May 2022

ಸುಳ್ಯ: ಮರ್ಕಂಜದ ಅಳವುಪಾರೆ ಗಣಿಗಾರಿಕೆ ಹಾನಿ ಪ್ರದೇಶಕ್ಕೆ ತಹಶೀಲ್ದಾರ್ ಭೇಟಿ| ಪರಿಹಾರ ‌ಕ್ರಮದ ಭರವಸೆ

ಸಮಗ್ರ ನ್ಯೂಸ್: ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದಲ್ಲಿ ಕಳೆದೊಂದು ವರ್ಷದಿಂದ ಅಕ್ರಮವಾಗಿ ನಡೆಯುತ್ತಿದೆ ಎನ್ನಲಾದ ಅಳವುಪಾರೆ ಗಣಿಗಾರಿಕೆ ಪ್ರದೇಶಕ್ಕೆ ಸುಳ್ಯ ತಹಶಿಲ್ದಾರ್ ಅನಿತಾಲಕ್ಷ್ಮೀ ದಿಢೀರ್ ಭೇಟಿ ನೀಡಿದ್ದಾರೆ. ತಮ್ಮ ತಂಡದ ಜೊತೆಗೆ ಸ್ಥಳ ಪರಿಶೀಲನೆ ನಡೆಸಿದ ಅವರು ಮತ್ತೊಮ್ಮೆ ದಾಖಲೆಗಳ ಕುರಿತು ಪರಿಶೀಲನೆ ‌ನಡೆಸುವುದಾಗಿ ಮಾಹಿತಿ ನೀಡಿದರು. ಅಲ್ಲದೇ ‌ಗಣಿಗಾರಿಕೆಯಿಂದ ಹಾನಿಗೊಳಗಾದ ಸ್ಥಳೀಯ ನಿವಾಸಿಗಳಿಗೆ ಪರಿಹಾರ ಕೊಡಿಸುವ‌ ಬಗ್ಗೆ ತಹಶಿಲ್ದಾರ್ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದನ್ನೂ ಓದಿ…

ಸುಳ್ಯ: ಮರ್ಕಂಜದ ಅಳವುಪಾರೆ ಗಣಿಗಾರಿಕೆ ಹಾನಿ ಪ್ರದೇಶಕ್ಕೆ ತಹಶೀಲ್ದಾರ್ ಭೇಟಿ| ಪರಿಹಾರ ‌ಕ್ರಮದ ಭರವಸೆ Read More »

ಕರೆಂಟು ಹೋದ ಟೈಮಲಿ ಇದೆಂಥ ಎಡವಟ್ಟು, ಅವನ ಹುಡುಗಿಗೆ ಇವನು, ಇವನ ಹುಡುಗಿಗೆ ಅವನು ತಾಳಿ ಕಟ್ಟಿದ!, ಅತ್ತೆ ಮನೆಗೆ ಹೋದಾಗ ಘಟನೆ ಬೆಳಕಿಗೆ

ಮಧ್ಯ ಪ್ರದೇಶ: ಮದುವೆ ದಿನ ವಧು ವರರೇ ಅದಲು ಬದಲಾದರೆ ಅವರ ಪರಿಸ್ಥಿತಿ ಹೇಗಿರಬೇಡ ಯೋಚಿಸಿ.ಮಧ್ಯಪ್ರದೇಶದ ಗ್ರಾಮಾಂತರ ಪ್ರದೇಶದಲ್ಲಿ ಹಿಂದೆಂದೂ ಕೇಳಿರದ ಘಟನೆಯೊಂದು ಬೆಳಕಿಗೆ ಬಂದಿದೆ. ಉಜ್ಜಯಿನಿಯ ಗ್ರಾಮವೊಂದರಲ್ಲಿ ವಿಚಿತ್ರ ಘಟನೆ:ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಈ ಘಟನೆ ನಡೆದಿದ್ದು, ರಮೇಶ್‌ಲಾಲ್ ಅವರ ಇಬ್ಬರು ಪುತ್ರಿಯರಾದ ನಿಕಿತಾ ಮತ್ತು ಕರಿಷ್ಮಾ ಬೇರೆ ಬೇರೆ ಕುಟುಂಬದ ಯುವಕರಾದ ದಂಗ್ವಾರಾ ಭೋಲಾ ಮತ್ತು ಗಣೇಶ್ ಅವರನ್ನು ವಿವಾಹವಾಗಬೇಕಿತ್ತು. ಸಂಪ್ರದಾಯದ ಪ್ರಕಾರ ವಧುಗಳು ಮುಖವನ್ನು ಮುಸುಕಿನಿಂದ ಮುಚ್ಚಿಕೊಂಡಿದ್ದರಿಂದ ಹಾಗೂ ಮದುವೆಯ ವೇಳೆ ಕರೆಂಟ್ ಕೈ

