Ad Widget .

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಶುಭೋದಯ ಓದುಗರೇ…….. ವಿಶ್ರಾಂತಿಗೆ ಮೀಸಲಾದ ಈ ಭಾನುವಾರ ನಿಮ್ಮ ಭವಿಷ್ಯಕ್ಕೆ ಯಾವೆಲ್ಲಾ ಬದಲಾವಣೆಯನ್ನುಂಟುಮಾಡುತ್ತದೆ? ವಿಶ್ರಾಂತಿಯ ಜೊತೆಗೆ ಒಂದಿಷ್ಟು ಖುಷಿಯನ್ನು ನೀಡುವುದೇ ಎಂದು ತಿಳಿದುಕೊಳ್ಳಲು ಈ ಮುಂದೆ ವಿವರಿಸಲಾದ ರಾಶಿ ಭವಿಷ್ಯವನ್ನು ತಿಳಿಯಿರಿ…

Ad Widget . Ad Widget .

ಮೇಷ ರಾಶಿ:
ಹೊಸದಾಗಿ ಆರಂಭಿಸಿರುವ ಉದ್ಯಮವು ನಿಧಾನವಾಗಿ ಪ್ರಗತಿಯತ್ತ ಸಾಗುತ್ತದೆ.ಆಸಕ್ತ ಮಹಿಳೆಯರಿಗೆ ರಾಜಕೀಯದಲ್ಲಿ ಅವಕಾಶಗಳು ದೊರೆಯುವ ಸಾಧ್ಯತೆ ಇದೆ. ಅನವಶ್ಯಕ ಮಾತುಗಳನ್ನಾಡಿ ಜನರ ನಡುವೆ ನಿಷ್ಟುರಕ್ಕೆ ಒಳಗಾಗುವ ಸಾಧ್ಯತೆಯಿದೆ, ಎಚ್ಚರವಹಿಸಿರಿ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವ ಸಾಧ್ಯತೆಗಳಿವೆ. ಷೇರು ವ್ಯವಹಾರಗಳಲ್ಲಿ ಹೆಚ್ಚು ಹಣ ಹೂಡಿಕೆ ಮಾಡದಿರುವುದು ಒಳ್ಳೆಯದು. ಸಂಗಾತಿಯ ಮನೆಯ ಕಡೆಯವರಿಂದ ಯಾವುದೋ ಒಂದು ರೀತಿಯ ಪ್ರತಿರೋಧ ಎದುರಾಗುತ್ತದೆ. ಹಣದ ಒಳಹರಿವು ಅಗತ್ಯವನ್ನು ಪೂರೈಸುವಷ್ಟು ಇರುತ್ತದೆ. ಹಿರಿಯರ ಸಕಾಲಿಕ ನೆರವಿನಿಂದ ಆಪತ್ತುಗಳು ದೂರವಾಗುತ್ತವೆ. ಕೃಷಿಯಲ್ಲಿ ಹೆಚ್ಚು ಲಾಭವನ್ನು ಕಾಣಬಹುದು.

Ad Widget . Ad Widget .

