Ad Widget .

ಆತ್ಮಹತ್ಯೆ ಮಾಡಿಕೊಳ್ಳಲು ಸೇತುವೆ ಬಳಿ ತೆರಳಿದ ಜೋಡಿ| ಯುವತಿ ನೀರಿಗೆ ಹಾರಿದ‌ ಮೇಲೆ‌ ವಾಪಾಸ್ಸು ಬಂದ‌ ಯುವಕ| ನೀರಿನಿಂದ ಈಜಿ‌ ಬಂದು ಕೇಸ್ ಕೊಟ್ಟ ಯುವತಿ

ಸಮಗ್ರ ನ್ಯೂಸ್; ಲವ್ ಸ್ಟೋರಿ ಮತ್ತು ವಿಚಿತ್ರ ಸುಸೈಡ್ ಕಥೆ ಇದೀಗ ವ್ಯಾಪಕವಾಗಿ ಸುದ್ದಿಯಾಗಿದೆ. ಜೊತೆಯಾಗಿ ಆತ್ಮಹತ್ಯೆ ಮಾಡಿಕೊಳ್ಳದೆ ಪ್ರಿಯಕರ ನನಗೆ ಮೋಸ‌ ಮಾಡಿದ‌ ಎಂದು‌‌ ಯುವತಿಯೋರ್ವಳು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ.

Ad Widget . Ad Widget .

ಯುಪಿಯ ಪ್ರಯಾಗ್ ರಾಜ್ ನಲ್ಲಿ‌32 ವರ್ಷದ ವಿವಾಹಿತ ಮಹಿಳೆ 30 ವರ್ಷದ ಯುವಕನನ್ನು ಪ್ರೀತಿಸುತ್ತಿದ್ದಳು.‌ ಆದರೆ ಪ್ರೀತಿಗೆ ಎದುರಾದ ಕೌಟುಂಬಿಕ ‌ಕಾರಣದಿಂದ‌ ಇಬ್ಬರು ಕೂಡ ಆತ್ಮಹತ್ಯೆಗೆ ತೀರ್ಮಾನಿಸಿದ್ದರು.

Ad Widget . Ad Widget .

ನದಿಗೆ ಅಡ್ಡಲಾಗಿ ಕಟ್ಟಿದ್ದ ಸೇತುವೆ ಮೇಲಿಂದ ಜಿಗಿದು
ಒಂದೇ ಸಮಯದಲ್ಲಿ ಇಬ್ಬರು ಪ್ರಾಣ ಬಿಡುವುದು ಪ್ರೇಮಿಗಳಿಬ್ಬರ ಬಯಕೆಯಾಗಿತ್ತು.ಅದರಂತೆ ಆತ್ಮಹತ್ಯೆ‌ ಎಂದು ಹೋಗಿ ಯುವತಿ‌ ನದಿಗೆ ಹಾರಿದ್ದಾಳೆ. ಆದರೆ ಯುವಕ‌ ಹೆದರಿ ವಾಪಾಸ್ಸು ಬಂದಿದ್ದಾನೆ‌.

ಇದರಿಂದ ಈಜಿ‌ದಡ ಸೇರಿದ ಯುವತಿ ಸೀದಾ ಪೊಲೀಸ್ ಠಾಣೆಗೆ ತೆರಳಿ ಯುವಕನ‌ ವಿರುದ್ಧ ವಂಚನೆ‌, ಕೊಲೆಯತ್ನ‌ ಕೇಸ್ ದಾಖಲಿಸಿದ್ದಾಳೆ.
ಪ್ರಿಯಕರ ನನ್ನ ಜೊತೆ ನದಿಗೆ ಹಾರಿಲ್ಲ. ಆತ್ಮಹತ್ಯೆ ಟೈಮ್‌ನಲ್ಲೂ ಮೋಸ ಮಾಡಿದ್ದಾನೆ ಎಂದು ಯುವತಿ ದೂರು ದಾಖಲು ಮಾಡಿದ್ದಾಳೆ.

Leave a Comment

Your email address will not be published. Required fields are marked *