ಕರೆಂಟು ಹೋದ ಟೈಮಲಿ ಇದೆಂಥ ಎಡವಟ್ಟು, ಅವನ ಹುಡುಗಿಗೆ ಇವನು, ಇವನ ಹುಡುಗಿಗೆ ಅವನು ತಾಳಿ ಕಟ್ಟಿದ!, ಅತ್ತೆ ಮನೆಗೆ ಹೋದಾಗ ಘಟನೆ ಬೆಳಕಿಗೆ Read More »

ಭಾರತದ ‌ನಾಲ್ವರು ಪತ್ರಕರ್ತರಿಗೆ ಪ್ರತಿಷ್ಠಿತ ”ಪುಲಿಟ್ಜರ್ ಪ್ರಶಸ್ತಿ”

ಸಮಗ್ರ ನ್ಯೂಸ್: ಅಮೆರಿಕದ ಮಾಧ್ಯಮ, ಸಾಹಿತ್ಯ ಮತ್ತು ಸಂಗೀತ ಕ್ಷೇತ್ರದಲ್ಲಿ ನೀಡಲಾಗುವ ಪುಲಿಟ್ಜರ್ ಪ್ರಶಸ್ತಿ ಪ್ರಕಟಗೊಂಡಿದೆ. 2022ನೇ ಸಾಲಿನ ಪುಲಿಟ್ಜರ್ ಪ್ರಶಸ್ತಿ ನಾಲ್ವರು ಭಾರತೀಯರಿಗೆ ಸಿಕ್ಕಿರುವುದು ವಿಶೇಷ. ಕಳೆದ ವರ್ಷ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಮತ್ತು ಸರಕಾರಿ ವಿಶೇಷ ಪಡೆಗಳ ಮಧ್ಯೆ ನಡೆದ ಸಂಘರ್ಷ ಘಟನೆ ವೇಳೆ ಬಲಿಯಾಗಿದ್ದ ದಾನಿಶ್ ಸಿದ್ದಿಕಿಗೆ ಮರಣೋತ್ತರ ಪ್ರಶಸ್ತಿ ಗೌರವ ಲಭಿಸಿದೆ. ಭಾರತದಲ್ಲಿ ಕೋವಿಡ್-19ನ ಚಿತ್ರಣವನ್ನು ಮನಮುಟ್ಟುವಂತೆ ಕ್ಯಾಮೆರಾದಲ್ಲಿ ಸೆರೆಹಿಡಿದದ್ದಾಗಿ ರಾಯ್ಟರ್ಸ್ ಸುದ್ದಿ ಸಂಸ್ಥೆಯ ವಿಡಿಯೋ ಜರ್ನಲಿಸ್ಟ್‌ಗಳಿಗೆ ಈ ಸಾಲಿನ ಪ್ರಶಸ್ತಿ ಸಿಕ್ಕಿದೆ.

ಭಾರತದ ‌ನಾಲ್ವರು ಪತ್ರಕರ್ತರಿಗೆ ಪ್ರತಿಷ್ಠಿತ ”ಪುಲಿಟ್ಜರ್ ಪ್ರಶಸ್ತಿ” Read More »

“ಲಂಕಾ ದಹನ”: ಆರ್ಥಿಕ ದಳ್ಳುರಿಗೆ ಹೊತ್ತಿ ಉರಿಯುತ್ತಿರುವ ಸಿಂಹಳ| ಜನಪ್ರತಿನಿಧಿಗಳೇ ಜನರ ಟಾರ್ಗೆಟ್