ವೃಷಭರಾಶಿ:
ಕೃಷಿ ಕಾರ್ಮಿಕರಿಗೆ ಅನಿರೀಕ್ಷಿತ ಬಿಡುವು ದೊರೆಯುತ್ತದೆ. ಹಣ್ಣು ಮತ್ತು ಹೂವಿನ ವ್ಯಾಪಾರಿಗಳಿಗೆ ಧನಲಾಭ ಹೆಚ್ಚುತ್ತದೆ. ಹಣದ ಒಳಹರಿವು ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಹೆಚ್ಚಿನ ಪ್ರಗತಿ ಇರುತ್ತದೆ. ಸರ್ಕಾರದಿಂದ ಆಗುವ ಕೆಲಸ ಕಾರ್ಯಗಳು ಸುಗಮವಾಗಿ ಆಗುತ್ತವೆ. ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಎಚ್ಚರಿಕೆವಹಿಸುವುದು ಒಳ್ಳೆಯದು. ಉದ್ಯೋಗದಲ್ಲಿ ಒಳ ಶತ್ರುಗಳು ಇರುತ್ತಾರೆ ಎಚ್ಚರವಹಿಸಿರಿ. ಇಚ್ಛಿಸಿದ ನಿವೇಶನವನ್ನು ಕೊಳ್ಳಲು ಸಾಲ ಸೌಲಭ್ಯಗಳು ಅಥವಾ ಹಣಕಾಸಿನ ನೆರವು ದೊರೆತು ಸಂತಸವಾಗುತ್ತದೆ. ರಾಜಕೀಯ ನಾಯಕರುಗಳಿಗೆ ಸಾರ್ವಜನಿಕರಿಂದ ಪುರಸ್ಕಾರದ ಜೊತೆಗೆ ಬೇಡಿಕೆಯ ಪಟ್ಟಿಯು ದೊರೆಯುತ್ತದೆ. ಸರ್ಕಾರಿ ಸಂಸ್ಥೆಗಳಿಗೆ ಆಹಾರ ವಸ್ತುಗಳನ್ನು ಮಾರಾಟ ಮಾಡುವವರಿಗೆ ಆದಾಯವೂ ಹೆಚ್ಚುತ್ತದೆ.

ಮಿಥುನ ರಾಶಿ:
ರಾಜಕೀಯ ಸೇರಬೇಕೆನ್ನುವವರು ಆ ವಿಚಾರದಲ್ಲಿ ಗಂಭೀರ ಚಿಂತನೆಯನ್ನು ಮಾಡುವುದು ಅಗತ್ಯ. ಸಾಮಾಜಿಕ ಕೆಲಸಗಳಲ್ಲಿ ಆಸಕ್ತಿ ಹೆಚ್ಚುತ್ತದೆ. ಆತ್ಮೀಯರ ಶುಭಕಾರ್ಯಗಳಲ್ಲಿ ಉತ್ತಮವಾಗಿ ಹೊಣೆ ನಿರ್ವಹಿಸುವಿರಿ. ಸರ್ಕಾರಿ ಕೆಲಸಗಳಲ್ಲಿ ಸ್ವಲ್ಪಮಟ್ಟಿನ ಹಿನ್ನಡೆಯನ್ನು ಕಾಣಬಹುದು. ದಿನನಿತ್ಯದ ವ್ಯವಹಾರಗಳಲ್ಲಿ ತೊಂದರೆ ಇರುವುದಿಲ್ಲ. ಕೆಲವೊಂದು ವೈಯಕ್ತಿಕ ತೊಂದರೆಗಳಿಂದ ಮುಕ್ತರಾಗಿ ನೆಮ್ಮದಿ ಕಾಣುವಿರಿ. ಚಿನ್ನಾಭರಣಗಳಿಗಾಗಿ ಹಣ ಹೂಡಿಕೆ ಮಾಡುವಿರಿ. ಉದ್ಯೋಗದಲ್ಲಿ ಸ್ವಲ್ಪಮಟ್ಟಿನ ಪ್ರಗತಿಯನ್ನು ಕಾಣಬಹುದು. ನ್ಯಾಯಾಧೀಶರುಗಳಿಗೆ ಹೆಚ್ಚಿನ ಒತ್ತಡ ಬರಬಹುದು. ಬ್ಯಾಂಕ್ ಅಧಿಕಾರಿಗಳು ದಾಖಲೆ ಪರಿಶೀಲಿಸುವಾಗ ಎಚ್ಚರವಹಿಸಬೇಕು. ಹಣದ ಒಳಹರಿವು ಸಾಮಾನ್ಯ ಗತಿಯಲ್ಲಿ ಇರುತ್ತದೆ.

