May 2022

ಪ.ಜಾತಿ ಮತ್ತು ಪಂಗಡದ‌ ಬಿಪಿಎಲ್ ಗ್ರಾಹಕರಿಗೆ ಬರಲಿದೆ ‘ಬೆಳಕು’

ಸಮಗ್ರ ನ್ಯೂಸ್: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಎಲ್ಲ ಬಿಪಿಎಲ್ ಕುಟುಂಬಗಳಿಗೆ ನೀಡುತ್ತಿದ್ದ ಉಚಿತ ವಿದ್ಯುತ್ ಪ್ರಮಾಣವನ್ನು 40 ಯುನಿಟ್‌ನಿಂದ 75 ಯುನಿಟ್‌ಗೆ ಹೆಚ್ಚಿಸುವ ಮಹತ್ವದ ನಿರ್ಧಾರವನ್ನು ರಾಜ್ಯ ಸರಕಾರ ತೆಗೆದುಕೊಂಡಿದೆ. ಇದರಿಂದ ಇಂಧನ ಇಲಾಖೆಗೆ ವಾರ್ಷಿಕ 979 ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿದ್ದು, ಇದೇ ತಿಂಗಳಿಂದ ಯೋಜನೆಯ ಲಾಭ ಫಲಾನುಭವಿಗಳಿಗೆ ಲಭ್ಯವಾಗಲಿದೆ. ಭಾಗ್ಯಜ್ಯೋತಿ ಹಾಗೂ ಕುಟಿರ ಜ್ಯೋತಿ ಯೋಜನೆ ವ್ಯಾಪ್ತಿಯಲ್ಲಿ ಬರುವವರೂ ಸೇರಿದಂತೆ ಪರಿಶಿಷ್ಟ ಜಾತಿ ಹಾಗೂ ಪಂಗಡದ ಫಲಾನುಭವಿಗಳ ಮನೆಯಲ್ಲಿ ಇನ್ನು […]

ಪ.ಜಾತಿ ಮತ್ತು ಪಂಗಡದ‌ ಬಿಪಿಎಲ್ ಗ್ರಾಹಕರಿಗೆ ಬರಲಿದೆ ‘ಬೆಳಕು’ Read More »

ಯುಎಇ ಎರಡನೆಯ ಅಧ್ಯಕ್ಷ ಶೇಖ್ ಖಲೀಫಾ ಇನ್ನಿಲ್ಲ.

ಸಮಗ್ರ ನ್ಯೂಸ್: ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಯುಎಇ ಅಧ್ಯಕ್ಷ ಶೇಖ್​ ಖಲೀಫಾ ಬಿನ್​ ಜಯಾದ್ ಅಲ್​ ನಹ್ಯಾನ್​(73) ಅವರು ಶುಕ್ರವಾರ ನಿಧನ ಹೊಂದಿದರು. ಅನಾರೋಗ್ಯ ಕಾರಣದಿಂದ ಹಾಸಿಗೆ ಹಿಡಿದಿದ್ದ ಅವರು ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಳ್ಳುತ್ತಿರಲಿಲ್ಲ.ಅವರ ಪರವಾಗಿ ಅವರ ಪುತ್ರ ಮೊಹಮ್ಮದ್​ ಬಿನ್​ ಜಯಾದ್​ ಅವರು ಆಡಳಿತ ನಡೆಸುತ್ತಿದ್ದರು. ಅವರ ನಿಧನಕ್ಕೆ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದು, ಯುಎಇಯಾದ್ಯಂತ 40 ದಿನಗಳ ಕಾಲ ಶೋಕಾಚರಣೆ ಘೋಷಿಸಲಾಗಿರುವ ಜೊತೆಗೆ, ಮೂರು ದಿನ ಸರ್ಕಾರಿ ಹಾಗೂ ಖಾಸಗಿ ಕಚೇರಿಗಳಿಗೆ ರಜೆ ಘೋಷಿಸಲಾಗಿದೆ.