ಸಮಗ್ರ ನ್ಯೂಸ್: ಆರ್ಥಿಕ ದುಸ್ಥಿತಿಯಿಂದ ಕಂಗಾಲಾಗಿರುವ ಶ್ರೀಲಂಕಾದಲ್ಲಿ ಜನರ ಪ್ರತಿಭಟನೆ ಎಡಬಿಡದೆ ನಡೆಯುತ್ತಿದ್ದು ನಿನ್ನೆ ಹಲವೆಡೆ ಹಿಂಸಾಚಾರ ಘಟನೆಗಳು ನಡೆದಿವೆ. ಈ ದುರಂತದಲ್ಲಿ ಒಬ್ಬ ಸಂಸದ ಸೇರಿ ಮೂವರು ಸಾವನ್ನಪ್ಪಿದ್ದಾರೆ. 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದು ತಿಳಿದುಬಂದಿದೆ. ಕೆಲ ಗಂಟೆಗಳ ಮೊದಲು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಮಹಿಂದ ರಾಜಪಕ್ಸೆಗೆ ಸೇರಿದ ಮನೆಯೊಂದನ್ನೂ ದುಷ್ಕರ್ಮಿಗಳು ಸುಟ್ಟುಹಾಕಿರುವ ಘಟನೆ ನಡೆದಿದೆ. ರಾಜಪಕ್ಸೆ ಮಾತ್ರವಲ್ಲ ಇನ್ನೂ ಹಲವು ರಾಜಕಾರಣಿಗಳ ಮನೆಗಳನ್ನ ಪ್ರತಿಭಟನಾಕಾರರು ಬೆಂಕಿ ಇಟ್ಟ ಘಟನೆ ನಿನ್ನೆ ರಾತ್ರಿ ನಡೆದಿರುವುದು

“ಲಂಕಾ ದಹನ”: ಆರ್ಥಿಕ ದಳ್ಳುರಿಗೆ ಹೊತ್ತಿ ಉರಿಯುತ್ತಿರುವ ಸಿಂಹಳ| ಜನಪ್ರತಿನಿಧಿಗಳೇ ಜನರ ಟಾರ್ಗೆಟ್ Read More »

ಮಂಗಳೂರು: ಮೇ.14 ಮತ್ತು 15 ರಂದು ಮಂಗಳೂರು ವಿ.ವಿ ಕ್ಯಾಂಪಸ್ ನಲ್ಲಿ ಉದ್ಯೋಗ ಮೇಳ

ಸಮಗ್ರ ನ್ಯೂಸ್: ಮಂಗಳೂರು ವಿಶ್ವವಿದ್ಯಾಲಯದ ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರ ಹಾಗೂ ತರಬೇತಿ ಮತ್ತು ನಿಯೋಜನಾ ಘಟಕಗಳು ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಮಂಗಳಗಂಗೋತ್ರಿಯ ಕ್ಯಾಂಪಸ್‌ನಲ್ಲಿ ಮೇ 14 ಮತ್ತು 15ರಂದು ಉದ್ಯೋಗ ಮೇಳ ಆಯೋಜಿಸಿವೆ. ಮ್ಯಾಜಿಕ್‌ ಬಸ್‌ನ ಕರ್ನಾಟಕ, ಆಂಧ್ರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ವಲಯದ ಕ್ಲಸ್ಟರ್‌ ಮ್ಯಾನೇಜರ್‌ ಚಿರಂಜೀವಿ ಅಂಬರ್‌ನಾಥ್‌ ಮೇ 14ರಂದು ಬೆಳಿಗ್ಗೆ 10.30ಕ್ಕೆ ಉದ್ಯೋಗ ಮೇಳವನ್ನು ಉದ್ಘಾಟಿಸುವರು. ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಅಧ್ಯಕ್ಷತೆ ವಹಿಸುವರು. ಕುಲಸಚಿವ

ಮಂಗಳೂರು: ಮೇ.14 ಮತ್ತು 15 ರಂದು ಮಂಗಳೂರು ವಿ.ವಿ ಕ್ಯಾಂಪಸ್ ನಲ್ಲಿ ಉದ್ಯೋಗ ಮೇಳ Read More »