ಕಟಕ ರಾಶಿ:
ಸಂಬಂಧಿಕರ ನೆರವಿಗೆ ಹೋಗಲೇಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಬಹುದು. ಮಕ್ಕಳ ವಿದ್ಯಾಭ್ಯಾಸದಲ್ಲಿ ಕೊಂಚ ಹಿನ್ನಡೆ ಇರುತ್ತದೆ. ಧನ ಸಂಪನ್ಮೂಲಗಳ ಕೊರತೆಯಿಂದಾಗಿ ಕೆಲವು ಕೆಲಸಗಳು ನಿಲ್ಲಬಹುದು. ತಾಂತ್ರಿಕ ಪರಿಣಿತರಿಗೆ ಹೆಚ್ಚಿನ ಮಾನ್ಯತೆ ಸಿಗುತ್ತದೆ. ಕಲಾವಿದರುಗಳಿಗೆ ಅವಕಾಶಗಳು ದೊರೆತು ಆದಾಯ ಹೆಚ್ಚುತ್ತದೆ. ಅಭಿವೃದ್ಧಿಗೆ ಅನುಕೂಲವಾಗುವ ಕೆಲವು ಅವಕಾಶಗಳು ದೊರೆಯುತ್ತವೆ. ಅವುಗಳನ್ನು ಸರಿಯಾಗಿ ಬಳಸಿಕೊಳ್ಳಿ. ಸ್ಥಿರಾಸ್ತಿಯನ್ನು ಕೊಳ್ಳಲು ಈಗ ಸಕಾಲವಲ್ಲ. ಶಸ್ತ್ರಚಿಕಿತ್ಸೆಗೆ ಒಳಪಡಬೇಕಾದವರಿಗೆ ನಿರಾಳವಾದ ಸುದ್ದಿಯೊಂದು ಕೇಳಿ ಬರುತ್ತದೆ. ಸಂಗಾತಿಯ ಜೊತೆ ಸೌಮ್ಯವಾಗಿರುವುದು ಬಹಳ ಅನುಕೂಲ. ವಿದೇಶದಲ್ಲಿ ವೃತ್ತಿಯಲ್ಲಿರುವವರಿಗೆ ಅನುಕೂಲಕರ ವಾತಾವರಣ ದೊರೆಯುತ್ತದೆ.

ಸಿಂಹ ರಾಶಿ:
ಕ್ರೀಡಾಪಟುಗಳಿಗೆ ಕ್ರೀಡಾಸ್ಪರ್ಧೆಯಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ ಇರುತ್ತದೆ. ವಿಜ್ಞಾನಿಗಳಿಗೆ ಅವರ ಆವಿಷ್ಕಾರದಲ್ಲಿ ಮೇಲುಗೈ ಇರುತ್ತದೆ. ಸಂಗಾತಿಯ ಆರೋಗ್ಯದಲ್ಲಿ ಏರುಪೇರಾಗಬಹುದು. ಹಣದ ಒಳಹರಿವು ಸಮಾಧಾನಕರವಾಗಿ ಇರುತ್ತದೆ. ಕುಟುಂಬದಲ್ಲಿರುವ ಹಿರಿಯರ ಕೆಲವು ಆಕಾಂಕ್ಷೆಗಳು ಈಡೇರುವ ಸಾಧ್ಯತೆ ಇದೆ. ರಕ್ಷಣಾ ವಿಭಾಗದಲ್ಲಿ ಕೆಲಸ ಮಾಡುತ್ತಿರುವವರಿಗೆ ಗೌರವ ದೊರೆಯುತ್ತದೆ. ನೃತ್ಯ ಕಲಾವಿದರಿಗೆ ಸಮಾಧಾನಕರ ದಿನವಾಗಿರುತ್ತದೆ. ಸರ್ಕಾರಿ ಕಚೇರಿಯ ಕೆಲಸಕಾರ್ಯಗಳಲ್ಲಿ ಯಶಸ್ಸನ್ನು ಕಾಣಬಹುದು. ಮಕ್ಕಳ ನಡವಳಿಕೆ ಬಗ್ಗೆ ವಿಶೇಷ ಗಮನವನ್ನು ಕೊಡಲೇಬೇಕಾದ ಪರಿಸ್ಥಿತಿ ಇದೆ. ನಿರ್ಮಾಣ ಹಂತದಲ್ಲಿರುವ ಮನೆಯ ಕೆಲಸಗಳು ನಿಧಾನವಾದರೂ ನಿಲ್ಲುವುದಿಲ್ಲ. ವೃತ್ತಿಯಲ್ಲಿ ಏಳಿಗೆಯನ್ನು ಕಾಣಬಹುದು

