Ad Widget .

ಚಾರ್ಮಾಡಿಯಲ್ಲಿ ಭೀಕರ ಅಪಘಾತ| ಟ್ರಕ್ ಹರಿದು ಬೈಕ್ ಸವಾರ ದುರ್ಮರಣ|

ಸಮಗ್ರ ನ್ಯೂಸ್: ದ್ವಿಚಕ್ರ ವಾಹನಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ರಸ್ತೆಗೆ ಎಸೆಯಲ್ಪಟ್ಟ ಸವಾರನ ಮೇಲೆ ಹಿಂಬದಿಯಿಂದ ಬಂದ ಟ್ರಕ್ ಹರಿದು ಸ್ಥಳದಲ್ಲೆ ಮೃತಪಟ್ಟ ಘಟನೆ ಚಾರ್ಮಾಡಿ‌ ಘಾಟ್ ರಸ್ತೆಯ ಪಂಡಿಕಟ್ಟೆ ಎಂಬಲ್ಲಿ ನಿನ್ನೆ ರಾತ್ರಿ ನಡೆದಿದೆ.

Ad Widget . Ad Widget .

ಚಾರ್ಮಾಡಿ ಮೇಗಿನಮನೆ ಇಸ್ಮಾಯಿಲ್ ಅವರ ಪುತ್ರ ನಿವಾಸಿ ನಝೀರ್ ಮೇಗಿನಮನೆ ಮೃತಪಟ್ಟ ದುರ್ದೈವಿ.

Ad Widget . Ad Widget .

ಚಾರ್ಮಾಡಿ ಸಮೀಪ ತನ್ನ ಸ್ನೇಹಿತನ ಮನೆಗೆ ತೆರಳಿ ಬೈಕ್ ನಲ್ಲಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಲಾರಿಯನ್ನು ಓವರ್ ಟೇಕ್ ಮಾಡುವ ಬರದಲ್ಲಿ ಎದುರು ಕಡೆಯಿಂದ ಬರುತ್ತಿದ್ದ ಬೈಕ್ ಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಅಪಘಾತದಲ್ಲಿ ನಝೀರ್ ರಸ್ತೆಗೆ ಎಸೆಯಲ್ಪಟ್ಟಿದ್ದು, ಇನ್ನು ಈ ವೇಳೆ ಈತನ ಮೇಲೆ ಟ್ರಕ್ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾನೆ.

Leave a Comment

Your email address will not be published. Required fields are marked *