ಬಸ್ ಗೆ ಕಾಯುತ್ತಿದ್ದ ಯುವಕನ ಕೈಗೆ 9 ತಿಂಗಳ ಹಸುಳೆಯನ್ನು ನೀಡಿ ಪರಾರಿಯಾದ ತಾಯಿ|

ಸಮಗ್ರ ನ್ಯೂಸ್: ಬಸ್ ನಿಲ್ದಾಣದಲ್ಲಿ 9 ತಿಂಗಳ ಹಸುಗೂಸನ್ನು ಬಸ್ ಗೆ ಕಾಯುತ್ತಿದ್ದ ಯುವಕನ ಕೈಗೆ ಕೊಟ್ಟು ಅಪರಿಚಿತ ಮಹಿಳೆ ನಾಪತ್ತೆಯಾದ ಘಟನೆ ರಾಯಚೂರಿನಲ್ಲಿ ನಡೆದಿದೆ. ಮೈಸೂರಿನ ಹೆಚ್.ಡಿ.ಕೋಟೆಯ ನಿವಾಸಿ ರಘು ಕೈಗೆ ಮಗು ಕೊಟ್ಟು ಮಹಿಳೆ ನಾಪತ್ತೆಯಾಗಿದ್ದಾರೆ. ಸದ್ಯ 9 ತಿಂಗಳ ಹಸುಗೂಸನ್ನು ರಘು ಬಾಲಮಂದಿರದ ವಶಕ್ಕೆ ನೀಡಿದ್ದಾರೆ. ವೈಯಕ್ತಿಕ ಕೆಲಸಕ್ಕಾಗಿ ಹೆಚ್.ಡಿ.ಕೋಟೆಯ ನಿವಾಸಿ ರಘು ರಾಯಚೂರಿಗೆ ತೆರಳಿದ್ದರು. ಮೈಸೂರಿಗೆ ಹಿಂತಿರುಗಲು ರಾಯಚೂರು ಬಸ್ ಸ್ಟ್ಯಾಂಡ್ನಲ್ಲಿ ಮೈಸೂರು ಬಸ್ಗಾಗಿ ಕಾದು ಕುಳಿತಿದ್ದ ವೇಳೆ ಅಪರಿಚಿತ ಮಹಿಳೆ

ಬಸ್ ಗೆ ಕಾಯುತ್ತಿದ್ದ ಯುವಕನ ಕೈಗೆ 9 ತಿಂಗಳ ಹಸುಳೆಯನ್ನು ನೀಡಿ ಪರಾರಿಯಾದ ತಾಯಿ| Read More »

70ನೇ ವಯಸ್ಸಿಗೆ ತಂದೆಯಾಗ್ತಿದಾರೆ ರಷ್ಯಾ ಅಧ್ಯಕ್ಷ| ಯುದ್ಧ ಸಮಯದಲ್ಲಿ ಗುಡ್ ನ್ಯೂಸ್ ನೀಡಿದ ಪ್ರೇಯಸಿ ಜೊತೆ ಗರಂ ಆದ ಪುಟಿನ್!

ಸಮಗ್ರ ನ್ಯೂಸ್: ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್ ಅವರ​ ರಾಜಕೀಯ ಹಾಗೂ ವೈಯಕ್ತಿಕ ಜೀವನ ಸದಾ ಸುದ್ದಿಯಲ್ಲಿ ಇರುತ್ತದೆ. ಅವರ ಜೀವನದ ಕೆಲವು ರಹಸ್ಯಗಳು ಕುತೂಹಲದಿಂದ ಕೂಡಿರುವ ಪುಟಿನ್ ಜೀವನದ ಮತ್ತೊಂದು ಅಚ್ಚರಿ ಸುದ್ದಿ ಹೊರಬಿದ್ದಿದೆ. ಇತ್ತೀಚೆಗೆ ಕಣ್ಮರೆಯಾಗಿದ್ದ ಪುಟಿನ್ ಪ್ರೇಯಸಿ ಜಿಮ್ನಾಸ್ಟಿಕ್​​ ಅಲಿನಾ ಕಬೀವಾ ಇದೀಗ ಗರ್ಭಿಣಿಯಾಗಿರುವ ಮೂಲಕ ಮತ್ತೆ ಕಾಣಿಸಿಕೊಂಡಿದ್ದಾರೆ. 69 ವರ್ಷದ ಪುಟಿನ್​ ಈ ವರ್ಷ ಅಕ್ಟೋಬರ್​ನಲ್ಲಿ 70ನೇ ಜನ್ಮದಿನವನ್ನು ಆಚರಿಸಲಿದ್ದಾರೆ. ಈ ನಡುವೆ ಅವರ ಪ್ರೇಯಸಿ ಮೂರನೇ ಮಗುವಿನ ತಾಯಿಯಾಗುತ್ತಿದ್ದಾರೆ ಎಂಬ