ಕನ್ಯಾ ರಾಶಿ:
ಕುಟುಂಬದಲ್ಲಿ ಹೊಂದಾಣಿಕೆಗಾಗಿ ಸಾಕಷ್ಟು ಪ್ರಯತ್ನ ಪಡುವಿರಿ. ಆರೋಗ್ಯದಲ್ಲಿ ಸ್ವಲ್ಪ ಮಟ್ಟಿನ ಏರುಪೇರುಗಳನ್ನು ಕಾಣಬಹುದು. ಕೋರ್ಟ್‌ ಸಂಬಂಧಿ ಕಲಹಗಳಲ್ಲಿ ಅಲ್ಪಮಟ್ಟಿನ ಮುನ್ನಡೆಯನ್ನು ಕಂಡು ನಿರಾಳರಾಗುವಿರಿ. ವ್ಯವಹಾರದಲ್ಲಿ ಹೆಚ್ಚು ಲಾಭವನ್ನು ನಿರೀಕ್ಷೆ ಮಾಡಬಹುದು. ಹೊಸ ಉದ್ಯೋಗಕ್ಕೆ ಸೇರುವ ವಿಚಾರದಲ್ಲಿ ಸ್ನೇಹಿತರಿಂದ ಸಲಹೆಗಳನ್ನು ಪಡೆದು ಮುನ್ನಡೆಯುವುದು ಒಳ್ಳೆಯದು. ರೈತರಿಗೆ ಉತ್ತಮ ಧನಾದಾಯದ ಸುಳಿವು ಇದೆ. ಒಡವೆಗಳನ್ನು ಖರೀದಿ ಮಾಡಲು ಆಲೋಚನೆ ಮಾಡುವಿರಿ. ಸಂಗಾತಿಯನ್ನು ಅರಸುತ್ತಿರುವವರಿಗೆ ಸಂಬಂಧ ಕೂಡಿ ಬರುವ ಸಾಧ್ಯತೆ ಇದೆ. ಆರ್ಥಿಕ ಸ್ಥಿತಿಯು ಸಾಮಾನ್ಯವಾಗಿರುತ್ತದೆ. ರಂಗ ಕಲಾವಿದರುಗಳಿಗೆ ಹೆಚ್ಚಿನ ಮಾನ್ಯತೆ ದೊರೆಯುವ ಲಕ್ಷಣಗಳಿವೆ.

ತುಲಾ ರಾಶಿ:
ಅನವಶ್ಯಕ ಪ್ರಯಾಣದಿಂದ ಧನ ನಷ್ಟ ಆಗುವ ಸಾಧ್ಯತೆಗಳಿವೆ. ಹಣಕಾಸು ಸಂಸ್ಥೆಗಳನ್ನು ನಡೆಸುತ್ತಿರುವವರಿಗೆ ಆದಾಯದಲ್ಲಿ ಕೊರತೆ ಆಗಲಿದೆ. ಚಿನ್ನ, ಬೆಳ್ಳಿ ಆಭರಣಗಳನ್ನು ಮಾರಾಟ ಮಾಡುವವರಿಗೆ ನಿರೀಕ್ಷಿತ ಲಾಭವಿರುವುದಿಲ್ಲ. ಮನೆ ಮಾರಾಟ ಮಾಡುವ ಸಂಸ್ಥೆಗಳ ಮುಖ್ಯಸ್ಥರಿಗೆ ಅವರ ವ್ಯವಹಾರದಲ್ಲಿ ಹಿನ್ನಡೆ ಇರುತ್ತದೆ. ಉದ್ಯೋಗ ಮಾಡುವ ಸ್ಥಳದಲ್ಲಿ ಕಾರ್ಯದೊತ್ತಡ ಕಡಿಮೆಯಾಗಿ ಮನಸ್ಸಿಗೆ ನಿರಾಳವೆನಿಸುತ್ತದೆ. ಆರ್ಥಿಕ ಸ್ಥಿತಿಯು ಮಂದಗತಿಯಲ್ಲಿ ಇರುತ್ತದೆ. ವಿದ್ಯಾರ್ಥಿಗಳಿಗೆ ಅವರ ಅಧ್ಯಯನದಲ್ಲಿ ಆಸಕ್ತಿ ಕಡಿಮೆಯಾಗಬಹುದು. ಹಿರಿಯರ ಸಲಹೆ-ಸೂಚನೆಗಳನ್ನು ಪಾಲಿಸುವುದು ಉತ್ತಮ. ಆತ್ಮ ಶೋಧನೆಯಿಂದ ತಲೆದೋರಿರುವ ಆಂತರಿಕ ಗೊಂದಲಗಳನ್ನು ನಿವಾರಣೆ ಮಾಡಿಕೊಳ್ಳಬಹುದು.

