ವಿಟ್ಲ : ಮಹಿಳೆಗೆ ಚೂರಿಯಿಂದ ಇರಿದು ಪರಾರಿಯಾದ ಯುವಕ

ಸಮಗ್ರ ನ್ಯೂಸ್: ಮಹಿಳೆಯ ಮೇಲೆ ಯುವಕನೋರ್ವ ಚೂರಿ ಇರಿದು ಪರಾರಿಯಾದ ಘಟನೆ ಇಲ್ಲಿನ ಜನಪ್ರಿಯ ಗಾಡರ್ನ್‌ ಬಳಿ ನಡೆದಿದೆ. ಅನಂತಾಡಿ ದೇವಿನಗರ ನಿವಾಸಿ ಶಕುಂತಲಾ ಎಂಬ ಮಹಿಳೆಯ ಮೇಲೆ ಹಲ್ಲೆ ಮಾಡಲಾಗಿದೆ.

Ad Widget ... ..

ಚೂರಿ ಇರಿತದಿಂದ ಮಹಿಳೆಗೆ ಗಂಭೀರ ಗಾಯಗಳಾಗಿದೆ. ಸ್ಥಳೀಯರು ಗಾಯಾಳು ಮಹಿಳೆಯನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಶಕುಂತಲಾ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಗಂಡ ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದಾರೆ.

Ad Widget

ಚೂರಿ ಇರಿತಕ್ಕೆ ಕಾರಣ ಯಾವುದೆಂದು ತಿಳಿದು ಬಂದಿಲ್ಲ. ಹಲ್ಲೆಗೈದ ಯುವಕ ಪೆರಾಜೆ ಕಡೆ ಓಡಿ ಹೋಗಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಮಹಿಳೆಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ

Leave a Comment

Your email address will not be published. Required fields are marked *