿಂದ ಹಲ್ಲೆ ನಡೆಸಿ ದಲಿತ ಸಂಘರ್ಷ ಸಮಿತಿ ಮುಖಂಡರಾದ ನರಸಿಂಹಮೂರ್ತಿ 50 ವರ್ಷ ಎಂಬವರ ಬರ್ಬರ ಕೊಲೆ ಮಾಡಲಾಗಿದ್ದು, ಈ ಬಗ್ಗೆ ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಪಿ.ಸುಂದರ ಪಾಟಾಜೆ ಮಾತನಾಡಿ ಇವತ್ತು ದಲಿತ ಸಮುದಾಯದವರನ್ನು ಎಲ್ಲಿ ಬೇಕೋ ಅಲ್ಲಿ ಕೊಲೆ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಲ್ಲಿಬೇಕಲ್ಲಿ ದಲಿತ ಸಮುದಾಯದ ಹೆಣ್ಣು ಮಕ್ಕಳ ಅತ್ಯಾಚಾರ ಕೊಲೆ ಈಗ ಹೆಚ್ಚಾಗಿ ನಡೆಯುತ್ತಿದೆ ಇದಕ್ಕೆಲ್ಲ ಪೊಲೀಸ್ ಇಲಾಖೆ ಸರಿಯಾದ […]

ದಲಿತ ಮುಖಂಡನ ಹತ್ಯೆ ಪ್ರಕರಣ|ಅಂಬೇಡ್ಕರ್ ರಕ್ಷಣಾ ವೇದಿಕೆ ಖಂಡನೆ Read More »

ಮಂಗಳೂರು: ಮಹಡಿಯಿಂದ ಬಿದ್ದು ಬಾಲಕಿ ಸಾವು

ಸಮಗ್ರ ನ್ಯೂಸ್: ಬಾಲಕಿಯೊಬ್ಬಳು ಐದನೇ ಮಹಡಿಯಿಂದ ಆಯತಪ್ಪಿ ಕೆಳಗೆ ಬಿದ್ದು, ಮೃತಪಟ್ಟ ಘಟನೆ ಮಂಗಳೂರಿನ ಕಂಕನಾಡಿಯಲ್ಲಿ ನಡೆದಿದೆ. ಮಹಮ್ಮದ್ ಇಂತಯಾಜ್ ಅವರ ಪುತ್ರಿ ಸೆಹರ್ ಇಂತಿಯಾಜ್ (15) ಮೃತಪಟ್ಟ ಬಾಲಕಿ. ಮನೆಯ ಬಾಲ್ಕನಿಯ ಸೈಡ್ ಕರ್ಟನ್ ಅನ್ನು ಕುರ್ಚಿಯ ಮೇಲೆ ಹತ್ತಿ ಸರಿಪಡಿಸುವಾಗ ಆಯತಪ್ಪಿ ಕೆಳಗೆ ಬಿದ್ದು ಪ್ರಜ್ಞಾಹೀನಳಾಗಿದ್ದಳು. ತಕ್ಷಣ ಆಸ್ಪತ್ರೆಗೆ ಕೊಂಡೊಯ್ಯಲಾಗಿತಾದರೂ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾಳೆ. ಈಕೆ ಬಿಜೈ ಲೂರ್ಡ್ಸ್ ಸೆಂಟ್ರಲ್ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿದ್ದಳು. ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು: ಮಹಡಿಯಿಂದ ಬಿದ್ದು ಬಾಲಕಿ ಸಾವು Read More »

