ಪುತ್ತೂರು: ರೈಲು ಬಡಿದು ಯುವಕ ದುರ್ಮರಣ

ಸಮಗ್ರ ನ್ಯೂಸ್: ಪುತ್ತೂರು ಕಬಕ ಸಮೀಪದ ಮಿತ್ತೂರಿನಲ್ಲಿ ರೈಲು ಬಡಿದು ಆಲಂಕಾರು ಸಮೀಪದ ಕೊಯಿಲದ ಯುವಕ ಸಾವನ್ನಪ್ಪಿರುವ ಘಟನೆ ಮೇ 15ರಂದು ರಾತ್ರಿ ನಡೆದಿದೆ.

Ad Widget ... ..

ಕಡಬ ತಾಲೂಕಿನ ಕೊಯಿಲ ಗ್ರಾಮದ ಪುಣಿಕೆತ್ತಡಿ ನಿವಾಸಿ ಜಗದೀಶ ಹಾಗೂ ಹೇಮಾವತಿ ದಂಪತಿ ಪುತ್ರ ಕಾರ್ತಿಕ್(24ವ.)ಮೃತಪಟ್ಟ ದುರ್ದೈವಿ ಯುವಕ.

Ad Widget

ಮಿತ್ತೂರುನಲ್ಲಿ ಕಿರು ಸೇತುವೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಮುಂಭಾಗದಿಂದ ಬರುತ್ತಿದ್ದ ರೈಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

Leave a Comment

Your email address will not be published. Required fields are marked *