70ನೇ ವಯಸ್ಸಿಗೆ ತಂದೆಯಾಗ್ತಿದಾರೆ ರಷ್ಯಾ ಅಧ್ಯಕ್ಷ| ಯುದ್ಧ ಸಮಯದಲ್ಲಿ ಗುಡ್ ನ್ಯೂಸ್ ನೀಡಿದ ಪ್ರೇಯಸಿ ಜೊತೆ ಗರಂ ಆದ ಪುಟಿನ್! Read More »

ಬಿಕಿನಿಯಲ್ಲೇ ಕೇಕ್ ಕತ್ತರಿಸಿದ ಅಮೀರ್ ಖಾನ್ ಪುತ್ರಿ ಇರಾ

ಸಮಗ್ರ ನ್ಯೂಸ್: ಬಾಲಿವುಡ್ ನ ಹೆಸರಾಂತ ನಟ ಅಮೀರ್ ಖಾನ್ ಪುತ್ರಿ ಇರಾ 25ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿದ್ದಾರೆ. ವಿಶೇಷ ಅಂದರೆ, ಬಿಕಿನಿಯಲ್ಲೇ ಅವರು ಕೇಕ್ ಕಟ್ ಮಾಡುವ ಮೂಲಕ ಟ್ರೋಲ್ ಗೆ ಆಹಾರವಾಗಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಂತೂ ವೈರಲ್ ಆಗಿದೆ. ಇದು ನಿಜವಾದ ಫೋಟೋನಾ ಅಥವಾ ಎಡಿಟ್ ಮಾಡಲಾಗಿದೆ ಎಂಬ ಅನುಮಾನವನ್ನೂ ಹುಟ್ಟು ಹಾಕಿದೆ. ಅಮೀರ್ ಖಾನ್ ಮತ್ತು ಅಮೀರ್ ಮೊದಲ ಪತ್ನಿ ರೀನಾ ದತ್ತಾ ಅವರ ಪುತ್ರಿ ಇರಾ. ವಿಚ್ಚೇದನದ ನಂತರವೂ

ಬಿಕಿನಿಯಲ್ಲೇ ಕೇಕ್ ಕತ್ತರಿಸಿದ ಅಮೀರ್ ಖಾನ್ ಪುತ್ರಿ ಇರಾ Read More »

ದೇವಸ್ಥಾನಗಳಲ್ಲಿ ಧ್ವನಿವರ್ಧಕ ಬಳಸಲು ಕರೆ ಕೊಟ್ಟವರು ಭಯೋತ್ಪಾದಕರು| ವಿವಾದಾತ್ಮಕ ಹೇಳಿಕೆ ನೀಡಿದ ವಿಪಕ್ಷ ನಾಯಕ ಬಿಕೆ ಹರಿಪ್ರಸಾದ್‌| ಹೇಳಿಕೆಗೆ ನಾನಿನ್ನೂ ಬದ್ಧವೆಂದ ಹರಿಪ್ರಸಾದ್|