ಯುಎಇ ಎರಡನೆಯ ಅಧ್ಯಕ್ಷ ಶೇಖ್ ಖಲೀಫಾ ಇನ್ನಿಲ್ಲ. Read More »

ಸುಳ್ಯ: ಶಾಂತಿನಗರ ನಿವಾಸಿಗಳ ಮನಃಶಾಂತಿ‌ ಕದಡಲು ತಯಾರಾಗಿದೆ ತಾಲೂಕು ಕ್ರೀಡಾಂಗಣ| ಅವೈಜ್ಞಾನಿಕವಾಗಿ ನಡೆಯುತ್ತಿದೆ ಕೋಟಿ ರೂ.ಗಳ ‌ಕಾಮಗಾರಿ|

ಸಮಗ್ರ ನ್ಯೂಸ್: ದ.ಕ ಜಿಲ್ಲೆಯ ಸುಳ್ಯ ನಗರದ ಹೊರವಲಯದ ಶಾಂತಿನಗರ ಎಂಬಲ್ಲಿ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ನಡೆಯುತ್ತಿರುವ ತಾಲೂಕು ಕ್ರೀಡಾಂಗಣದ ಅಭಿವೃದ್ಧಿ ಕಾಮಗಾರಿಯು ಸ್ಥಳೀಯ ನಿವಾಸಿಗಳ ಮನಃಶಾಂತಿ‌ ಕದಡುವ ಎಲ್ಲಾ ಲಕ್ಷಣಗಳು ಆರಂಭವಾಗಿವೆ. ಗ್ರಾಮೀಣ ಭಾಗದ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸುಳ್ಯ ಶಾಸಕ ಹಾಗೂ ಸಚಿವ ಎಸ್. ಅಂಗಾರ ಅವರ ಮುತುವರ್ಜಿಯಲ್ಲಿ ಈ ಕ್ರೀಡಾಂಗಣದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ.‌ ಈ ಹಿಂದೆ ಇದ್ದಂತಹ ಕ್ರೀಡಾಂಗಣವು ನೆಲ ಮಟ್ಟದಿಂದ ಎತ್ತರದಲ್ಲಿ ಇದ್ದ ಕಾರಣ, ಕ್ರೀಡಾಂಗಣವನ್ನು ಸಮತಟ್ಟು ಮಾಡುವ

ಸುಳ್ಯ: ಶಾಂತಿನಗರ ನಿವಾಸಿಗಳ ಮನಃಶಾಂತಿ‌ ಕದಡಲು ತಯಾರಾಗಿದೆ ತಾಲೂಕು ಕ್ರೀಡಾಂಗಣ| ಅವೈಜ್ಞಾನಿಕವಾಗಿ ನಡೆಯುತ್ತಿದೆ ಕೋಟಿ ರೂ.ಗಳ ‌ಕಾಮಗಾರಿ| Read More »

ಹೆತ್ತ ಕಂದಮ್ಮನನ್ನೇ ಮಾರಾಟ ಮಾಡಲೆತ್ನಿಸಿದ ತಾಯಿ ಪೊಲೀಸ್ ಬಲೆಗೆ

ಸಮಗ್ರ ನ್ಯೂಸ್: ಐದು ದಿನದ ಹಸುಗೂಸನ್ನು ಮಾರಾಟ ಮಾಡಲು ತಾಯಿ ಹೊರಟ್ಟಿದ್ದು, ತಾಯಿ ಸೇರಿ ಇಬ್ಬರು ಮಹಿಳೆಯರನ್ನು ಪೊಲೀಸರು ಬಂಧಿಸಿರುವ ಘಟನೆ ಚೆನ್ನೈ ನಗರದ ಹೊರವಲಯದಲ್ಲಿರುವ ಸೆಲೈಯೂರ್ ನ ಮಪ್ಪೆಡು ಎಂಬಲ್ಲಿ ಈ ಘಟನೆ ನಡೆದಿದೆ. ಹೆತ್ತ ಗಂಡು ಮಗುವನ್ನು ತಾಯಿ ಐದು ಸಾವಿರ ರೂ.ಗೆ ಮಾರಾಟ ಮಾಡಲು ಹೊರಟಿದ್ದಾರೆ. ಈಕೆ ಸ್ಯಾನಿಟರಿ ವರ್ಕರ್ ಆಗಿ ಕೆಲಸವನ್ನು ನಿರ್ವಹಿಸುತ್ತಿದ್ದಳು.

