ಕಾರು – ಹಾಲಿನ ಟ್ಯಾಂಕರ್ ಡಿಕ್ಕಿ ಇಬ್ಬರು ಮಹಿಳೆಯರು ಸಾವು
ಸಮಗ್ರ ನ್ಯೂಸ್: ಹಾಲಿನ ಟ್ಯಾಂಕರ್ ಗೆ ಕಾರು ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಯುವತಿಯರು ಸಾವನ್ನಪ್ಪಿರುವ ಘಟನೆ ಮೈಸೂರಿನ ರಂಗಯ್ಯನ ಕೊಪ್ಪಲು ಬಳಿ ನಡೆದಿದೆ. 25 ವರ್ಷದ ಜೀವಿತ ಹಾಗೂ 26 ವರ್ಷದ ಪ್ರತ್ಯೂಷ ಮೃತಪಟ್ಟವರು. ಇವರು ಬರುತ್ತಿದ್ದ ಕಾರು ಎದುರಿನಿಂದ ಬರುತ್ತಿದ್ದ ಹಾಲಿನ ಟ್ಯಾಂಕರ್ ಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಕಾರಿನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಸ್ಥಳದಲ್ಲೇ ಜೀವಿತಾ ಮೃತಪಟ್ಟರೆ, ಪ್ರತ್ಯೂಷ ಮೈಸೂರು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯದಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಕಾರು – ಹಾಲಿನ ಟ್ಯಾಂಕರ್ ಡಿಕ್ಕಿ ಇಬ್ಬರು ಮಹಿಳೆಯರು ಸಾವು Read More »