ಬೆಂಗಳೂರು: ದೇವಸ್ಥಾನಗಳಲ್ಲಿ ಧ್ವನಿವರ್ಧಕ ಬಳಸಲು ಕರೆ ಕೊಟ್ಟವರು ಭಯೋತ್ಪಾದಕರು ಎಂದು ವಿಧಾನ ಪರಿಷತ್‌ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ವಿಧಾನ ಸೌಧದಲ್ಲಿ ಮಾತನಾಡಿದ ಅವರು, ಯಾರು ಈ ಸುಪ್ರಭಾತ ಅಭಿಯಾನವನ್ನು ಪ್ರಾರಂಭ ಮಾಡುತ್ತಿದ್ದಾರೋ ಅವರು ಭಯೋತ್ಪಾದಕರು. ಅವರನ್ನು ಕಾನೂನು ಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ (ಯುಎಪಿಎ) ಕಾಯ್ದೆಯ ಅಡಿಯಲ್ಲಿ ಅರೆಸ್ಟ್ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಸರ್ಕಾರದ ವೈಫಲ್ಯ ಮುಚ್ಚಿ ಹಾಕಲು ಸಮಾಜ ವಿರೋಧಿ ಶಕ್ತಿಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಇವರು ಸಂಘ ಪರಿವಾರದ ವಿವಿಧ ಆಕ್ಟೋಪಸ್ ಇದ್ದಂತೆ.

ದೇವಸ್ಥಾನಗಳಲ್ಲಿ ಧ್ವನಿವರ್ಧಕ ಬಳಸಲು ಕರೆ ಕೊಟ್ಟವರು ಭಯೋತ್ಪಾದಕರು| ವಿವಾದಾತ್ಮಕ ಹೇಳಿಕೆ ನೀಡಿದ ವಿಪಕ್ಷ ನಾಯಕ ಬಿಕೆ ಹರಿಪ್ರಸಾದ್‌| ಹೇಳಿಕೆಗೆ ನಾನಿನ್ನೂ ಬದ್ಧವೆಂದ ಹರಿಪ್ರಸಾದ್| Read More »

ಅಂತರ್ಯುದ್ಧಕ್ಕೆ ಹೊತ್ತಿ‌ ಉರಿಯುತ್ತಿರುವ ಶ್ರೀಲಂಕಾ| ಪ್ರತಿಭಟನಾಕಾರರ ಗುಂಡಿಗೆ ಸಂಸದ ಬಲಿ|

ಸಮಗ್ರ ನ್ಯೂಸ್: ನೆರೆಯ ಶ್ರೀಲಂಕಾದಲ್ಲಿ ನಡೆಯುತ್ತಿರುವ ಆರ್ಥಿಕ ಬಿಕ್ಕಟ್ಟಿನ ಪ್ರತಿಭಟನೆ ಹಿಂಸಾತ್ಮಕ ರೂಪಕ್ಕೆ ತಿರುಗಿದ್ದು ಆಡಳಿತ ಪಕ್ಷದ ಸಂಸದರೊಬ್ಬರು ಬಲಿಯಾಗಿದ್ದಾರೆ. ಕಳೆದ ಕೆಲ ವಾರಗಳಿಂದ ಶ್ರೀಲಂಕಾದಾದ್ಯಂತ ನಡೆಯುತ್ತಿರುವ ಈ ಪ್ರತಿಭಟನೆ ಹತ್ತಿಕ್ಕಲು ಅಲ್ಲಿನ ಪೊಲೀಸ್‌ ಹಾಗೂ ಭದ್ರತಾ ಪಡೆಗಳು ಹರಸಾಹಸ ಪಡುತ್ತಿವೆ. ಈ ನಡುವೆಯೇ ಉದ್ರಿಕ್ತರ ಗುಂಪೊಂದು ರೂಲಿಂಗ್‌ ಪಾರ್ಟಿ ಸಂಸದ ಅಮರ ಕೀರ್ತಿ ಅತುಕೋರಲ ಕಾರನ್ನ ಅಡ್ಡಗಟ್ಟಿದ್ದು ಗುಂಡು ಹಾರಿಸಿ ಹತ್ಯೆ ಮಾಡಿದೆ. ನಿತ್ತಂಬುವ ಅನ್ನೋ ಪಟ್ಟಣದಲ್ಲಿ ಈ ದುರಂತ ಸಂಭವಿಸಿದೆ. ಘರ್ಷಣೆ ವೇಳೆ ಇನ್ನಿಬ್ಬರೂ

ಅಂತರ್ಯುದ್ಧಕ್ಕೆ ಹೊತ್ತಿ‌ ಉರಿಯುತ್ತಿರುವ ಶ್ರೀಲಂಕಾ| ಪ್ರತಿಭಟನಾಕಾರರ ಗುಂಡಿಗೆ ಸಂಸದ ಬಲಿ| Read More »