ಹೆತ್ತ ಕಂದಮ್ಮನನ್ನೇ ಮಾರಾಟ ಮಾಡಲೆತ್ನಿಸಿದ ತಾಯಿ ಪೊಲೀಸ್ ಬಲೆಗೆ Read More »

ರಾಯಚೂರು: ಉಪನ್ಯಾಸಕನ ಬರ್ಬರ ಹತ್ಯೆ

ಸಮಗ್ರ‌ ನ್ಯೂಸ್: ತಲೆ ಮೇಲೆ ಕಲ್ಲು ಎತ್ತಿ ಹಾಕಿ ಉಪನ್ಯಾಸಕನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ರಾಯಚೂರು ಜಿಲ್ಲೆ ದೇವದುರ್ಗ ಸಮೀಪ ನಡೆದಿದೆ. ಇಲ್ಲಿನ ಪಿಯು ಕಾಲೇಜು ಉಪನ್ಯಾಸಕ ಮಾನಪ್ಪ ಗೋಪಾಳಾಪುರ(59) ನನ್ನು ಹತ್ಯೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಉಪನ್ಯಾಸಕ ಮಾನಪ್ಪ ಎಂಬವರು ಪರೀಕ್ಷಾ ಕಾರ್ಯ ಮುಗಿಸಿಕೊಂಡು ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಐಯಾಳಕ್ಕೆ ತೆರಳುತ್ತಿದ್ದ ವೇಳೆಯಲ್ಲಿ ಅಡ್ಡಗಟ್ಟಿ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ರಾಯಚೂರು: ಉಪನ್ಯಾಸಕನ ಬರ್ಬರ ಹತ್ಯೆ Read More »

ರಾಜ್ಯದಲ್ಲಿ ಮದ್ಯ ಬೆಲೆ ಇಳಿಕೆಗೆ ಅಬಕಾರಿ ಇಲಾಖೆ ಚಿಂತನೆ

ಸಮಗ್ರ ನ್ಯೂಸ್: ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಮದ್ಯದ ಬೆಲೆ ಇಳಿಕೆಗೆ ಚಿಂತನೆ ನಡೆಸಲಾಗಿದೆ. ವೈನ್, ವಿಸ್ಕಿ ಸೇರಿ ಕೆಲ ಮದ್ಯಗಳ ಬೆಲೆ ಇಳಿಕೆ ಮಾಡಲು ರಾಜ್ಯ ಸರ್ಕಾರ ಗಂಭೀರವಾಗಿ ಪರಿಶೀಲನೆ ನಡೆಸಿದೆ. ದುಬಾರಿ ಮದ್ಯದ ಬೆಲೆ ಇಳಿಕೆ ಮಾಡಿದರೆ ಮಾರಾಟ ಹೆಚ್ಚಳವಾಗಿ ಆದಾಯ ಸಂಗ್ರಹಣೆ ಅಧಿಕವಾಗುತ್ತದೆ. ಈ ಮೂಲಕ ವಾರ್ಷಿಕ 5000 ಕೋಟಿ ರೂ. ಹೆಚ್ಚುವರಿ ತೆರಿಗೆ ಸಂಗ್ರಹಣಾ ಗುರಿಗೆ ರಾಜ್ಯ ಸರ್ಕಾರ ಚರ್ಚೆ ನಡೆಸಿದೆ ಎನ್ನಲಾಗಿದೆ. ಈಗಾಗಲೇ ರಾಷ್ಟ್ರರಾಜಧಾನಿ ದೆಹಲಿ, ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ಹಲವು

ರಾಜ್ಯದಲ್ಲಿ ಮದ್ಯ ಬೆಲೆ ಇಳಿಕೆಗೆ ಅಬಕಾರಿ ಇಲಾಖೆ ಚಿಂತನೆ Read More »