ವೃಶ್ಚಿಕ ರಾಶಿ:
ಸಾಮಾಜಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳುವಿರಿ. ಸ್ವಪ್ರಯತ್ನದಿಂದ ಕಾರ್ಯಕ್ಷೇತ್ರಗಳಲ್ಲಿ ಪ್ರಗತಿಯನ್ನು ಸಾಧಿಸುವಿರಿ. ಅವಿವಾಹಿತರಿಗೆ ವಿವಾಹ ಭಾಗ್ಯ ಒದಗುವ ಸಾಧ್ಯತೆ ಇದೆ. ಸಂತಾನ ಅಪೇಕ್ಷಿತರಿಗೆ ಶುಭಸುದ್ದಿ ಕೇಳಿಬರುವ ಸಾಧ್ಯತೆಯಿದೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಹೆಚ್ಚಿನ ಯಶಸ್ಸು ಸಿಗುವ ಸಾಧ್ಯತೆ ಇದೆ. ಗೃಹ ವಿನ್ಯಾಸವನ್ನು ಮಾಡುವವರಿಗೆ ಬೇಡಿಕೆ ಹೆಚ್ಚುತ್ತದೆ. ದಿನಸಿ ವಸ್ತುಗಳನ್ನು ಮಾರಾಟ ಮಾಡುವವರ ಆದಾಯದಲ್ಲಿ ಏರಿಕೆಯನ್ನು ಕಾಣಬಹುದು. ಮಕ್ಕಳಿಗೆ ಮನೆಪಾಠ ಮಾಡುವವರ ಆದಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ. ಬಂಧುಗಳೊಡನೆ ಮನಃಸ್ತಾಪವನ್ನು ಮಾಡಿಕೊಳ್ಳದಿರುವುದು ಒಳ್ಳೆಯದು. ಹಣದ ಒಳಹರಿವು ಅಗತ್ಯವನ್ನು ಪೂರೈಸುವಷ್ಟು ಇರುತ್ತದೆ. ಮಹಿಳಾ ರಾಜಕಾರಣಿಗಳಿಗೆ ಸ್ಥಾನ ಸಿಗುವ ಸಾಧ್ಯತೆ ಇದೆ.

ಧನಸ್ಸು ರಾಶಿ:
ಉದ್ಯೋಗದಲ್ಲಿ ಯಶಸ್ಸನ್ನು ಕಾಣಬಹುದು. ಕುಟುಂಬದಲ್ಲಿ ಕಲಹ ಇದ್ದವರಿಗೆ ಅದರಿಂದ ಮುಕ್ತಿ ಸಿಗುತ್ತದೆ. ಮಹಿಳಾ ಉದ್ಯೋಗಿಗಳಿಗೆ ಪದೋನ್ನತಿ ಸಿಗುವ ಸಾಧ್ಯತೆಗಳಿವೆ. ಶುಭಸಮಾರಂಭಗಳಲ್ಲಿ ಭಾಗಿಯಾಗುವ ಅವಕಾಶಗಳಿವೆ. ಆದಾಯಗಳಿಸಲು ಹೊಸ ಯಂತ್ರವೊಂದನ್ನು ಖರೀದಿ ಮಾಡುವಿರಿ. ರೈತಾಪಿ ವರ್ಗದವರಿಗೆ ಆಶಾದಾಯಕ ಕಾಲವಾಗಿರುತ್ತದೆ. ಔಷಧಿ ಗಿಡಮೂಲಿಕೆಗಳನ್ನು ಬೆಳೆಯುವವರಿಗೆ ಹೆಚ್ಚು ಬೇಡಿಕೆ ಬರುತ್ತದೆ. ಶೃಂಗಾರ ಸಾಮಗ್ರಿಗಳ ವಹಿವಾಟು ಮಾಡುವವರಿಗೆ ಲಾಭ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ಮಧ್ಯಮ ಫಲಿತಾಂಶವಿರುತ್ತದೆ. ಭಿನ್ನಾಭಿಪ್ರಾಯದಿಂದ ಈ ಹಿಂದೆ ನಿಂತುಹೋಗಿದ್ದ ಕೆಲಸಗಳು ಒಮ್ಮತದಿಂದ ಆರಂಭಗೊಳ್ಳುತ್ತವೆ. ಹಣದ ಒಳಹರಿವು ಸಾಮಾನ್ಯವಾಗಿ ಇರುತ್ತದೆ. ಸರ್ಕಾರಿ ಕೆಲಸಗಳಲ್ಲಿ ಮುನ್ನಡೆಯನ್ನು ಕಾಣಬಹುದು.

