Ad Widget .

ಋಷಿಕುಮಾರ ಸ್ವಾಮೀಜಿಗೆ ಕಪ್ಪು ಮಸಿ ಬಳಿದ ಕರವೇ

ಸಮಗ್ರ ನ್ಯೂಸ್: ಮಲ್ಲೇಶ್ವರಂನ ಗಂಗಮ್ಮನ ದೇವಾಲಯದಲ್ಲಿ ಋಷಿ ಕುಮಾರ ಸ್ವಾಮಿಯಮೇಲೆ ದಾಳಿ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಋಷಿ ಕುಮಾರ ಸ್ವಾಮಿಜಿಗೆ ಕಪ್ಪು ಮಸಿ ಬಳೆದು ಕರ್ನಾಟಕ ರಕ್ಷಣಾ ವೇದಿಕೆ ವಿಕೃತಿ ಮೆರೆದಿದ್ದಾರೆ.

Ad Widget . Ad Widget .

ನಾಡಪ್ರಭು ಕೆಂಪೇಗೌಡ, ಕುವೆಂಪುರವರ ವಿರುದ್ಧ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ದಾಳಿ ನಡೆಸಲಾಗಿದೆ. ದಾಳಿ ವೇಳೆ ಋಷಿ ಕುಮಾರ ಸ್ವಾಮಿಯ ಕಾಲಿಗೆ ಪೆಟ್ಟು ಬಿದ್ದಿದೆ. ಋಷಿ ಕುಮಾರ ಸ್ವಾಮಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಗಂಗಮ್ಮನ ದೇವಾಲಯಕ್ಕೆ ಬಂದಿದ್ದ ವೇಳೆ ಕರ್ನಾಟಕ ರಕ್ಷಣಾ ವೇದಿಕೆ ಕಪ್ಪು ಮಸಿ ಬಳೆದು ಕೃತ್ಯ ಎಸಗಿದ್ದಾರೆ.

Ad Widget . Ad Widget .

ಸದ್ಯ ಕಾಳಿ ಸ್ವಾಮಿ ಖಾಸಗಿ ಆಸ್ಪತ್ರೆಗೆ ತೆರಳಿ ಪ್ರಾಥಮಿಕ ಚಿಕಿತ್ಸೆ ಪಡೆದುಕೊಂಡಿದ್ದಾರೆ. ನಿಮಗೆ ಧಮ್ ಇದ್ರೆ ನೀವು ಗಂಡಸರಾಗಿದ್ದರೆ ನ್ಯಾಯಾಲಯದಲ್ಲಿ ಸಾಬೀತು ಮಾಡಿ. ನಾನು ಇದಕ್ಕೆಲ್ಲ ಹೆದರಲ್ಲವೆಂದು ಮಸಿ ಬಳಿದ ಕರ್ನಾಟಕ ರಕ್ಷಣಾ ವೇದಿಕೆಗೆ ಕಾಳಿ ಸ್ವಾಮಿ ಓಪನ್ ಚ್ಯಾಲೆಂಜ್ ಕೊಟ್ಟಿದ್ದಾರೆ.

ರಾಷ್ಟ್ರ ಕವಿ ಕುವೆಂಪು ರಚಿಸಿದ ನಾಡಗೀತೆಯನ್ನು ಅವಮಾನಿಸಿದ ಆರೋಪ ಹಿನ್ನೆಲೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಡು ರಸ್ತೆಯಲ್ಲಿ ಋಷಿಕುಮಾರ ಸ್ವಾಮಿ ಮುಖಕ್ಕೆ ಮಸಿ ಬಳಿದಿದ್ದಾರೆ. ನಾಡಗೀತೆಯನ್ನ ಅನುಸರಿಸುತ್ತಿರುವ ಕನ್ನಡಪರ ಹೋರಾಟಗಾರರನ್ನು ಗುಂಡಿಕ್ಕಿ ಕೊಲ್ಲಬೇಕು ಎಂದು ಹೇಳಿಕೆ ನೀಡಿದ್ದಾರೆಂದು ಕಾಳಿ ಸ್ವಾಮೀಜಿ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣ ಸೇಡು ತೀರಿಸಿಕೊಂಡಿದೆ. ನೂರಾರು ಕಾರ್ಯಕರ್ತರು ಸೇರಿ ಕಾಳಿ ಸ್ವಾಮಿ ಮುಖಕ್ಕೆ ಮಸಿ ಬಳಿಯುವ ಮೂಲಕ ಸೇಡು ತೀರಿಸಿಕೊಂಡಿದ್ದಾರೆ.

1 thought on “ಋಷಿಕುಮಾರ ಸ್ವಾಮೀಜಿಗೆ ಕಪ್ಪು ಮಸಿ ಬಳಿದ ಕರವೇ”

  1. ಭಾರತೀಯ

    ನೂರು ಜನ ಸೇರಿ ಒಬ್ಬ ಬೈರಾಗಿ ಮೇಲೆ ಆಕ್ರಮಣ ಮಾಡೋದು ಯಾವ ಸೀಮೆ ಗಂಡಸುತನ.
    ಎಲ್ಲಾ ಗೂಂಡಾಗಳನ್ನು ಬಂಧಿಸಿ😡😡😡

Leave a Comment

Your email address will not be published. Required fields are marked *