ಮೇ.19ರಂದು ಎಸ್ಎಸ್ಎಲ್ಸಿ ಫಲಿತಾಂಶ- ಸಚಿವ ಬಿ.ಸಿ‌ ನಾಗೇಶ್

ಸಮಗ್ರ ನ್ಯೂಸ್: ಮೇ 19ರಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ‌ ಸಚಿವರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ. ನಾಗೇಶ್ ಘೋಷಿಸಿದ್ದಾರೆ. ಎಸ್ ಎಸ್ ಎಸ್ ಎಲ್ ಸಿ ಫಲಿತಾಂಶ ಮೇ ಮೂರನೇ ವಾರದಲ್ಲಿ ಪ್ರಕಟಗೊಳ್ಳಲಿದೆ ಎಂದು ಹೇಳಲಾಗುತ್ತಿತ್ತು. ಆದ್ರೇ ನಿರ್ಧಿಷ್ಟ ದಿನಾಂಕ ಘೋಷಣೆಯಾಗಿರಲಿಲ್ಲ. ಇದೀಗ ಸಚಿವ ಬಿ.ಸಿ ನಾಗೇಶ್ ಅವರು, ಮೇ.19ರಂದು ಎಸ್ ಎಸ್ ಎಲ್ ಸಿ ಫಲಿತಾಂಶವನ್ನು ಘೋಷಣೆ ಮಾಡಲಾಗುತ್ತದೆ ಎಂಬುದಾಗಿ ಸ್ಪಷ್ಟ

ಮೇ.19ರಂದು ಎಸ್ಎಸ್ಎಲ್ಸಿ ಫಲಿತಾಂಶ- ಸಚಿವ ಬಿ.ಸಿ‌ ನಾಗೇಶ್ Read More »

ಋಷಿಕುಮಾರ ಸ್ವಾಮೀಜಿಗೆ ಕಪ್ಪು ಮಸಿ ಬಳಿದ ಕರವೇ

ಸಮಗ್ರ ನ್ಯೂಸ್: ಮಲ್ಲೇಶ್ವರಂನ ಗಂಗಮ್ಮನ ದೇವಾಲಯದಲ್ಲಿ ಋಷಿ ಕುಮಾರ ಸ್ವಾಮಿಯಮೇಲೆ ದಾಳಿ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಋಷಿ ಕುಮಾರ ಸ್ವಾಮಿಜಿಗೆ ಕಪ್ಪು ಮಸಿ ಬಳೆದು ಕರ್ನಾಟಕ ರಕ್ಷಣಾ ವೇದಿಕೆ ವಿಕೃತಿ ಮೆರೆದಿದ್ದಾರೆ. ನಾಡಪ್ರಭು ಕೆಂಪೇಗೌಡ, ಕುವೆಂಪುರವರ ವಿರುದ್ಧ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ದಾಳಿ ನಡೆಸಲಾಗಿದೆ. ದಾಳಿ ವೇಳೆ ಋಷಿ ಕುಮಾರ ಸ್ವಾಮಿಯ ಕಾಲಿಗೆ ಪೆಟ್ಟು ಬಿದ್ದಿದೆ. ಋಷಿ ಕುಮಾರ ಸ್ವಾಮಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಗಂಗಮ್ಮನ ದೇವಾಲಯಕ್ಕೆ ಬಂದಿದ್ದ ವೇಳೆ ಕರ್ನಾಟಕ ರಕ್ಷಣಾ ವೇದಿಕೆ ಕಪ್ಪು ಮಸಿ ಬಳೆದು

ಋಷಿಕುಮಾರ ಸ್ವಾಮೀಜಿಗೆ ಕಪ್ಪು ಮಸಿ ಬಳಿದ ಕರವೇ Read More »