ತೀವ್ರ ಹದೆಗೆಟ್ಟ ಪುಟಿನ್ ಆರೋಗ್ಯ| ನಿತ್ರಾಣಗೊಂಡ ಶರೀರ; ಕಷ್ಟಪಡುತ್ತಿರುವ ರಷ್ಯಾ ಅಧ್ಯಕ್ಷ

ಸಮಗ್ರ ನ್ಯೂಸ್: ಇತ್ತೀಚೆಗೆ ಬಿಡುಗಡೆಯಾದ ವೀಡಿಯೊದಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಲುಗಾಡುತ್ತಿದ್ದು ತನ್ನ ಕಾಲುಗಳ ಮೇಲೆ ಬಲಿಷ್ಠವಾಗಿ ನಿಂತುಕೊಳ್ಳಲು ಹೆಣಗಾಡುತ್ತಿರುವುದು ಕಾಣಬಹುದಾಗಿದೆ. ಇದು ಅವರ ಆರೋಗ್ಯದ ಬಗ್ಗೆ ವಿಶ್ವಾದ್ಯಂತ ಊಹಾಪೋಹಗಳು ಮತ್ತು ಕಳವಳಗಳಿಗೆ ಕಾರಣವಾಗಿದೆ. ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಕ್ರೆಮ್ಲಿನ್‌ನಲ್ಲಿ ನಡೆದ ಪ್ರಶಸ್ತಿ ಸಮಾರಂಭದಲ್ಲಿ ಉಪಸ್ಥಿತರಿದ್ದ ಪುಟಿನ್ ನಿಂತುಕೊಳ್ಳಲು ಹೆಣಗಾಡುತ್ತಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ ಈ ವಿಡಿಯೋದ ಸತ್ಯಾಸತ್ಯತೆಗಳು ದೃಢಗೊಂಡಿಲ್ಲ. ಜೂನ್ 12ರಂದು ಚಲನಚಿತ್ರ ನಿರ್ಮಾಪಕ ನಿಕಿತಾ ಮಿಖೈಲೋವ್ ಅವರಿಗೆ

ತೀವ್ರ ಹದೆಗೆಟ್ಟ ಪುಟಿನ್ ಆರೋಗ್ಯ| ನಿತ್ರಾಣಗೊಂಡ ಶರೀರ; ಕಷ್ಟಪಡುತ್ತಿರುವ ರಷ್ಯಾ ಅಧ್ಯಕ್ಷ Read More »

ಇಂದಿನಿಂದ ಸಿಇಟಿ ಪರೀಕ್ಷೆ; ಸಿಸಿ ಟಿವಿ ಕಣ್ಗಾವಲಿನಲ್ಲಿ‌ ನಡೆಯಲಿದೆ ಎಕ್ಸಾಂ

ಸಮಗ್ರ ನ್ಯೂಸ್: ಇಂಜಿನಿಯರಿಂಗ್, ಕೃಷಿ, ಪಶುವೈದ್ಯಕೀಯ, ಫಾರ್ಮಸಿ ಮುಂತಾದ ವೃತ್ತಿಪರ ಕೋರ್ಸುಗಳಿಗೆ ಇದೇ 16 ಮತ್ತು 17ರಂದು ಸಿಇಟಿ (ಸಾಮಾನ್ಯ ಪ್ರವೇಶ ಪರೀಕ್ಷೆ) ಮತ್ತು 18ರಂದು ಹೊರನಾಡು ಮತ್ತು ಗಡಿನಾಡು ಕನ್ನಡಿಗ ವಿದ್ಯಾರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ. ಈ ಬಾರಿ ಒಟ್ಟು 2,16,525 ವಿದ್ಯಾರ್ಥಿಗಳು ಸಿಇಟಿ ಬರೆಯಲಿದ್ದಾರೆ. `16ರಂದು ಬೆಳಿಗ್ಗೆ 10.30ರಿಂದ 11.50ರವರೆಗೆ ಜೀವಶಾಸ್ತ್ರ, ಮಧ್ಯಾಹ್ನ 2.30ರಿಂದ 3.50ರವರೆಗೆ ಗಣಿತ ಪರೀಕ್ಷೆಗಳು ನಡೆಯಲಿವೆ. 17ರಂದು ಬೆಳಿಗ್ಗೆ ಭೌತಶಾಸ್ತ್ರ ಮತ್ತು ಮಧ್ಯಾಹ್ನ ರಸಾಯನಶಾಸ್ತ್ರ ಪರೀಕ್ಷೆ ಜರುಗಲಿದೆ’. 18ರ