ಮಕರ ರಾಶಿ:
ಕೆಲವು ಬರಹಗಾರರಿಗೆ ಪ್ರಕಾಶಕರು ಮುಂಗಡ ಹಣ ಕೊಡುವ ಸಾಧ್ಯತೆ ಇದೆ. ಹಣಕಾಸಿನ ಸ್ಥಿತಿಯು ಸಾಮಾನ್ಯವಾಗಿರುತ್ತದೆ. ಖರ್ಚಿಗೆ ಸಾಕಷ್ಟು ಕಡಿವಾಣ ಹಾಕುವುದು ಅತಿ ಅಗತ್ಯ. ವಿಷಯಾಧಾರಿತ ಚರ್ಚೆಗಳಿಂದ ಜ್ಞಾನ ಅಭಿವೃದ್ಧಿ ಆಗುತ್ತದೆ. ಮನೆಯಲ್ಲಿ ಮಂಗಳ ಕಾರ್ಯಗಳು ಆಗುವ ಸಾಧ್ಯತೆ ಇದೆ. ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿಯನ್ನು ಕಾಣಬಹುದು. ವಾಹನ ಮಾರಾಟಗಾರರಿಗೆ ಅಭಿವೃದ್ಧಿಯ ಗತಿಯನ್ನು ಕಾಣಬಹುದು. ಕುಟುಂಬ ಸಮೇತ ಸಮೀಪದಲ್ಲಿರುವ ಪ್ರೇಕ್ಷಣೀಯ ಸ್ಥಳಗಳಿಗೆ ಹೋಗಿಬರುವ ಸಾಧ್ಯತೆ ಇದೆ. ಸೈನಿಕರಿಗೆ ಏನೋ ಒಂದು ಸಾಧನೆಯನ್ನು ಮಾಡಿದ ತೃಪ್ತಿ ಇರುತ್ತದೆ. ಕೆಲವು ಬಂಧುಗಳಿಂದ ನಿಮ್ಮ ಕೆಲಸ ಕಾರ್ಯಗಳಿಗೆ ಸಾಕಷ್ಟು ಸಹಕಾರ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಸಾಕಷ್ಟು ಯಶಸ್ಸು ಸಿಗುವ ಕಾಲ.

