ರಾಯಪುರ: ಹೆಲಿಕಾಪ್ಟರ್ ಪತನ; ಇಬ್ಬರು ಪೈಲಟ್ ಗಳು ಸಾವು

ಸಮಗ್ರ ನ್ಯೂಸ್: ಹಾರಾಟ ಅಭ್ಯಾಸ ನಡೆಸುವ ಸಂದರ್ಭದಲ್ಲಿ ಸರಕಾರಿ ಹೆಲಿಕಾಪ್ಟರ್‌ವೊಂದು ಅಪಘಾತಕ್ಕೊಳಗಾಗಿ ಇಬ್ಬರು ಪೈಲಟ್‌ಗಳು ಸಾವನ್ನಪ್ಪಿರುವ ದುರಂತ ಛತ್ತೀಸ್‌ಗಡ ರಾಜಧಾನಿಯಲ್ಲಿ ಗುರುವಾರ (ಮೇ 12) ರಾತ್ರಿ ಸಂಭವಿಸಿದೆ. ರಾಯಪುರ್‌ನ ಸ್ವಾಮಿ ವಿವೇಕಾನದ ವಿಮಾನ ನಿಲ್ದಾಣದಲ್ಲಿ ರಾತ್ರಿ 9:10ರ ಆಸುಪಾಸು ಸಮಯದಲ್ಲಿ ಈ ಘಟನೆ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Ad Widget ... ..

ಅಪಘಾತಕ್ಕೊಳಗಾದ ಹೆಲಿಕಾಪ್ಟರ್ ಅಗಸ್ಟಾ ಕಂಪನಿಯದ್ದಾಗಿದೆ. ದುರಂತಕ್ಕೆ ಕಾರಣ ಏನೆಂದು ಇನ್ನೂ ಗೊತ್ತಾಗಿಲ್ಲ. ಮಾಮೂಲಿಯ ಹಾರಾಟ ಅಭ್ಯಾಸ ನಡೆಸುವಾಗ ಅಪಘಾತವಾಗಿದೆ. ಹೆಲಿಕಾಪ್ಟರ್ ಅನ್ನು ಕೆಳಗೆ ಇಳಿಸುವಾಗ ಬೆಂಕಿ ಹೊತ್ತುಕೊಂಡಿದೆ ಎಂಬ ಮಾಹಿತಿಯಷ್ಟೇ ಗೊತ್ತಾಗಿರುವುದು.

Ad Widget

ಕಾಪ್ಟರ್‌ನಲ್ಲಿದ್ದು ಇಬ್ಬರು ಪೈಲಟ್‌ಗಳು ಗಂಭೀರವಾಗಿ ಗಾಯಗೊಂಡರು. ಅವರನ್ನು ಕೂಡಲೇ ಸಮೀಪದ ರಾಮಕೃಷ್ಣ ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯಲಾಯಿತಾದರೂ ಮಾರ್ಗಮಧ್ಯೆ ಕೊನೆಯುಸಿರು ಎಳೆದಿದರೆನ್ನಲಾಗಿದೆ. ಕ್ಯಾಪ್ಟನ್ ಗೋಪಾಲ್ ಕೃಷ್ಣ ಪಾಂಡ ಮತ್ತು ಕ್ಯಾಪ್ಟನ್ ಎ ಪಿ ಶ್ರೀವಾಸ್ತವ ಈ ಅಪಘಾತದಲ್ಲಿ ಸಾವನ್ನಪ್ಪಿದ ಪೈಲಟ್‌ಗಳಾಗಿದ್ದಾರೆ.

Leave a Comment

Your email address will not be published. Required fields are marked *