ಇಂದಿನಿಂದ ಸಿಇಟಿ ಪರೀಕ್ಷೆ; ಸಿಸಿ ಟಿವಿ ಕಣ್ಗಾವಲಿನಲ್ಲಿ‌ ನಡೆಯಲಿದೆ ಎಕ್ಸಾಂ Read More »

ವಿಧಾನಪರಿಷತ್ ಚುನಾವಣೆ| ಗೆದ್ದುಬೀಗಿದ ಕಾಂಗ್ರೆಸ್ ನ ಪ್ರಕಾಶ್ ಹುಕ್ಕೇರಿ

ಸಮಗ್ರ ನ್ಯೂಸ್: ವಾಯುವ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಅರುಣ್ ಶಹಾಪುರರನ್ನು ಹಿಂದಿಕ್ಕಿ ಜಯಭೇರಿ ಬಾರಿಸಿದ್ದಾರೆ. ಚುನಾವಣಾ ಆಯೋಗದಿಂದ ಅಧಿಕೃತ ಘೋಷಣೆ ಬಾಕಿಯಿದೆ. ಪ್ರಕಾಶ್ ಹುಕ್ಕೇರಿ ಮೊದಲ ಸುತ್ತಿನಲ್ಲಿ 1692 ಮತಗಳ ಮುನ್ನಡೆ ಕಾಯ್ದುಕೊಂಡಿದ್ದರು.2ನೇ ಸುತ್ತಿನಲ್ಲಿ 3400 ಮತಗಳನ್ನು ಪಡೆದಿದ್ದರು. ಪ್ರಸ್ತುತ ಮಾಹಿತಿಯ ಪ್ರಕಾರ ಹುಕ್ಕೇರಿ 10 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದು, 4 ಸಾವಿರಕ್ಕಿಂತ ಹೆಚ್ಚಿನ ಮತಗಳ ಮುನ್ನಡೆ ಸಾಧಿಸಿದ್ದಾರೆ. ಈ ಕ್ಷೇತ್ರದಲ್ಲಿ ಹಿಂದೆ ಎರಡು ಬಾರಿ ಗೆಲುವು

ವಿಧಾನಪರಿಷತ್ ಚುನಾವಣೆ| ಗೆದ್ದುಬೀಗಿದ ಕಾಂಗ್ರೆಸ್ ನ ಪ್ರಕಾಶ್ ಹುಕ್ಕೇರಿ Read More »

ಸುಬ್ರಹ್ಮಣ್ಯ: ಒಂದೂವರೆ ತಿಂಗಳ ಬಳಿಕ ಗೋಕಳ್ಳತನ ಆರೋಪಿಯ ಬಂಧಿಸಿದ ಪೊಲೀಸರು

ಸಮಗ್ರ ನ್ಯೂಸ್: ಸುಬ್ರಹ್ಮಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಪಾರ್ಕಿಂಗ್ ಸ್ಥಳದಲ್ಲಿದ್ದ ದನವನ್ನು ಕಾರಿನಲ್ಲಿ ಬಂದು ದನವನ್ನು ಕದಿಯಲು ಪ್ರಯತ್ನ ಮಾಡಿದ್ದ ಅಪರಿಚಿತ ಗುಂಪನ್ನು ಸುಬ್ರಹ್ಮಣ್ಯ ಪೊಲೀಸರು ಕೊನೆಗೂ ಪತ್ತೆ ಹಚ್ಚಿ ಓರ್ವನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಉಮರ್ ಫಾರೂಕ್ ಎಂದು ಗುರುತಿಸಲಾಗಿದೆ. ಆರೋಪಿಯು ತನ್ನ ಸಹಚರರೊಂದಿಗೆ ಇನ್ನೋವಾ ಕಾರಿನಲ್ಲಿ ಆಗಮಿಸಿ ದನವನ್ನು ಕಳ್ಳತನಗೈಯುವ ವಿಫಲ ಯತ್ನದ ವೀಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಇಲಾಖೆ ಒಂದೂವರೆ