ಗೋವಾ: 12ರ ರಷ್ಯನ್ ಬಾಲೆಯ ಅತ್ಯಾಚಾರ; ಗದಗ ಮೂಲದ ಆರೋಪಿ ಅರೆಸ್ಟ್

ಸಮಗ್ರ ನ್ಯೂಸ್: ಪ್ರವಾಸಕ್ಕೆಂದು ಬಂದಿದ್ದ 12 ವರ್ಷದ ರಷ್ಯನ್ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿದ್ದ ಆರೋಪಿಯನ್ನು ಗದಗ ಜಿಲ್ಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ರಷ್ಯಾದಿಂದ ಗೋವಾಗೆ ಪ್ರವಾಸಕ್ಕೆ ಬಂದಿದ್ದ ಬಾಲಕಿ ಮೇಲೆ ಮೇ.6 ರಂದು ಅತ್ಯಾಚಾರ ನಡೆದಿದ್ದು, ಮೇ 9ರಂದು ಬಾಲಕಿ ತಾಯಿ ಪೊಲೀಸರಿಗೆ ದೂರು ನೀಡಿದ್ದರು. ಕೃತ್ಯದ ಬಳಿಕ ಆರೋಪಿ ನಾಪತ್ತೆಯಾಗಿದ್ದ. ಪ್ರಕರಣ ದಾಖಲಿಸಿಕೊಂಡಿದ್ದ ಗೋವಾ ಪೊಲೀಸರು ಇದೀಗ ಆರೋಪಿಯನ್ನು ಗದಗದಲ್ಲಿ ಬಂಧಿಸಿದ್ದಾರೆ. ಗೋವಾ ಮಕ್ಕಳ ಕಾಯ್ದೆಯ 8ನೇ ವಿಧಿ ಹಾಗೂ ಪೋಕ್ಸೋ ಕಾಯ್ದೆ ಅಡಿ ಪ್ರಕರಣ

ಗೋವಾ: 12ರ ರಷ್ಯನ್ ಬಾಲೆಯ ಅತ್ಯಾಚಾರ; ಗದಗ ಮೂಲದ ಆರೋಪಿ ಅರೆಸ್ಟ್ Read More »

ರಾಯಪುರ: ಹೆಲಿಕಾಪ್ಟರ್ ಪತನ; ಇಬ್ಬರು ಪೈಲಟ್ ಗಳು ಸಾವು

ಸಮಗ್ರ ನ್ಯೂಸ್: ಹಾರಾಟ ಅಭ್ಯಾಸ ನಡೆಸುವ ಸಂದರ್ಭದಲ್ಲಿ ಸರಕಾರಿ ಹೆಲಿಕಾಪ್ಟರ್‌ವೊಂದು ಅಪಘಾತಕ್ಕೊಳಗಾಗಿ ಇಬ್ಬರು ಪೈಲಟ್‌ಗಳು ಸಾವನ್ನಪ್ಪಿರುವ ದುರಂತ ಛತ್ತೀಸ್‌ಗಡ ರಾಜಧಾನಿಯಲ್ಲಿ ಗುರುವಾರ (ಮೇ 12) ರಾತ್ರಿ ಸಂಭವಿಸಿದೆ. ರಾಯಪುರ್‌ನ ಸ್ವಾಮಿ ವಿವೇಕಾನದ ವಿಮಾನ ನಿಲ್ದಾಣದಲ್ಲಿ ರಾತ್ರಿ 9:10ರ ಆಸುಪಾಸು ಸಮಯದಲ್ಲಿ ಈ ಘಟನೆ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅಪಘಾತಕ್ಕೊಳಗಾದ ಹೆಲಿಕಾಪ್ಟರ್ ಅಗಸ್ಟಾ ಕಂಪನಿಯದ್ದಾಗಿದೆ. ದುರಂತಕ್ಕೆ ಕಾರಣ ಏನೆಂದು ಇನ್ನೂ ಗೊತ್ತಾಗಿಲ್ಲ. ಮಾಮೂಲಿಯ ಹಾರಾಟ ಅಭ್ಯಾಸ ನಡೆಸುವಾಗ ಅಪಘಾತವಾಗಿದೆ. ಹೆಲಿಕಾಪ್ಟರ್ ಅನ್ನು ಕೆಳಗೆ ಇಳಿಸುವಾಗ ಬೆಂಕಿ

ರಾಯಪುರ: ಹೆಲಿಕಾಪ್ಟರ್ ಪತನ; ಇಬ್ಬರು ಪೈಲಟ್ ಗಳು ಸಾವು Read More »