Ad Widget .

SDA ಹುದ್ದೆಗಳ ನೇಮಕಾತಿ ಗೆ ಅರ್ಜಿ ಅಹ್ವಾನ

ಬೆಂಗಳೂರು: ಜಲಸಂಪನ್ಮೂಲ ಇಲಾಖೆಯಲ್ಲಿ ಗ್ರೂಪ್ ಸಿ ವೃಂದದ ಪರಿಶಿಷ್ಟ ಜಾತಿ ಬ್ಯಾಕ್ ಲಾಗ್ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ.

Ad Widget . Ad Widget .

ಕರ್ನಾಟಕ ರಾಜ್ಯ ಪತ್ರದಲ್ಲಿ ರಾಜ್ಯ ಸರ್ಕಾರದಿಂದ ಅಧಿಸೂಚನೆ ಪ್ರಕಟಿಸಲಾಗಿದ್ದು, 155 SDA ಹುದ್ದೆಗಳ ನೇಮಕಾತಿಗೆ ಜುಲೈ 11 ರಿಂದ ಆಗಸ್ಟ್ 10 ರ ವರೆಗೆ ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

Ad Widget . Ad Widget .


ಪದವಿ ಪೂರ್ವ ಶಿಕ್ಷಣ ಇಲಾಖೆ ನಡೆಸುವ ಪಿಯುಸಿ ಪರೀಕ್ಷೆ ಅಥವಾ ಸಿಬಿಎಸ್‌ಇ, ಐಸಿಎಸ್‌ಇ ಮಂಡಳಿ ನಡೆಸುವ 10 ಪ್ಲಸ್ ಪರೀಕ್ಷೆ ಅಥವಾ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ ವತಿಯಿಂದ ನಡೆಸಲಾಗುವ ಉನ್ನತ ಪ್ರೌಢ ಶಿಕ್ಷಣ ಕೋರ್ಸ್, HSC ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು.

ಎರಡು ವರ್ಷದ ಐಟಿಐ, ಮೂರು ವರ್ಷದ ಡಿಪ್ಲೊಮಾ ಕೋರ್ಸ್ ಮಾಡಿದವರಿಗೆ ಅರ್ಜಿ ಸಲ್ಲಿಸುವ ಅವಕಾಶವಿದೆ. ಅಭ್ಯರ್ಥಿಗಳಿಗೆ 18 ರಿಂದ 40 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ ಎಂದು ಹೇಳಲಾಗಿದೆ.

Leave a Comment

Your email address will not be published. Required fields are marked *