ಸುಬ್ರಹ್ಮಣ್ಯ: ಒಂದೂವರೆ ತಿಂಗಳ ಬಳಿಕ ಗೋಕಳ್ಳತನ ಆರೋಪಿಯ ಬಂಧಿಸಿದ ಪೊಲೀಸರು Read More »

ದ.ಸಂ.ಸಮಿತಿ ಸಂಚಾಲಕನ ಕೊಚ್ಚಿ ಕೊಲೆ| ಬೆಚ್ಚಿಬಿದ್ದ ತುಮಕೂರು

ಸಮಗ್ರ ನ್ಯೂಸ್: ಇಬ್ಬರು ದಲಿತ ಯುವಕರ ಕೊಲೆ ಮಾಸುವ ಮುನ್ನವೇ ಹಾಡಹಗಲೇ ದಲಿತ ಮುಖಂಡರೊಬ್ಬರನ್ನು ಗುಬ್ಬಿ ಪಟ್ಟಣದಲ್ಲಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಇಂದು (ಬುಧವಾರ) ಮಧ್ಯಾಹ್ನ 1 ಗಂಟೆ ಸುಮಾರಿಗೆ ನಡೆದಿದೆ. ಕೊಲೆಯಾದ ವ್ಯಕ್ತಿ ಗುಬ್ಬಿ ತಾಲೂಕು ದ.ಸಂ.ಸ. ಸಂಚಾಲಕ ನರಸಿಂಹಮೂರ್ತಿ(ಕುರಿಮೂರ್ತಿ) ಎಂದು ತಿಳಿದು ಬಂದಿದೆ. ಗುಬ್ಬಿ ಪಟ್ಟಣದ ಬಿ.ಹಚ್.ರಸ್ತೆಯ ಟೀ ಅಂಗಡಿ ಮುಂದೆ ಕುಳಿತ್ತಿದ್ದ ನರಸಿಂಹಮೂರ್ತಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ ಗುಂಪು ಪರಾರಿಯಾಗಿದ್ದು, ಹಲ್ಲೆಯ ತೀವ್ರತೆಗೆ ನರಸಿಂಹಮೂರ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ

ದ.ಸಂ.ಸಮಿತಿ ಸಂಚಾಲಕನ ಕೊಚ್ಚಿ ಕೊಲೆ| ಬೆಚ್ಚಿಬಿದ್ದ ತುಮಕೂರು Read More »

ಹಸುವಿನ ಮೇಲೆ ಲೈಂಗಿಕ ದೌರ್ಜನ್ಯ| ಆರೋಪಿಯ ಬಂಧನ

ಸಮಗ್ರ ನ್ಯೂಸ್: ಹಸುವಿನ ಮೇಲೆ ಅತ್ಯಾಚಾರವೆಸಗಿದ್ದ ಆರೋಪದ ಮೇಲೆ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಅಯೋದ್ಯೆ ಸಮೀಪದ ಇಲ್ಲಿನ ಶಿವಕರ ಗ್ರಾಮದ ನಿವಾಸಿ ಶಹಾಬುದ್ದೀನ್. ಜೂನ್ 7 ರಂದು ಈ ಘಟನೆ ನಡೆದಿತ್ತು. ಕೆಲವರು ಶಾಹಬುದ್ದೀನ್‌ನನ್ನು ಹಸುವಿನ ಜೊತೆ ಆಕ್ಷೇಪಾರ್ಹ ಭಂಗಿಯಲ್ಲಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಈತನ ವಿಡಿಯೋ ಮಾಡಿ ಪೊಲೀಸರಿಗೆ ಕಳುಹಿಸಿದಾಗ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಈ ಹಿಂದೆಯೂ ದೇಶದ ಕೆಲವು ಭಾಗಗಳಲ್ಲಿ ಇಂತಹ ಅಪರಾಧಗಳು ನಡೆದ ಪ್ರಕರಣಗಳು ಬೆಳಕಿಗೆ ಬಂದಿವೆ.