ಕುಂಭ ರಾಶಿ:
ವೈಯಕ್ತಿಕ ವ್ಯವಹಾರಗಳಲ್ಲಿ ಅಭಿವೃದ್ಧಿಯನ್ನು ಕಾಣಬಹುದು. ಹಿರಿಯರು ಸಾಮಾಜಿಕ ಚಿಂತನೆಗಳನ್ನು ಮಾಡಿ ಗೌರವ ಪಡೆಯುವರು. ಕೃಷಿ ಕ್ಷೇತ್ರದಲ್ಲಿ ಹೆಚ್ಚು ಆದಾಯವನ್ನು ಕಾಣಬಹುದು. ವಸ್ತ್ರ ವ್ಯಾಪಾರವನ್ನು ಮಾಡುವವರಿಗೆ ಲಾಭ ಹೆಚ್ಚುತ್ತದೆ. ಉದ್ದಿಮೆದಾರರಿಗೆ ಕಾರ್ಮಿಕರಿಂದ ಹೆಚ್ಚು ಸಹಕಾರ ದೊರೆಯುತ್ತದೆ. ತಾಂತ್ರಿಕ ಕ್ಷೇತ್ರದಲ್ಲಿ ಅತಿಯಾದ ಒತ್ತಡದಿಂದ ಕೆಲಸ ಮಾಡುತ್ತಿದ್ದವರಿಗೆ ಸ್ವಲ್ಪಮಟ್ಟಿನ ಬಿಡುವು ದೊರೆತು ಸಂತಸವಾಗುತ್ತದೆ. ಹೊಸ ವ್ಯವಹಾರಗಳನ್ನು ಆರಂಭಿಸುವ ಮುನ್ನ ತಜ್ಞರ ಸಲಹೆ ಪಡೆಯುವುದು ಉತ್ತಮ. ಭೂ ವ್ಯವಹಾರವನ್ನು ಮಾಡುವವರಿಗೆ ಹೆಚ್ಚಿನ ಲಾಭ ಇರುತ್ತದೆ. ಹೆಣ್ಣುಮಕ್ಕಳ ವಿದ್ಯಾಭ್ಯಾಸದಲ್ಲಿ ಸ್ವಲ್ಪ ಹಿನ್ನಡೆಯನ್ನು ಕಾಣಬಹುದು. ಪಿತ್ರಾರ್ಜಿತ ಆಸ್ತಿಗಳಿಗಾಗಿ ಕಾಯುತ್ತಿರುವವರೆಗೆ ಆಸ್ತಿ ದೊರಕುವ ಸಾಧ್ಯತೆ ಇದೆ.

ಮೀನ ರಾಶಿ:
ಈ ಹಿಂದೆ ಉಳಿಕೆ ಮಾಡಿದ್ದ ಹಣ ಈಗ ಉಪಯೋಗಕ್ಕೆ ಬರುತ್ತದೆ. ಪ್ರೀತಿ ಪ್ರೇಮದಲ್ಲಿ ಹೆಚ್ಚಿನ ಯಶಸ್ಸನ್ನು ಕಾಣಬಹುದು ಹಾಗೂ ಹಿರಿಯರ ಒಪ್ಪಿಗೆ ದೊರೆಯುವ ಸಾಧ್ಯತೆ ಇದೆ. ಮುಕ್ತ ಭಾವನೆಯಿಂದ ನೀವು ಆಲೋಚಿಸಿದಾಗ ನಿಮ್ಮಲ್ಲಿರುವ ನ್ಯೂನತೆಗಳು ನಿಮಗೆ ಗೋಚರಿಸುತ್ತವೆ. ನೀವು ಹಂಗಿಸಿದವರಿಂದಲೇ ಸಹಾಯಗಳನ್ನು ಪಡೆಯಬೇಕಾದಂತಹ ಪರಿಸ್ಥಿತಿ ಎದುರಾಗಬಹುದು. ವಿವಾಹದ ಬಗ್ಗೆ ಕನಸನ್ನು ಕಾಣುತ್ತಿರುವವರಿಗೆ ಸಂಬಂಧ ಕೂಡಿಬರುವ ಸಾಧ್ಯತೆ ಇದೆ. ನಿಮ್ಮ ಮಕ್ಕಳ ಸಂತೋಷಕ್ಕಾಗಿ ಹೆಚ್ಚು ಹಣ ಖರ್ಚು ಮಾಡುವಿರಿ. ವಿದೇಶಿ ಹಣದ ವ್ಯವಹಾರಗಳನ್ನು ಮಾಡುವವರಿಗೆ ಪ್ರಗತಿ ಇರುತ್ತದೆ. ಹಲ್ಲಿನಲ್ಲಿ ನೋವುಗಳು ಕಾಣಿಸಬಹುದು. ವೃತ್ತಿಯಲ್ಲಿ ಮನಸ್ಸಿಗೆ ತೃಪ್ತಿಕರವಾದ ಸನ್ನಿವೇಶಗಳು ಬರುತ್ತವೆ.

Leave a Comment

Your email address will not be published. Required fields are marked *