ಹಸುವಿನ ಮೇಲೆ ಲೈಂಗಿಕ ದೌರ್ಜನ್ಯ| ಆರೋಪಿಯ ಬಂಧನ Read More »

ಬೆಳ್ತಂಗಡಿ: ಶಿಕ್ಷಕಿ ಹೃದಯಾಘಾತದಿಂದ ಬೆಂಗಳೂರಿನಲ್ಲಿ ಮೃತ್ಯು

ಬೆಳ್ತಂಗಡಿ: ತಾಲೂಕಿನ ಕಾಯರ್ತಡ್ಕದ ದಿವ್ಯಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕಿ ಹೃದಯಾಘಾತದಿಂದ ಬೆಂಗಳೂರಿನಲ್ಲಿ ಮೃತಪಟ್ಟ ಘಟನೆ ಜೂ. 13ರಂದು ನಡೆದಿದೆ. ಕಳೆಂಜ ಗ್ರಾಮದ ಉದ್ರಾಜೆ ನಿವಾಸಿ, ಭಾರತಿ ಎಸ್‌. (42) ಮೃತರು. ಇವರು ಕಾರ್ಯನಿಮಿತ್ತ ಬೆಂಗಳೂರಿಗೆ ಹೋಗಿದ್ದಾಗ ಹೃದಯಾಘಾತ ಕ್ಕೊಳಗಾಗಿದ್ದರು. ತತ್‌ಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಷ್ಟರಲ್ಲಿ ಅವರು ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಮೇಲಂತಬೆಟ್ಟು ಕಾಲೇಜಿನ ಉಪನ್ಯಾಸಕ ಡಾ| ಕುಶಾಲಪ್ಪ ಎಸ್‌. ಅವರ ಪತ್ನಿಯಾಗಿರುವ ಭಾರತಿ ಅವರು ಕಳೆದ 8 ವರ್ಷಗಳಿಂದ ಕಾಯರ್ತಡ್ಕದ ದಿವ್ಯಜ್ಯೋತಿ ಆಂಗ್ಲ

ಬೆಳ್ತಂಗಡಿ: ಶಿಕ್ಷಕಿ ಹೃದಯಾಘಾತದಿಂದ ಬೆಂಗಳೂರಿನಲ್ಲಿ ಮೃತ್ಯು Read More »

ವಿಧಾನ ಪರಿಷತ್ ಚುನಾವಣೆ| ಬಿಜೆಪಿಯ ಬಸವರಾಜ್ ಹೊರಟ್ಟಿಗೆ ಗೆಲುವು

ಸಮಗ್ರ ನ್ಯೂಸ್: ವಿಧಾನಪರಿಷತ್ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಲಿದ್ದು, ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ನಡೆಯುತ್ತಿದೆ. ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲ ಬಸವರಾಜ ಹೊರಟ್ಟಿ ಭರ್ಜರಿ ಗೆಲುವು ಸಾಧಿಸಿದ್ದು, ಚುನಾವಣಾ ಆಯೋಗದಿಂದ ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ. ಪಶ್ಚಿಮ ಶಿಕ್ಷಕರ ಕ್ಷೇತ್ರದ ಮತ ಎಣಿಕೆ ಪೂರ್ಣಗೊಂಡಿದ್ದು, ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಗುರಿಕಾರ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದು, ಚುನಾವಣಾ ಆಯೋಗದಿಂದ ಅಧಿಕೃತ ಘೋಷಣೆ ಮಾಡಲಿದೆ. ಈ

ವಿಧಾನ ಪರಿಷತ್ ಚುನಾವಣೆ| ಬಿಜೆಪಿಯ ಬಸವರಾಜ್ ಹೊರಟ್ಟಿಗೆ ಗೆಲುವು Read More »